Home ಬ್ರೇಕಿಂಗ್‌ ನ್ಯೂಸ್ ಎನ್.ಡಿ ಗೆ ಮತ್ತೊಂದು ಗೆಲುವಿನ ಭವಿಷ್ಯ ನುಡಿದ ಚುನಾವಣೋತ್ತರ‌ ಸಮೀಕ್ಷೆಗಳು

ಎನ್.ಡಿ ಗೆ ಮತ್ತೊಂದು ಗೆಲುವಿನ ಭವಿಷ್ಯ ನುಡಿದ ಚುನಾವಣೋತ್ತರ‌ ಸಮೀಕ್ಷೆಗಳು

0

ಹೊಸದಿಲ್ಲಿ: ಲೋಕಸಭಾ ಚುನಾವಣೆ ಮುಗಿಯುತ್ತಿದ್ದಂತೆಯೇ ಎಕ್ಸಿಟ್ ಪೋಲ್ ಫಲಿತಾಂಶಗಳು ಹೊರಬಂದಿದೆ. ಈ ಬಾರಿಯ ಎಲ್ಲ ಎಕ್ಸಿಟ್
ಪೋಲ್ ಗಳು ಈ ಬಾರಿ ಮತ್ತೊಮ್ಮೆ ಎನ್.ಡಿ.ಎ‌ ಮೈತ್ರಿಕೂಟ ಅಧಿಕಾರಕ್ಕೆ ಬರಲಿದೆ ಎಂಬ ಫಲಿತಾಂಶವನ್ನು ಹೊರತಂದಿದೆ.
ಎನ್‌ಡಿಎ ಮೈತ್ರಿಕೂಟ 350ಕ್ಕಿಮತ ಹೆಚ್ಚು ಸ್ಥಾನಗಳನ್ನು ಗಳಿಸಲಿದೆ ಎಂದು 4 ಎಕ್ಸಿಟ್ ಪೋಲ್ ಗಳು ಭವಿಷ್ಯ ನುಡಿದಿದೆ. ಕಾಂಗ್ರೆಸ್ ನೇತೃತ್ವ ಮೈತ್ರಿಕೂಟ ಕೇವಲ 125ರಿಂದ 150ಸ್ಥಾನಗಳನ್ನು ಮಾತ್ರ ಗೆಲ್ಲಲಿದೆ ಎಂಬುದು ಎಲ್ಲ ಸಮೀಕ್ಷೆಗಳ ಬಹುತೇಕ ಸಾರಾಂಶವಾಗಿದೆ.

ಇಂಡಿಯಾ ನ್ಯೂಸ್‌-ಡಿ ಡೈನಾಮಿಕ್ಸ್‌ ಮತದಾನೋತ್ತರ ಸಮೀಕ್ಷೆಯ ಪ್ರಕಾರ, ಎನ್‌ಡಿಎ ಮೈತ್ರಿಕೂಟ 371 ಸ್ಥಾನಗಳಲ್ಲಿ ಗೆಲುವು ಸಾಧಿಸಲಿದ್ದರೆ, ಇಂಡಿಯಾ ಮೈತ್ರಿಕೂಟ 125 ಸ್ಥಾನಗಳಿಗಷ್ಟೆ ತೃಪ್ತಿ ಪಟ್ಟುಕೊಳ್ಳಲಿದೆ. ಇತರರು 47 ಸ್ಥಾನಗಳಲ್ಲಿ ಗೆಲುವು ಸಾಧಿಸಲಿವೆ.

ಜನ್ ಕಿ ಬಾತ್ ಸಮೀಕ್ಷೆಯ ಪ್ರಕಾರ, ಎನ್‌ಡಿಎ ಮೈತ್ರಿಕೂಟ 362-392 ಸ್ಥಾನಗಳಲ್ಲಿ ಗೆಲುವು ಸಾಧಿಸಲಿದ್ದು, ಇಂಡಿಯಾ ಮೈತ್ರಿಕೂಟ 141-161 ಸ್ಥಾನ ಗಳಿಸಲಿದೆ. ಇತರರು 10-20 ಸ್ಥಾನ ಗಳಿಸಲಿದ್ದಾರೆ.

ರಿಪಬ್ಲಿಕ್ ಭಾರತ್-ಮ್ಯಾಟ್ರಿಝ್ ಸಮೀಕ್ಷೆಯ ಪ್ರಕಾರ, ಎನ್‌ಡಿಎ 353-368 ಸ್ಥಾನಗಳಲ್ಲಿ ಜಯಭೇರಿ ಬಾರಿಸಲಿದ್ದರೆ, ಇಂಡಿಯಾ ಮೈತ್ರಿಕೂಟ 118-133 ಸ್ಥಾನಕ್ಕಷ್ಟೆ ಸೀಮಿತವಾಗಲಿದೆ. ಇತರರು 43-48 ಸ್ಥಾನಗಳಲ್ಲಿ ಜಯ ಸಾಧಿಸಲಿದ್ದಾರೆ.

ರಿಪಬ್ಲಿಕ್ ಟಿವಿ-ಪಿ ಮಾರ್ಕ್ ಸಮೀಕ್ಷೆಯ ಪ್ರಕಾರ, ಎನ್‌ಡಿಎ 359 ಸ್ಥಾನಗಳಲ್ಲಿ ಗೆಲುವು ಸಾಧಿಸಲಿದ್ದು, ಇಂಡಿಯಾ ಮೈತ್ರಿಕೂಟ ಕೇವಲ 154 ಸ್ಥಾನಗಳಲ್ಲಿ ಗೆಲುವು ಪಡೆಯಲಿದೆ. ಇತರರು 30 ಸ್ಥಾನಗಳಲ್ಲಿ ಗೆಲುವು ಸಾಧಿಸಲಿದ್ದಾರೆ.

ಈ ನಾಲ್ಕು ಸಮೀಕ್ಷೆಗಳ ಸರಾಸರಿ ಆಧಾರದಲ್ಲಿ ಎನ್‌ಡಿಎ 350ಕ್ಕಿಂತ ಹೆಚ್ಚು ಹಾಗೂ ಇಂಡಿಯಾ ಮೈತ್ರಿಕೂಟ 125-150 ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ ಎಂದು ‘ಪೋಲ್ ಆಫ್ 4 ಎಕ್ಸಿಟ್ ಪೋಲ್ಸ್ ಅಂದಾಜಿಸಿದೆ.
ಉಳಿದ ಸಮೀಕ್ಷೆಗಳೂ ಇದರಿಂದ ಭಿನ್ನವಾಗಿಲ್ಲ

NO COMMENTS

LEAVE A REPLY

Please enter your comment!
Please enter your name here

Exit mobile version