ಬೆಳ್ತಂಗಡಿ: ಕಾಂಗ್ರೆಸ್ ಪಕ್ಷ ಆದಿಕಾರಕ್ಕೆ ಬಂದ ಬಳಿಕ ತಾಲೂಕಿನಲ್ಲಿ ಹಲವಾರು ಅಭಿವೃದ್ಧಿ ಕಾರ್ಯಗಳನ್ನು ಮಾಡಲಾಗಿದೆ. ಪಕ್ಷ ಎಂದಿಗೂ ತಾಲೂಕಿನಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ತಡೆಗಟ್ಟಿಲ್ಲ. ಕೇವಲ ಕಮಿಷನ್ ವ್ಯವಹಾರಕ್ಕಾಗಿ ಮಾಡಿದ ಕಾಮಗಾರಿಗಳವಿರುದ್ದ ಮಾತ್ರ ದೂರು ನೀಡಿದ್ದೇವೆ. ತಾಲೂಕಿನಲ್ಲಿ ಕಾಮಗಾರಿಯ ಹೆಸರಿನಲ್ಲಿ ನಡೆದಿರುವ ದೊಡ್ಡ ಮಟ್ಟದ ಭ್ರಷ್ಟಾಚಾರ ವನ್ನು ಜನರ ಮುಂದಿಡುವ ಕಾರ್ಯವನ್ನು ಮಾಡುತ್ತೇವೆ ಎಂದು ಕೆಪಿಸಿಸಿ ಕಾರ್ಯದರ್ಶಿ ರಕ್ಷಿತ್ ಶಿವರಾಂ ಹೇಳಿದ್ದಾರೆ.
ಬೆಳ್ತಂಗಡಿ ಕಾಂಗ್ರೆಸ್ ಕಚೇರಿಯಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಈ ವಿಚಾರ ತಿಳಿಸಿದರು.
ತಾಲೂಕಿನಲ್ಲಿ ನಡೆದಿರುವ ಐ.ಬಿ ಯ ಕಾಮಗಾರಿ, ಗ್ರಂಥಾಲಯದ ಕಾಮಗಾರಿ ಸೇರಿದಂತೆ ಹಲವು ಕಾಮಗಾರಿಗಳಲ್ಲಿ ದೊಡ್ಡ ಮಟ್ಟದ ಭ್ರಷ್ಟಾಚಾರ ನಡೆದಿದೆ ಈ ಬಗ್ಗೆ ದಾಖಲೆಗಳನ್ನು ಸಂಗ್ರಹಿಸುವ ಕಾರ್ಯ ನಡೆದಿದೆ, ಕಾಮಗಾರಿಗಳು ನಡೆಯದೆ ಬಿಲ್ ನೀಡುವ ಕಾರ್ಯಮಾಡಿದೆ, ಬಿಮಲ್ ಎಂಬ ಕಂಪೆನಿ ತಾಲೂಕಿನಲ್ಲಿ ದೊಡ್ಡ ಅವ್ಯವಸ್ಥೆಯನ್ನು ಮಾಡಿದೆ ಭ್ರಷ್ಟಾಚಾರಕ್ಕೆ ಕಾರಣವಾಗಿದೆ ಎಂದು ಆರೋಪಿಸಿದ ಅವರು ಎಲ್ಲ ಭ್ರಷ್ಟಾಚಾರ ಪ್ರಕರಣಗಳ ಬಗ್ಗೆಯೂ ದಾಖಲೆಸಮೇತ ದೂರು ಸಲ್ಲಿಸಲಾಗುವುದು ಎಂದರು.
ಸರಕಾರ ಗ್ಯಾರಂಟಿ ಯೋಜನೆಗಳ ನಡುವೆಯೂ ತಾಲೂಕಿನ ಹಲವು ಅಭಿವೃದ್ಧಿ ಕಾರ್ಯಗಳಿಗೆ ಅನುದಾನ ಮಂಜೂರು ಮಾಡಿದೆ ಎಂದ ಅವರು ಕಾಮಗಾರಿಗಳ ಶಂಕುಸ್ಥಾಪನೆ ಗೆ ಉಸ್ತುವಾರಿ ಸಚಿವರೇ ಬರಲಿದ್ದಾರೆ ಎಂದರು.
