Home ಅಪರಾಧ ಲೋಕ ಧರ್ಮಸ್ಥಳದಲ್ಲಿ ಒಂದೇ ದಿನ ಮೂರು ಬೈಕ್ ಗಳ ಕಳ್ಳತನ; ಜನರಲ್ಲಿ ಆತಂಕ

ಧರ್ಮಸ್ಥಳದಲ್ಲಿ ಒಂದೇ ದಿನ ಮೂರು ಬೈಕ್ ಗಳ ಕಳ್ಳತನ; ಜನರಲ್ಲಿ ಆತಂಕ

258
0

ಬೆಳ್ತಂಗಡಿ; ಧರ್ಮಸ್ಥಳ ಠಾಣಾ ವ್ಯಾಪ್ತಿಯಲ್ಲಿ ಒಂದೇ ದಿನ ಮೂರು ಬೈಕ್ ಗಳು ಕಳ್ಳತನವಾದ ಘಟನೆ ನಡೆಸಿದ್ದು ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಫೆ 14ರಂದು ರಾತ್ರಿಯವೇಳೆ ಮೂರೂ ಬೈಕ್ ಗಳು ಕಳ್ಳತನವಾಗಿದೆ.
ಧರ್ಮಸ್ಥಳ ಗ್ರಾಮದ ಮಲ್ಲರ್ಮಾಡಿ ನಿವಾಸಿ ಬೇಬಿ ಎಂಬವರ ಮನೆಯ ಮುಂದೆ ನಿಲ್ಲಿಸಿದ್ದ ಯಮಹ ಬೈಕ್ ಅನ್ನು ರಾತ್ರಿಯ ವೇಳೆ ಕಳ್ಳರು ಅಪಹರಿಸಿದ್ದಾರೆ. ಫೆ 14 ರಂದು ರಾತ್ರಿ ನಿಲ್ಲಿಸಿದ್ದ ಬೈಕ್ ಫೆ 15 ರಂದು ಬೆಳಿಗ್ಗೆ ಎದ್ದು ನೋಡಿದಾಗ ನಾಪತ್ತೆಯಾಗಿತ್ತು.
ಮತ್ತೊಂದು ಪ್ರಕರಣದಲ್ಲಿ ಸುಳ್ಯ ತಾಲೂಕಿನ ಅಖಿಲೇಶ್ ಎಂಬವರು ಪೊಲೀಸರಿಗೆ ದೂರು ನೀಡಿದ್ದು ಧರ್ಮಸ್ಥಳ ಗ್ರಾಮದ ಗಡಿಯಲ್ಲಿರುವ ಕಲ್ಮಂಜ ಗ್ರಾಮದ ಮದ್ಮಲ್ ಕಟ್ಟೆ ಎಂಬಲ್ಲಿನ ತನ್ನ ಸಂಬಂಧಿಕರ ಮನೆಗೆ ಬಂದವರು ಮನೆಯ ಸಮೀಪ ಬೈಕ್ ಅನ್ನು ಫೆ. 14ರಂದು ರಾತ್ರಿಯ ವೇಳೆ ನಿಲ್ಲಿಸಿದ್ದರು ಬೆಳಿಗ್ಗೆ ನೋಡಿದಾಗ ಬೈಕ್ ಕಳ್ಳತನವಾಗಿತ್ತು.ಬೈಕ್ ನ ಅಂದಾಜು ಮೌಲ್ಯ ಸುಮಾರು65,000 ಎಂದು ಅಂದಾಜಿಸಲಾಗಿದೆ.
ಮೂರನೆಯ ಪ್ರಕರಣದಲ್ಲಿ ಕೊಪ್ಪಳದಿಂದ ಧರ್ಮಸ್ಥಳ ಕ್ಕೆ ಬೈಕಿನಲ್ಲಿ ಯಾತ್ರಾರ್ಥಿಯಾಗಿ ಬಂದ ಬಸವರಾಜ್ ಎಂಬವರು ತಮ್ಮ ಬೈಕ್ ಅನ್ನು ಧರ್ಮಸ್ಥಳ ದ ಯೂ‌ನಿಯನ್ ಬ್ಯಾಂಕ್ ಎ.ಟಿ.ಎಂ ಬಳಿ ನಿಲ್ಲಿಸಿ ನಿದ್ದೆ ಮಾಡಿದ್ದರು ಬೆಳಿಗ್ಗೆ ನೋಡಿದಾಗ ಬೈಕ್ ಕಳ್ಳತನವಾಗಿತ್ತು.
ಈ ಮೂರೂ ಬೈಕ್ ಗಳು ಒಂದೇ ದಿನ ಕಳ್ಳತನವಾಗಿದ್ದು ಇದು ಒಂದೇ ತಂಡದ ಕೃತ್ಯ ಇರಬಹುದು ಎಂದು ಅನುಮಾನಿಸಲಾಗಿದೆ.ಈ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಒಂದೇ ದಿನ ರಾತ್ರಿ ಧರ್ಮಸ್ಥಳ ಗ್ರಾಮದಲ್ಲಿ ಮೂರು ಬೈಕ್ ಗಳು ಕಳ್ಳತನವಾಗಿರುವುದು ಸ್ಥಳೀಯ ಜನರಲ್ಲಿ ಆತಂಕ ಮೂಡಲು ಕಾರಣವಾಗಿದೆ. ಪೊಲೀಸರು ಪ್ರಕಣವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿದ್ದು ತನಿಖೆ ನಡೆಸುತ್ತಿದ್ದಾರೆ.

LEAVE A REPLY

Please enter your comment!
Please enter your name here