Home ಸ್ಥಳೀಯ ಸಮಾಚಾರ ಸಹಕಾರಿ ದುರೀಣ ನಿರಂಜನ ಬಾವಂತಬೆಟ್ಟು ನಿಧನ

ಸಹಕಾರಿ ದುರೀಣ ನಿರಂಜನ ಬಾವಂತಬೆಟ್ಟು ನಿಧನ

101
0

ಬೆಳ್ತಂಗಡಿ: ಸಹಕಾರ ರತ್ನ ಬಿ.ನಿರಂಜನ ಬಾವಂತಬೆಟ್ಟು ಇಂದು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ತಣ್ಣೀರುಪಂಥ ಗ್ರಾಮದ ಬಾವಂತಬೆಟ್ಟು ನಿವಾಸಿ ಬಿ.ನಿರಂಜನ ಅವರು ಜಿಲ್ಲಾ ಪಂಚಾಯತ್ ಸದಸ್ಯರಾಗಿ, ಉಪಾಧ್ಯಕ್ಷರಾಗಿ ಇದ್ದವರು.
ತಣ್ಣೀರುಪಂಥ ಪ್ರಾಥಮಿಕ ಕೃಷಿ ಸಹಕಾರಿ ಸಂಘ ಆರಂಭಗೊಂಡ 1983ನೇ ಇಸವಿಯಿಂದ ಅಧ್ಯಕ್ಷರಾಗಿ ಸುದೀರ್ಘ 41 ವರ್ಷ ಕಾಲ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದವರು.
ದ.ಕ ಜಿಲ್ಲಾ ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷರಾಗಿ, ದಕ್ಷಿಣ ಕನ್ನಡ ಜಿಲ್ಲಾ ಹಾಲು ಉತ್ಪಾದಕರ ಒಕ್ಕೂಟದ ನಿರ್ದೇಶಕರಾಗಿ, ಜಿಲ್ಲಾ ಕದ್ರ ಸಹಕಾರಿ ಬ್ಯಾಂಕಿನ ನಿರ್ದೇಶಕರಾಗಿ ಸುದೀರ್ಘವಾಗಿ ಸಹಕಾರಿ ಮತ್ತು ರಾಜಕೀಯ ರಂಗದಲ್ಲಿ ಸೇವೆ ಸಲ್ಲಿಸಿದ್ದರು.ಮರಿಪಾದೆ ಬ್ರಹ್ಮ ಬೈದರ್ಕಳ ಗರಡಿಯ ಆಡಳಿತ ಮುಖ್ಯಸ್ಥರು, ಆದಿನಾಥ ಬಸದಿಯ ಮುಖ್ಯಸ್ಥರಾಗಿದ್ದರು.

LEAVE A REPLY

Please enter your comment!
Please enter your name here