ಕುತ್ಲೂರು ರಾಮಚಂದ್ರ ಭಟ್ ನಿಧನ

0

ಬೆಳ್ತಂಗಡಿ; ನಾರಾವಿ ಗ್ರಾಮಪಂಚಾಯತಿನ ಮಾಜಿ ಸದಸ್ಯ ಶಿಕ್ಷಣ ಪ್ರೇಮಿ ಕುತ್ಲೂರು ನಿವಾಸಿ ಕುಕ್ಕುಜೆ ರಾಮಚಂದ್ರಭಟ್ ಆ29 ರಂದು  ನಿಧನರಾಗಿದ್ದಾರೆ.ಲೋ ಬಿಪಿಯಿಂದಾಗಿ ಕುಸಿದು ಬಿದ್ದ ಇವರನ್ನು ಕೂಡಲೇ ಆಸ್ಪತ್ರೆಗೆ ಕೊಂಡೊಯ್ದರೂ ಆವೇಳೆಗೆ ಅವರು ಮೃತಪಟ್ಟಿದ್ದರು. ನಾರಾವಿ ಗ್ರಮಾಪಂಚಾಯತಿನ ಮಾಜಿ ಸದಸ್ಯರಾದ ಇವರು ಕುತ್ಲೂರು ಶಾಲೆಯ ಎಸ್.ಡಿ.ಎಂ ಸಿ ಅಧ್ಯಕ್ಷರಾಗಿ ಶಾಲೆ ರಾಷ್ಟ್ರ ಮಟ್ಟದಲ್ಲಿಯೇ ಗುರಿತಿಸುವಂತೆ ಮಾಡಿದ್ದರು. ಇವರ ನೇತೃತ್ವದಲ್ಲಿ ಇತ್ತೀಚೆಗಷ್ಟೆ ಕುತ್ಲೂರು ಶಾಲೆಯ ಮಕ್ಕಳು ಮುಖ್ಯಮಂತ್ರಿ ಅವರನ್ನು ಬೇಟಿಯಾಗಿದ್ದರು. ರಾಮಚಂದ್ರ ಭಟ್ ಅವರು ಪತ್ನಿ ಹಾಗೂ ಮಕ್ಕಳನ್ನು ಅಗಲಿದ್ದಾರೆ.

ಸೆ 1ಬಿಜೆಪಿಯಿಂದ ಧರ್ಮಸ್ಥಳ ಚಲೋ; ಎಸ್.ಆರ್ ವಿಶ್ವನಾಥ್ ನೇತೃತ್ವದಲ್ಲಿ ಪೂರ್ವಭಾವಿ ಸಭೆ.

0

ಬೆಳ್ತಂಗಡಿ;  ಶ್ರೀ ಕ್ಷೇತ್ರ ಧರ್ಮಸ್ಥಳದ ವಿರುದ್ಧದ ಷಡ್ಯಂತ್ರವನ್ನು ಖಂಡಿಸಿ ಸೆಪ್ಟಂಬರ್ 1 ರಂದು ನಡೆಯುವ “ಧರ್ಮಸ್ಥಳ ಚಲೋ “ ನಮ್ಮ ನಡಿಗೆ-ಧರ್ಮದೆಡೆಗೆ ಹಾಗೂ ಬೃಹತ್ ಸಮಾವೇಶ ಕುರಿತು ಇಂದು ಪೂರ್ವಭಾವಿ ಸಭೆ ಮತ್ತು ಸ್ಥಳ ಪರಿಶೀಲನೆ ನಡೆಸಲಾಯಿತು..ಈ ಸಂದರ್ಭದಲ್ಲಿ ಕಾರ್ಯಕ್ರಮದ ರಾಜ್ಯ ಸಂಚಾಲಕರು ಯಲಹಂಕ ವಿಧಾನಸಭಾ ಕ್ಷೇತ್ರದ ಶಾಸಕರು ಎಸ್. ಆರ್. ವಿಶ್ವನಾಥ್, ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಕಾರ್ಕಳ ವಿಧಾನಸಭಾ ಕ್ಷೇತ್ರದ ಶಾಸಕರು ಸುನಿಲ್ ಕುಮಾರ್ ಹಾಗೂ ಪ್ರೀತಮ್ ಗೌಡ, ರಾಜ್ಯ ಕಾರ್ಯದರ್ಶಿಗಳು ದ. ಕ. ಜಿಲ್ಲಾ ಸಂಸದರು ಕ್ಯಾ. ಬ್ರಿಜೇಶ್ ಚೌಟರವರು,ಬೆಳ್ತಂಗಡಿ...

