ಉಪ್ಪಿನಂಗಡಿ; ವಿಧ್ಯಾರ್ಥಿಗಳ ಮೇಲೆ ನೈತಿಕ ಪೊಲೀಸ್ ಗಿರಿ ಇಬ್ಬರ ಬಂಧನ
ಉಪ್ಪಿನಂಗಡಿ: ಅನಾರೋಗ್ಯದಿಂದ ಬಳಲುತ್ತಿದ್ದ ಸಹಪಾರಿಯ ಆರೋಗ್ಯ ವಿಚಾರಿಸಲು ಆತನ ಮನೆಗೆ ತೆರಳುತ್ತಿದ್ದ ವಿದ್ಯಾರ್ಥಿಗಳ ಮೇಲೆ ನೈತಿಕ ಪೊಲೀಸ್ ಗಿರಿ ಮೆರೆದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಮುಸ್ತಾಫ ಪೆರಿಯಡ್ಕ ಹಾಗೂ ಮುಸ್ತಾಫ ಬಂಧಿತ ಆರೋಪಿಗಳು ಪ್ರಕರಣದ ವಿವರ ದಿನಾಂಕ 06-11-2025 ರಂದು ಕಾಲೇಜೊಂದರ 09 ವಿದ್ಯಾರ್ಥಿ/ವಿಧ್ಯಾರ್ಥಿನಿಯರು ಇತ್ತೀಚೆಗೆ ಅನಾರೋಗ್ಯದಿಂದ ಚಿಕಿತ್ಸೆ ಪಡೆದು ಮನೆಯಲ್ಲಿದ್ದ ತಮ್ಮ ಸಹಪಾಠಿಯ ಆರೋಗ್ಯ ವಿಚಾರಿಸಲು ಅಂತಾ ಬೆಳಗ್ಗೆ ಕಾಲೇಜಿನಿಂದ ಹೊರಟು ಪೆರಿಯಡ್ಕ ಎಂಬಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ, ಬೈಕ್ ನಲ್ಲಿ ಬಂದ ಆರೋಪಿಗಳಾದ ಮುಸ್ತಾಫ ಪೆರಿಯಡ್ಕ ಹಾಗೂ ಮುಸ್ತಾಫ ಅವರು ವಿದ್ಯಾರ್ಥಿಗಳ ಹೆಸರು,...
ಧರ್ಮಸ್ಥಳ ಪ್ರಕರಣ ತಾಂತ್ರಿಕ ಕಾರಣದಿಂದ ಎಸ್.ಐ.ಟಿ ವರದಿ ತಡವಾಗಿದೆ; ಗೃಹಸಚಿವ ಪರಮೇಶ್ವರ್
ಬೆಂಗಳೂರು : ತಾಂತ್ರಿಕ ಕಾರಣಗಳಿಂದ ಧರ್ಮಸ್ಥಳ ಪ್ರಕರಣದ ಎಸ್‌ಐಟಿ ತನಿಖಾ ವರದಿ ವಿಳಂಬವಾಗಿದೆ. ಇದೇ ಕಾರಣದಿಂದಾಗಿ ವರದಿ ಪಡೆಯುವುದನ್ನು ಕೆಲ ದಿನಗಳ ಕಾಲ ಮುಂದೂಡಿದ್ದೇವೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ. ಗುರುವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಮಹಿಳಾ ಆಯೋಗವು ತನಿಖೆ ಮಾಡಿ ಎಂದು ಕೋರಿದೆ ಈ ಸಂಬಂಧ ಸಮಗ್ರ ತನಿಖೆಯಾದರೆ ಎಲ್ಲ ಮಾಹಿತಿ ಗೊತ್ತಾಗುತ್ತದೆ. ಅದಕ್ಕಾಗಿ ಸಮಯ ಹಿಡಿಯಲಿದ್ದು, ವರದಿಯನ್ನು ಎಲ್ಲ ಆಯಾಮಗಳನ್ನು ನೋಡಿಯೇ ಕೊಡಬೇಕು. ಜತೆಗೆ, ತಾಂತ್ರಿಕ ಕಾರಣಗಳಿಂದ ವಿಳಂಬವಾಗಿದೆ ಎಂದು ತಿಳಿಸಿದರು.
