ಬೆಳ್ತಂಗಡಿ ಅಗ್ನಿ ಆಕಸ್ಮಿಕ ಸ್ಥಳಕ್ಕೆ ರಕ್ಷಿತ್ ಶಿವರಾಂ ಭೇಟಿ
ಬೆಳ್ತಂಗಡಿ; ನಗರದ ಸಂತೆಕಟ್ಟೆಯಲ್ಲಿ ಅಗ್ನಿ ಆಕಸ್ಮಿಕ ಸಂಭವಿಸಿದ ಕಟ್ಟಡಕ್ಕೆ ಕೆ.ಪಿ.ಸಿ.ಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ಅವರು ಭೇಟಿ ನೀಡಿ ಅಂಗಡಿ ಮಾಲಕರೊಂದಿಗೆ ಮಾತುಕತೆ ನಡೆಸಿ ಸ್ವಾಂತನ ಹೇಳಿದರು.ಬಳಿಕ ಆಸ್ಪತ್ರೆಗೆ ಭೇಟಿ ನೀಡಿ ಘಟನೆಯಲ್ಲಿ ಗಾಯಗೊಂಡವರನ್ನು ಭೇಟಿಯಾಗಿ ಸಾಂತ್ವನ ಹೇಳಿದರು.ಇಂದು ಬೆಳಗ್ಗೆ ನಗರದ ಸಂತೆಕಟ್ಟೆಯ ಹೆರಾಜೆ ಕಾಂಪ್ಲೆಕ್ಸ್ ನಲ್ಲಿ ಹೀಲಿಯಂ ಗ್ಯಾಸ್ ಸೋರಿಕೆಯಾಗಿ ಭಾರೀ ಅನಾಹುತ ಸಂಭವಿಸಿತ್ತು.
ಉಜಿರೆ ತನುಷ್ ಶೆಟ್ಟಿ ದೂರು ಜಿತೇಂದ್ರ ಕೊಟ್ಟಾರಿ ವಿರುದ್ದ ಪ್ರಕರಣದಾಖಲಿಸಲು ನ್ಯಾಯಾಲಯ ಆದೇಶ
ಬೆಳ್ತಂಗಡಿ; ಉಜಿರೆಯ ತನುಷ್ ಶೆಟ್ಟಿ ಹಾಗೂ ಇತರರು ನೀಡಿದ ಖಾಸಗಿ ದೂರನ್ನು ಪುರಸ್ಕರಿಸಿ ಮಂಗಳೂರಿನ ಉದ್ಯಮಿ ಜಿತೇಂದ್ರ ಕೊಟ್ಟಾರಿ ಅವರ ವಿರುದ್ದ ಪ್ರಕರಣ ದಾಖಲಿಸುವಂತೆ ನ್ಯಾಯಾಲಯ ಆದೇಶ ನೀಡಿದ್ದು ಅದರಂತೆ ಇದೀಗಮಂಗಳೂರು ಪೊಲೀಸರು ಜಿತೇಂದ್ರ ಕೊಟ್ಟಾರಿ ಅವರ ವಿರುದ್ದ ಪ್ರಕರಣ ದಾಖಲಿಸಿದ್ದಾರೆ. ಘಟನೆಯ ಹಿನ್ನಲೆಮಂಗಳೂರಿನಲ್ಲಿ 2024ರ ಅ 9ರಂದು ಮಂಗಳೂರಿನಲ್ಲಿ ವಾಹನ ಚಾಲನೆಯ ವೇಳೆ ಓವರ್ ಟೇಕ್ ಮಾಡುವ ವಿಚಾರಕ್ಕೆ ಸಂಬಂಧಿಸಿದಂತೆ ಉದ್ಯಮಿ ಜಿತೇಂದ್ರಕೊಟ್ಟಾರಿ ಹಾಗೂ ತನುಷ್ ನಡುವೆ ವಾಗ್ವಾದ ನಡೆದಿದ್ದು ಈ ವೇಳೆ ಜಿತೇಂದ್ರ ಕೊಟ್ಟಾರಿ ಪಿಸ್ತೂಲು ತೆಗೆದು ಕೊಲೆ ಬೆದರಿಕೆ ಹಾಕಿದರು...
