ನಡ ಮಂಜೊಟ್ಟಿ; ಬಿ.ಕೆ ಹರಿಪ್ರಸಾದ್ ಅನುದಾನದಲ್ಲಿ ನಿರ್ಮಾಣ ವಾದ ಆಟೋ ನಿಲ್ದಾಣ ಉದ್ಘಾಟನೆ
ಬೆಳ್ತಂಗಡಿ: ನಡ ಗ್ರಾಮದ ಮೇಲಿನ ಮಂಜೊಟ್ಟಿಯಲ್ಲಿ ವಿಧಾನ ಪರಿಷತ್ ಸದಸ್ಯರಾದ ಶ್ರೀ ಬಿ.ಕೆ ಹರಿಪ್ರಸಾದ್ ರವರ 2024 25 ನೇ ಸಾಲಿನ ಕರ್ನಾಟಕ ಶಾಸಕರ ಸ್ಥಳೀಯ ಪ್ರದೇಶ ಅಭಿವೃದ್ಧಿ ಯೋಜನೆಯಡಿ ನಿರ್ಮಾಣವಾದ ಆಟೋ ನಿಲ್ದಾಣದ ನವನ್ನು ನಡ ಗ್ರಾಮ ಪಂಚಾಯತ್ ಅಧ್ಯಕ್ಷರು ಆದ ಕೆ ಮಂಜುಳಾ ಇವರು ಉದ್ಘಾಟನೆ ಮಾಡಿದರು.ಕೆ ಪಿ ಸಿ ಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಮ್ ಇವರು ನಮ್ಮ ತುಳುನಾಡ್ ಧ್ವಜಾರೋಹಣ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.ಜಾಮಿಯಾ ಮಸ್ಜಿದ್ ಜಮಲಾಬಾದ್ ಇದರ ಅಧ್ಯಕ್ಷರು ಆದ ಸಯ್ಯದ್ ಹಬೀಬ್...
ಎಸ್.ಐ.ಟಿ ರಚಿಸಿ ಸರಕಾರ ಸತ್ಯ ಹೊರ ಬರುವಂತೆ ಮಾಡಿದೆ; ದ್ವೇಷ ಯಾಕೆಂದು ಗೊತ್ತಾಗುತ್ತಿಲ್ಲ ಡಾ.ಡಿ ವೀರೇಂದ್ರ ಹೆಗ್ಗಡೆಯವರು
ಬೆಳ್ತಂಗಡಿ: ರಾಜ್ಯ ಸರಕಾರ ಎಸ್‌ಐಟಿ ರಚನೆ ಮಾಡಿದ ಕಾರಣ ಸತ್ಯ ಹೊರ ಬರುತ್ತಿದೆ ಈ ಕಾರಣಕ್ಕೆಸರ್ಕಾರಕ್ಕೆ ನಾನು ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ ಡಿವೀರೇಂದ್ರ ಹೆಗ್ಗಡೆ ಹೇಳಿದರು.ಶುಕ್ರವಾರ (ಸೆ.26) ಧರ್ಮಸ್ಥಳ ಗ್ರಾಮದ ಭಕ್ತರಿಂದ ನಡೆದ ವಿಶೇಷ ಪೂಜೆಯ ಬಳಿಕ ಶ್ರೀ ಕ್ಷೇತ್ರದ ಅಮೃತವರ್ಷಿಣಿ ಸಭಾಂಗಣದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಶತ್ರುತ್ವ ಯಾಕೆ ಬಂತು ಎಂದು ನಮಗೆ ಗೊತ್ತಿಲ್ಲ. ಇಷ್ಟು ಹಗೆತನ, ಅಪವಾದ ಯಾಕೆ ಬಂತೆಂದು ಗೊತ್ತಿಲ್ಲ. ನಾವು ಸೇವೆ ಮಾಡುತ್ತೇವೆ, ಆದರೆ ಸೇವೆ ಪ್ರಚಾರದ ವಸ್ತುವಲ್ಲ. ಇಷ್ಟು ವರ್ಷ...
