ಖಿಲರ್ ಜುಮ್ಮಾ ಮಸೀದಿ ಹಾಗೂ ಹಯಾತುಲ್ ಇಸ್ಲಾಂ ಮದರಸ ಬೆಳ್ತಂಗಡಿ ವತಿಯಿಂದ ಸಂಭ್ರಮದ ಸ್ವಾತಂತ್ರ್ಯ ದಿನಾಚರಣೆ
ಬೆಳ್ತಂಗಡಿ : ಖಿಳ್ರ್ ಜುಮ್ಮಾ ಮಸೀದಿ ಹಾಗೂ ಹಯಾತುಲ್ ಇಸ್ಲಾಂ ಮದರಸ ಬೆಳ್ತಂಗಡಿ ವತಿಯಿಂದ 79 ನೇ ಸ್ವಾತಂತ್ರ್ಯ ದಿನಾಚರಣೆಯ ಧ್ವಜಾರೋಹಣವನ್ನು ಮಸೀದಿ ಅಧ್ಯಕ್ಷರಾದ ಅಕ್ಬರ್ ಬೆಳ್ತಂಗಡಿ ಯವರು ನೆರವೇರಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು.ಮಸೀದಿ ಖತೀಬರಾದ ಹನೀಫ್ ಫೈಝಿಯವರು ದುವಾ ನೆರವೇರಿಸಿದರು. ಅತಿಥಿಗಳಾಗಿ ಉಪಾಧ್ಯಕ್ಷರಾದ ಬಿ.ಶೇಖುಂಞ್ಞ, ಪ್ರಧಾನ ಕಾರ್ಯದರ್ಶಿ ರಝಾಕ್ ಕೋಡಿಸಭೆ, ಕಾರ್ಯದರ್ಶಿಗಳಾದ ಹನೀಫ್ ವರ್ಷಾ, ಮಹಮ್ಮದ್ ಕುದ್ರಡ್ಕ, ಕೋಶಾಧಿಕಾರಿ ಫೈಝಲ್ ಐ.ಜೆ, ಜಮಾತ್ ಬಾಂಧವರು ಹಾಗೂ ಮದರಸ ಮಕ್ಕಳು ಉಪಸ್ಥಿತರಿದ್ದರು. ಅಬೂಬಕ್ಕರ್ ಸಿದ್ದೀಕ್ ಅಝ್ಹರಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಅಬ್ದುಲ್ ರಹಮಾನ್ ಮುಸ್ಲಿಯಾರ್...
ಬೆಳ್ತಂಗಡಿ ನ್ಯಾಯಾಲಯದ ಅವರಣದಲ್ಲಿ ಸ್ವಾತಂತ್ರೋತ್ಸವ ಆಚರಣೆ
ಬೆಳ್ತಂಗಡಿ; ಇಲ್ಲಿನ ನ್ಯಾಯಾಲಯದ ಅವರಣದಲ್ಲಿ ಸ್ವಾತಂತ್ರೋತ್ಸವ ಆಚರಣೆ ನಡೆಯಿತು. ಧ್ವಜಾರೋಹಣವನ್ನು ಹಿರಿಯ ಸಿವಿಲ್ ನ್ಯಾಯಾಧೀಶರಾದ ಶ್ರೀ ಮನು ಬಿ ಕೆ ನೆರವೇರಿಸಿದರು.ಈ ಸಂದರ್ಭದಲ್ಲಿ ಪ್ರಧಾನ ಸಿವಿಲ್ ನ್ಯಾಯಾಧೀಶರಾದ ಶ್ರೀ ಸಂದೇಶ್ ಕೆ, ಹೆಚ್ಚುವರಿ ಸಿವಿಲ್ ನ್ಯಾಯಾಧೀಶರಾದ ಶ್ರೀ ವಿಜಯೇಂದ್ರ ಟಿ ಹೆಚ್, ಕಿರಿಯ ವಕೀಲರ ಸಮಿತಿಯ ಅಧ್ಯಕ್ಷರಾದ ಅಲೋಶಿಯಸ್ ಎಸ್ ಲೋಬೋ, ಪ್ರಧಾನ ಕಾರ್ಯದರ್ಶಿ ನವೀನ್ ಬಿ ಕೆ, ಕೋಶಾಧಿಕಾರಿ ಪ್ರಶಾಂತ್ ಎಂ., ಚಿದಾನಂದ ಪಿ, ಅಪರ ಸರಕಾರಿ ವಕೀಲರಾದ ಮನೋಹರ್ ಕುಮಾರ್ ಎ, ಹಿರಿಯ ವಕೀಲರಾದ ಹರಿಶ್ಚಂದ್ರ ಬಲ್ಲಾಳ್, ಶೈಲೇಶ್ ತೋಸರ್, ಸತೀಶ್...