ಬೆಳ್ತಂಗಡಿ : KAF ಕ್ರಿಯೇಟಿವ್ ಶಾಪ್ ನಲ್ಲಿ ಗ್ಯಾಸ್ ಸೋರಿಕೆ ಸ್ಪೋಟ; ಬೆಂಕಿಗೆ ವ್ಯಾಪಕ ನಾಶ
ಬೆಳ್ತಂಗಡಿ : ಹೀಲಿಯಂ ಗ್ಯಾಸ್ ಸೋರಿಕೆಯಿಂದ ಉಂಟಾದ ಬೆಂಕಿಯಿಂದ ಅಂಗಡಿ ಸುಟ್ಟು ಭಸ್ಮವಾದ ಘಟನೆ ಬೆಳ್ತಂಗಡಿಯಲ್ಲಿ ನಡೆದಿದೆ. ಬೆಳ್ತಂಗಡಿ ನಗರದ ಸಂತೆಕಟ್ಟೆಯಲ್ಲಿರುವ ಹೇರಾಜೆ ಕಾಂಪ್ಲೆಕ್ಸ್ ನಲ್ಲಿ ಮೊದಲ ಮಹಡಿಯ ಮೊಹಮ್ಮದ್ ಸಮೀಲ್ ಎಂಬವರ ಮಾಲೀಕತ್ವದ KAF ಕ್ರಿಯೇಟಿವ್ ಅರ್ಟ್ & ಕ್ರಾಫ್ಟ್ ಸ್ಟೋರ್ ನಲ್ಲಿ ಇಬ್ಬರು ಕೆಲಸದವರು ಫೆ.14 ರಂದು ಬೆಳಗ್ಗೆ 7:30 ಕ್ಕೆ ಕಾರ್ಯಕ್ರಮವೊಂದಕ್ಕೆ ಬಲೂನ್ ಗಳಿಗೆ ಗ್ಯಾಸ್ ತುಂಬಿಸುವಾಗ ಹೀಲಿಯಂ ಗ್ಯಾಸ್ ಸೋರಿಕೆಯಾಗಿ ಬೆಂಕಿ ಉಂಟಾಗಿ ಸಂಪೂರ್ಣ ಸುಟ್ಟು ಹೋಗಿದೆ. ಘಟನೆ ವೇಳೆ ಅಂಗಡಿಯೊಳಗೆ ಇಬ್ಬರು ಕೆಲಸದವರು ಇದ್ದು ತಕ್ಷಣ ಹೊರಗಡೆ ಓಡಿ...
ಕನ್ಯಾಡಿ ಬೆಂಕಿ ಆಕಸ್ಮಿಕದಲ್ಲಿ ಗಾಯಗೊಂಡಿದ್ದ ಮಹಿಳೆ ಮೃತ್ಯು
ಬೆಳ್ತಂಗಡಿ; ಬಚ್ವಲು ಮನೆಯಲ್ಲಿ ಒಲೆಗೆ ಬೆಂಕಿ ಹಚ್ಚುವ ವೇಳೆ ಬಟ್ಟೆಗೆ ಬೆಂಕಿತಗುಲಿ ಗಂಭೀರವಾಗಿ ಗಾಯಗೊಂಡಿದ್ದ ಮಹಿಳೆ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟ ಘಟನೆ ಸಂಭವಿಸಿದೆ.ಮೃತ ಮಹಿಳೆ ನಡ ಕನ್ಯಾಡಿ ನಿವಾಸಿ ಮಂಜಪ್ಪ ನಾಯ್ಕ ಎಂಬವರ ಪತ್ನಿ ಮೀನಾಕ್ಷಿ (63) ಎಂಬವರಾಗಿದ್ದಾರೆ.ಇವರು ಫೆ. 7ರಂದು ಮನೆಯ ಬಚ್ಚಲು ಕೋಣೆಯಲ್ಲಿ ನೀರು ಬಿಸಿ ಮಾಡಲು ಬೆಂಕಿ ಹಚ್ಚುವ ವೇಳೆ ಆಕಸ್ಮಿಕವಾಗಿ ಬಟ್ಟೆಗೆ ಬೆಂಕಿ ತಗುಲಿದೆ ಇವರು ಗಂಭೀರವಾಗಿ ಗಾಯಗೊಂಡಿದ್ದು ಕೂಡಲೇ ಅವರನ್ನು ಬೆಳ್ತಂಗಡಿ ಆಸ್ಪತ್ರೆಗೆ ದಾಖಲಿಸಿ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿದರೂ...
