Home ಅಪಘಾತ ಲಾಯಿಲ, ಮಳೆಗೆ ರಸ್ತೆ ಬದಿಯ ತಡೆಗೋಡೆ ಕುಸಿತ:

ಲಾಯಿಲ, ಮಳೆಗೆ ರಸ್ತೆ ಬದಿಯ ತಡೆಗೋಡೆ ಕುಸಿತ:

215
0

ಬೆಳ್ತಂಗಡಿ: ತಾಲೂಕಿನಾದ್ಯಂತ ಭಾರೀ ಮಳೆಯಾಗುತಿದ್ದು ಲಾಯಿಲ ಬಳಿ ರಸ್ತೆ ಬದಿಯ ತಡೆಗೋಡೆ ಕುಸಿತಗೊಂಡು ವಾಹನ ಸಂಚಾರಕ್ಕೆ ತೊಂದರೆಯುಂಟಾಗಿದೆ.
ಬೆಳ್ತಂಗಡಿ ತಾಲೂಕಿನ ಲಾಯಿಲ ಗ್ರಾಮದ ಬಜಕ್ರೆಸಾಲು ಎಂಬಲ್ಲಿ ಲಾಯಿಲ ಮುಂಡೂರು ಸಡಕ್ ರಸ್ತೆಯ ಬದಿ ಕಟ್ಟಿದ್ದ ತಡೆಗೋಡೆ ಮಳೆಗೆ ಕುಸಿದಿದೆ. ಅದೃಷ್ಟವಶಾತ್ ಈ ವೇಳೆ ವಾಹನ ಹಾಗೂ, ಜನರ ಸಂಚಾರ ಇಲ್ಲದಿದ್ದರಿಂದ ಅಪಾಯ ತಪ್ಪಿದೆ.ಸ್ಥಳೀಯರು ರಸ್ತೆಗೆ ಬಿದಿದ್ದ ಕಲ್ಲನ್ನು ಸರಿಸಿ ವಾಹನ ಸಂಚಾರಕ್ಕೆ ಅನುವು ಮಾಡಿ ಕೊಟ್ಟಿದ್ದಾರೆ.

LEAVE A REPLY

Please enter your comment!
Please enter your name here