Home ರಾಜಕೀಯ ಸಮಾಚಾರ ಕೋಮು ದ್ವೇಷದ ಹೇಳಿಕೆ ಶಾಸಕ ಹರೀಶ್ ಪೂಂಜ ವಿರುದ್ದ ಕ್ರಮಕ್ಕೆ ಎಸ್.ಕೆ.ಎಸ್.ಎಸ್.ಎಫ್ ಒತ್ತಾಯ

ಕೋಮು ದ್ವೇಷದ ಹೇಳಿಕೆ ಶಾಸಕ ಹರೀಶ್ ಪೂಂಜ ವಿರುದ್ದ ಕ್ರಮಕ್ಕೆ ಎಸ್.ಕೆ.ಎಸ್.ಎಸ್.ಎಫ್ ಒತ್ತಾಯ

0

ಬೆಳ್ತಂಗಡಿ : ಮಸೀದಿಗಳ ಕುರಿತು ಬೆಳ್ತಂಗಡಿ ಶಾಸಕ ಹರೀಶ್ ಪೂಂಜರವರು ಕೋಮು ದ್ವೇಷದ ಹೇಳಿಕೆ ನೀಡಿದ್ದಾರೆ ಎಂದು ಎಸ್ ಕೆ‌.ಎಸ್.ಎಸ್. ಎಫ್ ಬೆಳ್ತಂಗಡಿ ಘಟಕ ಆರೋಪಿಸಿದ್ದು ಶಾಸಕರ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದೆ.

ದಕ ಜಿಲ್ಲೆಯ ಮುಳಿಯಾರಿನಲ್ಲಿ ನಡೆದ ಘಟನೆ ಮುಂದಿಟ್ಟುಕೊಂಡು ಮುಸ್ಲಿಮರ ಧಾರ್ಮಿಕ ಕೇಂದ್ರವಾದ ಮಸೀದಿಗಳ ಬಗ್ಗೆ ಶಾಸಕರು ಇಲ್ಲಸಲ್ಲದ ಆರೋಪ ಮಾಡಿದ್ದಾರೆ, ಈ ಮೂಲಕ ಕೋಮು ಸಾಮರಸ್ಯವನ್ನು ಕದಡಿಸುವ ಉದ್ರೇಕಕಾರಿ ಭಾಷಣ ಮಾಡಿ ಸಮಾಜದಲ್ಲಿ ಅಶಾಂತಿ ಉಂಟು ಮಾಡುವ, ಪ್ರಚೋದನಕಾರಿ ಭಾಷಣ ಮಾಡಿದ ಶಾಸಕ ಪೂಂಜ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಅದು ಆಗ್ರಹಿಸಿದೆ, ಮತ್ತು ಶಾಸಕರು ಮಾಡಿದ ಆರೋಪವನ್ನು ಸಾಬೀತು ಪಡಿಸಲಿ ಎಂದು ಸಂಘಟನೆಯ ಮುಖಂಡರುಗಳು ಸವಾಲು ಹಾಕಿದೆ.

NO COMMENTS

LEAVE A REPLY

Please enter your comment!
Please enter your name here

Exit mobile version