ಬೆಳ್ತಂಗಡಿ; ರೆಖ್ಯ ದರೋಡೆ ಪ್ರಕರಣ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ
ಬೆಳ್ತಂಗಡಿ: ರೆಖ್ಯ ಗ್ರಾಮದಲ್ಲಿ ನಡೆದ ದರೋಡೆ ಪ್ರಕರಣಕ್ಲೆ ಸಂಬಂಧಿಸಿದಂತೆ ನ್ಯಾಯಾಲಯಕ್ಕೆ ಹಾಜರಾಗದೆ ತಲೆ ಮರೆಸಿಕೊಂಡಿದ್ದ ಆರೋಪಿಯನ್ನು ಧರ್ಮಸ್ಥಳ ಪೊಲೀಸರು ಬಂಧಿಸಿದ್ದಾರೆ.ಬಂಧಿತ ಆರೋಪಿ ನಂಜುಂಡ ಮಾಗಡಿ ಎಂಬಾತನಾಗಿದ್ದಾನೆ2017 ರಲ್ಲಿ ರೆಖ್ಯಾ ಎಂಬಲ್ಲಿ ನಡೆದ ದರೋಡೆ ಪ್ರಕರಣದ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣಾ ಅ.ಕ್ರ. 65/2017 ಕಲಂ, 397. 395 ಜೊತೆಗೆ 34 ಐಪಿಸಿ ಪ್ರಕರಣದಲ್ಲಿ ಆರೋಪಿಯಾದ ಈತ ಕಳೆದ ಸುಮಾರು 5 ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದಾ ಈತನನ್ನು ಬೆಂಗಳೂರು ಗಿಡ್ಡೆನಹಳ್ಳಿ ಎಂಬಲ್ಲಿಂದ ದಸ್ತಗಿರಿ ಮಾಡಿ ಫೆ.13 ರಂದು ನ್ಯಾಯಲಯಕ್ಕೆ ಹಾಜರುಪಡಿಸಿದ್ದು ಮಾನ್ಯ ನ್ಯಾಯಲಯವು...
13 ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆ ಮರೆಸಿಕೊಂಡಿದ್ದ ಆರೋಪಿಯ ಬಂಧನ
ಬೆಳ್ತಂಗಡಿ; ನ್ಯಾಯಾಲಯಕ್ಕೆ ಹಾಜರಾಗದೆ ಕಳೆದ 13 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಪೂಂಜಾಲಕಟ್ಟೆ ಪೊಲೀಸರು ಬಂಧಿಸಿದ್ದಾರೆ.ಬಂಧಿತ ಆರೋಪಿ ಆಲ್ವಿನ್ ರಾಡ್ರಿಗಸ್(53) ಎಂಬಾತನಾಗಿದ್ದಾನೆಆರೋಪಿ 2013ರಲ್ಲಿ ಮಡಂತ್ಯಾರು ನಿವಾಸಿ ಚಿತ್ರಶೇಖರ್ ಎಂಬವರ ಮೇಲೆ ಹಲ್ಲೆ ನಡೆಸಿದ್ದು ಈ ಬಗ್ಗೆ ಪೂಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.ಆರೋಪಿ ನ್ಯಾಯಾಲಯಕ್ಕೆ ಹಾಜರಾಗದೆ ಕಳೆದ 13ವರ್ಷಗಳಿಂದ ತಲೆ ಮರೆಸಿಕೊಂಡಿದ್ದ ಈತನನ್ನು ಪೊಲೀಸರು ಬೆಂಗಳೂರಿನ ಸಂಪಿಗೆ ರಾಮನಗರದಲ್ಲಿ ಬಂಧಿಸಿದ್ದಾರೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದ್ದು ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿದೆ.
