ಬೆೆಳ್ತಂಗಡಿ; ಕರ್ನಾಟಕ ರಾಜ್ಯ ಅಕ್ಷರ ದಾಸೋಹ ನೌಕರರ ಸಂಘ ಬೆಳ್ತಂಗಡಿ ತಾಲೂಕು ಸಮಾವೇಶವು ಬೆಳ್ತಂಗಡಿ ಅಂಬೇಡ್ಕರ್ ಭವನದಲ್ಲಿ ಇತ್ತೀಚೆಗೆ ನಡೆಯಿತು. ವೇತನ ಏರಿಕೆ, ನಿವೃತ್ತಿ ಪರಿಹಾರ ಸೇರಿದಂತೆ ಕೆಲವು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸರಕಾರಕ್ಕೆ ಮನವಿ ನೀಡಲು ಹಾಗೂ ಅದಿವೇಶನ ಸಮಯ ಅನಿರ್ಧಿಷ್ಟಕಾಲ ಹೋರಾಟ ನಡೆಸಿ ಸರಕಾರದ ಗಮನ ಸೆಳೆಯಲು ನಿರ್ಧರಿಸಲಾಯಿತು.
ತಾಲೂಕು ಸಮಾವೇಶದಲ್ಲಿ ತಾಲೂಕು ಸಮಿತಿಗೆ ನೂತನ ಸಮಿತಿ ಆಯ್ಕೆ ಮಾಡಲಾಯಿತು. ಗೌರವ ಅದ್ಯಕ್ಷರಾಗಿ ವೇದಾವತಿ ನಾವೂರು, ಅದ್ಯಕ್ಷರಾಗಿ ಜೋನ್ಸಿ ತುರ್ಕಳಿಕೆ ಕಾರ್ಯದರ್ಶಿಯಾಗಿ ಗೀತಾ ಕಳೆಂಜ, ಖಜಾಂಜಿಯಾಗಿ ಮೀನಾಕ್ಷಿ ಮುಗುಳಿ ಮತ್ತುಉಪಾದ್ಯಕ್ಷರುಗಳಾಗಿ ಕುಸುಮ ಕಲ್ಮಂಜ, ಜಾನಕಿ ಮೂಡಾಯಿಬೆಟ್ಟು, ವಾರಿಜ ಅಳದಂಗಡಿ, ಪವಿತ್ರ ಕೊಕ್ಕಡ ಸಹಕಾರ್ಯದರ್ಶಿಗಳಾಗಿ ವಿನೋದಾ ಪಾಲಡ್ಕ, ಜಯಶ್ರೀ ಬಳಂಜ, ಹೇಮ ಕಲ್ಮಂಜ, ಕಾನೂನು ಸಲಹೆಗಾರರಾಗಿ ನ್ಯಾಯವಾದಿ ಸಿಐಟಿಯು ಮುಖಂಡರಾದ ಬಿ.ಎಂ.ಭಟ್ ಆಯ್ಕೆಯಾದರು.
ಸಮಿತಿ ಸದಸ್ಯರುಗಳಾಗಿ ವೇದಾವತಿ, ವಾರಿಜ, ಗೀತಾ, ಪ್ರೇಮಾವತಿ, ಸುಶೀಲಾ, ನಯನ, ನೀಲಮ್ಮ, ಶೋಭಾ, ಹೇಮಾವತಿ, ಸುಂದರಿ, ಶ್ಯಾಮಲ, ಪ್ರಮೀಳಾ, ರುಕಿಯಾ, ವನಿತಾ, ವನಜಾ, ಕೇಸರಿ, ಪದ್ಮಾವತಿ, ಮೊದಲಾದವರು ಆಯ್ಕೆಯಾದರು.