ಬೆಳ್ತಂಗಡಿ: ಬೆಳ್ತಂಗಡಿ ನಗರದಲ್ಲಿ ಮಹಿಳೆಯೊಬ್ಬರು ಮನೆಯ ಮುಂದಿನ ಬಾವಿಗೆ ಬಿದ್ದು ಮೃತಪಟ್ಟ ಘಟನೆ ಶುಕ್ರವಾರ ಸಂಜೆ ಸಂಭವಿಸಿದೆ. ಬೆಳ್ತಂಗಡಿ ಕೃಷಿ ಇಲಾಖೆಯ ಸೀಡ್ ಫಾರ್ಮ್ ರಸ್ತೆಯ ಬದಿಯಲ್ಲಿರುವ ಮನೆಯ ನಿವಾಸಿ ಸುಮಾಲಿನಿ 63 ಎಂಬವರಾಗಿದ್ದಾರೆ.
ಮಹಿಳೆ ಬಾವಿಗೆ ಬಿದ್ದಿದ್ದಾರೆ.ಅವರು ಬಿದ್ದಿರುವುದನ್ನು ಮನೆಯವರು ಗಮನಿಸಿದ್ದು ಕೂಡಲೇ ಸಹಾಯಕ್ಕಾಗಿ ಬೊಬ್ಬೆ ಹಾಕಿದ್ದಾರೆ ಮಾಹಿತಿ ತಿಳಿದು ಕೂಡಲೇ ಸ್ಥಳಕ್ಕೆ ಧಾವಿಸಿದ ಜಲೀಲ್ ಬಾಬಾ, ಹಾಗೂ ಅಲ್ಫಾಸ್ ಲಾಯಿಲ ಅವರು ಬಾವಿಯಲ್ಲಿ ಮುಳುಗಿ ಏಳುತ್ತಿದ್ದ ಮಹಿಳೆಯನ್ನು ಸಾಹಸಿಕವಾಗಿ ಬಾವಿಯಿಂದ ಮೇಲೆತ್ತಿದ್ದಾರೆ ಕೂಡಲೇ ಆಸ್ಪತ್ರೆಗೆ ಕೊಂಡೊಯ್ದರೂ ಆಕೆ ಮೃತಪಟ್ಟುದ್ದಾರೆ. ಘಟನೆಯ ಬಗ್ಗೆ ಇನ್ನಷ್ಟೆ ಹೆಚ್ಚಿನ ಮಾಹಿತಿ ತಿಳಿದು ಬರಬೇಕಾಗಿದೆ.