ಧರ್ಮಸ್ಥಳ ಪ್ರಕರಣ ವಿಚಾರಣೆ ಮಾ.5 ಕ್ಕೆ ಮದೂಡಿಕೆ
ಬೆಳ್ತಂಗಡಿ; ಧರ್ಮಸ್ಥಳ ಪ್ರಕರಣದಲ್ಲಿ ಎಸ್.ಐ.ಟಿ ವರದಿ ಹಾಗೂ ಶ್ರೀಕ್ಷೇತ್ರ ಧರ್ಮಸ್ಥಳದವರನ್ನು ಸಂತ್ರಸ್ತರು ಎಂದು ಪರಿಗಣಿಸಬೇಕು ಎಂಬ ಅರ್ಜಿಯ ವಿಚಾರಣೆಯನ್ನು ಮಾ.5ಕ್ಕೆ ಮುಂದೂಡಲಾಗಿದೆಬೆಳ್ತಂಗಡಿ ನ್ಯಾಯಾಲಯದಲ್ಲಿ ಫೆ. 13ರಂದು ಪ್ರಕರಣದ ವಿಚಾರಣೆಗೆ ದಿನ ನಿಗದಿಯಾಗಿತ್ತು ಇಂದು ಮಹೇಶ್ ಶೆಟ್ಟಿ ತೊಮರೋಡಿ ಪರ ವಕೀಲರು ವಾದ ಮಂಡಿಸಬೇಕಾಗಿತ್ತು ಆದರೆ ಪ್ರಭಾರ ನ್ಯಾಯಾಧೀಶರು ಲಭ್ಯವಿಲ್ಲದ ಕಾರಣ ಮಾ.5ಕ್ಕೆ ವಿಚಾರಣೆಯನ್ನು ಮುಂದೂಡಿದೆ.
ಧರ್ಮಸ್ಥಳ; ಶಿವರಾತ್ರಿ ಪಾದಯಾತ್ರಿಗಳ ಸ್ವಾಗತಕ್ಕೆ ಸಕಲ ಸಿದ್ಧತೆ, ಸ್ವಾಗತ ಕಾರ್ಯಾಲಯ ಉದ್ಘಾಟನೆ
ಧರ್ಮಸ್ಥಳ: ನಾಡಿನೆಲ್ಲೆಡೆಯಿಂದ ಫೆ. 15 ರಂದು ಶಿವರಾತ್ರಿಗೆ ಧರ್ಮಸ್ಥಳಕ್ಕೆ 50 ಸಾವಿರಕ್ಕೂ ಮಿಕ್ಕಿ ಪಾದಯಾತ್ರಿಗಳು ಬರುವ ನಿರೀಕ್ಷೆ ಇದ್ದು, ಅವರ ಸ್ವಾಗತ ಹಾಗೂ ವಸತಿ ಸೌಲಭ್ಯಕ್ಕೆ ಸಕಲ ಸಿದ್ಧತೆಗಳನ್ನು ಮಾಡಲಾಗಿದ್ದುಧರ್ಮಸ್ಥಳದಲ್ಲಿ ಮುಖ್ಯಪ್ರವೇಶದ್ವಾರದ ಬಳಿ ಸ್ವಾಗತ ಕಾರ್ಯಾಲಯವನ್ನು ಗುರುವಾರ ಧರ್ಮಾಧಿಕಾರಿಗಳಾದ ಪೂಜ್ಯ ಹೆಗ್ಗಡೆಯವರ ಆಪ್ತ ಕಾರ್ಯದರ್ಶಿ ಎ.ವಿ. ಶೆಟ್ಟಿ ಉದ್ಘಾಟಿಸಿದರು. ಧರ್ಮಸ್ಥಳ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಶ್ರೀನಿವಾಸ ರಾವ್, ಅನ್ನಪೂರ್ಣ ಭೋಜನಾಲಯದ ವ್ಯವಸ್ಥಾಪಕರಾದ ಸುಬ್ರಹ್ಮಣ್ಯಪ್ರಸಾದ್, ಕ್ಷೇತ್ರದ ನೌಕರರು, ಯುವತಿ ಮಂಡಲದ ಸದಸ್ಯೆಯರು ಮತ್ತು ಊರಿನ ನಾಗರಿಕರು ಉಪಸ್ಥಿತರಿದ್ದರು.ಇಲ್ಲಿ ತಂಪುಪಾನೀಯ ಮತ್ತು ಕುಡಿಯುವನೀರಿನ ಸೌಲಭ್ಯ, ಅಂಬುಲೆನ್ಸ್ ಸೇವೆ,...
