ಬೆಳ್ತಂಗಡಿ; ಕಳಿಯದಲ್ಲಿ ತಂಡವೊಂದು ಮನೆಗೆ ನುಗ್ಗಿ ಹಲ್ಲೆ ನಡೆಸಿ ಮಹಿಳೆಯರೊಂದಿಗೆ ಅನುಚಿತವಾಗಿ ವರ್ತಿಸಿರುವುದಾಗಿ ಬೆಳ್ತಂಗಡಿ ಪೊಲೀಸರಿಗೆ ದೂರು ನೀಡಿಲಾಗಿದ್ದು ಪ್ರಕರಣ ದಾಖಲಿಸಲಾಗಿದೆ.
ಕಳಿಯ ಗ್ರಾಮದ ನಿವಾಸಿಯಾಗಿರುವ ಮಹಮ್ಮದ್ ರಮೀಜ್ ಎಂಬವರು ದೂರು ನೀಡಿದ್ದು ಫೆ.23ರಂದು ಮದ್ಯಾಹ್ನ ಜಾರಿಗೆ ಬೈಲು ಮಸೀದಿಯ ಸಮೀಪ ಇದ್ದಾಗ ಆರೋಪಿಗಳಾದ ಶಾಕೀರ್, ಜಾಬೀರ್,ಸಫಾನ್, ಸಿದ್ದಿಕ್, ನಾಸಿರ್, ರವೂಪ್ ಎಂಬವರುಗಳು ಹಲ್ಲೆ ನಡೆಸಿದ್ದಾರೆ ಬಳಿಕೆ ಹಲ್ಲೆಗೆ ಒಳಗಾದ ರಮೀಜ್ ಮನೆಗೆ ತೆರಳಿದಾಗ ಮತ್ತೆ ಮನೆಗೆ ಬಂದ ಆರೋಪಿಗಳು ಮನೆಯಲ್ಲಿ ಮತ್ತೆ ರಮೀಜ್ ಗೆ ಹಾಗೂ ಆತನ ಪತ್ನಿಗೆ ಹಲ್ಲೆ ನಡೆಸಿ ಪತ್ನಿಯೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ ಅಲ್ಲದೆ ಮನೆಯಲ್ಲಿದ್ದ ಕುರ್ಚಿಗಳಿಗೆ ಹಾನಿ ಮಾಡಿ ಬೆದರಿಕೆಯೊಡ್ಡಿದ್ದಾರೆ ಎಂದು ದೂರು ನೀಡಲಾಗಿದ್ದು ಬೆಳ್ತಂಗಡಿ ಠಾಣೆಯಲ್ಲಿ 143,147,148,323, 324, 504, 448,354, 379, 149 IPC ಯಂತೆ ಪ್ರಕರಣ ದಾಖಲಿಸಲಾಗಿದೆ.
ಇದೇ ಘಟನೆಗೆ ಸಂಬಂಧಿಸಿದಂತೆ ಬೆಳ್ತಂಗಡಿ ನಿವಾಸಿ ಅಬ್ದುಲ್ ಶಾಕಿರ್ ಎಂಬಾತ ಪೊಲೀಸರಿಗೆ ದೂರು ನೀಡಿದ್ದು ಫೆ.23 ರಂದು ಜಾರಿಗೆ ಬೈಲು ಮಸೀದಿಯ ಸಮೀಪ ಇದ್ದಾಗ ತನ್ನ ಮೇಲೆ ರಮೀಜ್ ಎಂಬಾತನು ತಡೆದು ನಿಲ್ಲಿಸಿ ಹಲ್ಲೆ ನಡೆಸಿ ಬೆದರಿಕೆ ಹಾಕಿತುವುದಾಗಿ ದೂರು ನೀಡಿದ್ದು ಅದರಂತೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ 341,323,504,506 IPC ಯಂತೆ ಪ್ರಕರಣ ದಾಕಲಿಸಲಾಗಿದೆ
ಎರಡೂ ಪ್ರಕರಣ ದಾಖಲಿಸಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.