ಕಟ್ಟಿಹಾಕಿದ್ದ ತನ್ನ ಮನೆಯ ಸಾಕು ನಾಯಿಯನ್ನು ಬಿಡಲು ಹೋದ ಸಮಯ ಮಹಿಳೆಯ ಮೇಲೆ ಏಕಾಏಕಿ ದಾಳಿ ನಡೆಸಿ ಗಂಭೀರವಾಗಿ ಗಾಯಗೊಳಿಸಿದ ಘಟನೆ ನಡೆದಿದೆ.
ಮುಂಡಾಜೆ ಗ್ರಾಮದ ನಿಡಿಗಲ್ ನಿವಾಸಿ ದಿ. ರಾಮದಾಸ್ ಪ್ರಭು ಅವರ ಪತ್ನಿ ಪೂರ್ಣಿಮಾ ಪ್ರಭು (49 ) ಗಾಯಗೊಂಡ ಮಹಿಳೆಯಾಗಿದ್ದಾರೆ.
ಕಟ್ಟಿ ಹಾಕಿದ್ದ ಸಾಕು ನಾಯಿಯನ್ನು ಎಂದಿನಂತೆ ಬಿಡಲು ಹೋದ ಸಂದರ್ಭ ಅವರನ್ನು ದೂಡಿ ಹಾಕಿದ ನಾಯಿ ತಲೆ, ಕುತ್ತಿಗೆ,ಕೈ ಸೇರಿದಂತೆ ಸುಮಾರು 20ಕ್ಕಿಂತ ಅಧಿಕ ಕಡೆಗಳಿಗೆ ಕಚ್ಚಿದೆ ಇದರಿಂದ ಮಹಿಳೆಯ ತಲೆ,ಕುತ್ತಿಗೆ ಮೊದಲಾದ ಭಾಗಗಳಿಗೆ ಆಳವಾದ ಗಾಯಗಳಾಗಿದ್ದು ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.