ಫ್ರೆಂಡ್ಸ್ ಕ್ಲಬ್ ( ರಿ ) ಹೊಸಂಗಡಿಯಲ್ಲಿ ಸ್ವಾತಂತ್ರ್ಯ ದಿನಾಚರಣೆ
ಬೆಳ್ತಂಗಡಿ; ರಾಜ್ಯ ಪ್ರಶಸ್ತಿ ಪುರಸ್ಕಾರ ಪಡೆದ ಫ್ರೆಂಡ್ಸ್ ಕ್ಲಬ್ ಹೊಸಂಗಡಿ, ಇಲ್ಲಿಯ ಕ್ಲಬ್ ನ ವಠಾರದಲ್ಲಿ ದ್ವಜಾರೋಹಣ ಕಾರ್ಯಕ್ರಮ ನಡೆಯಿತು ದ್ವಜಾರೋಹಣ ವನ್ನು ಅಣ್ಣು ಪೇರಿ ದರ್ಕಾಸ್ ಇವರು ನೆರವೇರಿಸಿದರು ಈ ಸಂದರ್ಭ ಕ್ಲಬ್ ನ ಗೌರವಧ್ಯಕ್ಷರಾದ ಧರನೇಂದ್ರ ಕುಮಾರ್ ಮಾಜಿ ಉಪಾಧ್ಯಕ್ಷರು ಜಿಲ್ಲಾ ಪಂಚಾಯತ್ ಇವರು ಉಪಸ್ಥಿತ ರಿದ್ದು ಶುಭ ಹಾರೈಸಿದರು ಕ್ಲಬ್ ನ ಅಧ್ಯಕ್ಷ ರಾದ ಶ್ರೀಪತಿ ಉಪಾಧ್ಯಾಯ ಇವರು ಸ್ವಾಗತಿಸಿ ಕಾರ್ಯದರ್ಶಿ ಸುಜಿತ್ ಕುಮಾರ್ ಧನ್ಯವಾದವಿತ್ತರು ಈ ಸಂದರ್ಭದಲ್ಲಿ ಕ್ಲಬಿನ ಸದಸ್ಯರುಗಳಾದ ಆನಂದ ಬಂಗೇರ ವಿಶಾಲ್ ರೈ, ಪದ್ಮರಾಜ್...
