ಬೆಳ್ತಂಗಡಿ; ರಾಷ್ಟ್ರೀಯ ಹಬ್ಬಗಳ ಹಾಗೂ ಮಹಾ ಪುರುಷರ ಜಯಂತಿ ಆಚರಣಾ ಸಮಿತಿ ಬೆಳ್ತಂಗಡಿ ಇದರ ವತಿಯಿಂದ ಮೂಲ್ಯರ ಯಾನೆ ಕುಂಬಾರರ ಸೇವಾ ಸಂಘ ಬೆಳ್ತಂಗಡಿ ಇದರ ಸಹಯೋಗದಲ್ಲಿ ಸರ್ವಜ್ಞ ಜಯಂತಿ ಕಾರ್ಯಕ್ರಮ ನಗರದ ಮಿನಿ ವುಧಾನ ಸೌಧದಲ್ಲಿ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬೆಳ್ತಂಗಡಿ ತಹಶೀಲ್ದಾರ್ ಪೃಥ್ವಿ ಸಾನಿಮ್ ಅವರು ವಹಿಸಿದ್ದರು.
ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕಾರರಾಗಿ ಆಗಮಿಸಿದ್ದ ಯುವ ವಕೀಲರಾದ ಉದಯ ಬಿ.ಕೆ ಮಾತನಾಡಿ ಸರ್ವಜ್ಞ ಎಲ್ಲರಿಗೂ ಮಾದರಿಯಾಗಿರುವ ವ್ಯಕ್ತಿತ್ವವಾಗಿದೆ. ತಮ್ಮ ಸಾಹಿತ್ಯದ ಮೂಲಕ ಜಗತ್ತನ್ನು ತಿದ್ದುವ ಕಾರ್ಯವನ್ನು ಮಾಡಿದ್ದಾನೆ.ಅವರ ಮುಂದಿಟ್ಟಿರುವ ಆದರ್ಶಗಳು ಎಂದಿಗೂ ಎಲ್ಲರಿಗೂ ಮಾದರಿಯಾದ ವಿಚಾರಗಳಾಗಿದೆ. ಅವರ ಬರಹದಲ್ಲಿ, ಜೀವನ ಮೌಲ್ಯವಿದೆ, ಮಾನವೀಯತೆಯಿದೆ ಎಂದರು.
ತಾಲೂಕು ಮೂಲ್ಯರ ಯಾನೆ ಕುಂಬಾರರ ಸಂಘದ ಅಧ್ಯಕ್ಷ ಹರೀಶ್ ಕಾರಿಂಜ ಮಾತನಾಡಿ ಸರ್ವಜ್ಞರು ಯಾವುದೇ ಪಂಗಡಕ್ಕೆ ಮೀಸಲಾದವರಲ್ಲ, ಅವರ ಬರಹಗಳು ಸಾರ್ವಕಾಲಕ್ಕೂ ಅನ್ವಯವಾಗುವುದಾಗಿದೆ. ತ್ರಿಪದಿಗಳಮೂಲಕ ಅವರು ಸಮಾಜದ ಅಂಕುಡೊಂಕುಗಳನ್ನು ತಿದ್ದಿದವರಾಗಿದ್ದಾರೆ. ಇಂತಹ ಮಹಾಪುರುಷರ ಜಯಂತಿಗಳು ನಮಗೆ ಸದಾ ಸ್ಪೂರ್ತಿ ದಾಯಕವಾಗಲಿದೆ ಎಂದರು.
ವೇದಿಕೆಯಲ್ಲಿ ಬೆಳ್ತಂಗಡಿ ಪಟ್ಟಣಪಂಚಾಯತಿನ ಮುಖ್ಯಾಧಿಕಾರಿ ರಾಜೇಶ್ ಕೆ, ಕುಲಾಲ ಕುಂಬಾರ ಯುವ ವೇದಿಕೆಯ ಅಧ್ಯಕ್ಷ ಉಮೇಶ್ ಕುಲಾಲ್,
ಹಿರಿಯ ಮುಖಂಡರಾದ ಪದ್ಮಕುಮಾರ್ ಉಪಸ್ಥಿತರಿದ್ದರು.
ಹೇಮ ಸ್ವಾಗತಿಸಿ ವಂದಿಸಿದರು.