ಬೆಳ್ತಂಗಡಿ : ಬುರುಡೆ ಪ್ರಕರಣದಲ್ಲಿ ಜಯಂತ್ ಟಿ ಬಾಡಿಗೆ ಮನೆ ಮೇಲೆ ಎಸ್.ಐ.ಟಿ ದಾಳಿ
ಬೆಳ್ತಂಗಡಿ : ಬುರುಡೆ ಪ್ರಕರಣದಲ್ಲಿ ಚಿನ್ನಯ್ಯನ ಜೊತೆ ಎಸ್.ಐ.ಟಿ ಅಧಿಕಾರಿಗಳು ಬೆಂಗಳೂರಿನ ಬಗಳಗುಂಟೆಯ ಪೀಣ್ಯ ದಲ್ಲಿರುವ ಜಯಂತ್ ಟಿ ಬಾಡಿಗೆ ಮನೆ ಮೇಲೆ ಆ.30 ರಂದು ಮಾದ್ಯಾಹ್ನ ಕೋರ್ಟ್ ನಿಂದ ಸರ್ಚ್ ವಾರಂಟ್ ಪಡೆದು ದಾಳಿ ಮಾಡಿದ್ದಾರೆ. ದಾಳಿ ಮಾಡುವ ವೇಳೆ ಜಯಂತ್.ಟಿ ಮಗ ಎಸ್.ಐ.ಟಿ ಅಧಿಕಾರಿಗಳಿಗೆ ಮನೆಯನ್ನು ಕೀ ನೀಡಿ ಓಪನ್ ಮಾಡಿಸಿ ಮನೆಯೊಳಗೆ ಶೋಧ ನಡೆಸುತ್ತಿದ್ದಾರೆ. ಎಸ್.ಐ.ಟಿ ಶೋಧ ವೇಳೆ ಜಯಂತ್.ಟಿ ಪತ್ನಿಯ ಹಳೆ ಆಂಡ್ರೈಡ್ ಮೊಬೈಲ್ ಫೋನ್ ವಶಕ್ಕೆ ಪಡೆದು ಮಹಜರು ನಡೆಸುತ್ತಿದ್ದಾರೆ ಎನ್ನಲಾಗಿದೆ.
ವಿಚಾರಣೆ ಮುಗಿಸಿ ಹಿಂತಿರುಗಿದ ಯುಟ್ಯೂಬರ್ ಸಮೀರ್ ಎಂ.ಡಿ
ಬೆಳ್ತಂಗಡಿ; ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗಾಗಿ ಯುಟ್ಯೂಬರ್ ಸಮೀರ್ ಎಂ.ಡಿ ಅವರು ಬೆಳ್ತಂಗಡಿ ಠಾಣೆಗೆ ಆಗಮಿಸಿ ವಿಚಾರಣೆ ಎದುರಿಸಿ ಹಿಂತಿರುಗಿದ್ದಾರೆ. ತನ್ನ ವಕೀಲರೊಂದಿಗೆ ಆಗಮಿಸಿದ ಸಮೀರ್ ಅವರು ಬೆಳ್ತಂಗಡಿ ಠಾಣೆಗೆ ತರೆಳಿ ಅಗತ್ಯ ಮಾಹಿತಿಗಳನ್ನು ನೀಡಿ ಹಿಂತಿರುಗಿದ್ದಾರೆ. ಅವರ ವಿರುದ್ದ ಸಾಮಾಜಿಕ ಜಾಲತಾಣಗಳಲ್ಲಿ ಅಪಪ್ರಚಾರ ಮಾಡಿರುವ ಬಗ್ಗೆ ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.
