Home ಸ್ಥಳೀಯ ಸಮಾಚಾರ ನಿರಂತರ ಮಳೆಗೆ ಬಂದಾರಿನಲ್ಲಿ ರಸ್ತೆಗೆ ಕುಸಿದ ಗುಡ್ಡ, ವಾಹನ ಸಂಚಾರಕ್ಕೆ ಅಡಚಣೆ

ನಿರಂತರ ಮಳೆಗೆ ಬಂದಾರಿನಲ್ಲಿ ರಸ್ತೆಗೆ ಕುಸಿದ ಗುಡ್ಡ, ವಾಹನ ಸಂಚಾರಕ್ಕೆ ಅಡಚಣೆ

0

ಬಂದಾರು : ಜು19 ರಾತ್ರಿ ಸುರಿದ ವಿಪರೀತ ಮಳೆಗೆ ಬಂದಾರು ಗ್ರಾಮದ ಕುಂಟಾಲಪಲ್ಕೆ ಸೇತುವೆ ಬಳಿ ಕಲ್ಲರ್ಬಿ ಎಂಬಲ್ಲಿ ಭಾರಿ ಗಾತ್ರದ ಗುಡ್ಡ ಕುಸಿತ ವಾಹನ ಸಂಚಾರ ಸoಪೂರ್ಣ ಬಂದ್ ಆಗಿದೆ.
ಸ್ಥಳಕ್ಕೆ ಬಂದಾರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ದಿನೇಶ್ ಗೌಡ, ಪಂಚಾಯತ್ ಸದಸ್ಯರು ಭೇಟಿ ನೀಡಿದರು
ತೆರವು ಕಾರ್ಯಾಚರಣೆಗೆ ಲೋಕೋಪಯೋಗಿ ಇಲಾಖೆ ಹಾಗೂ ಅರಣ್ಯ ಇಲಾಖೆಯವರಿಗೆ ಮಾಹಿತಿ ನೀಡಲಾಗಿದ್ದು ಕೆಲವೇ ಸಮಯದಲ್ಲಿಮಣ್ಣು ತೆರವು ಕಾರ್ಯಚರಣೆ ನಡೆಯಲಿದೆ. ಎಂದು ಅಧಿಕಾರಿಗಳು ತಿಳಿಸಿದ್ದದಾರೆ.


ಸಂಪೂರ್ಣ ಮಣ್ಣು ತೆರವು ಕಾರ್ಯ ನಡೆಯುವರೆಗೆ
ಬಂದಾರು -ಕುಂಟಾಲಪಲ್ಕೆ -ಪೆರ್ಲ ಬೈಪಾಡಿ ಸಂಚರಿಸುವ ಪ್ರತಿಯೊಂದು ವಾಹನಗಳುಬದಲಿ ರಸ್ತೆಯ ಮೂಲಕ ಸಂಚರಿಸುವಂತೆ ಸೂಚಿಸಲಾಗಿದೆ.

NO COMMENTS

LEAVE A REPLY

Please enter your comment!
Please enter your name here

Exit mobile version