ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ವೇಣೂರು ವೇಣೂರು ಬ್ರಹ್ಮಶ್ರೀ ನಾರಾಯಣಗುರು ಸೇವಾ ಸಂಘಕ್ಕೆ ಜಮೀನು ಮಂಜೂರು ಮಾಡಿದ ಕರ್ನಾಟಕ ಸರ್ಕಾರಕ್ಕೆ ಮತ್ತು ಈ ಜಮೀನು ಮಂಜೂರಾತಿಗಾಗಿ ಸರ್ಕಾರದ ಅಂತಿಮ ಅನುಮೋದನೆ ಗಾಗಿ ಅವಿರತ ಪ್ರಯತ್ನ ಮಾಡಿದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ರವರಿಗೆ ವೇಣೂರು
ಶ್ರೀ ನಾರಾಯಣ ಗುರು ಸ್ವಾಮಿ ಸೇವಾ ಸಂಘದ ಅಧ್ಯಕ್ಷರು ಪದಾಧಿಕಾರಿಗಳು, ನಿರ್ದೇಶಕರು ಅಭಿನಂದನೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಬೆಳ್ತಂಗಡಿ ಶ್ರೀ ಕ್ಷೇತ್ರ ಗೆಜ್ಜೆಗಿರಿ ಆಡಳಿತ ಸಮಿತಿಯ ಅಧ್ಯಕ್ಷರು, ಬೆಳ್ತಂಗಡಿ ಶ್ರೀ ನಾರಾಯಣ ಗುರು ಸ್ವಾಮಿ ಸೇವಾ ಸಂಘದ ಮಾಜಿ ಅಧ್ಯಕ್ಷರಾದ ಶ್ರೀ ಪಿತಾಂಬರ ಹೇರಾಜೆ,ವೇಣೂರು ಸಂಘದ ಅಧ್ಯಕ್ಷರಾದ ಹರೀಶ್ ಪೋಕ್ಕಿ,ಕಾರ್ಯದರ್ಶಿ ರಾಕೇಶ್ ಮೂಡುಕೊಡಿ,ಕೋಶಾದಿಕಾರಿ ಯೋಗಿಶ್ ಬಿಕ್ರೋಟ್ಟು
ಬೆಳ್ತಂಗಡಿ ಯುವ ಬಿಲ್ಲವ ವೇದಿಕೆ ಅಧ್ಯಕ್ಷರಾದ ನಿತೀಶ್ ಕೋಟ್ಯಾನ್ ,ಬೆಳ್ತಂಗಡಿ ಸಂಘದ ನಿರ್ದೇಶಕರಾದ ವಿಶ್ವನಾಥ ದಡ್ಡಲಪಲ್ಕೆ,ಹಾಗೂ ಪ್ರಮುಖರಾದ ರಮೇಶ್ ಪೂಜಾರಿ ಪಡ್ಡಾಯಿಮಜಲು,ನವೀನ್ ಪಚ್ಚೇರಿ,ಸತೀಶ್ ಉಜಿರ್ದಡ್ಡ, ಶೇಖರ್ ಪೂಜಾರಿ ಸುರೇಶ್ ಪೂಜಾರಿ ಕರಿಮಣೇಲು,ರವಿ ಪೂಜಾರಿ ಮೂಡುಕೊಡಿ ಉಪಸ್ಥಿತರಿದ್ದರು.