ಬೆಳ್ತಂಗಡಿ : ಬುರುಡೆ ಪ್ರಕರಣ ಚಿನ್ನಯ್ಯನನ್ನು ಮಹಜರು ನಡೆಸಲು ಕರೆದುಕೊಂಡು ಹೋದ ಎಸ್.ಐ.ಟಿ
ಬೆಳ್ತಂಗಡಿ : ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೆ ಒಳಗಾಗಿರುವ ಸಾಕ್ಷಿದೂರುದಾರ ಚಿನ್ನಯ್ಯನನ್ನು ಎಸ್.ಐ.ಟಿ ತಂಡಮಹಜರಿಗಾಗಿ ಕರೆದೊಯ್ದಿದ್ದಾರೆ.ಆತನಿಗೆ ಸಂಬಂಧಿಸಿದ ಸ್ಥಳಗಳಿಗೆ ಮಹಜರು ನಡೆಸಲು ಹಾಗೂ ದಾಖಲೆಗಳನ್ನು ವಶಪಡಿಸಿಕೊಳ್ಳಬೇಕಾದ ಅಗತ್ಯವಿದ್ದು ಆ.30 ರಂದು ಬೆಳಗ್ಗೆ 6 ಗಂಟೆಗೆ ಎಸ್.ಐ.ಟಿ ಅಧಿಕಾರಿಗಳು ಬಿಗಿ ಭದ್ರತೆಯಲ್ಲಿ ಕರೆದುಕೊಂಡು ಹೋಗಿದ್ದಾರೆ.ಆತನನ್ನು ಕರೆದುಕೊಂಡು ಹೋಗಿರುವುದು ಎಲ್ಲಿಗೆ ಎಂಬ ಬಗ್ಗೆ ಯಾವುದೆ ಮಾಹಿತಿಗಳು ಲಭ್ಯವಾಗಿಲ್ಲ
ಬೆಳ್ತಂಗಡಿ : ವಿಚಾರಣೆ ಮುಗಿಸಿ ವಾಪಸ್ ತೆರಳಿದ ಲಾಯರ್ ಜಗದೀಶ್
ಬೆಳ್ತಂಗಡಿ : ಸಾಮಾಜಿಕ ಜಾಲತಾಣದಲ್ಲಿ ಧರ್ಮಸ್ಥಳ ಬಗ್ಗೆ ಅವಹೇಳನ ಮಾಡಿ ವಿಡಿಯೋ ವೈರಲ್ ಮಾಡಿದ ಪ್ರಕರಣ ಧರ್ಮಸ್ಥಳ ನಿವಾಸಿ ಪ್ರಭಾಕರ್ ಗೌಡ ಆ.13 ರಂದು ದೂರು ನೀಡಿದ್ದರು. ಈ ಪ್ರಕರಣ ಸಂಬಂಧ ವಿಚಾರಣೆಗಾಗಿ ಆ.29 ರಂದು ಬೆಳ್ತಂಗಡಿ ಪೊಲೀಸ್ ಠಾಣೆಗೆ ಹಾಜರಾಗಿದ್ದರು. ವಿಚಾರಣೆ ರಾತ್ರಿ 9:30 ಕ್ಕೆ ಮುಗಿಸಿ ವಾಪಸ್ ಬೆಂಗಳೂರಿಗೆ ತೆರಳಿದ್ದಾರೆ. ಬೆಳ್ತಂಗಡಿ ಪೊಲೀಸ್ ಠಾಣೆಗೆ ಹಾಜರಾಗಲು ಜೀವ ಭಯ ಕಾಡುತ್ತಿದ್ದು ಇದರಿಂದ ಪೊಲೀಸ್ ಭದ್ರತೆ ನೀಡಬೇಕಾಗಿ ವಿನಂತಿ ಮಾಡಿದ್ದ ಕಾರಣ ಇಬ್ಬರು ಬೆಳ್ತಂಗಡಿ ಪೊಲೀಸರು ಬೆಂಗಳೂರಿಗೆ ತೆರಳಿ ಕಾರಿನಲ್ಲಿ ಆ.29 ರಂದು...