ಬೆಳ್ತಂಗಡಿ; ಬಿಜೆಪಿ ಯುವ ಮೋರ್ಚಾ ವತಿಯಿಂದ ತಿರಂಗಾ ಯಾತ್ರೆ ಪಂಜಿನ ಮೆರವಣಿಗೆ
ಬೆಳ್ತಂಗಡಿ : ಭಾರತೀಯ ಜನತಾ ಪಾರ್ಟಿ ಯುವಮೋರ್ಚಾ ಬೆಳ್ತಂಗಡಿ ಮಂಡಲ ವತಿಯಿಂದ 79 ನೇ ಸ್ವಾತಂತ್ರೋತ್ಸವದ ಪ್ರಯುಕ್ತ ಆಗಸ್ಟ್ 14 ರಂದು ರಾತ್ರಿ ಬೆಳ್ತಂಗಡಿ ಅಯ್ಯಪ್ಪ ಮಂದಿರದ ಬಳಿಯಿಂದ ಮೂರು ಮಾರ್ಗ ಸ್ಮಾರಕದವರೆಗೆ ತಿರಂಗ ಯಾತ್ರೆ ಪಂಜಿನ ಮೆರವಣಿಗೆ ನಡೆಯಿತು. ಬೆಳ್ತಂಗಡಿ ಶಾಸಕರಾದ ಹರೀಶ್ ಪೂಂಜರವರು ಮೆರವಣಿಗೆಯಲ್ಲಿ ಪಾಲ್ಗೊಂಡು ಮೂರು ಮಾರ್ಗ ಸ್ಮಾರಕದ ಬಳಿ ಭಾರತಮಾತೆಯ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯ ಸಲ್ಲಿಸಿದರು, ಈ ಸಂದರ್ಭದಲ್ಲಿ ಮಂಡಲ ಯುವಮೋರ್ಚಾ ಅಧ್ಯಕ್ಷರಾದ ಶಶಿರಾಜ್ ಶೆಟ್ಟಿ ಗುರುವಾಯನಕೆರೆ, ಪ್ರಧಾನ ಕಾರ್ಯದರ್ಶಿ ವಿನೀತ್ ಕೋಟ್ಯಾನ್...
ಬೆಳ್ತಂಗಡಿ : ಗಾಂಜಾ ಪ್ರಕರಣದ ಆರೋಪಿ ಮದಡ್ಕ ರಫೀಕ್ ನನ್ನು ಬಂಧಿಸಿದ ಪೊಲೀಸರು
ಬೆಳ್ತಂಗಡಿ : ಅಕ್ರಮ ಗಾಂಜಾ ದಾಸ್ತಾನು ಮತ್ತು ಮಾರಾಟ ಪ್ರಕರಣದಲ್ಲಿ ಬೆಳ್ತಂಗಡಿ ಪೊಲೀಸರಿಂದ ಹಲವು ಸಮಯಗಳಿಂದ ತಲೆಮರಿಸಿಕೊಂಡಿದ್ದ ಆರೋಪಿ ಬೆಳ್ತಂಗಡಿ ತಾಲೂಕಿನ ಕುವೆಟ್ಟು ಗ್ರಾಮದ ನಿವಾಸಿಯಾದ ಮಹಮ್ಮದ್ ರಫೀಕ್ @ ಮದ್ದಡ್ಕ ರಫೀಕ್(39) ಎಂಬಾತನನ್ನು ಬೆಳ್ತಂಗಡಿ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಸುಬ್ಬಾಪುರ್ ಮಠ್ ನೇತೃತ್ವದ ಪೊಲೀಸು ಆ.14 ರಂದು ಕಾರ್ಕಳದಲ್ಲಿ ಬಂಧಿಸಿ ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು. ನ್ಯಾಯಾಲಯವು ಆರೋಪಿತನಿಗೆ ನ್ಯಾಯಾಂಗ ಬಂಧನ ವಿಧಿಸಿದೆ. ಆರೋಪಿ ಮದಡ್ಕ ರಫೀಕ್ ವಿರುದ್ಧ ಈಗಾಗಲೇ ಬೆಳ್ತಂಗಡಿ ಪೊಲೀಸ್ ಠಾಣೆ, ವೇಣೂರು ಪೊಲೀಸ್ ಠಾಣೆ, ಚಿಕ್ಕಮಗಳೂರು CEN ಪೊಲೀಸ್...
