ಮಂಗಳೂರು: ನಗರದ ಬೋಂದೆಲ್ ಸಾರ್ವಜನಿಕ ಮೈದಾನದಲ್ಲಿ ಶುಕ್ರವಾರ ಬೆಳಗ್ಗೆ ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪದಲ್ಲಿ ಇಬ್ಬರನ್ನು ಕಾವೂರು ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ನಗರದ ಹಿಮ ನೀಶ್ (26) ಮತ್ತು ಕೋಟೆಕಾರ್ ಪವನ್‌ರಾಜ್ ಪಿ. (28) ಎಂಬವರಾಗಿದ್ದಾರೆ
ಆರೋಪಿಗಳು ಸುಮಾರು 19 ಗ್ರಾಂ ತೂಕದ 57,000 ರೂ. ಮೌಲ್ಯದ ಮೆಥಪಟೈನ್ ಎಂಬ ಮಾದಕ ದ್ರವ್ಯ ಮಾರಾಟ ಮಾಡುತ್ತಿದ್ದ ಬಗ್ಗೆ ಮಾಹಿತಿ ಲಭಿಸಿದ ಹಿನ್ನಕೆಯಲ್ಲಿ ಮಂಗಳೂರು ಉತ್ತರ ಉಪ ವಿಭಾಗದ ಆ್ಯಂಟಿ ಡ್ರಗ್ಸ್ ಸ್ಕ್ವಾಡ್ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿ ಅವರಿಂದ, ಬೈಕ್ ಸಹಿತ ಗಾಂಜಾ ವಶಪಡಿಸಿಕೊಂಡಿದ್ದಾರೆ.