ಲಾಯಿಲ; ಟಿಪ್ಪರ್ ಹಾಗೂ ಕಾರಿನ ನಡುವೆ ಅಪಘಾತ
ಬೆಳ್ತಂಗಡಿ: ಲಾಯಿಲ ಗ್ರಾಮದ ಕಾಶಿಬೆಟ್ಟು ಬಳಿ ಟಿಪ್ಪರ್ ಹಾಗೂ ಕಾರು ನಡುವೆ ಅಪಘಾತವಾದ ಘಟನೆ ಇಂದು (ಸೆ.26) ನಡೆದಿದ್ದು ಕಾರು ಚಾಲಕ ಗಂಭೀರವಾಗಿ ಗಾಯಗೊಂಡಿದ್ದಾರೆ. ಅತೀ ವೇಗದ ಚಾಲನೆಯಿಂದಾಗಿ ಅಪಘಾತವಾಗಿರುವುದಾಗಿ ತಿಳಿದು ಬಂದಿದೆ.ಉಜಿರೆ ಕಡೆಗೆ ಹೋಗುತ್ತಿದ್ದ ಕಾರು ಹಾಗೂ ಬೆಳ್ತಂಗಡಿ ಕಡೆಗೆ ಬರುತ್ತಿದ್ದ ಟಿಪ್ಪರ್ ನಡುವೆ ಅಪಘಾತ ಸಂಭವಿಸಿದೆ. ಅಪಘಾತದ ತೀವ್ರತೆಗೆ ಕಾರು ಚಾಲಕನಿಗೆ ಗಂಭೀರ ಗಾಯಗೊಂಡಿದ್ದು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.ಕಾರು ಸಂಪೂರ್ಣ ನುಜ್ಜುಗುಜ್ಜಾಗಿದೆ.
ಉಜಿರೆ ರಬ್ಬರ್ ಸೊಸೈಟಿ ಅಧ್ಯಕ್ಷರಾಗಿ ಶ್ರೀಧರ ಜಿ ಭಿಡೆ ಉಪಾಧ್ಯಕ್ಷರಾಗಿ ಅನಂತ ಭಟ್ ಆಯ್ಕೆ
ಬೆಳ್ತಂಗಡಿ; ಉಜಿರೆ ರಬ್ಬರ್ ಬೆಳೆಗಾರರ ಮಾರಾಟ ಮತ್ತು ಸಂಸ್ಕರಣ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಸತತ6ನೇ ಬಾರಿಗೆ ಶ್ರೀಧರ ಜಿ.ಭಿಡೆ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿಅನಂತ ಭಟ್ ಮಚ್ಚಿಮಲೆ ಅವರು ಎರಡನೆ ಬಾರಿಗೆಅವಿರೋಧವಾಗಿ ಆಯ್ಕೆಯಾಗಿದ್ದಾರೆಸೆ.26ರಂದು ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆ ನಡೆಯಿತು. ಸಂಘದ ನಿರ್ದೇಶಕರ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಎಲ್ಲರೂ ಅವಿರೋಧವಾಗಿ ಆಯ್ಕೆಯಾಗಿದ್ದರು. ಚುನಾವಣಾ ಪ್ರಕ್ರಿಯೆಯಲ್ಲಿ ಸಂಘದ ನಿರ್ದೇಶಕರುಗಳು ಭಾಗಿಗಳಾದರು
ಬೆಳ್ತಂಗಡಿ : ಮಹೇಶ್ ಶೆಟ್ಟಿ ತಿಮರೋಡಿ ಮನೆಗೆ ನೋಟೀಸ್ ಅಂಟಿಸಿದ ಪೊಲೀಸರು. ಮೂರನೇ ನೋಟಿಸ್ ಜಾರಿ
