Home ಅಪರಾಧ ಲೋಕ ಮೂಡಿಗೆರೆಯ ಹಳ್ಳಿ ರಸ್ತೆಯಲ್ಲಿ ವೀಲಿಂಗ್ ಉಜಿರೆಯ ಐವರ ಬಂಧನ

ಮೂಡಿಗೆರೆಯ ಹಳ್ಳಿ ರಸ್ತೆಯಲ್ಲಿ ವೀಲಿಂಗ್ ಉಜಿರೆಯ ಐವರ ಬಂಧನ

1122
0

ಚಿಕ್ಕಮಗಳೂರು: ಪ್ರವಾಸಕ್ಕೆ ಬಂದು ಹಳ್ಳಿ ರಸ್ತೆಯಲ್ಲಿ ವೀಲಿಂಗ್ ಮಾಡಿ ಸುಮಾರು ಐದು ಕಿಲೋ ಮೀಟರ್ ರಸ್ತೆಯನ್ನು ಹಾಳು ಮಾಡಿರುವ ಬೆಳ್ತಂಗಡಿ ಮೂಲದ ಐವರು ಯುವಕರ ವಿರುದ್ದ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಬಾಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಬೈಕ್ ಗಳನ್ನು ವಶಪಡಿಸಿಕೊಂಡಿದ್ದಾರೆ.
ಬೆಳ್ತಂಗಡಿ ತಾಲೂಕಿನ ಉಜಿರೆ ಗ್ರಾಮದ ನಿವಾಸಿಗಳಾದ ಗಿರೀಶ್, ಗಣೇಶ್, ಗಣೇಶ್ ಕುಮಾರ್, ಪ್ರವೀಣ್ ಹಾಗೂ ರೋಹಿತ್ ಬಂಧಿತ ಆರೋಪಿಗಳು. ರಸ್ತೆಯಲ್ಲಿ ವೀಲಿಂಗ್ ಮಾಡಿದ್ದ 5 ಬೈಕುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕರ್ಕಶ ಶಬ್ದದೊಂದಿಗೆ ಓಡಾಟ ಹಾಗೂ ಸಾರ್ವಜನಿಕ ರಸ್ತೆಯನ್ನು ಹಾಳು ಮಾಡಿದ ಹಿನ್ನೆಲೆ ಐವರ ವಿರುದ್ಧವು ಬಾಳೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ವಾರಾಂತ್ಯದ ಹಿನ್ನೆಲೆ ಜು.15 ರಂದು ಮೂಡಿಗೆರೆ ತಾಲೂಕಿನ ಸುಪ್ರಸಿದ್ಧ ಪ್ರವಾಸಿತಾಣ ರಾಣಿ ಝರಿ ಜಲಪಾತಕ್ಕೆ ಬಂದಿದ್ದ ಐವರು ಸ್ನೇಹಿತರು ರೀಲ್ಸ್ ಮಾಡುವ ಹುಚ್ಚಿಗೆ ಹಳ್ಳಿಯ ರಸ್ತೆಯನ್ನು ಸಂಪೂರ್ಣ ಹಾಳು ಮಾಡಿದ್ದರು. ಒಬ್ಬರಾದ ಮೇಲೊಬ್ಬರಂತೆ ಇವರು ಯುವಕರು ವಿಡಿಯೋ ಹಾಗೂ ಫೋಟೋ ಚೆನ್ನಾಗಿ ಬರಲೆಂದು ರಸ್ತೆಯಲ್ಲಿ ಸುಮಾರು ನೂರಕ್ಕೂ ಅಧಿಕ ಬಾರಿ ಓಡಾಡಿದ್ದರು. ಇದರಿಂದ, ರಾಣಿಝರಿಯ ಮಣ್ಣಿನ ರಸ್ತೆ ಕೆಸರು ಗದ್ದೆಯಾಗಿತ್ತು.

LEAVE A REPLY

Please enter your comment!
Please enter your name here