Home ಬ್ರೇಕಿಂಗ್‌ ನ್ಯೂಸ್ ನಗರದಲ್ಲಿ ಅಪರಿಚಿತ ವಾಹನ ಡಿಕ್ಕಿಹೊಡೆದು ನವಿಲು ಸಾವು

ನಗರದಲ್ಲಿ ಅಪರಿಚಿತ ವಾಹನ ಡಿಕ್ಕಿಹೊಡೆದು ನವಿಲು ಸಾವು

0

ಬೆಳ್ತಂಗಡಿ; ನಗರದ ಚರ್ಚ್ ರೋಡ್ ಸಮೀಪದ ಕಲ್ಲಗುಡ್ಡೆ ಎಂಬಲ್ಲಿರಾಷ್ಟ್ರೀಯ ಪಕ್ಷಿ ನವಿಲು ಯಾವುದೋ ಅಪರಿಚಿತ ವಾಹನ ಡಿಕ್ಕಿ ಹೊಡೆದು ಸಾವನ್ನಪ್ಪಿದ ಘಟನೆ ವರದಿಯಾಗಿದೆ.
ರಸ್ತೆಬದಿಯಲ್ಲಿ ನವಿಲು ಸತ್ತು ಬಿದ್ದಿರುವುದನ್ನು ಗಮನಿಸಿದ ಸಾರ್ವಜನಿಕರು ಅರಣ್ಯ ಇಲಾಖೆಗೆ ಈ ಬಗ್ಗೆ ಮಾಹಿತಿ ನೀಡಿದ್ದು , ಅರಣ್ಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಈ ಪರಿಸರದಲ್ಲಿ ನವಿಲುಗಳ ಓಡಾಟ ಹೆಚ್ಚಾಗಿದ್ದು ಯಾವುದೋ ವಾಹನ ಡಿಕ್ಕಿಹೊಡೆದು ನವಿಲು ಸತ್ತಿರಬಹುದು ಎಂದು ಅನುಮಾನಿಸಲಾಗಿದೆ. ಅರಣ್ಯ ಇಲಾಖೆಯ ಅಧಿಕಾರಿಗಳು ಮುಂದಿನ ಕ್ರಮ ಕೈಗೊಳ್ಳುತ್ತಿದ್ದಾರೆ.

NO COMMENTS

LEAVE A REPLY

Please enter your comment!
Please enter your name here

Exit mobile version