Home ಬ್ರೇಕಿಂಗ್‌ ನ್ಯೂಸ್ ವಸಂತ ಬಂಗೇರರಿಗೆ ನುಡಿನಮನ ಕಾರ್ಯಕ್ರಮ ಸಿ.ಎಂ, ಡಿ.ಸಿ.ಎಂ ಸೇರಿದಂತೆ ಹಲವರು ಗಣ್ಯರು ಭಾಗಿ

ವಸಂತ ಬಂಗೇರರಿಗೆ ನುಡಿನಮನ ಕಾರ್ಯಕ್ರಮ ಸಿ.ಎಂ, ಡಿ.ಸಿ.ಎಂ ಸೇರಿದಂತೆ ಹಲವರು ಗಣ್ಯರು ಭಾಗಿ

0

ಬೆಳ್ತಂಗಡಿ; ಶನಿವಾರ ಬೆಳ್ತಂಗಡಿ ಯಲ್ಲಿ ನಡೆಯಲಿರುವ ಮಾಜಿ ಶಾಸಕ ದಿವಂಗತ ಕೆ. ವಸಂತ ಬಂಗೇರ ರವರ ನುಡಿ ನಮನ ಕಾರ್ಯಕ್ರಮ ದಲ್ಲಿ ಮುಖ್ಯಮಂತ್ರಿ ಉಪಮುಖ್ಯಮಂತ್ರಿ ಸೇತಿದಂತೆ ಹಲವರು ಸಚಿವರುಗಳು ಭಾಗಿಯಾಗಲಿದ್ದಾರೆ.
ಎಂದು ಕೆಪಿಸಿಸಿ ಕಾರ್ಯದರ್ಶಿ ರಕ್ಷಿತ್ ಶಿವರಾಂ ತಿಳಿಸಿದ್ದಾರೆ.
ನಗರದ ಕಿನ್ಯಮ್ಮ ಯಾನೆ ಗುಣವತಿಯಮ್ಮ ಸಭಾಂಗಣದಲ್ಲಿ ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ಸಮಿತಿಗಳ‌ ನೇತೃತ್ವದಲ್ಲಿ ನುಡಿನಮನ‌ ಕಾರ್ಯಕ್ರಮ ನಡೆಯಲಿದೆ.
ಕಾರ್ಯಕ್ರಮದಲ್ಲಿ ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರು, ವಿಧಾನಸಭಾ ಸ್ಪೀಕರ್ ಯು. ಟಿ ಖಾದರ್ , ರಾಜ್ಯದ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ , ಸಮಾಜ ಕಲ್ಯಾಣ ಸಚಿವರಾದ ಮಹಾದೇವಪ್ಪ , ಮಾಜಿ ವಿಧಾನಸಭಾ ಸ್ಪೀಕರ್ ರಮೇಶ್ ಕುಮಾರ್ ಅವರುನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ರವರು ಆಗಮಿಸಲಿದ್ದಾರೆ.
ಎಂದು ಅವರು ತಿಳಿಸಿದ್ದಾರೆ.

NO COMMENTS

LEAVE A REPLY

Please enter your comment!
Please enter your name here

Exit mobile version