Home ಬ್ರೇಕಿಂಗ್‌ ನ್ಯೂಸ್ ಕಥೋಲಿಕ್ ಕಾಂಗ್ರೆಸ್ ಜಾಗತಿಕ ಸಮಿತಿಯ ಕಾರ್ಯದರ್ಶಿಯಾಗಿ ಜೈಸನ್ ಪಟ್ಟೇರಿಲ್ ಆಯ್ಕೆ

ಕಥೋಲಿಕ್ ಕಾಂಗ್ರೆಸ್ ಜಾಗತಿಕ ಸಮಿತಿಯ ಕಾರ್ಯದರ್ಶಿಯಾಗಿ ಜೈಸನ್ ಪಟ್ಟೇರಿಲ್ ಆಯ್ಕೆ

0

ಬೆಳ್ತಂಗಡಿ; ಕಥೋಲಿಕ್ ಕಾಂಗ್ರೆಸ್ ಜಾಗತಿಕ ಸಮಿತಿಯ ನೂತನ ಕಾರ್ಯದರ್ಶಿಯಾಗಿ ಯುವ ಮುಖಂಡ ಜೈಸನ್ ಪಟ್ಟೇರಿಲ್ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಜಗತ್ತಿನ ವಿವಿಧ ದೇಶಗಳ ಪ್ರತಿನಿಧಿಗಳನ್ನು ಒಳಗೊಂಡಿರುವ ಕಥೋಲಿಕ್ ಕಾಂಗ್ರೆಸ್ ಗ್ಲೋಬಲ್ ಸಮಿತಿಯ ಪದಾಧಿಕಾರಿಗಳ ಚುನಾವಣೆ ಇತ್ತೀಚೆಗೆ ನಡೆಯಿತು. ಸಮಿತಿಯ ಕಾರ್ಯದರ್ಶಿ ಯಾಗಿ ಜೈಸನ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ವಿವಿಧ ಸಮಾಜಮುಖಿ ಕಾರ್ಯಗಳಲ್ಲಿ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಂಡಿರುವ ಜೈಸನ್ ಕೆ.ಎಸ್.ಎಂ.ಸಿ ಎ ಯ ಧರ್ಮಸ್ಥಳ ವಲಯ ಅಧ್ಯಕ್ಷರಾಗಿ ಬ್ಲಾಕ್ ಕಾಂಗ್ರೆಸ್ ಗ್ರಾಮೀಣ ಸಮಿತಿಯ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

NO COMMENTS

LEAVE A REPLY

Please enter your comment!
Please enter your name here

Exit mobile version