Home ರಾಜಕೀಯ ಸಮಾಚಾರ ಕೊಕ್ಕಡ ಕೇಂದ್ರ ಸರಕಾರದ ಕಾರ್ಮಿಕ ನೀತಿ ವಿರುದ್ದ ವಾಹನ ಜಾಥಾ ವೇಳೆ ಮೋದಿ ಪರವಾಗಿ ಘೋಷಣೆ...

ಕೊಕ್ಕಡ ಕೇಂದ್ರ ಸರಕಾರದ ಕಾರ್ಮಿಕ ನೀತಿ ವಿರುದ್ದ ವಾಹನ ಜಾಥಾ ವೇಳೆ ಮೋದಿ ಪರವಾಗಿ ಘೋಷಣೆ ಕೂಗಿದ ತಂಡ

0

ಬೆಳ್ತಂಗಡಿ; ಕೇಂದ್ರ ಸರಕಾರದ ಕಾರ್ಮಿಕ ವಿರೋಧಿ ನೀತಿಗಳ ವಿರುದ್ದ ಅಖಿಲ ಬಾರತ ಮುಷ್ಕರದ ಪ್ರಚಾರದ ಅಂಗವಾಗಿ ನಡೆದ ವಾಹನ ಜಾಥಾದ ಕಾರ್ಯಕ್ರದ ವೇಳೆ ಕೊಕ್ಕಡದಲ್ಲಿ ತಂಡವೊಂದು ಮೋದಿ ಮೋದಿ ಎಂಬ ಘೋಷಣೆ ಕೂಗಿ ಕಾರ್ಯಕ್ರಮಕ್ಕೆ ಅಡ್ಡಿ ಪಡಿಸಲು ಪ್ರಯತ್ನಿಸಿದ ಘಟನೆ ಶುಕ್ರವಾರ ರಾತ್ರಿ ಸಂಭವಿಸಿದೆ.
ವಾಹನಜಾಥಾದ ಅಂಗವಾಗಿ ಕೊಕ್ಕಡದಲ್ಲಿ ಶುಕ್ರವಾರ 7 ಗಂಟೆಯ ಸುಮಾರಿಗೆ ಸಭಾ ಕಾರ್ಯಕ್ರಮ ನಡೆಯುತ್ತಿದ್ದ ವೇಳೆ ಸುನಿಲ್ ಕುಮಾರ್ ಬಜಾಲ್ ಮಾತನಾಡುತ್ತಿದ್ದರು ಈವೇಳೆ ಏಕಾಏಕಿ ಸುಮಾರು 20ಮಂದಿಯ ಗುಂಪು ಸೇರಿ ಕಾರ್ಯಕ್ರಮಕ್ಕೆ ಅಡ್ಡಿಪಡಿಸಲು ನೋಡಿದ್ದಾರೆ ನಿರಂತರವಾಗಿ ಮೋದಿ ಮೋದಿ ಎಂಬ ಘೋಷಣೆಯನ್ನು ಕೂಗುತ್ತಾ ಇದ್ದರು. ಈ ವೇಳೆಗೆ ಯಾವುದೇ ಅಹಿತಕರ ಘಟನೆನಗಳು ನಡೆಯದಂತೆ ಸಭಾಕಾರ್ಯಕ್ರಮ ಮುಗಿಸಿ ಜಾಥಾ ಹಿಂತಿರುಗಿದೆ . ಈ ಬಗ್ಗೆ ಜಥಾದ ನೇತೃತ್ವ ವಹಿಸಿದ್ದ ಬಿ.ಎಂ ಭಟ್ ಅವರು ಕೂಡಲೇ ಧರ್ಮಸ್ಥಳ ಪೊಲೀಸರಿಗೆ ಮಾಹಿತಿಯನ್ನು ನೀಡಿದ್ದಾರೆ.

ಸಿಪಿಐಎಂ ಖಂಡನೆ;

ಕೇಂದ್ರ ಸರಕಾರ ಕಾರ್ಮಿಕರ ರೈತರ ಹಕ್ಕುಗಳನ್ನು ಕಸಿದುಕೊಳ್ಳಲು ಪ್ರಯತ್ನಿಸುತ್ತಿರುವ ಕೇಂದ್ರ ಸರಕಾರದ ವಿರುದ್ದ ಹಮ್ಮಿಕೊಂಡಿದ್ದ ವಾಹನ ಜಾಥಾದ ವೇಳೆ ಕಿಡಿಗೇಡಿಗಳ ತಂಡ ಕಾರ್ಯಕ್ರಮಕ್ಕೆ ಅಡ್ಡಿಪಡಿಸಲು ಪ್ರಯತ್ನಿಸಿರುವುದು ಖಂಡನೀಯ ಎಂದು ಸಿಪಿಐಎಂ ತಾಲೂಕು ಸಮಿತಿ ಕಾರ್ಯದರ್ಶಿ ಬಿ. ಭಟ್ ಪತ್ರಿಕಾ ಹೇಳಿಕೆಯಲ್ಕಿ ತಿಳಿಸಿದ್ದಾರೆ.
ಸರಕಾರ ಅನುಸರಿಸುತ್ತಿರುವ ಕಾರ್ಮಿಕ ವಿರೋಧಿ ರೈತ ವಿರೋಧಿಯ ವಿರುದ್ದ ಕಾರ್ಮಿಕ ಸಂಘಟನೆಗಳು ನಡೆಸುತ್ತಿರುವ ಹೋರಾಟ ನಿರಂತರವಾಗಿ ಮುಂದಿವರಿಯಲಿದೆ ಎಂದಿರುವ ಅವರು ಕಾರ್ಮಿಕರ ಹೋರಾಟದಿಂದ ಭಯಗೊಂಡಿರುವ ಬಿಜೆಪಿ ಪಕ್ಷದವರು ಹಾಗು ಬೆಂಬಲಿಗರು ಪ್ರಚಾರ ಜಾಥಾಕ್ಕೆ ಅಡ್ಡಿಪಡಿಸುತ್ತಿದ್ದಾರೆ ಫೆ.12 ರಂದು ನಡೆಯುವ ಅಖಿಲಭಾರತ ಮಯಷ್ಕರವನ್ನು ಯಶಸ್ವಿಗೊಳಿಸಲು ಸಿಪಿಐಎಂ ಪಕ್ಷ ಬೆಂಬಲ ನೀಡಲಿದೆ ಮುಷ್ಕರ ಯಶಸ್ವಿಯಾಗಿಸಲು ಎಲ್ಲರೂ ಪ್ರಯತ್ನಿಸುವಂತೆ ಬಿ.ಎಂ ಭಟ್ ಅವರು ಕರೆ ನೀಡಿದ್ದಾರೆ

NO COMMENTS

LEAVE A REPLY

Please enter your comment!
Please enter your name here

Exit mobile version