ಬಂಧನ ನಾಪತ್ತೆ ವದಂತಿಗಳ ನಡುವೆ ಠಾಣೆ ಹಾಗೂ ಎಸ್.ಐ.ಟಿ ಕಚೇರಿಗೆ ಬಂದು ಹಿಂತಿರುಗಿದ ಮಹೇಶ್ ಶೆಟ್ಟಿ ತಿಮರೋಡಿ
ಬೆಳ್ತಂಗಡಿ; ಮಹೇಶ್ ಶೆಟ್ಟಿ ಅವರನ್ನು ಎಸ್.ಐ.ಟಿ ತಂಡ ಬಂಧಿಸಲಿದೆ ಅವರು ನಾಪತ್ತೆಯಾಗಿದ್ದಾರೆ ಎಂಬ ವದಂತಿಗಳ ನಡುವೆಯೇ ಬೆಳ್ತಂಗಡಿ ಠಾಣೆಗೆ ಆಗಮಿಸಿದ್ದ ಮಹೇಶ್ ಶೆಟ್ಟಿ ಅವರು ಎಸ್.ಐ.ಟಿ ಠಾಣೆಗೆ ತೆರಳಿ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿ ಹಿಂತಿರುಗಿದ್ದಾರೆ.ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಬ್ರಹ್ಮಾವರ ಪೊಲೀಸರ ದೂರಿನಂತದ ದಾಖಲಾಗಿದ್ದ ಕರ್ತವ್ಯಕ್ಕೆ ಅಡ್ಡಿ ಪ್ರಕರಣದ ಬಗ್ಗೆ ವಿಚಾರಣೆಗಾಗಿ ಮಹೇಶ್ ಶೆಟ್ಟಿ ಅವರು ಶುಕ್ರವಾರ ಬೆಳ್ತಂಗಡಿ ಠಾಣೆಗೆ ಆಗಮಿಸಿದ್ದರು. ಠಾಣೆಯಲ್ಲಿ ಹೇಳಿಕೆ ನೀಡಿದ ಬಳಿಕ ಅವರು ನೇರವಾಗಿ ಎಸ್.ಐ.ಟಿ ಕಚೇರಿಗೆ ತೆರಳಿದ್ದಾರೆ. ಎಸ್.ಐ.ಟಿ ಅಧಿಕಾರಿಗಳು ಅವರಿಗೆ ಯಾವುದೇ ನೋಟೀಸ್ ನೀಡಿದ್ದರೆ ಎಂಬ...
ಬೆಳ್ತಂಗಡಿ : ವಿಚಾರಣೆಗೆ ಹಾಜರಾದ ಲಾಯರ್ ಜಗದೀಶ್
ಬೆಳ್ತಂಗಡಿ : ಸಾಮಾಜಿಕ ಜಾಲತಾಣದಲ್ಲಿ ಧರ್ಮಸ್ಥಳ ಬಗ್ಗೆ ಅವಹೇಳನ ಮಾಡಿ ವಿಡಿಯೋ ವೈರಲ್ ಮಾಡಿದ ಪ್ರಕರಣ ಸಂಬಂಧ ವಿಚಾರಣೆಗಾಗಿ ಆ.29 ರಂದು ಬೆಳ್ತಂಗಡಿ ಪೊಲೀಸ್ ಠಾಣೆಗೆ ಹಾಜರಾಗಿದ್ದಾರೆ. ಬೆಳ್ತಂಗಡಿ ಪೊಲೀಸ್ ಠಾಣೆಗೆ ಹಾಜರಾಗಲು ಜೀವ ಭಯ ಕಾಡುತ್ತಿದ್ದು ಇದರಿಂದ ಪೊಲೀಸ್ ಭದ್ರತೆ ನೀಡಬೇಕಾಗಿ ವಿನಂತಿ ಮಾಡಿದ್ದ ಕಾರಣ ಇಬ್ಬರು ಪೊಲೀಸರ ಜೊತೆ 1:45 ಕ್ಕೆ ಹಾಜರಾಗಿರುವ ಲಾಯರ್ ಜಗದೀಶ್.
