Home ಬ್ರೇಕಿಂಗ್‌ ನ್ಯೂಸ್ ಶಿರಾಡಿ ಘಾಟಿಯಲ್ಲಿ ಭೂಕುಸಿತ ಮಣ್ಣಿನಡಿ ಸಿಲುಕಿದ ವಾಹನಗಳು; ರಸ್ತೆ ಸಂಚಾರ ಸ್ಥಗಿತ

ಶಿರಾಡಿ ಘಾಟಿಯಲ್ಲಿ ಭೂಕುಸಿತ ಮಣ್ಣಿನಡಿ ಸಿಲುಕಿದ ವಾಹನಗಳು; ರಸ್ತೆ ಸಂಚಾರ ಸ್ಥಗಿತ

0

ಸಕಲೇಶಪುರ: ಭಾರಿ ಮಳೆ ಹಿನ್ನೆಲೆಯಲ್ಲಿ ಶಿರಾಡಿ ಘಾಟ್ ರಾಷ್ಟ್ರೀಯ ಹೆದ್ದಾರಿ 75 ರಲ್ಲಿ ಭೂಕುಸಿತವಾದ ಹಿನ್ನೆಲೆಯಲ್ಲಿ ರಸ್ತೆ ಬಂದ್ ಮಾಡಲಾಗಿದೆ.

ಸುರಿಯುತ್ತಿರುವ ಭಾರಿ ಮಳೆ ಹಿನ್ನೆಲೆಯಲ್ಲಿ ಶಿರಾಡಿ ಘಾಟ್ ರಾಷ್ಟ್ರೀಯ ಹೆದ್ದಾರಿ 75 ದೊಡ್ಡತಪ್ಪಲು ಸಮೀಪ ಭೂಕುಸಿತ ಉಂಟಾಗಿ ಎರಡು ಕಾರು, ಒಂದು ಟಿಪ್ಪರ್ ಹಾಗೂ ಒಂದು ಟ್ಯಾಂಕರ್ ಕೆಸರಿನಲ್ಲಿ ಸಿಲುಕಿದ್ದು ಅದೃಷ್ಟವಷಾತ್ ಯಾವುದೆ ಜೀವಹಾನಿ ಸಂಭವಿಸಿಲ್ಲ.
ಭಾರಿ ಭೂಕುಸಿತವಾಗುತ್ತಿರುವ ಹಿನ್ನೆಲೆಯಲ್ಲಿ ಶಿರಾಡಿ ಘಾಟ್ ರಾಷ್ಟ್ರೀಯ ಹೆದ್ದಾರಿ 75ನ್ನು ಬಂದ್ ಮಾಡಲಾಗಿದ್ದು ಇದರಿಂದಾಗಿ ವಾಹನಗಳು ಹಲವು ಕಿ.ಮೀ ದೂರ ನಿಂತಲ್ಲೆ ನಿಲ್ಲುವಂತಾಗಿದೆ. ಊಟ ತಿಂಡಿ ಇಲ್ಲದೆ ಪ್ರಯಾಣಿಕರು ಪರದಾಡುವ ಪರಿಸ್ಥಿತಿ ಉಂಟಾಗಿದೆ.

NO COMMENTS

LEAVE A REPLY

Please enter your comment!
Please enter your name here

Exit mobile version