ಬೆಳ್ತಂಗಡಿ: ಕರ್ನಾಟಕ ಸರಕಾರದ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಮೇ 18 ರಂದು ಸಂಜೆ ಇತ್ತಿಚೇಗಷ್ಟೇ ವಿಧಿವಶರಾದ ಮಾಜಿ ಶಾಸಕ ಕೆ. ವಸಂತ ಬಂಗೇರರ ಬೆಳ್ತಂಗಡಿಯ ಹಳೆಕೋಟೆ ಮನೆಗೆ ಭೇಟಿ ನೀಡಿ ಬಂಗೇರರ ಪತ್ನಿ ಸುಜಿತಾ ವಿ. ಬಂಗೇರ ಹಾಗೂ ಕುಟುಂಬಸ್ಥರಿಗೆ ಸಂತ್ವಾನ ಹೇಳಿದರು.
“ನನ್ನ ತಂದೆ ಬಂಗಾರಪ್ಪ ಅವರಂತೆ ವಸಂತ ಬಂಗೇರ ಅವರು ಕೂಡಾ ನೇರ ನಡೆನುಡಿಯ ವ್ಯಕ್ತಿಯಾಗಿದ್ದರು. ಬೆಳ್ತಂಗಡಿ ಕ್ಷೇತ್ರದಲ್ಲಿ ಒಳ್ಳೆಯ ಕೆಲಸ ಮಾಡಿದ್ದರು. ರಾಜಕೀಯ ಕ್ಷೇತ್ರದಲ್ಲಿ ಬಹಳಷ್ಟು ಅನುಭವವನ್ನು ಹೊಂದಿದ್ದರು. ಅವರ ನಿಧನರಾದ ದಿನ ಅನಿವಾರ್ಯ ಕಾರಣಗಳಿಂದ ನನಗೆ ಬರಲು ಸಾಧ್ಯವಾಗಿಲ್ಲ. ನಾವು ಅವರ ಕುಟುಂಬಸ್ಥರ ಜೊತೆ ಸದಾ ಇರುತ್ತೇವೆ” ಎಂದು ಸಚಿವರ ಈ ಸಂದರ್ಭದಲ್ಲಿ ತಿಳಿಸಿದರು.
ಈ ಸಂದರ್ಭದಲ್ಲಿ ಎಂಎಲ್‌ಸಿ ಮಂಜುನಾಥ ಭಂಡಾರಿ, ಜಿ.ಪಂ ಮಾಜಿ ಸದಸ್ಯ ಧರಣೇಂದ್ರ ಕುಮಾರ್ ಹೊಸಂಗಡಿ, ಬೆಳ್ತಂಗಡಿ ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘದ ಅಧ್ಯಕ್ಷ ಜಯವಿಕ್ರಮ್ ಕಲ್ಲಾಪು, ಇಳಂತಿಲ ಗ್ರಾ.ಪಂ ಮಾಜಿ ಅಧ್ಯಕ್ಷ ಇಸುಬು ಇಳಂತಿಲ, ನ್ಯಾಯವಾದಿ ಮನೋಹರ ಕುಮಾರ್ ಇಳಂತಿಲ, ಅನೂಪ್ ಬಂಗೇರ ಮದ್ದಡ್ಕ ಬಂಗೇರರ ಪುತ್ರಿಯರಾದ ಪ್ರೀತಿತ ಬಂಗೇರ, ಬಿನುತ ಬಂಗೇರ, ಅಳಿಯಂದಿರಾದ ಧರ್ಮವಿಜೇತ್ ಮತ್ತು ಸಂಜೀವ್ ಕನೇಕಲ್ ಉಪಸ್ಥಿತರಿದ್ದರು.