ಬೆಳ್ತಂಗಡಿ : ಮಹೇಶ್ ಶೆಟ್ಟಿ ತಿಮರೋಡಿ ಹೈಕೋರ್ಟ್ ಗೆ ಹಾಜರು
ಬೆಳ್ತಂಗಡಿ : ಪ್ರಕರಣ ಸಂಬಂಧ ಬೆಂಗಳೂರು ಹೈಕೋರ್ಟ್ ನ್ಯಾಯಾಲಯಕ್ಕೆ ಹಾಜರಾದ ಮಹೇಶ್ ಶೆಟ್ಟಿ ತಿಮರೋಡಿ. ಉಜಿರೆ ಮಹೇಶ್ ಶೆಟ್ಟಿ ತಿಮರೋಡಿ ಸಂಬಂಧಿ ಜಯಪ್ರಕಾಶ್ ಶೆಟ್ಟಿ ಬೆಂಗಳೂರು ಹೈ ಕೋರ್ಟ್ ನಲ್ಲಿ ಜಮೀನು ವಿವಾದಕ್ಕೆ ಸಂಬಂಧಿಸಿ ದಾಖಲಿಸಿದ್ದ CCC 304/2020 ಪ್ರಕರಣ ಮತ್ತು ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ ವಿಚಾರಣೆಗಾಗಿ ಉಜಿರೆ ಮಹೇಶ್ ಶೆಟ್ಟಿ ತಿಮರೋಡಿ ನ.6 ರಂದು ಹೈಕೋರ್ಟ್ ನ್ಯಾಯಾಲಯಕ್ಕೆ ಹಾಜರಾಗಿದ್ದಾರೆ.
ಧರ್ಮಸ್ಥಳದಲ್ಲಿ ಜನಜಾಗೃತಿ ವೇದಿಕೆಯ ದ್ವಿಸಹಸ್ರ ಮದ್ಯವರ್ಜನ ಶಿಬಿರ ಸಹಸ್ರಾರು ಮದ್ಯವರ್ಜಿತರ ಸಮಾವೇಶ
ಬೆಳ್ತಂಗಡಿ: ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ ವತಿಯಿಂದ ದ್ವಿಸಹಸ್ರ ಮದ್ಯವರ್ಜನ ಶಿಬಿರದ ಸಹಸ್ರಾರು ಮದ್ಯವರ್ಜಿತರ ಸಮಾವೇಶ ಧರ್ಮಸ್ಥಳದ ಅಮೃತವರ್ಷಿಣಿ ಸಭಾಂಗಣದಲ್ಲಿ ಸಂಭ್ರಮದಿಂದ ನಡೆಯಿತು.ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ ವೀರೇಂದ್ರ ಹೆಗ್ಗಡೆಯವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಬೆಳಗಾವಿ ಹುಕಗಕ್ಕೇರಿಯ ಗುರು ಶಾಂತೇಶ್ವರ ಸಂಸ್ಥಾನದ ಶ್ರೀ ಚಂದ್ರಶೇಖರ ಶಿವಾಚಾರ್ಯ ಮಹಾ ಸ್ವಾಮಿಗಳು ಆಶೀರ್ವಚನ ನೀಡಿದರು.ಕಾರ್ಯಕ್ರಮದ ಉದ್ಘಾಟನೆಯನ್ನು ಕರ್ನಾಕ ರಾಜ್ಯ ಮದ್ಯಪಾನ ಸಂಯಮ ಮಂಡಳಿಯ ಅಧ್ಯಕ್ಷ ಶರಣಪ್ಪ ಸಲದಾಪುರ ಅವರು ನೆರವೇರಿಸಿ ಶುಭ ಹಾರೈಸಿದರು.ಕಾರ್ಯಕ್ರಮದಲ್ಲಿ ಹೇಮಾವತಿ ವಿ ಹೆಗ್ಗಡೆ, ವಿಧಾನ...
