Home ಸ್ಥಳೀಯ ಸಮಾಚಾರ ಬಾಂಜಾರುಮಲೆಯಲ್ಲಿ ಶೇ 100ಮತದಾನದ ದಾಖಲೆ

ಬಾಂಜಾರುಮಲೆಯಲ್ಲಿ ಶೇ 100ಮತದಾನದ ದಾಖಲೆ

455
0

ಬೆಳ್ತಂಗಡಿ: ನೆರಿಯ ಗ್ರಾಮದ ಅತ್ಯಂತ
ದುರ್ಗಮ ಪ್ರದೇಶವಾದ ಬಾಂಜಾರು ಮಲೆ ಮತಗಟ್ಟೆಯಲ್ಲಿ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಶೇ 100 ಮತದಾನವಾದ ದಾಖಲೆ ನಿರ್ಮಾಣವಾಗಿದೆ.
ಆದಿವಾಸಿ ಮಲೆಕುಡಿಯ ಸಮುದಾಯಸವರು ವಾಸಿಸುತ್ತಿರುವ ಬಾಂಜಾರು ಮಲೆ ಬೂತ್ ನಲ್ಲಿ ಎಲ್ಲರೂ ಉತ್ಸಾಹದಿಂದ ಮತದಾನದಲ್ಲಿ ಭಾಗಿಗಳಾದರು.
ಬಾಂಜಾರುಮಲೆ ಮತಗಟ್ಟೆ ಸಂಖ್ಯೆ 86ರಲ್ಲಿ 111 ಮಂದಿ ಮತದಾರರಿದ್ದು, ಎಲ್ಲರೂ ಮತದಾನ ಮಾಡುವ ಮೂಲಕ ಈ ದಾಖಲೆ ನಿರ್ಮಾಣವಾಗಿದೆ. ಇಲ್ಲಿ 51 ಮಂದಿ ಪುರುಷರು ಮತ್ತು 60 ಮಂದಿ ಮಹಿಳಾ ಮತದಾರರು ಇದ್ದು, ಎಲ್ಲರೂ ಮತ ಚಲಾಯಿಸಿದ್ದಾರೆ.
ಅನನ್ಯ ಮತಗಟ್ಟೆಯೆಂದು ಗುರುತಿಸಲಾಗಿದ್ದ ಬಾಂಜಾರು ಮಲೆ ಮತಗಟ್ಟೆಯಲ್ಲಿ ಶೇ 100 ಮತದಾನ ವಾಗುವಂತೆ ನೋಡಿಕೊಳ್ಳುವ ಉದ್ದೇಶದಿಂದ ಅಧಿಕಾರಿಗಳು ವಿಶೇಷ ಪ್ರಯತ್ನ ನಡೆಸಿದ್ದರು. ಇದರೊಂದಿಗೆ ಇಲ್ಲಿನ ಮತದಾರರೂ ಸ್ಪಂದಿಸಿ ಶೇ100 ಮತಚಲಾವಣೆಯಾಗುವ ಮೂಲಕ ದಾಖಲೆ ನಿರ್ಮಾಣವಾಗಿದೆ.

LEAVE A REPLY

Please enter your comment!
Please enter your name here