ಬೆಳ್ತಂಗಡಿ : ಬ್ರಹ್ಮವಾರ ಪೊಲೀಸರ ಕರ್ತವ್ಯಕ್ಕೆ ಅಡ್ಡಿ ಪ್ರಕರಣ; ವಿಚಾರಣೆಗಾಗಿ ಮಹೇಶ್ ಶೆಟ್ಟಿ ತಿಮರೋಡಿ ಬೆಳ್ತಂಗಡಿ ಪೊಲೀಸ್ ಠಾಣೆಗೆ ಹಾಜರು
ಬೆಳ್ತಂಗಡಿ: ಬ್ರಹ್ಮವಾರ ಪೊಲೀಸ್ ಠಾಣೆಯಲ್ಲಿ ಯೂಟ್ಯೂಬ್ ನಲ್ಲಿ ಬಿಜೆಪಿಯ ಸಂತೋಷ್ ಜಿ ಬಗ್ಗೆ ಅವ್ಯಾಚ ಶಬ್ದಗಳಿಂದ ಬೈದು ವಿಡಿಯೋ ಪ್ರಸಾರವಾದ ಬಗ್ಗೆ ಪ್ರಕರಣ ದಾಖಲಾಗಿತ್ತು. ಈ ಪ್ರಕರಣದಲ್ಲಿ ಆ.21 ರಂದು ಉಜಿರೆ ನಿವಾಸದಿಂದ ಮಹೇಶ್ ಶೆಟ್ಟಿ ತಿಮರೋಡಿಯನ್ನು ಬ್ರಹ್ಮವಾರ ಪೊಲೀಸರು ಬಂಧಿಸಲು ಬಂದಾಗ ಕರ್ತವ್ಯಕ್ಕೆ ಅಡ್ಡಿಪಡಿಸಿದ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಬ್ರಹ್ಮವಾರ ಪೊಲೀಸರು ಆ.22 ರಂದು ಪ್ರಕರಣ ದಾಖಲಿಸಿದ್ದರು. ಈ ಪ್ರಕರಣದಲ್ಲಿ ಮಹೇಶ್ ಶೆಟ್ಟಿ ತಿಮರೋಡಿ ಆರೋಪಿ -3 ಅಗಿದ್ದರು. ಈ ಪ್ರಕರದಲ್ಲಿ ವಿಚಾರಣೆಗಾಗಿ ತಿಮರೋಡಿ ಮಹೇಶ್ ಶೆಟ್ಟಿ ತಿಮರೋಡಿ ಆ.29...
ಆ31 ಜೆಡಿಎಸ್ ನಿಂದ “ಧರ್ಮಸ್ಥಳ ಸತ್ಯಯಾತ್ರೆ” ನಿಖಿಲ್ ಕುಮಾರ ಸ್ವಾಮಿ
ಬೆಂಗಳೂರು: ಶ್ರೀ ಕ್ಷೇತ್ರ ಧರ್ಮಸ್ಥಳ ವಿರುದ್ಧ ನಡೆಯುತ್ತಿರುವ ಅಪಪ್ರಚಾರ, ಷಡ್ಯಂತ್ರ ಹಾಗೂ ಸುಳ್ಳು ಆರೋಪಗಳ ವಿರುದ್ಧ ಜಾತ್ಯತೀತ ಜನತಾದಳವು "ಧರ್ಮಸ್ಥಳ ಸತ್ಯ ಯಾತ್ರೆ' ಕೈಗೊಂಡಿದ್ದು ಇದೇ ರವಿವಾರ ಆ 31ರಂದು ಧರ್ಮಸ್ಥಳಕ್ಕೆ ಭೇಟಿ ನೀಡಲಿದ್ದೇವೆ ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹೇಳಿದರು. ಪಕ್ಷದ ಕಚೇರಿ ಜೆಪಿ ಭವನದಲ್ಲಿ ಗುರುವರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು. ಆ. 31ರಂದು ಧರ್ಮಸ್ಥಳ ಸತ್ಯ ಯಾತ್ರೆ ಆರಂಭವಾಗುತ್ತದೆ. ಮೊದಲಿಗೆ ಹಾಸನದಲ್ಲಿ ಸೆಂಟರ್ ಮಾಡಿದ್ದೇವೆ. ರಾಜ್ಯಾದ್ಯಂತ ಮುಖಂಡರು, ಕಾರ್ಯಕರ್ತರು ಆಗಮಿಸಲಿದ್ದು ಅಲ್ಲಿ ತಿಂಡಿ ವ್ಯವಸ್ಥೆ ಮಾಡಿದ್ದೇವೆ....
