Home ಸ್ಥಳೀಯ ಸಮಾಚಾರ ಸಂಭ್ರಮದಿಂದ ನಡೆದ ಮಾಚಾರು ಉರೂಸ್

ಸಂಭ್ರಮದಿಂದ ನಡೆದ ಮಾಚಾರು ಉರೂಸ್

0

ಸಂಭ್ರಮದಿಂದ ನಡೆದ ಮಾಚಾರು ಉರೂಸ್

ಬೆಳ್ತಂಗಡಿ; ಉಜಿರೆ ಸನಿಹದ ಮಾಚಾರು ಮುಹಿಯುದ್ದೀನ್ ಜುಮ್ಮಾ ಮಸ್ಜಿದ್ ಹಾಗೂ ಮುಹಮ್ಮದ್ ವಲಿಯುಲ್ಲಾಹಿ ದರ್ಗಾ ಶರೀಫ್ ಇಲ್ಲಿ ವರ್ಷಂಪ್ರತಿ ನಡೆಸಿಕೊಂಡು ಬರುತ್ತಿರುವ ಉರೂಸ್ ಮುಬಾರಕ್
ಕಾರ್ಯಕ್ರಮಕ್ಕೆ ಫೆ.3 ರಂದು ಸಂಭ್ರಮದ ತೆರೆ ಬಿತ್ತು.
ಉರೂಸಿನ ಸಮಾರಂಭದ
ಅಧ್ಯಕ್ಷತೆಯನ್ನು ಜಿಲ್ಲಾ ಸುನ್ನೀ ಸಂಯುಕ್ತ ಜಮಾಅತ್ ಖಾಝಿ ಅಸ್ಸಯ್ಯಿದ್ ಖುರ್ರತುಸ್ಸಾದಾತ್ ಫಝಲ್ ಕೋಯಮ್ಮ ತಂಙಳ್ ಕೂರತ್ ವಹಿಸಿಕೊಂಡಿದ್ದರು.

ಅಧ್ಯಕ್ಷತೆಯನ್ನು ಜಮಾಅತ್ ಅಧ್ಯಕ್ಷ ಬಿ‌.ಎಮ್ ಇಲ್ಯಾಸ್ ವಹಿಸಿದ್ದರು.
ತಾಲೂಕು ಸಂಯುಕ್ತ ಜಮಾಅತ್ ಸಹಾಯಕ ಖಾಝಿ
ಅಸ್ಸಯ್ಯಿದ್ ಸಾದಾತ್ ತಂಙಳ್ ಗುರುವಾಯನಕೆರೆ ನೇತೃತ್ವದಲ್ಲಿ ಸಾಮೂಹಿಕ ಪ್ರಾರ್ಥನೆ ನಡೆದಿತ್ತು. ಸಮಾರೋಪ ದಿನ ಸಯ್ಯಿದ್ ಜಝೀಲ್ ಶಾಮಿಲ್ ಅಲ್ ಇರ್ಫಾನಿ ಕಾಮಿಲ್ ಸಖಾಫಿ ಕಾರಂದೂರು ಮುಖ್ಯ ಪ್ರಭಾಷಣ ನಡೆಸಿದರು.
ಈ ವೇಳೆ ಸಯ್ಯಿದ್ ಇಸ್ಮಾಯಿಲ್ ತಂಙಳ್ ಉಜಿರೆ, ಎಸ್.ಎಂ ಕೋಯ ಉಜಿರೆ, ಇಬ್ರಾಹಿಂ ಸಖಾಫಿ ಕಬಕ, ಕಾಸಿಂ ಮುಸ್ಲಿಯಾರ್ ಮಾಚಾರು, ಅನ್ಸಾರ್ ಸ‌ಅದಿ ಮಾಚಾರು, ಯೂಸುಫ್ ಮಿಸ್ಬಾಹಿ, ಬದ್ರುದ್ದೀನ್ ಸಖಾಫಿ, ಅಯ್ಯೂಬ್ ಮಹ್ಲರಿ, ಅಬೂಬಕ್ಕರ್ ಸಿದ್ದೀಕ್ ಸಖಾಫಿ, ಸ್ವಾದಿಕ್ ಮು‌ಈನಿ, ಶಂಶೀರ್ ಸಖಾಫಿ, ಅಹ್ಮದ್ ಕಬೀರ್ ಮಿಸ್ಬಾಹಿ, ಅಬ್ದುಲ್ ಹಕೀಂ ಮದನಿ, ಹುಸೈನ್, ಹಂಝ ಮಾಚಾರು, ಹಸೈನಾರ್, ಮುಯ್ಯದ್ದಿ ಉಜಿರೆ, ಹಸೈನಾರ್ ಟೈಲ್ಸ್, ಅಬ್ದುಲ್ ಸಲೀಂ, ಟಿ‌ ಹೆಚ್ ಆದಂ, ಮುಹಮ್ಮದ್ ಶರೀಫ್, ಆರಿಫ್ ಮಾಚಾರು, ಅಬೂಬಕ್ಕರ್ ಸಿದ್ದೀಕ್ ಮಾಚಾರು, ಮುಹಮ್ಮದ್ ರಮೀಝ್ ಪಳ್ಳಿತಡ್ಕ, ಬಿ‌.ಎಮ್ ನೌಶಾದ್ ಮೊದಲಾದವರು ಉಪಸ್ಥಿತರಿದ್ದರು.

ಆಡಳಿತ ಸಮಿತಿ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಇಕ್ಬಾಲ್ ಮಾಚಾರು ಸ್ವಾಗತಿಸಿದರು. ಉದ್ಘಾಟನೆಯನ್ನು ಯುವ ವಿದ್ವಾಂಸ, ಚಿಕ್ಕಮಗಳೂರು ಉಪ್ಪಳ್ಳಿ ಮಸ್ಜಿದ್ ಮುದರ್ರಿಸ್ ಎಮ್.ಎ ಇಸ್ಮಾಯಿಲ್ ಸ‌ಅದಿ ಮಾಚಾರು ನೆರವೇರಿಸಿದರು.
ಉರೂಸ್ ಪ್ರಯುಕ್ತ ಅನ್ನದಾನ ನಡೆಯಿತು.

NO COMMENTS

LEAVE A REPLY

Please enter your comment!
Please enter your name here

Exit mobile version