ಬೆಳ್ತಂಗಡಿ : ಅಕ್ರಮವಾಗಿ ಎರಡು ತಲವಾರು ಮತ್ತು ಒಂದು ಬಂದೂಕು ಪತ್ತೆ ಪ್ರಕರಣದಲ್ಲಿ ಮಹೇಶ್ ಶೆಟ್ಟಿ ತಿಮರೋಡಿ ಬೆಳ್ತಂಗಡಿ ಪೊಲೀಸ್ ಠಾಣೆಗೆ ವಿಚಾರಣೆಗಾಗಿ ಹಾಜರಾಗುವಂತೆ ಎರಡು ನೋಟಿಸ್ ಜಾರಿ ಮಾಡಿದ್ದರೂ ಈವರೆಗೆ ಹಾಜರಾಗದ ಕಾರಣ ಮತ್ತೆ ಸೆ.26 ರಂದು ತಿಮರೋಡಿ ಮನೆಗೆ ಬೆಳ್ತಂಗಡಿ ಪೊಲೀಸರು ಮೂರನೇ ನೋಟೀಸ್ ಜಾರಿ ಮಾಡಿದ್ದು ಸೆ.29 ಕ್ಕೆ ವಿಚಾರಣೆಗೆ ಹಾಜರಾಗುಂತೆ ನೋಟಿಸ್ ಅನ್ನು ತಿಮರೋಡಿ ಅವರ ಮನೆಯ ಗೋಡೆಗೆ ಅಂಟಿಸಿದ್ದಾರೆ.ಮಹೇಶ್ ಶೆಟ್ಟಿ ತಿಮರೋಡಿ ಅವರು ಅಕ್ರಮ ಶಸ್ತ್ರಾಸ್ತ್ರ ಪ್ರಕರಣದಲ್ಲಿ ಜಾಮೀನಿಗಾಗಿ ಮಂಗಳೂರಿನ ಸೆಷನ್ ಕೋರ್ಟ್ ನಲ್ಲಿ ಅರ್ಜಿ...
ದಿನವಿಡೀ ನಡೆದರೂ ಮುಗಿಯದ ಚಿನ್ನಯ್ಯನ ಹೇಳಿಕೆ; ಸೆ.27ರಂದು ಮತ್ತೆ ಹೇಳಿಕೆ
ಬೆಳ್ತಂಗಡಿ; ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಕ್ಷಿ ದೂರುದಾರನಾಗಿ ಬಂದು ಆರೋಪಿಯಾದ ಚಿನ್ನಯ್ಯನ ಹೇಳಿಕೆ ದಾಖಲಿಸುವ ಕಾರ್ಯ ಬೆಳ್ತಂಗಡಿ ನ್ಯಾಯಾಲಯದಲ್ಲಿ ಸೆ25ರಂದು ನಡೆಯಿತು. ದಿನವಿಡೀ ಆತನ ಹೇಳಿಕೆಯನ್ನು ದಾಖಲಿಸುವ ಕಾರ್ಯವನ್ನು ನ್ಯಾಯಾಧೀಶರು ನಡೆಸಿದ್ದು ಇಂದೂ ಆತನ ಹೇಳಿಕೆ ಪೂರ್ಣಗೊಳ್ಳದ ಹಿನ್ನಲೆಯಲ್ಲಿ ಸೆ.27 ರಂದು ಮತ್ತೆ ಹೇಳಿಕೆ ದಾಖಲಿಸಲು ಆತನನ್ನು ಹಾಜರು ಪಡಿಸುವಂತೆ ನ್ಯಾಯಾಧೀಶರು ಸೂಚಿಸಿದ್ದಾರೆ.ಚಿನ್ನಯ್ಯನನ್ನು ಸೆ. 23 ರಂದು ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರು ಪಡಿಸಿ ಮುಚ್ಚಿದ ಕೋಣೆಯಲ್ಲಿ ಹೇಳಿಕೆ ದಾಖಲಿಸುವ ಕಾರ್ಯ ಮಾಡಲಾಗಿತ್ತು. ಆಗ ಹೇಳಿಕೆ ಪೂರ್ಣಗೊಳ್ಳದ ಹಿನ್ನಲೆಯಲ್ಲಿ ಸೆ.25 ರಂದು ದಿನ ನಿಗಧಿ...
ಬೆಳ್ತಂಗಡಿ : ಬುರುಡೆ ಚಿನ್ನಯ್ಯ ಕೋರ್ಟ್ ಗೆ ತಂದಿದ್ದ ಬುರುಡೆ ಪೋಟೋ ವೈರಲ್
ಬೆಳ್ತಂಗಡಿ : ಬುರುಡೆ ಚಿನ್ನಯ್ಯ ಹೇಳಿಕೆ ಕೋರ್ಟ್ ಗೆ ಬರುವಾಗ ತಂದಿದ್ದ ಬರುಡೆಯ ಫೋಟೋ ಇದೀಗ ವೈರಲ್ ಅಗಿದೆ. ಹಲವಾರು ಮೃತದೇಹ ಹೂತು ಹಾಕಿರುವುದಾಗಿ ಹೇಳಿ ದೂರು ನೀಡಿದ್ದ ಚಿನ್ನಯ್ಯ ಸುಪ್ರೀಂ ಕೋರ್ಟ್ ಗೆ ಅರ್ಜಿ ಸಲ್ಲಿಸುವ ವೇಳೆ ತೆಗೆದ ಫೋಟೋ ಇದೀಗ ವೈರಲ್ ಅಗಿದೆ.
