Home ಬ್ರೇಕಿಂಗ್‌ ನ್ಯೂಸ್ ರೈತರ ಹೋರಾಟ ಬೆಂಬಲಿಸಿ ಬೆಳ್ತಂಗಡಿಯಲ್ಲಿ ಪ್ರತಿಭಟನೆ

ರೈತರ ಹೋರಾಟ ಬೆಂಬಲಿಸಿ ಬೆಳ್ತಂಗಡಿಯಲ್ಲಿ ಪ್ರತಿಭಟನೆ

0

ಬೆಳ್ತಂಗಡಿ; ದೇಶದ ಆಸ್ತಿಯನ್ನು ಬಂಡವಾಳಶಾಹಿಗಳಿಗೆ ಮಾರಿರುವುದೇ ಪ್ರಧಾನಿ ಮೋದಿಯವರ ಸಾಧನೆಯಾಗಿದೆ. ತಮ್ಮ ಬದುಕುವ ಹಕ್ಕನ್ನು ಕೇಳುತ್ತಿರುವ ರೈತರ ಮೇಲೆ ಕೇಂದ್ರ ಸರಕಾರ ದಬ್ಬಾಳಿಕೆ ನಡೆಸುತ್ತಿದೆ ಇದನ್ನು ಯಾವುದೆ ಕಾರಣಕ್ಕೂ ಒಪ್ಪಲು ಸಾದ್ಯವಿಲ್ಲ ಎಂದು
ಸಿಐಟಿಯು ರಾಜ್ಯ ಸಮಿತಿ ಸದಸ್ಯರಾದ ಬಿ.ಎಂ.ಭಟ್ ಹೇಳಿದ್ದಾರೆ.
ಅವರು ಇಂದು ಜೆಸಿಟಿಯು, ಮತ್ತು ಎಸ್.ಕೆ.ಎಂ ಜಂಟಿ ಆಶ್ರಯದಲ್ಲಿ ಪೆಭ್ರವರಿ 16 ರ ಅಖಿಲ ಭರತ ಮುಷ್ಕರದ ಅಂಗವಾಗಿ ಬೆಳ್ತಂಗಡಿ ಮಿನಿ ವಿಧಾನಸೌದ ಎದುರು ನಡೆದ ಪ್ರತಿಭಟನೆಯನ್ನು ಉದ್ದೇಶಿಸಿ ಮಾತಾಡುತ್ತಿದ್ದರು.

ಪ್ರಧಾನಿ ಮೋದಿಜಿಯವರ ಕೊಡುಗೆ ಏನೆಂದರೆ ಸುಳ್ಳುಗಳ ಭರವಸೆ, ಬೆಲೆ ಏರಿಕೆ, ನಿರುದ್ಯೋಗ ಸಮಸ್ಯೆ, ಸಾರ್ವಜನಿಕ ರಂಗಗಳ ಮಾರಾಟ, ದೇಶದ ಸೌಹಾರ್ದ ಪರಂಪರೆಯ ನಾಶ, ಸಂವಿದಾನಕ್ಕೆ ಸವಾಲು, ಕಾರ್ಮಿಕ ಹಕ್ಕುಗಳ ದ್ವಂಸ, ರೈತರ ಸಮಸ್ಯೆಗಳತ್ತ ಗಮನವನ್ನೇ ನೀಡದೆ ಬೆಂಬಲ ಬೆಲೆಯನ್ನೂ ನೀಡದೆ ರೈತರ ಕಂಡರೆ ಸಿಟ್ಟು ಬರುವಂತೆ ನಡೆಯುವ ಮತ್ತು ದೇವರ ಹೆಸರು ಹೇಳುತ್ತಾ ಧರ್ಮರಕ್ಷಕ ತಾನೆಂದು ಹೇಳುತ್ತಾ ಭಾರತೀಯರ ಮೂರ್ಖರನ್ನಾಗಿಸಲು ಪ್ರಯತ್ನಿಸುವ ಮನೆ ಮುರುಕತನವೇ ಆಗಿದೆ ಎಂದರು. ಕಾರ್ಪರೇಟ್ ಕಂಪೆನಿಗಳನ್ನಷ್ಟೇ ಹಿಂದುಗಳನ್ನಾಗಿ ಪರಿಗಣಿಸುತ್ತಿರುವ ಮೋದಿಜಿ ಹಾಗೂ ಅವರ ಪರಿವಾರದವರು ಅವರಿಗೆ ಮಾತ್ರಾ ತೆರಿಗೆ ವಿನಾಯತಿ, ಸಾಲ ಮನ್ನಾ ಮಾಡುತ್ತಾ ಭಾರತೀಯರ ಮೇಲೆ ವಿಪರೀತ, ತೆರಿಗೆ, ಬೆಲೆ ಏರಿಕೆಯ ಹೊರೆ ನೀಡಿದ್ದಾರೆ ಎಂದು ಟೀಕಿಸಿದರು. ದುಡಿಯುವ ಜನ, ರೈತರ ಬಗ್ಗೆ ಗಮನ ನೀಡದಿದ್ದರೂ, ದೇಶಕ್ಕಾಗಿ ಏನೂ ಮಾಡದಿದ್ದರೂ ಮೋದಿ ಅವರು ಕಳೆದ 10 ವರ್ಷದಲ್ಲಿ 150 ಲಕ್ಷ ಕೋಟಿ ರೂ ಸಾಲ ಮಾಡಿದ್ದಾರೆ. ಹಿಂದಿನ 65 ವರ್ಷಗಳಲಿ 15 ಪ್ರಧಾನಿ ಮಾಡಿದ ಸಾಲಗಳು ಕೇವಲ 55 ಲಕ್ಷ ಕೋಟಿಗಳು ಮಾತ್ರಾ ಅದೂ ಹಸಿವಿನ ಭಾರತ, ಅನಾರೋಗ್ಯ ಭಾರತ, ಬ್ರಿಟೀಶರು ಲೂಟಿಹೊಡೆದ ಭಾರತವನ್ನು ಪುರ‍್ಮಾಣಕ್ಕಾಗಿ ಸಾಲ ಮಾಡಿದ್ದರೆ ಇಂದು ಮೋದಿಜಿ ಪಡೆದ ಸಾಲವನ್ನು ಏನು ಮಾಡಿದರು ? ದೆಹಲಿಯಲ್ಲಿ ಹೋರಾಟ ನಡೆಸುತ್ತಿರುವ ರೈತರಿಗೆ ಸಂಪೂರ್ಣ ಬೆಂಬಲ ನೀಡಲು ಭಾರತೀಯರು ಸಿದ್ದರಿದ್ದಾರೆ ಎಂದರು.

