Home ಸ್ಥಳೀಯ ಸಮಾಚಾರ ಡಿ. ಕೆ.ಆರ್.ಡಿ.ಎಸ್ – ಮಕ್ಕಳ ಶಿಬಿರ ಚಿಲಿಪಿಲಿ-2024

ಡಿ. ಕೆ.ಆರ್.ಡಿ.ಎಸ್ – ಮಕ್ಕಳ ಶಿಬಿರ ಚಿಲಿಪಿಲಿ-2024

218
0


ಬೆಳ್ತಂಗಡಿ; ಡಿ.ಕೆ.ಆರ್.ಡಿ.ಎಸ್ (ರಿ) ಬೆಳ್ತಂಗಡಿ, ನವಜೀವನ ಆರೈಕೆ ಮತ್ತು ಬೆಂಬಲ ಕೇಂದ್ರದ ನೇತೃತ್ವದಲ್ಲಿ ಮಕ್ಕಳ ಶಿಬಿರ ಚಿಲಿಪಿಲಿ -2024 ಮೇ 18 ರಂದು ಹೆಚ್.ಐ.ವಿ/ಏಡ್ಸ್ ಸೋಂಕಿತ ಹಾಗೂ ಬಾಧಿತ ವ್ಯಕ್ತಿಗಳ ಬೆಂಬಲ ಸಭೆ ಮತ್ತು ಮಾಹಿತಿ ಕಾರ್ಯಕ್ರಮ ಮಕ್ಕಳ ರಜಾ ಶಿಬಿರ ಹಾಗೂ ಉಚಿತ ಪುಸ್ತಕ ಮತ್ತು ಬ್ಯಾಗ್ ವಿತರಣಾ ಕಾರ್ಯಕ್ರಮವು ಬೆಳ್ತಂಗಡಿ ಸಾಂತೋಮ್ ಟವರ್ ನಲ್ಲಿ ಆಯೋಜಿಸಲಾಗಿತ್ತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪುಷ್ಪರಾಜ್ ರವರು ವಹಿಸಿದ್ದರು. ಉಜಿರೆ ಸೈಂಟ್ ಜೋರ್ಜ್ ಚರ್ಚಿನ ಧರ್ಮಗುರುಗಳಾದ ವಂದನೀಯ ಫಾ.ಮ್ಯಾಥ್ಯೂ ಅಂಬಾಟ್ ರವರು ಶಿಬಿರವನ್ನು ಉದ್ಘಾಟಿಸಿದರು.
ಉಜಿರೆ ಎಸ್.ಡಿ.ಎo ಕಾಲೇಜಿನ ಪ್ರಾಧ್ಯಾಪಕರಾದ ಸುನಿಲ್ ಪಿ.ಜೆ., ಉಜಿರೆ ಎಸ್.ಡಿ.ಎಂ. ಕಾಲೇಜಿನ ಎಮ್. ಎಸ್.ಡಬ್ಲ್ಯೂ ಪ್ರಾಧ್ಯಾಪಕರಾದ ಡಾ. ಅಕ್ಷತಾ ಹಾಗೂ ಸ್ನಾತಕೋತ್ತರ ಸಮಾಜ ಕಾರ್ಯ ವಿಭಾಗ ಸ್ಕೂಲ್ ಆಫ್ ಸೋಶಿಯಲ್ ವರ್ಕ್ ರೋಶ್ನಿ ನಿಲಯ ಮಂಗಳೂರು ಇಲ್ಲಿನ ಪ್ರಾಧ್ಯಾಪಕರಾದ ಸಿ. ಎವ್ಲಿನ್ ಬೆನ್ನಿಸ್ ಮಕ್ಕಳಿಗೆ ಪ್ರೇರಣಾ ತರಬೇತಿ ನೀಡಿ ಪುಸ್ತಕ ಮತ್ತು ಬ್ಯಾಗ್ ವಿತರಿಸಿ ಮಾತನಾಡಿದರು. ಡಿ.ಕೆ.ಆರ್.ಡಿ.ಎಸ್ ಸಂಸ್ಥೆಯ ನಿರ್ದೇಶಕರರಾದ ವಂದನೀಯ ಫಾ. ಬಿನೋಯಿ ಎ.ಜೆ ಆಟೋಟ ಸರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಮತ್ತು ಸದಸ್ಯರಿಗೆ ಬಹುಮಾನ ವಿತರಿಸಿ ಶುಭಹಾರೈಸಿದರು.

ಲಾಯಿಲ ಜ್ಯೋತಿ ಹಾಸ್ಪಿಟಲ್ ವೈದ್ಯಾಧಿಕಾರಿ ಡಾ. ಸಿ. ಆನ್ ಗ್ರೇಸ್ ಮಕ್ಕಳ ಮೆಡಿಕಲ್ ಚೆಕಪ್ ಮಾಡಿದರು.
ಶಾರದಾ ಹಾಗೂ ಸರಕಾರಿ ಪ್ರಥಮ ದರ್ಜೆ ಕಾಲೇಜು ವಾಮದಪದವು ಇಲ್ಲಿನ ಬಿ.ಎಸ್ ಡಬ್ಲ್ಯೂ. ವಿದ್ಯಾರ್ಥಿಗಳು ಪ್ರಾರ್ಥನೆ ಹಾಡಿದರು. ಸರಕಾರಿ ಪ್ರಥಮ ದರ್ಜೆ ಕಾಲೇಜು ವಾಮದಪದವು ಇಲ್ಲಿನ ಬಿ.ಎಸ್ ಡಬ್ಲ್ಯೂ.ವಿದ್ಯಾರ್ಥಿನಿ ಸುಶ್ಮಿತಾ ಸ್ವಾಗತಿಸಿದರು. ಬಿ.ಸ್.ಡಬ್ಲ್ಯೂ ವಿದ್ಯಾರ್ಥಿಗಳು ಮಕ್ಕಳಿಗೆ ಆಟೋಟ ಸ್ಪರ್ಧೆಗಳನ್ನು ಆಯೋಜಿಸಿದರು . ಯೋಜನಾ ಸಂಯೋಜಕಿ ಶ್ರೇಯಾ ವಂದಿಸಿದರು. ಡಿ.ಕೆ.ಆರ್.ಡಿ.ಎಸ್ ಸಂಸ್ಥೆಯ ಸಂಯೋಜಕರಾದ
ಸುನಿಲ್ ಗೊನ್ಸಾಲ್ವಿಸ್ ರವರು ಕಾರ್ಯಕ್ರಮ ನಿರೂಪಿಸಿದರು.
ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಲಾತು.

LEAVE A REPLY

Please enter your comment!
Please enter your name here