ಎಸ್.ಐ.ಟಿ ಕಚೇರಿಗೆ ಮಹೇಶ್ ಶೆಟ್ಟಿ ತಿಮರೋಡಿ ದಿಢೀರ್ ಭೇಟಿ; ವಸತಿ ಗೃಹಗಳ  ಅಪರಿಚಿತ ಶವಗಳ ಬಗ್ಗೆ ತನಿಖೆಗೆ ನಡೆಸುವಂತೆ ದೂರು

0

ಬೆಳ್ತಂಗಡಿ : ಧರ್ಮಸ್ಥಳ ಗ್ರಾಮಕ್ಕೆ ಸೇರಿದ ವಿವಿಧ ವಸತಿ ಗೃಹಗಳಲ್ಲಿ 2006 ರಿಂದ 2010 ರ ಅವಧಿಯಲ್ಲಿ ಸಂಭವಿಸಿದ ನಾಲ್ಕು "ಅಪರಿಚಿತ ಸಾವುಗಳ ಕುರಿತು ಗಂಭೀರ ಆರೋಪಗಳು ಕೇಳಿಬಂದಿದ್ದು, ಇವು ಸಂಭಾವ್ಯ ಕೊಲೆ ಪ್ರಕರಣಗಳಾಗಿರುವುದರಿಂದ ವಿಶೇಷ ತನಿಖಾ ದಳ (SIT) ತಕ್ಷಣ ಎಫ್‌ಐಆರ್ ದಾಖಲಿಸಿ ತನಿಖೆ ನಡೆಸುವಂತೆ ಸೌಜನ್ಯ ಪರ ಹೋರಾಟಗಾರ ಮಹೇಶ ಶೆಟ್ಟಿ ತಿಮರೋಡಿ ಎಸ್.ಐ.ಟಿ ಕಚೇರಿಗೆ ತೆರಳಿ ದೂರು ನೀಡಿದ್ದಾರೆ. ಗುರುವಾರ ರಾತ್ರಿ ಬೆಳ್ತಂಗಡಿ ಎಸ್ ಐಟಿ ಕಛೇರಿಗೆ ಮಹೇಶ್ ಶೆಟ್ಟಿಯವರು ಭೇಟಿ ನೀಡಿದ್ದು ಮಾಹಿತಿ ಹಕ್ಕು ಕಾಯ್ದೆಯಡಿ ಪಡೆದ...

ಪೇಜಾವರ ಮಠದ ಪೂಜ್ಯ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ ಧರ್ಮಸ್ಥಳ ಭೇಟಿ

0

ಉಜಿರೆ: ಉಡುಪಿ ಪೇಜಾವರ ಮಠದ ಪೂಜ್ಯ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ ಗುರುವಾರ ಧರ್ಮಸ್ಥಳಕ್ಕೆ ಆಗಮಿಸಿದಾಗ ಅವರನ್ನು ಭವ್ಯ ಮೆರವಣಿಗೆಯಲ್ಲಿ ಸ್ವಾಗತಿಸಲಾಯಿತು.ಬಳಿಕ ಬೀಡಿನಲ್ಲಿ (ಹೆಗ್ಗಡೆಯವರ ನಿವಾಸ) ಪೂಜ್ಯ ಸ್ವಾಮೀಜಿಯವರ ಪಾದಪೂಜೆ ಮಾಡಲಾಯಿತು.ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಪೂಜ್ಯ ಸ್ವಾಮೀಜಿಯವರಿಗೆ ತುಳಸಿ ಮಾಲೆ ಹಾಕಿ ಶಾಲು ಹೊದಿಸಿ ಗೌರವಿಸಿದರು.ಪೂಜ್ಯ ಪೇಜಾವರ ಸ್ವಾಮೀಜಿಯವರು ಹೆಗ್ಗಡೆಯವರಿಗೆ ಫಲ ಮಂತ್ರಾಕ್ಷತೆಯೊAದಿಗೆ ಪ್ರಸಾದ ನೀಡಿ ಆಶೀರ್ವದಿಸಿದರು. ಮಠದ ವತಿಯಿಂದ ಶಾಲು ಹೊದಿಸಿ, ಗೌರವಿಸಿದರು.ಹೇಮಾವತಿ ವೀ. ಹೆಗ್ಗಡೆ ಹಾಗೂ ಡಿ. ಹರ್ಷೇಂದ್ರ ಕುಮಾರ್ ಅವರಿಗೂ ಸ್ವಾಮೀಜಿಯವರು ಪ್ರಸಾದ ನೀಡಿ ಆಶೀರ್ವದಿಸಿದರು.ಬಳಿಕ ಸ್ವಾಮೀಜಿ ದೇವರದರ್ಶನ ಮಾಡಿ,...