ರೈತರ ಮೇಲಿನ ದೌರ್ಜನ್ಯ ನಿಲ್ಲಿಸಿ ಆದಿತ್ಯ ರಾವ್ ಕೊಲ್ಲಾಜೆ;
ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಸಮಿತಿ ಸಂಚಾಲಕರಾದ ಆದಿತ್ಯ ರಾವ್ ಕೊಲ್ಲಾಜೆ ಮಾತಾಡುತ್ತಾ ರೈತರಿಗೆ ಬೆಂಬಲ ಬೆಲೆ ನೀಡದೆ ರೈತರ ಮೇಲೆ ನಿರಂತರ ಹಿಂಸೆ, ಅಶ್ರುವಾಯು ಇತ್ಯಾದಿ ದೌರ್ಜನ್ಯ ಎಸಗುತ್ತಾ ಮುನ್ನಡೆಯುವ, ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರ ಇಂದು ರೈತ ವಿರೋದಿ ಸರಕಾರವಾಗಿದೆ ಎಂದು ಹೇಳಿದರು. ಗ್ಯಾಸ್ ಮೊದಲಾದ ಅಗತ್ಯ ವಸ್ತುಗಳ ಬೆಲೆ ಏರಿಸಿದ ಕೇಂದ್ರ ಸರಕಾರ ಜನರ ನೋವಿಗೆ ಸ್ಪಂದಿಸದ ಪ್ರಧಾನಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ ಎಂದು ಟೀಕಿಸಿದರು. ಮುಂಬರುವ ಚುನಾವಣೆಯಲ್ಲಿ ಬಿಜೆಪಿಯ ಸೋಲಿಸಿ ದೇಶವನ್ನು ರೈತ, ಕಾರ್ಮಿಕರು ತುಂಬಿರುವ ಭಾರತೀಯರನ್ನು ರಕ್ಷಿಸಲು ನಾವು ಸಿದ್ದರಾಗಬೇಕಿದೆ ಎಂದರು.
ಕರ್ನಾಟಕ ಪ್ರಾಂತ ರೈತ ಸಂಘದಶ್ಯಾಮರಾಜ್ ಮಾತಾಡಿದರು. ಬೆಳ್ತಂಗಡಿ ತಾಲೂಕು ಬೀಡಿ ಕೆಲಸಗಾರರ ಸಂಘದ ಪ್ರಧಾನ ಕಾರ್ಯದರ್ಶಿ ಈಶ್ವರಿ ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು. ಜಯಶ್ರೀ ವಂದಿಸಿದರು. ಪ್ರಧಾನ ಮಂತ್ರಿ ಮತ್ತು ಮುಖ್ಯ ಮಂತ್ರಿಗಳಿಗೆ ತಾಲೂಕು ತಹಶೀಲ್ದಾರ್ ಮೂಲಕ ಮನವಿ ನೀಡಲಾಯಿತು. ಹಿರಿಯ ರೈತ ಮುಖಂಡರಾದ ಸುಂದರ ಶೆಟ್ಟಿ ಮೂಡಬಿದ್ರೆ ಅವರ ಗೌರವ ಉಪಸ್ತಿಯಿದ್ದ ಈ ಹೋರಾಟದಲ್ಲಿ ಕಟ್ಟಡ ಕಾರ್ಮಿಕ ಮುಖಂಡರುಗಳಾದ ಧನಂಜಯ, ಪ್ರಾಂತ ರೈತ ಮುಖಂಡರುಗಳಾದ ಪಾಂಗಳ ಲಕ್ಷ್ಮಣ ಗೌಡ, ಸಲಿಮೋನು, ಅಜಿ.ಎಂ.ಜೋಸೆಫ್ ವೇಣೂರು, ಡೊಂಬಯ ಗೌಡ, ಮಹಮ್ಮದ್ ಅನಸ್, ಕರ್ನಾಟಕ ರಾಜ್ಯ ರೈತ ಸಂಘದ ಮುಖಂಡರುಗಳಾದ ಅವಿನಾಶ್ ಪದ್ಮುಂಜ, ಉಮೇಶ ಪೂಜಾರಿ, ಕಾರ್ಮಿಕ ಮುಖಂಡರುಗಳಾದ ಪುಷ್ಪಾ, ಸುಜಾತ, ರಾಮಚಂದ್ರ, ಯುವಜನ ಸಂಘಟನೆಯ ಮುಖಂಡರುಗಳಾದ ಫಾರೂಕ್ ಮಡಂಜೋಡಿ, ಅಭಿಷೇಕ್, ಅಶ್ವಿತ, ಉಷಾ ಮೊದಲಾದವರು ಇದ್ದರು.

NO COMMENTS

LEAVE A REPLY

Please enter your comment!
Please enter your name here

Exit mobile version