ಬೆಳ್ತಂಗಡಿ : ಬಂಗ್ಲೆಗುಡ್ಡೆಯಲ್ಲಿ ಪತ್ತೆಯಾದ ಅಸ್ಥಿಪಂಜರ ಡ್ರೈವಿಂಗ್ ಲೈಸನ್ಸ್ ಮೂಲಕ ಮತ್ತೊಬ್ಬನ ಗುರುತು ಪತ್ತೆ ಹಚ್ಚಿದ ಎಸ್.ಐ.ಟಿ
ಬೆಳ್ತಂಗಡಿ : ಬಂಗ್ಲೆಗುಡ್ಡೆ ಪ್ರದೇಶದಲ್ಲಿ ಸೆ.17 ಮತ್ತು 18 ರಂದು ಎಸ್.ಐ.ಟಿ ನಡೆಸಿದ ಕಾರ್ಯಾಚರಣೆ ವೇಳೆ ಪತ್ತೆಯಾದ ಏಳು ಅಸ್ಥಿಪಂಜರದಲ್ಲಿ ಒಂದು ಅಸ್ಥಿಪಂಜರದ ಗುರುತನ್ನು ಎರಡನೇ ದಿನದಲ್ಲಿ ಐಡಿ ಕಾರ್ಡ್ ಮೂಲಕ ಕುಟುಂಬ ಸದಸ್ಯರನ್ನು ಪತ್ತೆಹಚ್ಚಲಾಗಿತ್ತು. ಇದೀಗ ಮತ್ತೊಬ್ಬನ ಐಡಿ ಕಾರ್ಡ್ ಮೂಲಕ ಕುಟುಂಬ ಸದಸ್ಯರನ್ನು ಎಸ್.ಐ.ಟಿ ಪತ್ತೆ ಹಚ್ಚಿ ಕಚೇರಿಗೆ ಕರೆದು ಮಾಹಿತಿ ಕಲೆ ಹಾಕಿದೆ. 2-10-2013 ರಂದು ಬೆಂಗಳೂರು ಬಾರ್ ಕೆಲಸಕ್ಕೆ ಹೋಗುತ್ತಿದ್ದ ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ದಾಸರಕಲ್ಲಹಳ್ಳಿ ನಿವಾಸಿ ಬೋಜಪ್ಪ ಮತ್ತು ಚೆನ್ನಮ್ಮ ಮೂರನೇ ಮಗ ಆದಿಶೇಷ ನಾರಾಯಣ(27)...