ರೆಖ್ಯ ಕಾಂಕ್ರೀಟ್ ಚರಂಡಿಗೆ ಬಿದ್ದು ಲಾರಿ ಚಾಲಕ ಸಾವು

0

ಬೆಳ್ತಂಗಡಿ: ಕಾಂಕ್ರೀಟ್ ಚರಂಡಿಗೆ ಬಿದ್ದು ಲಾರಿ ಚಾಲಕ ಸಾವನ್ನಪ್ಪಿರುವ ಘಟನೆ ಬೆಳ್ತಂಗಡಿ ತಾಲೂಕು ರೇಖ್ಯಾ ಗ್ರಾಮ ನೇಲ್ಯಡ್ಕ ಎಂಬಲ್ಲಿ ನಡೆದಿದೆ. ಬೆಂಗಳೂರು ನೆಲಮಂಗಲ ನಿವಾಸಿ ಹುನಮಂತರಾಯಪ್ಪ (60) ಮೃತ ಲಾರಿ ಚಾಲಕ. ಈ ಬಗ್ಗೆ ಮೃತರ ಮಗ ರಾಜಶೇಖರ (37) ಎಂಬವರು ಧರ್ಮಸ್ಥಳ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ನನ್ನ ತಂದೆ ಹುನಮಂತರಾಯಪ್ಪ (60) ರವರು ಕೆಎ 52 ಬಿ 9011 ಲಾರಿಯಲ್ಲಿ ಚಾಲಕರಾಗಿದ್ದು, ದಿನಾಂಕ: 27-08-2025 ರಂದು ರಾತ್ರಿ ಸಮಯ ಮಂಗಳೂರಿನಿಂದ ಬೆಂಗಳೂರು ಕಡೆಗೆ ಅವರ ಬಾಬು ಲಾರಿಯನ್ನು ಚಲಾಯಿಸಿಕೊಂಡು ಬಂದು ದಿನಾಂಕ:...

ಭಾರೀ ಮಳೆ ಹಿನ್ನಲೆ ಆ29 ರಂದು ದ.ಕ ಜಿಲ್ಲೆಯಲ್ಲಿ ಶಾಲಾ ಕಾಲೇಜುಗಳಿಗೆ ರಜೆ

0

ಮಂಗಳೂರು,ಆ.28: ಹವಾಮಾನ ಇಲಾಖೆಯು ದ.ಕ.ಜಿಲ್ಲೆಗೆ ಆ.29ರಂದು ರೆಡ್ ಅಲರ್ಟ್ ಘೋಷಿಸಿದೆ. ಮುಂಜಾಗ್ರತಾ ಕ್ರಮವಾಗಿ ಆ.29ರಂದು (ಶುಕ್ರವಾರ) ದ.ಕ.ಜಿಲ್ಲೆಯ ಎಲ್ಲಾ ಅಂಗನವಾಡಿ, ಪ್ರಾಥಮಿಕ ಮತ್ತು ಪ್ರೌಢಶಾಲೆಗಳು ಹಾಗೂ ಪಿಯು ಕಾಲೇಜುಗಳಿಗೆ ರಜೆ ಘೋಷಿಸಿ ದ.ಕ.ಜಿಲ್ಲಾಧಿಕಾರಿ ಆದೇಶಿಸಿದ್ದಾರೆ.