ಬೆಳ್ತಂಗಡಿ : ಹಲವಾರು ಮೃತದೇಹ ಹೂತು ಹಾಕಿದ ಪ್ರಕರಣ; ಪಾಯಿಂಟ್ 17 ರಲ್ಲಿ ಸಿಗದ ಅಸ್ಥಿಪಂಜರ
ಬೆಳ್ತಂಗಡಿ : ಹಲವಾರು ಮೃತದೇಹ ಹೂತು ಹಾಕಿದ ಪ್ರಕರಣ ಸಂಬಂಧ ಆ.14 ರಂದು ಧರ್ಮಸ್ಥಳ ಗ್ರಾಮದ ಕನ್ಯಾಡಿಯ ದ್ವಾರಕಾಶ್ರಮದ ಒಳಗಡೆ ಕಂದಾಯ ಇಲಾಖೆಯ ಜಾಗದಲ್ಲಿ ದೂರುದಾರ ಗುರುತಿಸಿದ 17 ನೇ ಪಾಯಿಂಟ್ ನಲ್ಲಿ ಕಾರ್ಯಾಚರಣೆ ನಡೆಸಿ 4.5 ಅಡಿ ಅಳ ಅಗೆದರೂ ಯಾವುದೇ ಅಸ್ಥಿಪಂಜರ ಪತ್ತೆಯಾಗಿಲ್ಲ. 12:30 ರಿಂದ 3:50 ರವೆಗೆ ಕಾರ್ಯಾಚರಣೆ ನಡೆಸಿದ್ದಾರೆ. ಗುಂಡಿಯನ್ನು ಮುಚ್ಚುಸುತ್ತಿದ್ದಾರೆ. ಇಂದಿನ ಕಾರ್ಯಾಚರಣೆ ಅಂತ್ಯ ಮಾಡಿ ವಾಪಸ್ ತೆರಳಿರುವ ಅಧಿಕಾರಿಗಳು.
ತೋಟತ್ತಾಡಿ: ಹಾಡು ಹಗಲೇ ಮನೆಗೆ ನುಗ್ಗಿ ಚಿನ್ನಾಭರಣ ಕಳವು
ಬೆಳ್ತಂಗಡಿ: ಹಾಡು ಹಗಲೇ ಮನೆಯೊಂದರ ಬಾಗಿಲ ಬೀಗವನ್ನು ಮುರಿದು ಮನೆಯೊಳಗೆ ನುಗ್ಗಿದ ಕಳ್ಳರು ಕಪಾಟಿನಲ್ಲಿ ಇರಿಸಲಾಗಿದ್ದ 1.30 ರೂ. ಲಕ್ಷದ ಚಿನ್ನಾಭರಣ ಕಳವುಗೈದ ಘಟನೆ ಆ.12ರಂದು ತೋಟತ್ತಾಡಿಯಲ್ಲಿ ನಡೆದಿದೆ. ತೋಟತ್ತಾಡಿ ಗ್ರಾಮದ ವೆನ್ನಾಯಿಲ್ ಮನೆ ನಿವಾಸಿ ಕುಂಞಿ ಕೃಷ್ಣನ್ ಎಂಬವರ ಪುತ್ರ ನಿಧೀಶ್ ವಿ.ಕೆ. ಎಂಬವರ ದೂರಿನಂತೆ ಮನೆಯಲ್ಲಿ ತಂದೆ ಕುಂಞಿ ಕೃಷ್ಣನ್‌ಒಬ್ಬರೇ ಇದ್ದು, ಆ.12 ರಂದು ಬೆಳಿಗ್ಗೆ 9 ಗಂಟೆಗೆ ಮನೆಗೆ ಬೀಗ ಹಾಕಿ ಕೂಲಿ ಕೆಲಸಕ್ಕೆ ಹೋಗಿದ್ದರು.ಮಧ್ಯಾಹ್ನ 1ಗಂಟೆಯ ಸುಮಾರಿಗೆ ಊಟಕ್ಕೆಂದು ಮನೆಗೆ ಬಂದಾಗ ಮನೆಯ ಬಾಗಿಲ ಬೀಗವನ್ನು ಮುರಿದಿರುವುದು,ಹಾಗೂ...