ಬಿಜೆಪಿ ಬೆಳ್ತಂಗಡಿ ಮಂಡಲದ ವತಿಯಿಂದ ಪಕ್ಷದ ಕಚೇರಿಯಲ್ಲಿ ಜನ ಸಂಘದ ಸಂಸ್ಥಾಪಕರಾದ ಪಂಡಿತ್ ದೀನ್ ದಯಾಳ್ ಉಪಾಧ್ಯಾಯರ ಜನ್ಮದಿನಾಚರಣೆ
ಬೆಳ್ತಂಗಡಿ :ಭಾರತೀಯ ಜನತಾ ಪಾರ್ಟಿ ಬೆಳ್ತಂಗಡಿ ಮಂಡಲ ವತಿಯಿಂದ ಅಪ್ರತಿಮ ಸಂಘಟಕ, ಏಕಾತ್ಮ ಮಾನವತೆಯ ಪ್ರತಿಪಾದಕರು, ಅಗ್ರಪಂಕ್ತಿಯ ಲೇಖಕರು, ರಾಷ್ಟ್ರವಾದಿ, ದಾರ್ಶನಿಕರು, ಮಾರ್ಗದರ್ಶಕರು ಜನ ಸಂಘದ ಸಂಸ್ಥಾಪಕರಾದ ಪಂಡಿತ್ ದೀನ್ ದಯಾಳ್ ಉಪಾಧ್ಯಾಯರ ಜನ್ಮದಿನಾಚರಣೆಯನ್ನು ಸೆ 25 ರಂದು ಪಕ್ಷದ ಕಚೇರಿಯಲ್ಲಿ ಆಚರಿಸಲಾಯಿತು. ದೀನ್ ದಯಾಳ್ ಉಪಾಧ್ಯಯರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ, ಸಿಹಿ ಹಂಚಲಾಯಿತು. ಬೆಳ್ತಂಗಡಿ ಬಿಜೆಪಿ ಮಂಡಲಾಧ್ಯಕ್ಷರಾದ ಶ್ರೀನಿವಾಸ್ ರಾವ್ ಧರ್ಮಸ್ಥಳ ಇವರು ದೀನ್ ದಯಾಳ್ ಉಪಾಧ್ಯಾಯರ ವ್ಯಕ್ತಿತ್ವ, ಸಾಧನೆಗಳ ಬಗ್ಗೆ ಸಂದರ್ಭೋಚಿತವಾಗಿ ಮಾತಾಡಿದರು. ಈ ಸಂದರ್ಭದಲ್ಲಿ ಮಂಡಲ ಪ್ರಧಾನ ಕಾರ್ಯದರ್ಶಿ...
ಬೆಳ್ತಂಗಡಿ :ಧರ್ಮಸ್ಥಳ ಬುರುಡೆ ಪ್ರಕರಣ ಚಿನ್ನಯ್ಯ ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರು ಹೇಳಿಕೆ ದಾಖಲು ಪ್ರಕ್ರಿಯೆಗೆ ಚಾಲನೆ
ಬೆಳ್ತಂಗಡಿ : ಧರ್ಮಸ್ಥಳ ಬುರುಡೆ ಪ್ರಕರಣದ ಆರೋಪಿ ಚಿನ್ನಯ್ಯನ್ನು BNSS 183 ಹೇಳಿಕೆ ನೀಡಲು ಬೆಳ್ತಂಗಡಿ ನ್ಯಾಯಾಲಯಕ್ಕೆ ಸೆ.25 ರಂದು 11 ಗಂಟೆಗೆ ಶಿವಮೊಗ್ಗ ಜೈಲಿನಿಂದ ಕರೆದುಕೊಂಡು ಬಂದಿದ್ದು 12 ಗಂಟೆಗೆ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದಾರೆ. ನ್ಯಾಯಾಧೀಶರು ಈತನ ಹೇಳಿಕೆ ದಾಖಲಿಸುವ ಕಾರ್ಯ ಆಭಿಸಿದ್ದಾರೆ.ಇಂದು ನ್ಯಾಯಾಲಯದಲ್ಲಿ ಸಂಜೆಯವರೆಗೆ ಚಿನ್ನಯ್ಯನ ಹೇಳಿಕೆಯನ್ನು ನ್ಯಾಯಾಧೀಶರು ದಾಖಲು ಮಾಡಲಿದ್ದಾರೆ. ಏನಿದು ಹೇಳಿಕೆ ಇದಕ್ಕಿರುವ ಮಹತ್ವವೇನು?ಸಾಕ್ಷಿ ದೂರುದಾರನಾಗಿ ಬಂದಿದ್ದ ಚಿನ್ನಯ್ಯ ಪ್ರಕರಣದಲ್ಲಿ ಆರೋಪಿಯಾಗಿ ಬದಲಾಗಿದ್ದಾನೆ.ಆರಂಭದಲ್ಲಿ ತನ್ನ ನ್ಯಾಯವಾದಿಗಳೊಂದಿಗೆ ಬಂದಿದ್ದ ಚಿನ್ನಯ್ಯ ತಾನು ಧರ್ಮಸ್ಥಳ ಗ್ರಾಮದ ವಿವಿದೆಡೆ ನೂರಾರು ಮೃತದೇಹಗಳನ್ನು ಕಾನೂನುಬಾಹಿರವಾಗಿ...