ವಸಂತ ಗಿಳಿಯಾರ್ ವಿರುದ್ದ ಬೆಳ್ತಂಗಡಿ ಠಾಣೆಗೆ ದೂರು

0

ಬೆಳ್ತಂಗಡಿ;  ಸಾಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲಿ ಕಾಂಗ್ರೆಸ್ ನಾಯಕರುಗಳನ್ನು ತೇಜೋವಧೆ ಮಾಡಿ ಸುಳ್ಳು ಸುದ್ದಿಗಳನ್ನು ಹರಿಬಿಟ್ಟು ಅಪಪ್ರಚಾರ ಮಾಡುತ್ತಿರುವ ಬಗ್ಗೆ ವಸಂತ ಗಿಳಿಯಾರ್ ಅವರ ವಿರುದ್ದ ಬೆಳ್ತಂಗಡಿ ಗ್ರಾಮೀಣ‌ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ನಾಗೇಶ್ ಕುಮಾರ್ ಬೆಳ್ತಂಗಡಿ ಪೊಲೀಸರಿಗೆ ದೂರು ನೀಡಿದ್ದಾರೆ.ಕೆಪಿಸಿಸಿ ಕಾರ್ಯದರ್ಶಿ ರಕ್ಷಿತ್ ಶಿವರಾಂ ಬಗ್ಗೆ ಹಾಗೂ ಕಾಂಗ್ರೆಸ್ ಹೈಕಮಾಂಡ್ ಬಗ್ಗೆ ಸುಳ್ಳು ಸುದ್ದಿಯನ್ನು ಹರಡಿದ್ದು ರಕ್ಷಿತ್ ಶಿವರಾಂ ಅವರ ಮಾನಹಾನಿ ನಡೆಸಿ ಘನತೆ ಗೌರವಕ್ಕೆ ಧಕ್ಕೆಯುಂಟುಮಾಡಿದ್ದಲ್ಲದೆ ಇದರಿಂದಾಗಿ ಜನರಲ್ಲಿ ಗೊಂದಲ‌ ಸೃಷ್ಟಿಯಾಗಲು ಕಾರಣವಾಗಿದ್ದು ಈಬಗ್ಗೆ ವಸಂತ ಗಿಳಿಯಾರ್...

ಬೆಳ್ತಂಗಡಿ ಧರ್ಮಪ್ರಾಂತ್ಯದ ನೂತನ ಧರ್ಮಾಧ್ಯಕ್ಷರಾಗಿ ಧರ್ಮಗುರುಗಳಾದ ಫಾ. ಜೇಮ್ಸ್ ಪಟ್ಟೇರಿಲ್ ಆಯ್ಕೆ

0

ಬೆಳ್ತಂಗಡಿ; ಬೆಳ್ತಂಗಡಿ ಧರ್ಮಪ್ರಾಂತ್ಯದ ನೂತನ ಧರ್ಮಾಧ್ಯಕ್ಷರಾಗಿ ಅ.ವಂ ಫಾ. ಜೇಮ್ಸ್ ಪಟ್ಟೇರಿಲ್ ಅವರು ಆಯ್ಕೆಯಾಗಿದ್ದಾರೆ. ಪೋಪ್ ಲಿಯೋ 14ಅವರ ಆದೇಶದಂತೆಎರ್ನಾಕುಳಂ ನಲ್ಲಿ ಸಿರೋ ಮಲಬಾರ್ ಚರ್ಚ್ ನ ಕಾರ್ಡಿನಲ್ ಅ.ವಂ ರಾಫೇಲ್ ತಟ್ಟಿಲ್ ಅವರು ಹೊಸ ಧರ್ಮಾಧ್ಯಕ್ಷರ ಹೆಸರನ್ನು ಘೋಷಣೆ ಮಾಡಿದ್ದಾರೆ.ಬೆಳ್ತಂಗಡಿ ಧರ್ಮಪ್ರಾಂತ್ಯದ ಸ್ಥಾಪಕ‌ ಧರ್ಮಾಧ್ಯಕ್ಷರಾಗಿದ್ದಬಿಷಪ್ ಲಾರೆನ್ಸ್ ಮುಕ್ಕುಯಿ ಅವರು ಕಳೆದ 26 ವರ್ಷಗಳಿಂದ‌ ಧರ್ಮಾಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರುಇದೀಗ ಅವರು ನಿವೃತ್ತರಾಗುತ್ತಿದ್ದು ಇವರ ಸ್ಥಾನಕ್ಕೆ ಹೊಸ ಧರ್ಮಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಜೇಮ್ಸ್ ಪಟ್ಟೇರಿಲ್ ಅವರು ಬೆಳ್ತಂಗಡಿ ತಾಲೂಕೊನ ಕಳೆಂಜ ಗ್ರಾಮದವರಾಗಿದ್ದಾರೆ