ಯುಟ್ಯೂಬರ್ ಗಳಾದ ಅಭಿಷೇಕ್ ಹಾಗೂ ಮನಾಫ್ ವಿಚಾರಣೆ ಪೂರ್ಣಗೊಳಿಸಿದ ಎಸ್.ಐ.ಟಿ

0

ಬೆಳ್ತಂಗಡಿ; ತಲೆಬುರುಡೆ ವಿಚಾರಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಲಾಗುತ್ತಿದ್ದ ಯುಟ್ಯೂಬರ್ ಗಳಾದ ಅಭಿಷೇಕ್ ಹಾಗೂ ಮನಾಫ್ ಅವರ ವಿಚಾರಣೆಯನ್ನು ಹಾಗೂ ಹೇಳಿಕೆ ದಾಖಲಿಸುವ ಕಾರ್ಯವನ್ನು ಎಸ್.ಐ.ಟಿ ತಂಡ ಬುಧವಾರ ಪೂರ್ಣ ಗೊಳಿಸಿದ್ದು ವಿಚಾರಣೆ ಮುಗಿಸಿ ಇವರಿಬ್ಬರೂ ಹಿಂತಿರುಗಿದ್ದಾರೆ.ಯುಟ್ಯೂಬರ್ ಅಭಿಷೇಕ್ ಅವರನ್ನು ಕಳೆದ ಒಂದು ವಾರದಿಂದ ಎಸ್.ಐ.ಟಿ ತಂಡ ವಿಚಾರಣೆ ನಡೆಸಿತ್ತು. ಇವರಿಂದ ಮೊಬೈಲ್ ಅನ್ನು ವಶಪಡಿಸಿಕೊಂಡಿರುವುದಾಗಿ ತಿಳಿದು ಬಂದಿದೆ. ಬಂಗ್ಲೆ ಗುಡ್ಡದಿಂದ ತಲೆ ಬುರುಡೆ ತೆಗೆಯುವ ವಿಡಿಯೋವನ್ನು ಈತ ಮಾಡಿದ್ದ ಎಂಬ ಆರೋಪ ಕೇಳಿ ಬಂದಿತ್ತು. ಇದೀಗ ಈತನ ವಿಚಾರಣೆ ಹೇಳಿಕೆ ಪಡೆಯುವ ಕಾರ್ಯ...

ಬೆಳ್ತಂಗಡಿ : ವಿಠಲ್ ಗೌಡನ ಬಂಗ್ಲಗುಡ್ಡಕ್ಕೆ ಕರೆದುಕೊಂಡು ಬಂದ ಎಸ್.ಐ.ಟಿ

0

ಬೆಳ್ತಂಗಡಿ : ಬುರುಡೆ ಪ್ರಕರಣ ಸಂಬಂಧ ಎಸ್.ಐ‌.ಟಿ ಅಧಿಕಾರಿಗಳು ಸೆ.10 ರಂದು ಸಂಜೆ 4:30 ಕ್ಕೆ ಎಸ್ಪಿ ಸಿ.ಎ. ಸೈಮನ್ ನೇತೃತ್ವದಲ್ಲಿ ಸ್ಥಳಮಹಜರಿಗಾಗಿ ಸೌಜನ್ಯ ಮಾವ ವಿಠಲ್ ಗೌಡನನ್ನು ಧರ್ಮಸ್ಥಳ ಗ್ರಾಮದ ನೇತ್ರಾವತಿಯಲ್ಲಿರುವ ಬಂಗ್ಲಗುಡ್ಡ ಪ್ರದೇಶಕ್ಕೆ ಕರೆದುಕೊಂಡು ಬಂದು ಸ್ಥಳ ಮಹಜರು ನಡೆಸುತ್ತಿದ್ದಾರೆ.

