ಉಜಿರೆ: ಮಹಿಳೆಯರು ಎಲ್ಲಾ ಜವಬ್ಧಾರಿಗಳನ್ನು ನಿಭಾಹಿಸುದರ ಜೊತೆಗೆ ತಮ್ಮ ಕನಸುಗಳನ್ನು ಸಕಾರಗೊಳಿಸಲು ಪ್ರಯತ್ನಿಸಬೇಕು ಎಂದು
ಉಜಿರೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಉಷಾಕಿರಣ್ ಕಾರಂತ್ ರವರು ಅಭಿಪ್ರಾಯಪಟ್ಟರು. ಅವರು ಉಜಿರೆ ರುಡ್ ಸೆಟ್ ಸಂಸ್ಥೆಯಲ್ಲಿ ಮಹಿಳೆಯರ ವಸ್ತ್ರ ವಿನ್ಯಾಸ ತರಬೇತಿ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಶಿಭಿರಾರ್ಥೀಗಳಿಗೆ ಪ್ರಮಾಣ ಪತ್ರ ವಿತರಿಸಿ ಮಾತನಾಡಿದರು.
ಮಹಿಳೆಯರಿಗೆ ಅತ್ಯಂತ ಹೆಚ್ಚಿನ ಜವಬ್ಧಾರಿಗಳಿವೆ, ಆದರೂ ಎಲ್ಲಾ ಜವಬ್ಧಾರಿಗಳನ್ನು ಅತ್ಯಂತ ಹೆಚ್ಚಿನ ಮುತುವರ್ಜಿಯಿಂದ ಮಾಡುತ್ತಾಳೆ, ಅದರ ಜೊತೆಗೆ ತನ್ನ ಕನಸ್ಸುಗಳನ್ನು ಮತ್ತು ಆಸೆಗಳನ್ನು ಸಕಾರ ಮಾಡಲು ಪ್ರಯತ್ನಿಸಬೇಕು. ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಕಲ್ಪನೆಯ ಈ ರುಡ್‌ಸೆಟ್ ಸಂಸ್ಥೆಯು ಕಳೆದ 42 ವರ್ಷಗಳಿಂದ ದೇಶದ ಅನೇಕ ಮಹಿಳೆಯರ ಸ್ವ ಉದ್ಯೋಗದ ಕನಸುಗಳನ್ನು ಸಕಾರಗೋಳಿಸಿದೆ. ಉಜಿರೆಯಲ್ಲಿ ಪ್ರಾರಂಭಗೊಂಡ ಈ ರುಡ್‌ಸೆಟ್ ಸಂಸ್ಥೆ ದೇಶದ ಪ್ರತಿ ಜಿಲ್ಲೆಯಲ್ಲೂ ಮಾದರಿ ಸಂಸ್ಥೆ (ಆರ್‌ಸೆಟಿ) ಗಳಾಗಿ ಸ್ಥಾಪನೆಗೊಂಡಿರುವುದು ನಮಗೆ ಹೆಮ್ಮೆಯ ವಿಚಾರ ಎಂದರು.
ಕಾರ್ಯಕ್ರಮದಲ್ಲಿ ರುಡ್‌ಸೆಟ್ ಸಂಸ್ಥೆಯ ನಿರ್ದೇಶಕರಾದ ಎಮ್. ಸುರೇಶ್ ಅತಿಥಿಗಳನ್ನು ಸ್ವಾಗತಿಸಿ ತರಬೇತಿಯ ಹಿನ್ನೋಟ ನೀಡಿದರು. ರುಡ್‌ಸೆಟ್ ಸಂಸ್ಥೆಗಳ ಕಾರ್ಯನಿರ್ವಾಹಕ ನಿರ್ದೇಶಕರಾದ ವಿಜಯಕುಮಾರ್ ಬಿ.ಪಿ ಅಧ್ಯಕ್ಷತೆ ವಹಿಸಿದ್ದರು, ಹಿರಿಯ ಉಪನ್ಯಾಸಕರಾದ ಕರುಣಾಕರ್ ಜೈನ್ ಕಾರ್ಯಕ್ರಮ ನಿರೂಪಿಸಿದರೆ, ಅಬ್ರಹಾಂ ಜೇಮ್ಸ್‌ರವರು ವಂದಿಸಿದರು. 30 ದಿನಗಳ ಈ ತರಬೇತಿ ಕಾರ್ಯಕ್ರಮದಲ್ಲಿ 32 ಮಹಿಳಾ ಶಿಭಿರಾರ್ಥಿಗಳು ಭಾಗವಹಿಸಿದ್ದರು. ಕೆಲವು ಶಿಭಿರಾರ್ಥಿಗಳು ತರಬೇತಿಯ ಅನಿಸಿಕೆಯನ್ನು ವ್ಯಕ್ತಪಡಿಸಿದರು.