ಎಸ್.ಐ.ಟಿ ಗೆ ದೂರು ನೀಡಿದ ಸೌಜನ್ಯ ತಾಯಿ ಕುಸುಮಾವತಿ

0

ಬೆಳ್ತಂಗಡಿ; ಧರ್ಮಸ್ಥಳ ಗ್ರಾಮದಲ್ಲಿ ಹಲವಾರು ಮೃತದೇಹಗಳನ್ನು ಹೂತು ಹಾಕಿರುವ ಬಗ್ಗೆ ತನಿಖೆ ನಡೆಸುತ್ತಿರುವ ಎಸ್.ಐ.ಟಿ ಕಚೇರಿಗೆ ಆಗಮಿಸಿದ ಸೌಜನ್ಯ ತಾಯಿ ಕುಸುಮಾವತಿ ಅವರು ಎಸ್.ಐ.ಟಿ ಅಧಿಕಾರಿಗಳಿಗೆ ಗುರುವಾರ ದೂರು ನೀಡಿದ್ದು ದೂರನ್ನು ಸ್ವೀಕರಿಸಿದ ಅಧಿಕಾರಿಗಳು ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಹಿಂಬರಹ ನೀಡಿದ್ದಾರೆ.ಅತ್ಯಾಚಾರಕ್ಕೆ ಈಡಾಗಿ ಕೊಲೆಯಾದ ಸೌಜನ್ಯ ತಾಯಿ ಕುಸುಮಾವತಿ ಹಾಗೂ ಮನೆಯವರು ಗುರುವಾರ ಮಧ್ಯಾಹ್ನ ಎಸ್.ಐ.ಟಿ ಕಚೇರಿಗೆ ಆಗಮಿಸಿದ್ದು‌ಅಧಿಕಾರಿಗಳ ಸೂಚನೆಯ ಮೇರೆಗೆ ಆರಂಭದಲ್ಲಿ ಅಲ್ಲಿಂದ ಹಿಂತಿರುಗಿದ್ದರು. ಆದರೆ ಬಳಿಕ ಅಧಿಕಾರಿಗಳ ಸೂಚನೆಯಂತೆ ಸೌಜನ್ಯ ತಾಯಿ ಕುಸುಮಾವತಿ ಎಸ್.ಐ.ಟಿ ಕಚೇರಿಗೆ ಬಂದು ದೂರನ್ನು...

ತಲಪಾಡಿ ಟೋಲ್ ಗೇಟ್ ಸಮೀಪ ಭೀಕರ ಅಪಘಾತ 5 ಮಂದಿ ಸಾವು

0

ಮಂಗಳೂರು: ಕೆ ಸಿರೋಡ್ ಸಮೀಪದ ತಲಪಾಡಿ ಟೋಲ್ ಗೇಟ್ ಬಳಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ 5 ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಇಂದು ಮಧ್ಯಾಹ್ನ ನಡೆದಿದೆ. ಕೆಸಿ ರೋಡ್ ನಿಂದ ಬರುತ್ತಿದ್ದ ರಿಕ್ಷಾ ಮತ್ತು ಬಸ್ ಮಧ್ಯೆ ಮೇಲಿನ ತಲಪಾಡಿಯಲ್ಲಿ ಅಪಘಾತ ನಡೆದಿದ್ದು ರಿಕ್ಷಾದಲ್ಲಿದ್ದ ಕೆಸಿ ರೋಡ್ ಮೂಲದವರೆನ್ನಲಾದ 5 ಮಂದಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.. ಮೃತರಲ್ಲಿ ನಾಲ್ವರು ಮಹಿಳೆಯರು ಮತ್ತು ಮಗು ಸೇರಿದೆ ಎನ್ನಲಾಗುತ್ತಿದ್ದು, ರಿಕ್ಷಾ ಚಾಲಕ ಗಂಭೀರ ಗಾಯಗೊಂಡಿರುವ ಮಾಹಿತಿಯಿದೆ. ಮಂಜೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ಮಾಹಿತಿ ತಿಳಿದು...

