Home ಬ್ರೇಕಿಂಗ್‌ ನ್ಯೂಸ್ ಶಿಬಾಜೆಯಲ್ಲಿ ವಿದ್ಯುತ್ ಆಘಾತಕ್ಕೆ ಯುವತಿ ಬಲಿ

ಶಿಬಾಜೆಯಲ್ಲಿ ವಿದ್ಯುತ್ ಆಘಾತಕ್ಕೆ ಯುವತಿ ಬಲಿ

460
0

ಬೆಳ್ತಂಗಡಿ; ಸ್ಟೇ ವಯರ್ ನಲ್ಲಿ ವಿದ್ಯುತ್ ಪ್ರವಹಿಸಿ ಯುವತಿಯೊಬ್ಬಳು
ಸಾವನ್ನಪ್ಪಿರುವ ಘಟನೆ ಬೆಳ್ತಂಗಡಿ ತಾಲೂಕಿನ ಶಿಬಾಜಿ ಗ್ರಾಮದ ಬರ್ಗುಲಾ ಎಂಬಲ್ಲಿ ಜೂನ್ 27 ಗುರುವಾರ ಸಂಜೆ ನಡೆದಿದೆ. ಗಣೇಶ್ ಶೆಟ್ಟಿ ಮತ್ತು ರೋಹಿಣಿ ದಂಪತಿ ಪುತ್ರಿ ಪ್ರತೀಕ್ಷಾ ಶೆಟ್ಟಿ(20) ಮೃತ ದುರ್ದೈವಿಯಾಗಿದ್ದಾರೆ

ಮನೆಯ ಸಮೀಪದ ರಸ್ತೆಗೆ ಪಾರ್ಸೆಲ್ ಬಂದಿದ್ದರಿಂದ ಅದನ್ನು ಪಡೆಯಲು ರಸ್ತೆಗೆ ಬಂದಾಗ ನೀರಿನಲ್ಲಿ ನೀರಿನಲ್ಲಿದ್ದ ಸ್ಟೇ ವಯರ್ ಸ್ಪರ್ಶಿಸಿ ಯುವತಿ ಸಾವನ್ನಪ್ಪಿದ್ದಾಳೆ ಮೃತಪಟ್ಟ ಯುವತಿ ಕೊಕ್ಕಡ ಮೆಡಿಕಲ್ ಶಾಪ್ ನಲ್ಲಿ ಕೆಲಸಮಾಡುತ್ತಿದ್ದಳು
ಯುವತಿಯ ಮೃತದೇಹವನ್ನು ಬೆಳ್ತಂಗಡಿ ಸರಕಾರಿ ಆಸ್ಪತ್ರೆಯಲ್ಲಿ ಇರಿಸಲಾಗಿದೆ. ಆಸ್ಪತ್ರೆಗೆ ಬೆಳ್ತಂಗಡಿ ತಹಶೀಲ್ದಾ‌ರ್ ಪೃಥ್ವಿ ಸಾನಿಕಂ ಭೇಟಿ ನೀಡಿದ್ದಾರೆ. ಧರ್ಮಸ್ಥಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

LEAVE A REPLY

Please enter your comment!
Please enter your name here