ಬೆಳ್ತಂಗಡಿ; ಪಟ್ಟಣ ಪಂಚಾಯತು ನಾಮನಿರ್ದೇಶಿತ ಸದಸ್ಯ ಅಬ್ದುಲ್ ಬಶೀರ್ ನೇಣುಬಿಗಿದು ಆತ್ಮಹತ್ಯೆ
ಬೆಳ್ತಂಗಡಿ: ರೆಂಕೆದಗುತ್ತು ನಿವಾಸಿ, ಪಟ್ಟಣ ಪಂಚಾಯತ್ ನಾಮನಿರ್ದೇಶನ ಸದಸ್ಯ. ಅಬ್ದುಲ್ ಬಶೀರ್ ರವರು ಅ6ರಂದು ಬೆಳಗ್ಗೆ ತಮ್ಮ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬೆಳಗ್ಗೆ ನೇಣು ಬಿಗಿದ ಸ್ಥಿತಿಯಲ್ಲಿ ಇವರ ಮೃತದೇಹ ಮನೆಯಲ್ಲಿ ಪತ್ತೆಯಾಗಿದೆ.ಮೃತದೇಹವನ್ನು ಬೆಳ್ತಂಗಡಿ ತಾಲೂಕು ಸರಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ.ವೃತ್ತಿಯಲ್ಲಿ ಆಟೋ ಚಾಲಕರಾಗಿರುವ ಇವರು ಪತ್ನಿ, ಮೂರು ಮಕ್ಕಳನ್ನು ಅಗಲಿದ್ದಾರೆ. ಇವರ ಆತ್ಮಹತ್ಯೆಗೆ ಕಾರಣವೇನು ಎಂದು ತಿಳಿದು ಬಂದಿಲ್ಲ.
ಬಾರ್ಯ; ಕೃಷಿ ಪತ್ತಿನ ಸಹಕಾರಿ ಸಂಘದ ಚುನಾವಣೆ ಬಿಜೆಪಿ ಬೆಂಬಲಿತ ಸಹಕಾರ ಭಾರತಿ ಅಭ್ಯರ್ಥಿಗಳಿಗೆ ಎಲ್ಲ 12 ಸ್ಥಾನಗಳಲ್ಲಿ ಗೆಲುವು ಮತ್ತೊಮ್ಮೆ ಬಿಜೆಪಿಗೆ ಆಡಳಿತ
ಬಾರ್ಯ : ಬಾರ್ಯ ಕೃಷಿ ಪತ್ತಿನ ಸಹಕಾರಿ ಸಂಘ (ನಿ.) 2025-2030 ನೇ ಸಾಲಿನ ಆಡಳಿತ ಮಂಡಳಿ ನಿರ್ದೇಶಕರ ಚುನಾವಣೆ ನವೆಂಬರ್ 05 ರಂದು ನಡೆದು ಫಲಿತಾಂಶ ಹೊರಬಂದಿದ್ದು ಬಿಜೆಪಿ ಬೆಂಬಲಿತ ಸಹಕಾರ ಭಾರತಿ ಅಭ್ಯರ್ಥಿಗಳು ಎಲ್ಲ 12ಕ್ಷೇತ್ರಗಳಲ್ಲಿಯೂ ಗೆಲುವನ್ನು ಪಡೆದಿದ್ದಾರೆ. ಸಾಮಾನ್ಯ ಕ್ಷೇತ್ರದಲ್ಲಿ ಪ್ರಸನ್ನ ಗೌಡ. ಎನ್, ಪ್ರವೀಣ್ ರೈ. ಪಿ, ಪ್ರಶಾಂತ್. ಪೈ, ಚಂದ್ರಶೇಖರ ಕುಂಡಡ್ಕ, ಹರ್ಷಿತ್ ಪೂಜಾರಿ ಕಲಾಯ, ಮೋಹನ್ ಗೌಡ ಅಜಿರ, ಹಿಂದುಳಿದ ಎ ಕ್ಷೇತ್ರದಿಂದ ಸೇಸಪ್ಪ ಸಾಲಿಯಾನ್, ಹಿಂದುಳಿದ ಬಿ ಕ್ಷೇತ್ರದಿಂದ ರಾಜೇಶ್ ರೈ ಹೆನ್ನಡ್ಕ,...