ಬೆಳ್ತಂಗಡಿ; ಸಾಮಾಜಿಕ ಜಾಲತಾಣಗಳಲ್ಲಿ ಬರಹ ಗಿರೀಶ್ ಮಟ್ಟಣ್ಣನವರ್ ಲಾಯರ್ ಜಗದೀಶ್, ನವೀನ್ ಜೈನ್ ವಿರುದ್ದ ಸೇರಿದಂತೆ ಆರು ಪ್ರಕರಣಗಳು ದಾಖಲು
ಬೆಳ್ತಂಗಡಿ; ಸಾಮಾಜಿಕ ಜಾಲತಾಣಗಳಲ್ಲಿ ಬಂದಿರುವ ಬರಹಗಳ ಬಗ್ಗೆ ಬೆಳ್ತಂಗಡಿ ಹಾಗೂ ವೇಣೂರು ಪೊಲೀಸ್ ಠಾಣೆಗಳಲ್ಲಿ ಆರು ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಲಾಗಿದೆ.ಹುಬ್ಬಳ್ಳಿ ನಿವಾಸಿ ಅಜಿತ್ ನಾಗಪ್ಪ ಬಸಾಪುರ್ ಎಂಬವರು ದೂರು ನೀಡಿದ್ದು ಗಿರೀಶ್ ಮಟ್ಟಣ್ಣನವರ್ ಕುಡ್ಲ ರಾಂ ಪೇಜ್ ಗೆ ನೀಡಿದ ಸಂದರ್ಶನದಲ್ಲಿ ಜೈನರ ಬಗ್ಗೆ ತುಚ್ಚವಾಗಿ ಮಾತನಾಡಿ ಜೈನಧರ್ಮ ದವರ ಭಾವನೆಗಳಿಗೆ ಅವಮಾನ ಮಾಡುವ ಕಾರ್ಯ ಮಾಡಿರುವ ಬಗ್ಗೆ ದೂರು ನೀಡಿದ್ದು ಗಿರೀಶ್ ಮಟ್ಟಣ್ಣನವರ್ ಹಾಗೂ ಕುಡ್ಲ ರಾಂ ಪೇಜ್ ವಿರುದ್ದ ಪ್ರಕರಣ ದಾಖಲಿಸಲಾಗಿದೆ.ಅದೇರೀತಿ ಬೆಳ್ತಂಗಡಿ ನಿವಾಸಿ ವಿಜಯ ಎಂಬವರ ದೂರಿನಂತೆ "ವಿಕಾಸ್...
ಎಸ್.ಡಿ.ಎಂ ಕಾಳೆಜಿನ ವಿದ್ಯಾರ್ಥಿ ಸಂಘದ ಚಟುವಟಿಕೆಗಳನ್ನು ಉದ್ಘಾಟನೆ; ವಿದ್ಯಾರ್ಥಿಗಳು ದೃಢಸಂಕಲ್ಪ ಮತ್ತು ಪ್ರಬಲ ಇಚ್ಛಾಶಕ್ತಿಯೊಂದಿಗೆ ಉಜ್ವಲ ಭವಿಷ್ಯವನ್ನು ರೂಪಿಸಿಕೊಳ್ಳಬೇಕು.
ಬೆಳ್ತಂಗಡಿ: ವಿದ್ಯಾರ್ಥಿಗಳು ತಮ್ಮ ತಾಯಿ-ತಂದೆ ಹಾಗೂ ಗುರು-ಹಿರಿಯರಿಂದ ಮಾರ್ಗದರ್ಶನ ಮತ್ತು ಪ್ರೇರಣೆ ಪಡೆದು ದೃಢಸಂಕಲ್ಪ ಮತ್ತು ಪ್ರಬಲ ಇಚ್ಛಾಶಕ್ತಿಯೊಂದಿಗೆ ಉಜ್ವಲ ಭವಿಷ್ಯವನ್ನು ರೂಪಿಸಿಕೊಳ್ಳಬೇಕು ಎಂದು ಹಿರಿಯ ವಿದ್ವಾಂಸ ಎನ್.ಆರ್. ದಾಮೋದರ ಶರ್ಮ ಬಾರ್ಕೂರು ಹೇಳಿದರು. ಅವರು ಬುಧವಾರ ಉಜಿರೆಯಲ್ಲಿ ಎಸ್.ಡಿ.ಎಂ. ಸ್ವಾಯತ್ತ ಕಾಲೇಜಿನಲ್ಲಿ ವಿದ್ಯಾರ್ಥಿ ಸಂಘದ ಚಟುವಟಿಕೆಗಳ ಉದ್ಘಾಟನಾ ಸಮಾರಮಭದಲ್ಲಿ ಪತ್ರಿಕೋದ್ಯಮ ವಿಭಾಗದ ವಿದ್ಯಾರ್ಥಿಗಳು ರೂಪಿಸಿದ “ಚಿಗುರು” ಸಂಚಿಕೆ ಬಿಡುಗಡೆಗೊಳಿಸಿ ಮಾತನಾಡಿದರು. ವಿದ್ಯಾರ್ಥಿಗಳು ಸಮಾಜದ ಅಮೂಲ್ಯ ಮಾನವ ಸಂಪನ್ಮೂಲವಾಗಿದ್ದು, ಆತ್ಮವಿಶ್ವಾಸದ ಮೂಲಕ ಆದರ್ಶ ನಾಯಕತ್ವ ಗುಣದೊಂದಿಗೆ ಮಾನವೀಯ ಮೌಲ್ಯಗಳನ್ನು ಮೈಗೂಡಿಸಿಕೊಳ್ಳಬೇಕು. ನಮ್ಮ ಸನಾತನಧರ್ಮ,...