ಎಸ್.ಐ.ಟಿ ಕಚೇರಿಗೆ ಬಂದ ಸೌಜನ್ಯ ತಾಯಿ ಅಧಿಕಾರಿಗಳು ಸಿಗದ ಹಿನ್ನಲೆಯಲ್ಲಿ ಹಿಂದಕ್ಕೆ

0

ಬೆಳ್ತಂಗಡಿ; ಧರ್ಮಸ್ಥಳ ಗ್ರಾಮದಲ್ಲಿ ಹಲವಾರು ಮೃತದೇಹಗಳನ್ನು ಹೂತು ಹಾಕಿರುವ ಬಗ್ಗೆ ತನಿಖೆ ನಡೆಸುತ್ತಿರುವ ಎಸ್.ಐ.ಟಿ ಕಚೇರಿಗೆ ಅತ್ಯಾಚಾರಕ್ಕೆ ಈಡಾಗಿ ಕೊಲೆಯಾದ ಸೌಜನ್ಯ ತಾಯಿ ಕುಸುಮಾವತಿ ಹಾಗೂ ಮನೆಯವರು ಗುರುವಾರ ಮಧ್ಯಾಹ್ನ ಆಗಮಿಸಿದ್ದು‌ಅಧಿಕಾರಿಗಳ ಸೂಚನೆಯ ಮೇರೆಗೆ ಹಿಂತಿರುಗಿದ್ದಾರೆಗುರುವಾರ ಮಧ್ಯಾಹ್ನದ ವೇಳೆಗೆ ಎರಡು ವಾಹನಗಳಲ್ಲಿ ಸೌಜನ್ಯ ಮನೆಯವರು ಎಸ್.ಐ‌.ಟಿ ಕಚೇರಿಗೆ ಆಗಮಿಸಿದ್ದರು. ಆದರೆ ಇವರು ಮುಂಚಿತವಾಗಿ ಅನುಮತಿ ಪಡೆಯದೆ ಆಗಮಿಸಿದ‌ ಹಿನ್ನಲೆಯಲ್ಲಿ ಇವರನ್ನು ಪೊಲೀಸರು ಹಿಂದಕ್ಕೆ ಕಳುಹಿಸಿದ್ದಾರೆ. ಇಂದು ಎಸ್.ಐ.ಟಿ ಕಚೇರಿಯಲ್ಲಿ ಹಿರಿಯ ಅಧಿಕಾರಿಗಳು ಇರಲಿಲ್ಲ ಎನ್ನಲಾಗಿದೆ.ಸಾಕ್ಷಿದೂರು ದಾರನಾಗಿ ಬಂದ ಚೆನ್ನಯ್ಯ ಯುಟ್ಯೂಬರ್ ಗಳಿಗೆ ನೀಡಿದ...

ಬೆಳ್ತಂಗಡಿ; ಭಾರೀ ಮಳೆ ತಾಲೂಕಿನ ಶಾಲೆಗಳಿಗೆ ಆ 28ರಂದು ರಜೆ

0

ಬೆಳ್ತಂಗಡಿ ತಾಲೂಕಿನಾದ್ಯಂತ ನಿರಂತರವಾಗಿ ಮಳೆ ಆಗುತ್ತಿರುವುದರಿಂದ ತಾಲೂಕಿನ ಎಲ್ಲಾ ಅಂಗನವಾಡಿ ಕೇಂದ್ರಗಳು, ಪ್ರಾಥಮಿಕ ಮತ್ತು ಪ್ರೌಢಶಾಲೆ, ಸರ್ಕಾರಿ ಅನುದಾನಿತ ಮತ್ತು ಖಾಸಗಿ ವಿದ್ಯೆ ಸಂಸ್ಥೆಗಳಿಗೆ ದಿನಾಂಕ:28.08.2025 ರಂದು ರಜೆ ಘೋಷಿಸಲಾಗಿದೆ. ಎಂದು ತಹಶಿಲ್ದಾರ್ ತಿಳಿಸಿದ್ದಾರೆ