ಬೆಳ್ತಂಗಡಿ; ಅಖಿಲ ಭಾರತ ಮುಷ್ಕರ ಕಾರ್ಮಿಕರ ಬೃಹತ್ ಪ್ರತಿಭಟನೆ ತಸ್ತೆ ತಡೆ
ಬೆಳ್ತಂಗಡಿ; ಸಂವಿಧಾನ ಬದ್ದವಾದ ಕಾರ್ಮಿಕ ವರ್ಗದ, ರೈತ ವರ್ಗದ ಮೂಲಭೂತ ಹಕ್ಕುಗಳ ನಿರಾಕರಿಸುವಂತಹ, ಕಾರ್ಮಿಕರು ತ್ಯಾಗ ಬಲಿದಾನಗಳಿಂದ ಕಾನೂನು ರೂಪವಾಗಿ ಪಡೆದ ಹಕ್ಕು ಸವಲತ್ತುಗಳನ್ನು ರದ್ದು ಪಡಿಸಿ ಕಾರ್ಪರೇಟ್ ಕಂಪಪೆನಿಗಳ ಪರವಾದ 4 ಕಾರ್ಮಿಕ ಸಂಹಿತೆಗಳನ್ನು ಜಾರಿ ಮಾಡಿ ಕೇಂದ್ರದ ಮೋದಿ ಸರಕಾರ ಭಾರತೀಯರಿಗೆ ದ್ರೋಹ ಎಸಗಿದ ಕೇಂದ್ರ ಸರಕಾರದ ಕಾರ್ಮಿಕ ದ್ರೋಹವನ್ನು ಎಂದೂ ಸಹಿಸೆವು ಎಂದು ಸಿಐಟಿಯು ದ.ಕ. ಜಿಲ್ಲಾಧ್ಯಕ್ಷರಾದ ನ್ಯಾಯವಾದಿ ಬಿ.ಎಂ.ಭಟ್ ಹೇಳಿದ್ದಾರೆ.ಅವರು ಇಂದು ಕೇಂದ್ರದ ಎನ್.ಡಿ.ಎ. ಸರಕಾರದ ರೈತ ವಿರೋದಿಯಾಗಿ, ಕಾರ್ಮಿಕ ಹಿತಕ್ಕ ಧಕ್ಕೆ ತರುವಂತಹ ದೋರಣೆಯನ್ನು ಜಾರಿ...
ಬೆಳ್ತಂಗಡಿ : ಬೆಳಾಲು ಗ್ರಾ. ಪಂ. ಬಿಲ್ಲು ಸಂಗ್ರಾಹಕ ಶಶಿಧರ್ ಕರ್ತವ್ಯದಿಂದ ಅಮಾನತು
ಬೆಳ್ತಂಗಡಿ : ಬೆಳಾಲು ಗ್ರಾಮ ಪಂಚಾಯತ್ ಬಿಲ್ಲು ಸಂಗ್ರಾಹಕ ಶಶಿಧರ ಎಂಬುವರು ಚುನಾಯಿತ ಜನಪ್ರತಿನಿಧಿಗಳಿಗೆ ಅಗೌರವ ತೋರಿ ಹಾಗೂ ತೆರಿಗೆ ಹಣವನ್ನು ನಿಗದಿತ ಸಮಯಕ್ಕೆ ಬ್ಯಾಂಕ್ ಗೆ ಜಮಾ ಮಾಡದೆ ಅವ್ಯವಹಾರ ಮಾಡಿರುವುದು ಬೆಳಕಿಗೆ ಬಂದಿತ್ತು. ಈ ಬಗ್ಗೆ ಗ್ರಾಮಪಂಚಾಯತಿನ ಸದಸ್ಯರು ತುರ್ತು ಸಭೆಯಲ್ಲಿ ಚರ್ವಿಸಿ ಅವರನ್ನು ಕರ್ತವ್ಯದಿಂದ ಅಮಾನತುಗೊಳಿಸಲು ನಿರ್ಣಯಿಸಿದರು. ಈ ಬಗ್ಗೆ ಅಧಿಕಾರಿಗಳು ಪರಿಶೀಲಿಸಿ ಕ್ರಮ ಕೈಗೊಂಡು ಅವರನ್ನು ಫೆ.11 ರಂದು ಕರ್ತವ್ಯದಿಂದ ಅಮಾನತು ಮಾಡಿ ಆದೇಶ ಹೊರಡಿಸಲಾಗಿದೆ.














