Home ರಾಷ್ಟ್ರ/ರಾಜ್ಯ ಚಾರಣಕ್ಕೆ ಬಂದು ಅರಣ್ಯದಲ್ಲಿ ಸಿಲುಕಿಕೊಂಡ ಯುವಕ; ರಕ್ಷಿಸಿದ ಪೊಲೀಸರು

ಚಾರಣಕ್ಕೆ ಬಂದು ಅರಣ್ಯದಲ್ಲಿ ಸಿಲುಕಿಕೊಂಡ ಯುವಕ; ರಕ್ಷಿಸಿದ ಪೊಲೀಸರು

348
0

ಬೆಳ್ತಂಗಡಿ; ಬೆಳ್ತಂಗಡಿ ತಾಲೂಕಿನ ಬಂಡಾಜೆ ಫಾಲ್ಸ್ ನೋಡಲೆಂದು ಅರಣ್ಯಕ್ಕೆ ಬಂದಿದ್ದ ಚಾರಣಿಗರಲ್ಲಿ ಒರ್ವ ಯುವಕ ರಾತ್ರಿ ನಾಪತ್ತೆಯಾದ ಘಟನೆ ಸಂಭವಿಸಿದ್ದು ನಾಪತ್ತೆಯಾದ ಯುವಕನ್ನು ತಡ ರಾತ್ರಿ ಬಾಳೂರು ಪೊಲೀಸ್ ಠಾಣಾವ್ಯಾಪ್ತಿಯ ಬಲ್ಲಾಳ ರಾಯನ ದುರ್ಗದ ಸಮೀಪ ಪತ್ತೆಹಚ್ಚಿ ರಕ್ಷಿಸಲಾಗಿದೆ.
ಚಾರಣಕ್ಕೆಂದು ಬಂದಿದ್ದ ಧನುಷ್ ಎಂಬಾತನೇ ನಾಪತ್ತೆಯಾದ ಯುವಕ, ಅರಣ್ಯದಲ್ಲಿ ಚಾರಣಕ್ಕೆ ಅವಕಾಶ ನಿರಾಕರಿಸಲಾಗಿದ್ದರು ಪೊಲೀಸ್ ಅಧಿಕಾರಿಯೊಬ್ಬರ ಶಿಫಾರಸ್ಸಿನ ಮೂಲಕ ಇವರು ಚಾರಣಕ್ಕೆ ಅವಕಾಶ ಪಡೆದುಕೊ‌ಡಿದ್ದರು ಎಂದು ತಿಳಿದು ಬಂದಿದೆ. ಭಾನುವಾರ ಬೆಳಿಗ್ಗೆ ಇವರು ಚಾರಣಕ್ಕೆ ಹೊರಟಿದ್ದು ಸಂಜೆಯ ವೇಳೆ ಗುಂಪಿನಿಂದ ಇಬ್ಬರು ತಪ್ಪಿಸಿಕೊಂಡಿದ್ದರು, ಬಳಿಕ ಒಬ್ಬ ಮರಳಿ ಗುಂಪನ್ನು ಸೇರಿಕೊಂಡ ಎನ್ನಾಲಾಗಿದೆ‌. ರಾತ್ರಿಯ ವೇಳೆ ಸುಂಕಸಾಲೆ ಗ್ರಾಮಕ್ಕೆ ಬಂದ ಉಳಿದ ಯುವಕರು ಚಾರಣದ ತಂಡದಲ್ಲಿದ್ದ ಯುವಕ ಧನುಷ್ ತಪ್ಪಿಸಿಕೊಂಡಿರುವ ಬಗ್ಗೆ, ಬೆಳ್ತಂಗಡಿ ಪೊಲೀಸರಿಗೆ, ಬಾಳೂರು ಠಾಣೆಯ ಪೊಲೀಸರಿಗೆ ಮಾಹಿತಿ ನೀಡಿದ್ದ ಈ ಹಿನ್ನಲೆಯಲ್ಲಿ ಪೊಲೀಸರು ಹುಡುಕಾಟ ಆರಂಭಿಸಿದ್ದರು. ಬಾಳೂರು ಪೊಲೀಸರು ಸ್ಥಳೀಯರ ಸಹಕಾರದೊಂದಿಗೆ ಸುಮಾರು ನಾಲ್ಕು ಗಂಟೆಗಳ ಕಾಲ ಹುಡುಕಾಟ ನಡೆಸಿದ ಬಳಿಕ ಮಧ್ಯರಾತ್ರಿ ವೇಳೆ
ದಟ್ಟ ಅರಣ್ಯದ ನಡುವೆ ಸುಮಾರು 700 ಅಡಿ ಕೆಳಗೆ ಒಬ್ಬನೇ ಸಿಲುಕಿಕೊಂಡಿದ್ದ ಯುವಕನ್ನು ಪತ್ತೆಹಚ್ಚಿ ಆತನನ್ನು ಅರಣ್ಯ ದಿಂದ ಹೊರಗೆ ಕರೆತರಲಾಗಿದೆ.


ಅತ್ಯಂತ ಅಪಾಯಕಾರಿಯಾಗಿರುವ ಈ ಅರಣ್ಯ ಪ್ರದೇಶದಲ್ಲಿ ಚಾರಣಕ್ಕೆ ಅವಕಾಶ ನಿಷೇಧಿಸಲಾಗಿದೆ ಹಾಗೂ ಹಲವಾರು ನಿಬಂಧನೆಗಳನ್ನು ವಿಧಿಸಲಾಗಿದೆ ಆದರೆ ಇದೆಲ್ಲವನ್ನೂ ಗಾಳಿಗೆ ತೂರಿ ಹೊರಗಿನಿಂದ ಬರುವ ಯುವಕರು ಇಲ್ಲಿ ಚಾರಣಕ್ಕೆ ತೆರಳುತ್ತಿದ್ದು ಅಪಾಯದಲ್ಲಿ ಸಿಲುಕುತ್ತಿದ್ದಾರ. ಕೆಲವೇತಿಂಗಳುಗಳ ಹಿಂದೆ ಚಾರಣಕ್ಕೆ ಬಂದ ಯುವಕನೋರ್ವ ನಾಪತ್ತೆಯಾದ ಸಂದರ್ಭದಲ್ಲಿ ಹುಡುಕಾಟ ನಡೆಸಿದ ತಂಡವೇ ಕಾಡಾನೆಯ ಮುಂದೆ ಸಿಲುಕಿದ ಘಟನೆ ಸಂಭವಿಸಿತ್ತು.
ಪೊಲೀಸರ, ಅರಣ್ಯ ಇಲಾಖೆಯ ಹಾಗೂ ಸ್ಥಳೀಯರ ಪ್ರಯತ್ನದಿಂದ ನಾಪತ್ತೆಯಾಗಿದ್ದ ಯುವಕ ಸುರಕ್ಷಿತನಾಗಿ ಹೊರಬಂದಿದ್ದಾನೆ.

LEAVE A REPLY

Please enter your comment!
Please enter your name here