Home ರಾಜಕೀಯ ಸಮಾಚಾರ ನೇಹಾ ಕೊಲೆ ಪ್ರಕರಣ ಉಜಿರೆಯಲ್ಲಿ ಎ.ಬಿ.ವಿ.ಪಿ ಪ್ರತಿಭಟನೆ

ನೇಹಾ ಕೊಲೆ ಪ್ರಕರಣ ಉಜಿರೆಯಲ್ಲಿ ಎ.ಬಿ.ವಿ.ಪಿ ಪ್ರತಿಭಟನೆ

0

ಉಜಿರೆ : ಹುಬ್ಬಳ್ಳಿ ಕೆಬಿವಿ ಕಾಲೇಜಿನಲ್ಲಿ ನಡೆದ ನೇಹಾ ಹೀರೆಮಠ ಹತ್ಯೆ ಖಂಡಿಸಿ ಎ.22 ರಂದು ಉಜಿರೆ ಸರ್ಕಲ್ ನಲ್ಲಿ ಎಬಿವಿಪಿ ಬೆಳ್ತಂಗಡಿ ಘಟಕದ ವತಿಯಿಂದ ಕಪ್ಪುಪಟ್ಟಿ ಪ್ರದರ್ಶಿಸಿ, ರಸ್ತೆ ತಡೆದು ಪ್ರತಿಭಟನೆ ನಡೆಸಲಾಯಿತು.

ಸಂಘಟನೆಯ ಮುಖಂಡ ಸುವಿತ್ ಶೆಟ್ಟಿ ಮಾತನಾಡಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಹೆಣ್ಣು ಮಕ್ಕಳ ಮೇಲಿನ ದೌರ್ಜನ್ಯಗಳು ಹೆಚ್ಚಾಗುತ್ತಿದೆ. ಉಡುಪಿಯ ಪ್ರಕರಣಗಳಿರಬಹುದು, ಕಡಬದಲ್ಲಿ ಮೂವರು ಹೆಣ್ಣು ಮಕ್ಕಳ ಮೇಲೆ ಒಬ್ಬ ಜಿಹಾದಿ ಆಸಿಡ್ ದಾಳಿ ಮಾಡಿದ ಪ್ರಕರಣ ಇರಬಹುದು, ಹಾಗೇ ಮೊನ್ನೆ ಕೆವಿಬಿ ಕಾಲೇಜ್ ನಲ್ಲಿ ನೇಹಾಳ ಹತ್ಯೆ ಇರಬಹುದು, ರಾಜ್ಯ ಸರ್ಕಾರ ಏನು ಮಾಡುತ್ತಿದೆ ಎಂದು ಪ್ರಶ್ನಿಸಿದರು.
ಸರ್ಕಾರದ ಓಲೈಕೆ ರಾಜಕಾರಣದಿಂದ ಇಂತಹ ಘಟನೆಗಳು ಹೆಚ್ಚಾಗುತ್ತಿದೆ ಎಂದು ಆರೋಪಿಸಿದರು.
ಹೋರಾಟಗಾರರ ಮೇಲೆ ಎಫ್ ಐಆ‌ರ್ ಹಾಕುವಂತಹ ಕೆಲಸ ಮಾಡಿದ್ದಾರೆ. ತಕ್ಷಣ ಕಾರ್ಯಕರ್ತರ ಮೇಲೆ ಹಾಕಿದಂತಹ ಎಫ್ ಐ ಆರ್ ತೆಗೆಯಬೇಕು, ಇಲ್ಲವಾದರೆ ಮುಂದಿನ ದಿವಸಗಳಲ್ಲಿ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಸಿದರು.
ವಿದ್ಯಾರ್ಥಿ ಪರಿಷತ್ ನ ಮುಖಂಡರುಗಳು ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ವಿದ್ಯಾರ್ಥಿ ಪರಿಷತ್ ನ ಕಾರ್ಯಕರ್ತರು ಉಪಸ್ಥಿತರಿದ್ದರು.

NO COMMENTS

LEAVE A REPLY

Please enter your comment!
Please enter your name here

Exit mobile version