ಅಕ್ರಮ ಕಸಾಯಿ ಖಾನೆಗಳ ವಿರುದ್ದ ಕೂಡಲೇ ಕ್ರಮ ಕೈಗೊಳ್ಳಿ ವಿಶ್ವ ಹಿಂದೂ ಪರಿಷತ್ ಒತ್ತಯ

0

ಬೆಳ್ತಂಗಡಿ:ಗುರುವಾಯನಕೆರೆ ಪಿಲಿಚಾಮುಂಡಿ ಕಲ್ಲು ಹತ್ತಿರ  ಅಕ್ರಮ ಕಸಾಯಿಖಾನೆಯಲ್ಲಿ ದನಗಳನ್ನು ಹಿಂಸಾತ್ಮಕವಾಗಿ ಹತ್ಯೆ ಮಾಡಿರುವ ಘಟನೆ ನಡೆದಿದ್ದು, ಈ ಅಮಾನುಷ ಕೃತ್ಯವನ್ನು ವಿಶ್ವ ಹಿಂದೂ ಪರಿಷತ್, ಬಜರಂಗದಳ ಉಗ್ರವಾಗಿ ಖಂಡಿಸುತ್ತದೆ. ಎಂದು ಪ್ರಾಂತ ಗೋ ರಕ್ಷಾ ಪ್ರಮುಖ್ ಸುನೀಲ್ ಕೆ.ಆರ್. ಹೇಳಿದರು. ಅವರು ಸೆ 09 ರಂದು ಬೆಳ್ತಂಗಡಿಯಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ , ಗುರುವಾಯನಕೆರೆಯಲ್ಲಿ ಅವ್ಯಾಹತವಾಗಿ ಅಕ್ರಮ ಗೋ ವಧೆ ಮಾಡುತಿದ್ದರೂ ಪೊಲೀಸ್ ಇಲಾಖೆ ತಡೆಗಟ್ಟಲು ವಿಫಲವಾಗಿದೆ. ಈ ಬಗ್ಗೆ ಈಗಾಗಲೇ ವಿಶ್ವ ಹಿಂದೂ ಪರಿಷತ್ ಪೊಲೀಸ್ ಇಲಾಖೆಗೆ ದೂರು ನೀಡಿದರೂ ಕ್ರಮ...

ಸುಲ್ಕೇರಿಮೊಗ್ರು ಮನೆಗೆ ನುಗ್ಗಿ ಅಡಿಕೆ ಕಳ್ಳತನ

0

ಬೆಳ್ತಂಗಡಿ; ಸುಲ್ಕೇರಿಮೊಗ್ರು ಗ್ರಾಮದ ನಿರ್ಮಲ ಕಟ್ಟೆ ಎಂಬಲ್ಲಿ ಮನೆಯಿಂದ ಅಡಿಕೆ ಕಳ್ಳತನ ಮಾಡಿದ ಘಟನೆ ನಡೆದಿದ್ದು ಈ ಬಗ್ಗೆ ವೇಣೂರು ಠಾಣೆಯಲ್ಲಿ ಪ್ರಕರಣ‌ದಾಖಲಿಸಿದ್ದಾರೆ.ಸ್ಥಳೀಯ ನಿವಾಸಿ ನಾರಾಯಣ ಮಡಿವಾಳ ಎಂಬವರು ಈ ಬಗ್ಗೆ ದೂರು ನೀಡಿದ್ದು ಮನೆಯ ಮಹಡಿಯ ಮೇಲಿನ ಕೋಣೆಯಲ್ಲಿ ಸಿಲಿದ ಒಣ ಅಡಿಕೆಯನ್ನು ಇಟ್ಟಿದ್ದರು ಕಳ್ಳರು ಕೋಣೆಯ ಬಾಗಿಲಿನ್ನು ತೆಗೆದು ಒಳಗೆ ಇರಿಸಲಾಗಿದ್ದ ಅಡಿಕೆ ಕಳ್ಳತನ ಮಾಡಿದ್ದಾರೆ ಎಂದು ದೂರು ನೀಡಲಾಗಿದೆ. ಕಳ್ಳತನವಾದ ಅಡಿಕೆಯ ಮೌಲ್ಯ ಸುಮಾರು 20,000 ಎಂದು ಅಂದಾಜಿಸಲಾಗಿದ್ದು ವೇಣೂರು ಠಾಣೆಯಲ್ಲಿ ಪ್ರಕರಣ‌ದಾಖಲಿಸಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ‌.