ಧಾರ್ಮಿಕ ಶ್ರದ್ಧಾ ಕೇಂದ್ರದ ಮೇಲೆ ನಡೆಯುತ್ತಿರುವ ದಾಳಿ ನಿಲ್ಲಬೇಕು. ಕೂಡಲೇ ಎಸ್ ಐ ಟಿ ಸರ್ಕಾರಕ್ಕೆ ಮದ್ಯಂತರ ವರದಿ ಸಲ್ಲಿಸಲಿ. ರಕ್ಷಿತ್ ಶಿವರಾಂ
ಬೆಳ್ತಂಗಡಿ; ತಾಲೂಕಿನ ಧರ್ಮಸ್ಥಳ ಗ್ರಾಮದಲ್ಲಿ ಅನಾಮಿಕ ವ್ಯಕ್ತಿಯ ದೂರಿನಂತೆ ನಡೆದಿದೆ ಎನ್ನಲಾದ ಪ್ರಕರಣಗಳ ಕುರಿತು ತನಿಖೆಗಾಗಿ ಸರ್ಕಾರ ಎಸ್ಐಟಿಯನ್ನು ರಚಿಸಿದ್ದು.ನಿಷ್ಪಕ್ಷಪಾತವಾಗಿ ತನಿಖೆಯೂ ಕೂಡ ನಡೆಯುತ್ತಿದೆ. ಎಸ್ಐಟಿ ತನಿಖೆಯನ್ನು ನಡೆಸುತ್ತಿರುವ ಸಂದರ್ಭದಲ್ಲಿ ಧಾರ್ಮಿಕ ಶ್ರದ್ಧಾ ಕೇಂದ್ರ ಮತ್ತು ವ್ಯಕ್ತಿಗತವಾಗಿ ಮೌಖಿಕ ಮತ್ತು ಸಾಮಾಜಿಕ ಜಾಲತಾಣದ ಮುಖಾಂತರ ಗುರಿಯಾಗಿಸಿ ಅವಹೇಳನಕಾರಿಯಾಗಿ ಬಿಂಬಿಸುವುದು ನಾಗರಿಕ ಸಮಾಜಕ್ಕೆ ಶೋಭೆ ತರುವಂತದ್ದಲ್ಲ. ತನಿಖೆಯೂ ಯಾರ ಪರವೂ ಅಲ್ಲ ವಿರೋಧವೂ ಅಲ್ಲ , ಈ ನೆಲದ ಕಾನೂನು ಪ್ರತಿಯೊಬ್ಬ ಪ್ರಜೆಯ ಗಣತೆ, ಗೌರವವನ್ನು ಕಾಪಾಡುತ್ತದೆ. ಸಾಮಾಜಿಕ ಜಾಲತಾಣದಲ್ಲಿ ದ್ವೇಷ ಹರಡುತ್ತಿರುವವರ ವಿರುದ್ಧವು, ಜಿಲ್ಲಾ ಪೊಲೀಸ್...