ದಿಡುಪೆ- ಎಳನೀರು ರಸ್ತೆಯ ವಿಚಾರದಲ್ಲಿ ಶಾಸಕರು ನಾಟಕ ಮಾಡುತ್ತಿದ್ದಾರೆ.ಗ್ರಾಮಪಂಚಾಯತಿನಿಂದ ಪ್ರಧಾನಿಯ ವರೆಗೆ ಎಲ್ಲರೂ ಅವರ ಪಕ್ಷದವರೇ ಆಗಿದ್ದಾಗ ಈ ರಸ್ತೆಯ ಕಾಮಗಾರಿ ಮಾಡಿಸಲು ಶಾಸಕರಿಗೆ ಯಾಕೆ ಸಾಧ್ಯವಾಗಲಿಲ್ಲ ಎಂದು ಪ್ರಶ್ನಿಸಿದ ಅವರು ಇದೀಗ ಶಾಸಕ ಹರೀಶ್ ಪೂಜ ಅವರು ಜನರನ್ನು ಮತ್ತೊಮ್ಮೆ ವಂಚಿಸಲು ಮೂಡಿಗೆರೆ ಶಾಸಕರನ್ನು ಕರೆದು ರಸ್ತೆಯ ಜವಾಬ್ದಾರಿಯನ್ನು ಅವರಿಗೆ ನೀಡುವ ನಾಟಕ ಮಾಡುತ್ತಿದ್ದಾರೆ. ಚುನಾವಣೆಯ ಸಮಯದಲ್ಲಿ ಇದೇ ರೀತಿ ಕಂಡಕಂಡಲ್ಲಿ ಕಾಮಗಾರಿ ನಡೆಸುವುದಾಗಿ ಹೇಳಿದ್ದರು ಆದರೆ ಕಾಮಗಾರಿಯೇ ನಡೆಸಿಲ್ಲ ಎಂದರು.
ತಾಲೂಕಿನಲ್ಲಿರುವ ಕಾಡಾನೆ ಹಾವಳಿ ಸಮಸ್ಯೆಗೆ ಪರಿಹಾರ ಕಾಣಲು ಅರಣ್ಯ ಸಚಿವರೊಂದಿ್ಎ ಈಗಾಗಲೇ ಮಾತುಕತೆ ನೀಡಲಾಗಿದ್ದು ಸರಕಾರ ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಿದೆ ಎಂದರು.
ವೇಣೂರಿನಲ್ಲಿ ನಡೆಯಲಿರುವ ಬಾಹುಬಲಿ ಸ್ವಾಮಿಯವಮಹಾ ಮಸ್ತಕಾಭಿಷೇಕ ಕಾರ್ಯಕ್ರಮಕ್ಕೆ ರಾಜ್ಯ ಸರಕಾರ ಎಲ್ಲ ರೀತಿಯ ಸಹಕಾರವನ್ನು ರಾಜ್ಯ ಸರಕಾರ ನೀಡಲಿದೆ ಎಂದ ಅವರು ಅದಕ್ಕಾಗಿ ಈಗಾಗಲೇ ಉಸ್ತುವಾರಿ ಸಚಿವರು ಸಮಾಲೋಚನಾ ಸಭೆಗಳನ್ನು ಕರೆದು ಅನುದಾನ ಬಿಡುಗಡೆ ಮಾಡಿದ್ದಾರೆ ಎಂದು ಅವರು ತಿಳಿಸಿದರು.
ಮಂಗಳೂರಿನಲ್ಲಿ ನಡೆಯಲಿರುವ ಕಾಂಗ್ರೆಸ್ ಸಮಾವೇಶಕ್ಕೆ ಹತ್ತುಸಾವಿರ ಕಾರ್ಯಕರ್ತರು ಭಾಗಿಗಳಾಗಲಿದ್ದಾರೆ. ಇದಕ್ಕಾಗಿ ಗ್ರಾಮ ಮಟ್ಟದಲ್ಲಿ ಸಿದ್ದತಾ ಸಭೆಗಳನ್ನು ನಡೆಸಲಾಗಿದೆ ಎಂದು ಅವರು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಾದ ಸತೀಶ್ ಕಾಶಿಪಟ್ಣ, ನಾಗೇಶ್ ಕುಮಾರ್, ಪಕ್ಷದ ಮುಖಂಡರುಗಳಾದ ಧರಣೇಂದ್ರಕುಮಾರ್, ಶೇಖರ ಕುಕ್ಕೇಡಿ, ನಮಿತ, ಲೋಕೇಶ್ವರಿ ವಿನಯ ಚಂದ್ರ, ಸುಭಾಶ್ಚಂದ್ರ ರೈ, ಇಸ್ಮಾಯಿಲ್ ಪೆರಿಂಜೆ, ಪದ್ಮನಾಭ , ಬೊಮ್ಮಣ್ಣ ಗೌಡ, ಸೆಬಾಸ್ಟಿಯನ್ ಕಳೆಂಜಹಾಗೂ ಇತರರು ಉಪಸ್ಥಿತರಿದ್ದರು