ಕುತ್ಲೂರು ರಾಮಚಂದ್ರ ಭಟ್ ನಿಧನ
ಬೆಳ್ತಂಗಡಿ; ನಾರಾವಿ ಗ್ರಾಮಪಂಚಾಯತಿನ ಮಾಜಿ ಸದಸ್ಯ ಶಿಕ್ಷಣ ಪ್ರೇಮಿ ಕುತ್ಲೂರು ನಿವಾಸಿ ಕುಕ್ಕುಜೆ ರಾಮಚಂದ್ರಭಟ್ ಆ29 ರಂದು ನಿಧನರಾಗಿದ್ದಾರೆ.ಲೋ ಬಿಪಿಯಿಂದಾಗಿ ಕುಸಿದು ಬಿದ್ದ ಇವರನ್ನು ಕೂಡಲೇ ಆಸ್ಪತ್ರೆಗೆ ಕೊಂಡೊಯ್ದರೂ ಆವೇಳೆಗೆ ಅವರು ಮೃತಪಟ್ಟಿದ್ದರು. ನಾರಾವಿ ಗ್ರಮಾಪಂಚಾಯತಿನ ಮಾಜಿ ಸದಸ್ಯರಾದ ಇವರು ಕುತ್ಲೂರು ಶಾಲೆಯ ಎಸ್.ಡಿ.ಎಂ ಸಿ ಅಧ್ಯಕ್ಷರಾಗಿ ಶಾಲೆ ರಾಷ್ಟ್ರ ಮಟ್ಟದಲ್ಲಿಯೇ ಗುರಿತಿಸುವಂತೆ ಮಾಡಿದ್ದರು. ಇವರ ನೇತೃತ್ವದಲ್ಲಿ ಇತ್ತೀಚೆಗಷ್ಟೆ ಕುತ್ಲೂರು ಶಾಲೆಯ ಮಕ್ಕಳು ಮುಖ್ಯಮಂತ್ರಿ ಅವರನ್ನು ಬೇಟಿಯಾಗಿದ್ದರು. ರಾಮಚಂದ್ರ ಭಟ್ ಅವರು ಪತ್ನಿ ಹಾಗೂ ಮಕ್ಕಳನ್ನು ಅಗಲಿದ್ದಾರೆ.
ಸೆ 1ಬಿಜೆಪಿಯಿಂದ ಧರ್ಮಸ್ಥಳ ಚಲೋ; ಎಸ್.ಆರ್ ವಿಶ್ವನಾಥ್ ನೇತೃತ್ವದಲ್ಲಿ ಪೂರ್ವಭಾವಿ ಸಭೆ.
ಬೆಳ್ತಂಗಡಿ; ಶ್ರೀ ಕ್ಷೇತ್ರ ಧರ್ಮಸ್ಥಳದ ವಿರುದ್ಧದ ಷಡ್ಯಂತ್ರವನ್ನು ಖಂಡಿಸಿ ಸೆಪ್ಟಂಬರ್ 1 ರಂದು ನಡೆಯುವ “ಧರ್ಮಸ್ಥಳ ಚಲೋ “ ನಮ್ಮ ನಡಿಗೆ-ಧರ್ಮದೆಡೆಗೆ ಹಾಗೂ ಬೃಹತ್ ಸಮಾವೇಶ ಕುರಿತು ಇಂದು ಪೂರ್ವಭಾವಿ ಸಭೆ ಮತ್ತು ಸ್ಥಳ ಪರಿಶೀಲನೆ ನಡೆಸಲಾಯಿತು..ಈ ಸಂದರ್ಭದಲ್ಲಿ ಕಾರ್ಯಕ್ರಮದ ರಾಜ್ಯ ಸಂಚಾಲಕರು ಯಲಹಂಕ ವಿಧಾನಸಭಾ ಕ್ಷೇತ್ರದ ಶಾಸಕರು ಎಸ್. ಆರ್. ವಿಶ್ವನಾಥ್, ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಕಾರ್ಕಳ ವಿಧಾನಸಭಾ ಕ್ಷೇತ್ರದ ಶಾಸಕರು ಸುನಿಲ್ ಕುಮಾರ್ ಹಾಗೂ ಪ್ರೀತಮ್ ಗೌಡ, ರಾಜ್ಯ ಕಾರ್ಯದರ್ಶಿಗಳು ದ. ಕ. ಜಿಲ್ಲಾ ಸಂಸದರು ಕ್ಯಾ. ಬ್ರಿಜೇಶ್ ಚೌಟರವರು,ಬೆಳ್ತಂಗಡಿ...