ಬೆಳ್ತಂಗಡಿ; ನೂತನ ಧರ್ಮಾಧ್ಯಕ್ಷರಿಗೆ ರಕ್ಷಿತ್ ಶಿವರಾಂ ಅವರಿಂದ ಅಭಿನಂದನೆ
ಬೆಳ್ತಂಗಡಿ; ಬೆಳ್ತಂಗಡಿ ಧರ್ಮಪ್ರಾಂತ್ಯದ ನೂತನ ಧರ್ಮಾಧ್ಯಕ್ಷರಾಗಿ ಅಭಿಷಕ್ತರಾದ ಅ.ವಂ ಜೇಮ್ಸ್ ಪಟ್ಟೇರಿಲ್ ಅವರನ್ನು ಕೆ.ಪಿ.ಸಿ.ಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ಅವರು ಬೆಳ್ತಂಗಡಿ ಸೈಂಟ್ ಲಾರೆನ್ಸ್ ಪ್ರಧಾನ ದೇವಾಲಯಕ್ಕೆ ತೆರಳಿ ಅಭಿನಂದನೆ ಸಲ್ಲಿಸಿದರು.ಮಂಗಳೂರಿನ ಮಾಜಿ ಶಾಸಕರಾದ ಜೆ.ಆರ್ ಲೋಬೋ ಅವರು ಹಾಗೂ ಪ್ರವೀಣ್ ಫೆರ್ನಾಂಡಿಸ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದು ಬಿಷಪ್ ಅವರಿಗೆ ಅಭಿನಂದನೆ ಸಲ್ಲಿಸಿದರು.
ಶಾಸಕ ಹರೀಶ್ ಪೂಂಜ ಅವರಿಂದ ನೂತನ ಬಿಷಪ್ ಅವರಿಗೆ ಅಭಿನಂದನೆ
ಬೆಳ್ತಂಗಡಿ; ಬೆಳ್ತಂಗಡಿ ಧರ್ಮಪ್ರಾಂತ್ಯದ ನೂತನ ಧರ್ಮಾಧ್ಯಕ್ಷರಾಗಿ ಅಭಿಷಕ್ತರಾದ ಬಿಷಪ್ ಜೇಮ್ಸ್ ಪಟ್ಟೇರಿಲ್ ಅವರನ್ನು ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಅವರು ಭೇಟಿಯಾಗಿ ಅಭಿನಂದನೆಸಲ್ಲಿಸಿದರು. ಈ ಸಂದರ್ಭದಲ್ಲಿ ಪಿ.ಸಿ ಸೆಬಾಸ್ಟಿಯನ್, ಪ್ರಿನ್ಸ್ ಹಾಗೂ ಇತರರು ಇದ್ದರು.