ಉಪರಾಷ್ಟ್ರಪತಿ ಚುನಾವಣೆ ಎನ್.ಡಿ.ಎ ಅಭ್ಯರ್ಥಿ ರಾಧಾಕೃಷ್ಣನ್ ಗೆಲುವು

0

ಹೊಸದಿಲ್ಲಿ : ಉಪರಾಷ್ಟ್ರಪತಿ ಚುನಾವಣೆಯ ಫಲಿತಾಂಶ ಪ್ರಕಟವಾಗಿದ್ದು, ಎನ್‌ಡಿಎ ಅಭ್ಯರ್ಥಿ ಸಿಪಿ ರಾಧಾಕೃಷ್ಣನ್ ಗೆಲುವು ಸಾಧಿಸಿದ್ದಾರೆ. ಉಪರಾಷ್ಟ್ರಪತಿ ಚುನಾವಣೆಯಲ್ಲಿ ಎನ್‌ಡಿಎ ಅಭ್ಯರ್ಥಿ ಸಿಪಿ ರಾಧಾಕೃಷ್ಣನ್ ಮತ್ತು ವಿರೋಧ ಪಕ್ಷದ ಅಭ್ಯರ್ಥಿ ಬಿ ಸುದರ್ಶನ್ ರೆಡ್ಡಿ ಅವರ ಮಧ್ಯೆ ನೇರ ಸ್ಪರ್ಧೆ ನಡೆದಿತ್ತು. ಉಪರಾಷ್ಟ್ರಪತಿ ಚುನಾವಣೆಯಲ್ಲಿ 766 ಸಂಸದರು ಮತ ಚಲಾಯಿಸಿದ್ದಾರೆ. ಇದರಲ್ಲಿ ರಾಧಾಕೃಷ್ಣನ್ ಅವರಿಗೆ 452ಮತಗಳು ಲಭಿಸಿದೆ

ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ನಗರ ಸಮಿತಿಯ ಅಂಡಿಂಜೆ ಗ್ರಾಮದ ಬೂತ್ ಪ್ರಗತಿ ಸಭೆ

0

ಬೆಳ್ತಂಗಡಿ. ಬ್ಲಾಕ್ ಕಾಂಗ್ರೆಸ್ ನಗರ ಸಮಿತಿಯ ವತಿಯಿಂದ ಅಂಡಿಂಜೆ ಗ್ರಾಮದ ಬೂತ್ ಪ್ರಗತಿ ಸಭೆಯು ಕೊಕ್ರಾಡಿಯಲ್ಲಿ ನಡೆಯಿತು. ಸಭೆಯಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ಭಾಗವಹಿಸಿ ಬೂತ್ ಮಟ್ಟದಲ್ಲಿ ಸರ್ಕಾರದ ಕಾರ್ಯಕ್ರಮಗಳ ಬಗ್ಗೆ ಕಾರ್ಯಕ್ರಮಗಳನ್ನು ನಡೆಸುವುದು ಮತ್ತು ಸಾರ್ವಜನಿಕರ ಸಮಸ್ಯೆಗಳ ಬಗ್ಗೆ ಸ್ಪಂದಿಸುವ ಬಗ್ಗೆ ಮಾಹಿತಿಯನ್ನು ನೀಡಿದರು. ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ನಗರ ಸಮಿತಿಯ ಅಧ್ಯಕ್ಷರಾದ ಸತೀಶ್ ಕೆ ಕಾಶಿಪಟ್ನ, ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಅಧ್ಯಕ್ಷರಾದ ಪದ್ಮನಾಭ ಸಾಲಿಯನ್ ಮಾಲಾಡಿ, ಜಿಲ್ಲಾ ಗ್ಯಾರೆಂಟಿ ಯೋಜನೆಗಳ ಅನುಷ್ಟಾನ ಸಮಿತಿಯ...

ಧರ್ಮಸ್ಥಳ ವಿರುದ್ದ ಅಪಪ್ರಚಾರ,ಷಡ್ಯಂತ್ರ  ಸೂಕ್ತ ತನಿಖೆಗೆ ಆಗ್ರಹಿಸಿ ಕೇಂದ್ರ ಗೃಹ ಸಚಿವರಾದ ಅಮಿತ್ ಶಾರವರನ್ನು ಭೇಟಿ ಮಾಡಿದ ರಾಜ್ಯ ಬಿಜೆಪಿ ನಿಯೋಗ.

