Home ರಾಜಕೀಯ ಸಮಾಚಾರ ದೇಶದ ಸುಸ್ಥಿರತೆಗೆ ಮೋದಿ ನಾಯಕತ್ವ ಅಗತ್ಯ ಪ್ರತಾಪ ಸಿಂಹ ನಾಯಕ್

ದೇಶದ ಸುಸ್ಥಿರತೆಗೆ ಮೋದಿ ನಾಯಕತ್ವ ಅಗತ್ಯ ಪ್ರತಾಪ ಸಿಂಹ ನಾಯಕ್

0

ಬೆಳ್ತಂಗಡಿ; ಕಳೆದ ಹತ್ತು ವರ್ಷಗಳಲ್ಲಿ ಎನ್ ಡಿಎ ನೇತೃತ್ವದ ಬಿಜೆಪಿ ಸರಕಾರ ದೇಶವನ್ನು ಪ್ರಗತಿಪಥದತ್ತ ಕೊಂಡೊಯ್ದಿದೆ. ದೇಶದ ಇನ್ನಷ್ಟು ಅಭಿವೃದ್ಧಿಗೆ ಈ ಬಾರಿಯ ಚುನಾವಣೆ ನಿರ್ಣಾಯಕವಾಗಿದೆ. ದೇಶದ ಸುಸ್ಥಿರತೆಗೆ ಮೋದಿಯವರ ನಾಯಕತ್ವ ಅಗತ್ಯವಾಗಿದ್ದು ಈ ಬಾರಿ 400ಕ್ಕೂ ಹೆಚ್ಚು ಸ್ಥಾನಗಳೊಂದಿಗೆ ಪಕ್ಷ ಅಧಿಕಾರಕ್ಕೆಬರಲಿದೆ” ಎಂದು ಎಂ ಎಲ್ ಸಿ ಪ್ರತಾಪ್ ಸಿಂಹ ನಾಯಕ್ ಹೇಳಿದರು.
ಅವರು ಬೆಳ್ತಂಗಡಿಯ ಬಿಜೆಪಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು
“ಜಾಗತಿಕ ಮಟ್ಟದಲ್ಲಿ ಶೇ.7ರ ಬೆಳವಣಿಗೆಯೊಂದಿಗೆ ಭಾರತ ಪ್ರಮುಖ ಚಾಲಕ ಶಕ್ತಿಯಾಗಿ ಮುಂದುವರೆದಿದೆ. ಕೇಂದ್ರ ಸರಕಾರದ ಗಟ್ಟಿ ನಿರ್ಧಾರಗಳಿಂದ ಮೂಲಭೂತ ಸೌಕರ್ಯಗಳಿಗೆ ಸಾಕಷ್ಟು ಒತ್ತು ನೀಡಲಾಗಿದೆ. ಅಭಿವೃದ್ಧಿ ನಿರಂತರವಾಗಿ ಮುಂದಯವರಿಯಲು ಮತ್ತೊಂದು ಬಾರಿ ಎನ್ ಡಿಎ ನೇತೃತ್ವದ ಸರಕಾರ ಅಧಿಕಾರಕ್ಕೆ ಬರಬೇಕಾದ ಅಗತ್ಯವಿದೆ, ಈ ಬಾರಿ 400 ಸ್ಥಾನಗಳನ್ನು ಗೆಲ್ಲಲೇ ಬೇಕಾಗಿದೆ”ಎಂದು ಹೇಳಿದರು.
ರಾಜ್ಯ ಸರಕಾರದ 11 ತಿಂಗಳ ಆಡಳಿತ ಅವಧಿಯಲ್ಲಿ ಕಾನೂನು ವ್ಯವಸ್ಥೆ ಸಂಪೂರ್ಣ ವಿಫಲವಾಗಿದ್ದು,ತುಷ್ಟಿಕರಣವು ಪರಾಕಾಷ್ಠೆಯನ್ನು ತಲುಪಿದೆ. ಆಡಳಿತ ವೈಖರಿ ಭಯೋತ್ಪಾದನಾ ಕೃತ್ಯಗಳಿಗೆ ವಿಶ್ವಾಸ ತುಂಬುವಂತಿದೆ” ಎಂದು ಹೇಳಿದರು.
ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಜಯಂತ ಕೋಟ್ಯಾನ್,ಮಂಡಲ ಅಧ್ಯಕ್ಷ ಶ್ರೀನಿವಾಸರಾವ್ ಉಪಸ್ಥಿತರಿದ್ದರು.
ರಾಜೇಶ್ ಪೆಂರ್ಬುಡ ಸಾಗತಿಸಿದರು

NO COMMENTS

LEAVE A REPLY

Please enter your comment!
Please enter your name here

Exit mobile version