ಬೆಳ್ತಂಗಡಿ : ಹಳೆದ್ವೇಷದ ಹಿನ್ನಲೆ ವ್ಯಕ್ತಿಗೆ ಮಾರಣಾಂತಿಕ ಹಲ್ಲೆ ಪ್ರಕರಣ ದಾಖಲು
ಬೆಳ್ತಂಗಡಿ : ಹಳೆ ದ್ವೇಷದ ವಿಚಾರದಲ್ಲಿ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಿದ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬೆಳ್ತಂಗಡಿ ಮಿನಿ ವಿಧಾನಸೌಧದ ರಸ್ತೆಯ ಬಳಿ ನ.3 ರಂದು ಸಂಜೆ 4:30 ರ ಸುಮಾರಿಗೆ ಧರ್ಮಸ್ಥಳ ಗ್ರಾಮದ ಇಬ್ರಾಹಿಂ(32) ಎಂಬವರಿಗೆ ಉಜಿರೆ ಟಿ.ಬಿ ಕ್ರಾಸ್ ನಿವಾಸಿ ಅಫ್ರೀದ್ @ ಅಪ್ಪಿ ಎಂಬಾತ ಆಟೋ ರಿಕ್ಷಾದಲ್ಲಿ ಬಂದು ಯಾವುದೋ ಅಯುಧದಿಂದ ಬಲಕಣ್ಣಿಗೆ ಮತ್ತು ಎಡಕಣ್ಣಿಗೆ ಮಾರಣಾಂತಿಕ ಹಲ್ಲೆ ನಡೆಸುತ್ತಿದ್ದಾಗ ಸಾರ್ವಜನಿಕರು ಸೇರುತ್ತಿದ್ದಂತೆ ಸ್ಥಳದಿಂದ ಪರಾರಿಯಾಗಿದ್ದಾರೆ. ಹಲ್ಲೆಗೊಳಗಾದ ಗಾಯಗೊಂಡ ಇಬ್ರಾಹಿಂ ಬೆಳ್ತಂಗಡಿ ತಾಲೂಕು ಸರಕಾರಿ ಆಸ್ಪತ್ರೆಗೆ...
ನೂತನ ಧರ್ಮಾಧ್ಯಕ್ಷರಿಗೆ ಶ್ರೀ ಕ್ಷೇತ್ರ ಧರ್ಮಸ್ಥಳದ ಪರವಾಗಿ ಅಭಿನಂದನೆ
ಬೆಳ್ತಂಗಡಿ; ಬೆಳ್ತಂಗಡಿ ಧರ್ಮಪ್ರಾಂತ್ಯದ ನೂತನ ಧರ್ಮಾಧ್ಯಕ್ಷರಾಗಿ ಅಭಿಷಕ್ತರಾದ ಅ ವಂ ಜೇಮ್ಸ್ ಪಟ್ಟೇರಿಲ್ ಅವರನ್ನು ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಾ.ಡಿ ವೀರೇಂದ್ರ ಹೆಗ್ಗಡೆಯವರ ಪರವಾಗಿ ಅಭಿನಂದಿಸಲಾಯಿತು. ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ಕಾರ್ಯದರ್ಶಿ ವಿವೇಕ್ ವಿನ್ಸಂಟ್ ಪಯಸ್, ಧರ್ಮಸ್ಥಳ ಡಿ.ಎಂ.ಸಿ ವಿಭಾಗದ ಟಿ.ವಿ ದೇವಸ್ಯ ಹಾಗು ಉಜಿರೆ ರುಡ್ ಸೆಟ್ ಸಂಸ್ಥೆಯ ಹಿರಿಯ ಉಪನ್ಯಾಸಕ ಅಬ್ರಹಾಂ ಜೇಮ್ಸ್ ಅವರು ಶಾಲು ಹೊದಿಸಿ ಫಲಪುಷ್ಪನೀಡಿ ಸನ್ಮಾನಿಸಿದರು.ಎಸ್.ಡಿ.ಎಂ ಆಸ್ಪತ್ರೆ ಉಜಿರೆ ಇದರ ವತಿಯಿಂದ ಮ್ಯಾನೇಜಿಂಗ್ ಡೈರೆಕ್ಟರ್ ಜನಾರ್ಧನ್ ಹಾಗೂ ಇತರರು ನೂತನ ಬಿಷಪ್ ಅವರನ್ನು ಸನ್ಮಾನಿಸಿದರು.














