ಬೆಳ್ತಂಗಡಿ:ಮಂಗಳೂರಿನಲ್ಲಿ ನಡೆದ ದ್ವಿಚಕ್ರ ವಾಹನ ಅಪಘಾತ ಒಂದರಲ್ಲಿ ಗಾಯಗೊಂಡಿದ್ದ ತೋಟತ್ತಾಡಿಯ ಯುವಕ ಆಸ್ಪತ್ರೆಯಲ್ಲಿ ಮೃತಪಟ್ಟ ಘಟನೆ ಶುಕ್ರವಾರ ನಡೆದಿದೆ.
ಮಂಗಳೂರಿನ ಕಾಲೇಜೊಂದರ ಹಾಸ್ಟೆಲ್ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಕುಶಾಲಪ್ಪ ಗೌಡ ಯಾನೆ ಪ್ರಶಾಂತ(35) ಮೃತಪಟ್ಟ ಯುವಕ.
ಇವರು ಸಂಚರಿಸುತ್ತಿದ್ದ ದ್ವಿಚಕ್ರವಾಹನಕ್ಕೆ ಮಂಗಳವಾರ ಇನ್ನೋವಾ ಕಾರು ಬಡಿದು ತಲೆ ಹಾಗೂ ಹೊಟ್ಟೆ ಭಾಗಕ್ಕೆ ತೀವ್ರ ಗಾಯಗಳುಂಟಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಶುಕ್ರವಾರ ಅವರು ಚಿಕಿತ್ಸೆಗೆ ಸ್ಪಂದಿಸದೆ ಆಸ್ಪತ್ರೆಯಲ್ಲಿ ಮೃತಪಟ್ಟರು.
ತೋಟತ್ತಾಡಿ ಗ್ರಾಮದ ಅಗರಿ ಕೃಷ್ಣಪ್ಪ ಗೌಡರ ಪುತ್ರರಾಗಿರುವ ಇವರು ಅವಿವಾಹಿತರಾಗಿದ್ದು, ಅವರಿಗೆ ತಂದೆ,ತಾಯಿ, ಸಹೋದರ,ಸಹೋದರಿ ಇದ್ದಾರೆೆ
