ಬೆಳ್ತಂಗಡಿ; ಉಜಿರೆಯಲ್ಲಿ ಭಾರೀ ಗಾತ್ರದ ಮರ ಬಿದ್ದು ರಸ್ತೆಯಲ್ಲಿ ಚಲಿಸುತ್ತಿದ್ದ ಆಟೋ ರೀಕ್ಷಾ, ನಿಲ್ಲಿಸಿದ್ದ ಕಾರು ಮತ್ತು ಓಮ್ಮಿ ಜಖಂಗೊಂಡ ಘಟನೆಯ ಬಳಿಕ ಈ ಬಗ್ಗೆ ನ್ಯಾಯಕ್ಕೆ ಆಗ್ರಹಿಸಿ ಪ್ರತಿಭಟನೆ ನಡೆಸಿದ ಉದ್ಯಮಿ ಪ್ರವೀಣ್ ಫೆರ್ನಾಂಡಿಸ್ ಸೇರಿದಂತೆ 15ಮಂದಿಯ ವಿರುದ್ದ ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಜೂ 24ರಂದು ಉಜಿರೆ ಪೇಟೆಯಲ್ಲಿ ಭಾರೀ ಗಾತ್ರದ ಮರ ರಸ್ತೆಮೇಲೆ ಉರುಳಿ ಬಿದ್ದು ವಾಹನಗಳು ಜಂಖಂಗೊಂಡು ಹಲವರು ಗಂಭೀರವಾಗಿ ಗಾಯಗೊಂಡಿದ್ದರು. ಹೆದ್ದಾರಿ ಕಾಮಗಾರಿ ನಡೆಸುತ್ತಿರುವವರ ಬೇಜವಾಬ್ದಾರಿಯಿಂದಾಗಿ ಘಟನೆ ಸಂಭವಿಸಿದೆ ಎಂದು ಸಾರ್ವಜಮಿಕರು ಆರೋಪಿಸಿದ್ದರು. ಈ ಹಿನ್ನಲೆಯಲ್ಲಿ ಸ್ಥಳೀಯರು, ಆಟೋ ಚಾಲಕರು ಮತ್ತು ಸಾರ್ವಜನಿಕರು ಗಾಯಗೊಂಡವರಿಗೆ ಪರಿಹಾರ ನೀಡಬೇಕೆಂದು ಒತ್ತಾಯಿಸಿ ಸ್ಥಳದಲ್ಲಿಯೇ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದ್ದರು. ಇದೀಗ
ಜಿಲ್ಲಾಡಳಿತ ಅಥವಾ ಪೊಲೀಸ್ ಇಲಾಖೆಯಿಂದ ಯಾವುದೇ ಪೂರ್ವಾನುಮತಿ ಪಡೆಯದೇ ಕಾನೂನು ಬಾಹಿರವಾಗಿ ಅಕ್ರಮವಾಗಿ ಜನರನ್ನು ಗುಂಪು ಸೇರಿಸಿ ಸಾರ್ವಜನಿಕ ರಸ್ತೆಯಲ್ಲಿ ಕೂತು ವಾಹನ ಸುಗಮ ಸಂಚಾರಕ್ಕೆ ತಡೆಯೊಡ್ಡಿ ಜನಸಂಚಾರಕ್ಕೆ ಅಡ್ಡಿ ಉಂಟುಮಾಡಿದ್ದಾರೆ ಎಂದು ಆರೋಪಿಸಿ 15 ಜನರು ಮತ್ತು ಇತರರ ಮೇಲೆ ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಳ್ತಂಗಡಿ ಸಂಚಾರ ಪೊಲೀಸ್ ಠಾಣೆ ಸಹಾಯಕ ಪೊಲೀಸ್ ಉಪ ನಿರೀಕ್ಷಕ ರಾಮಚಂದ್ರ ರವರು ಈ ಬಗ್ಗೆ ದೂರನ್ನು ದಾಖಲಿಸಿದ್ದು ಪ್ರವೀಣ್ ಫೆರ್ನಾಂಡಿಸ್, ರಮೇಶ ಗಾಂಧಿನಗರ, ಶೀನಗಾಂಧಿನಗರ, ಇಕ್ಷಾಲ್ ಅತ್ತಾಜೆ, ಸಂತೋಷ್ ಉಜಿರೆ ಉಮೇಶ ಆಚಾರ್ಯ, ಅಣು ಗಾಂಧಿನಗರ, ಸುಜನ್ ಪಜಿರಡ್ಕ ಬಾಬು ಗಾಂಧಿನಗರ, ಗಿರೀಶ ಪೆರ್ಲ, ಗೋಪಾಲ ಗಾಂಧಿನಗರ, ಗಣೇಶ ಬಡೆಕೊಟ್ಟು, ಉಮರ್ ಟಿ.ಬಿಕ್ರಾಸ್. ರಂಜನ್ ಗಾಂಧಿನಗರ ಮತ್ತು ಇತರರು ಸ್ಥಳದಲ್ಲಿ ಸೇರಿದ್ದು ಮಾವಂತೂರುಲಾಡ್ಜ್ ಎದುರು ಪಾರ್ಕ್ ಮಾಡಿದ್ದ ಅಟೋರಿಕ್ಷಾ ಒಂದರ ಮೇಲೆ ಮರಬಿದ್ದು ಅಟೋರಿಕ್ಷಾ ಜಖಂ ಆದ ವಿಚಾರದಲ್ಲಿ ಪರಿಹಾರಕ್ಕೆ ಸಂಬಂಧಿಸಿದಂತೆ ಜಿಲ್ಲಾಡಳಿತ ಅಥವಾ ಪೊಲೀಸ್ ಇಲಾಖೆಯಿಂದ ಯಾವುದೇ ಪೂರ್ವಾನುಮತಿ ಪಡೆಯದೇ ಕಾನೂನು ಬಾಹಿರವಾಗಿ ಅಕ್ರಮವಾಗಿ ಜನರನ್ನು ಗುಂಪು ಸೇರಿಸಿ ಸಾರ್ವಜನಿಕ ರಸ್ತೆಯಲ್ಲಿ ಕೂತು ವಾಹನ ಸುಗಮ ಸಂಚಾರಕ್ಕೆ ತಡೆಒಡ್ಡಿ ಜನಸಂಚಾರಕ್ಕೆ ಅಡ್ಡಿ ಉಂಟುಮಾಡಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಇದೀಗ 15ಮಂದಿಯ ವಿರುದ್ಧ ಪ್ರಕರಣ ದಾಖಲಾಗಿದೆ.