0

ಬೆಳ್ತಂಗಡಿ;  ಧರ್ಮಸ್ಥಳದ ಷಡ್ಯಂತರದ ಬಗ್ಗೆ ಸೆಪ್ಟೆಂಬರ್ 08 ರಂದು ಬಿಜೆಪಿ ರಾಜ್ಯ ಅಧ್ಯಕ್ಷರಾದ ವಿಜಯೇಂದ್ರ ಯಡಿಯೂರಪ್ಪ ಅವರ ನೇತೃತ್ವದಲ್ಲಿ ಶಾಸಕ ಹರೀಶ್ ಪೂಂಜ ಹಾಗೂ ಇತರ ಮುಖಂಡರ ನಿಯೋಗ   ಕೇಂದ್ರ ಗೃಹ ಸಚಿವರಾದ ಅಮಿತ್ ಶಾ ಅವರನ್ನು ದೆಹಲಿಯಲ್ಲಿ ಭೇಟಿಯಾಗಿ ಶ್ರೀ ಕ್ಷೇತ್ರ ಧರ್ಮಸ್ಥಳದ ಮೇಲೆ ಆಗುತ್ತಿರುವ ಅಪಪ್ರಚಾರ, ಷಡ್ಯಂತ್ರದ ಹಿಂದೆ ಇರುವ ಕಾಣದ ಕೈಗಳನ್ನು ಸೂಕ್ತ ತನಿಖೆ  ನಡೆಸಿ ಕ್ರಮ ಕೈಗೊಳ್ಖಬೇಕಾಗಿ ವಿನಂತಿಸಿದರು.ಈ ಸಂದರ್ಭದಲ್ಲಿ ರಾಜ್ಯ  ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಷಿ, ವಿಧಾನಪರಿಷತ್ ಪ್ರತಿಪಕ್ಷದ ನಾಯಕರದ ಛಲವಾದಿ.ಟಿ. ನಾರಾಯಣಸ್ವಾಮಿ, ವಿಧಾನಸಭಾ ಪ್ರತಿಪಕ್ಷ...

ಬೆಳ್ತಂಗಡಿ : ಎಸ್.ಐ.ಟಿ ವಿಚಾರಣೆಗೆ ಮಟ್ಟಣನವರ್ ಜಯಂತ್ ಸೇರಿ ಆರು ಮಂದಿ ಹಾಜರು

0

ಬೆಳ್ತಂಗಡಿ: ಬುರುಡೆ ಪ್ರಕರಣದ ತನಿಖೆಗಾಗಿ ಯ್ಯೂಟ್ಯೂಬರ್ ಗಳಾದ ಕೇರಳದ ಮನಾಫ್, ಅಭಿಷೇಕ್, ಜಯಂತ್.ಟಿ, ಗಿರೀಶ್ ಮಟ್ಟಣ್ಣವರ್, ವಿಠಲ್ ಗೌಡ, ಪ್ರದೀಪ್ ಎಸ್ಐಟಿ ವಿಚಾರಣೆಗೆ ಸೆ.9 ರಂದು ಬೆಳಗ್ಗೆ ಹಾಜರಾಗಿದ್ದಾರೆ. ಧರ್ಮಸ್ಥಳ ಪ್ರಕರಣ ಸಂಬಂಧಿಸಿದಂತೆ ಆರನೇ ದಿನದ ವಿಚಾರಣೆಗೆ ಎಸ್ಐಟಿ ಕಚೇರಿಗೆ ಎಲ್ಲರನ್ನೂ ವಿಚಾರಣೆಗೆ ಕರೆಸಿದ್ದರಿಂದ ನಿನ್ನೆ ಹಿಂಬದಿ ದಾರಿ ಹಿಡಿದಿದ್ದ‌ ಜಯಂತ್ ಇಂದು ಮುಂಭಾಗದ ಹಾದಿಯಿಂದಲೇ ಬಂದಿದ್ದಾರೆ. ಆದರೆ ಯಾವುದೇ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ. ಇವರೊಂದಿಗೆ ಸಂಬಂಧಿಯಾಗಿರುವ ಸಿಂಧೂ ದೇವಿ ಕೂಡ ಎಸ್ಐಟಿ ಕಚೇರಿ ವರೆಗೆ ಬಂದು ಬಳಿಕ ಹಿಂದಿರುಗಿದ್ದಾರೆ. ಇನ್ನೂ ಕೇರಳದ ಯ್ಯೂಟ್ಯೂಬ್ ರ್...