ಬೆಳ್ತಂಗಡಿ; ತಾಲೂಕಿನಲ್ಲಿ ಮಳೆಯ ಅಬ್ಬರ ಮುಂದುವರಿಯುತ್ತಿದ್ದು ಹಲವೆಡೆ ಕಿರು ಸೇತುವೆಗಳು ಮೋರಿಗಳು ಕೊಚ್ಚಿ ಹೋಗಿದ್ದು ಜನರು ಕಷ್ಟದಲ್ಲಿದ್ದಾರೆ.
ಒಂದೆಡೆ ಗುಡ್ಡ ಕುಸಿತದಿಂದಾಗಿ ಮನೆಗಳಿಗೆ ಹಾನಿಯಾಗುತ್ತಿದೆ ಮತ್ತೊಂದೆಡೆ ಕೃಷಿಹಾನಿಯಾಗುತ್ತಿದ್ದು ಇದೀಗ ಕಿರು ಸೇತುವೆಗಳು ರಸ್ತೆಗಳು ಕೊಚ್ಚಿ ಹೋಗುತ್ತಿದ್ದು ಸಂಪರ್ಕವೇ ಕಡಿತಗೊಳ್ಳುತ್ತಿದೆ.
ಮಾಲಾಡಿ ಗ್ರಾಮಪಂಚಾಯತು ವ್ಯಾಪ್ತಿಯ ಸೋಣಂದೂರು ಗ್ರಾಮದ ಮೊದಲೆ ಎಂಬಲ್ಲಿ ನೂತನ ರಸ್ತೆಯ ಕಿರು ಸೇತುವೆ ಕುಸಿದು ಬಿದ್ದಿದ್ದು ಸಂಪರ್ಕ ಕಡಿತಗೊಂಡಿದೆ.
ಮತ್ತೊಂದೆಡೆ ಮರೋಡಿ ಗ್ರಾಮದ ದೇರಜೆ ಎಂಬಲ್ಲಿ ಸಂಪರ್ಕ ರಸ್ತೆಯ ಸೇತುವೆ ಕುಸಿದು ಹೋಗಿದ್ದು ಇಲ್ಲಿನ ನಿವಾಸಿಗಳು ಸಂಕಷ್ಟದಲ್ಲಿದ್ದಾರೆ. ಕಲ್ಮಂಜ ಗ್ರಾಮದಲ್ಲಿಯೂ ಇದೇ ರೀತಿ ಕಿರು ಸೇತುವೆಯೊಂದು ಕುಸಿದಿದ್ದು ಇಲ್ಕಿನ ಸುಮಾರು 50ಕ್ಕೂ ಹೆಚ್ವು ಕುಟುಂಬಗಳು ಸಂಪರ್ಕ ಕಳೆದುಕೊಂಡಿದ್ದಾರೆ. ಲಾಯಿಲ ಗ್ರಾಮದಲ್ಲಿಯೂ ಹಲವೆಡೆ ರಸ್ತೆ ಕುಸಿತ ಹಾಗೂ ಭೂಕುಸಿತದಿಂದಾಗಿ ರಸ್ತೆಗಳು ಬಂದ್ ಆಗಿದೆ.
ನಿರಂತರವಾಗಿ ಮಳೆ ಮುಂದು ವರಿಯುತ್ತಿರುವ ಹಿನ್ನಲೆಯಲ್ಲಿ ಅಲ್ಲಲ್ಲಿ ರಸ್ತೆಗಳಿಗೆ ಮಣ್ಣು ಕುಸಿದು ಬಿದ್ದು ವಾಹನ ಸಂಚಾರಕ್ಕೆ ಅಡಚಣೆ ಉಂಟಾಗುತ್ತಿದೆ.