ನಡ ಗ್ರಾಮದಲ್ಲಿ ಮತ ಚಲಾಯಿಸಿದ ಹರೀಶ್ ಕುಮಾರ್

0

ಬೆಳ್ತಂಗಡಿ; ವಿಧಾನ ಪರಿಷತ್ ಸದಸಸ್ಯರೂ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರೂ ಆಗಿರುವ ಹರೀಶ್ ಕುಮಾರ್ ಅವರು ನಡ ಗ್ರಾಮದ ಮತಗಟ್ಟೆ ಸಂಖ್ಯೆ 36ರಲ್ಲಿ ಮತ ಚಲಾಯಿಸಿದರು.

ಎಸ್.ಡಿ.ಪಿ.ಐ ಮುಖಂಡರಿಂದ ಮತದಾನ

0

ಬೆಳ್ತಂಗಡಿ; 2024ರ ಲೊಕಸಭಾ ಚುನಾವಣೆಯಲ್ಲಿ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ದ. ಕ ಜಿಲ್ಲಾ ಕಾರ್ಯದರ್ಶಿ ಅಕ್ಬರ್ ಬೆಳ್ತಂಗಡಿ ಯವರು ಬೂತ್ ಸಂಖ್ಯೆ 106 ಮಾದರಿ ಹಿರಿಯ ಪ್ರಾಥಮಿಕ ಶಾಲೆ ಬೆಳ್ತಂಗಡಿ ಯಲ್ಲಿ ಮತದಾನ ಮಾಡಿದರು. ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರ ಅಧ್ಯಕ್ಷರಾದ ನವಾಝ್ ಕಟ್ಟೆ ಯವರು ತಮ್ಮ ಪತ್ನಿಯೊಂದಿಗೆ ತೆಂಕಕಾರಂದೂರು 2ನೇ ವಾರ್ಡ್, ಪೆರಾಲ್ದರ ಕಟ್ಟೆಯಲ್ಲಿ ಮತದಾನ ಮಾಡಿದರು.

ಅಧಿಕಾರಿಗಳ ನಿರ್ಲಕ್ಷ್ಯ ವಿಕಲಚೇತನರ ಪಟ್ಟಿಯಿಂದ ಹೆಸರು ನಾಪತ್ತೆ; ಎಂಡೋ ಪೀಡಿತನನ್ನು ಹೊತ್ತುಕೊಂಡು ಹೋಗಿ ಮತದಾನ ಮಾಡಿಸಿದ ಕುಟುಂಬಸ್ಥರು

0

ಬೆಳ್ತಂಗಡಿ; ಚುನಾವಣಾ ಆಯೋಗ ಸರಕಾರ ವಿಕಲಚೇತನರಿಗೆ ಮನೆಯಲ್ಲಿಯೇ ಮತದಾನ ಮಾಡುವ ಅವಕಾಶ ನೀಡಿದೆ ಆದರೆ ಅಧಿಕಾರಿಗಳ ಬೇಜವಾಬ್ದಾರಿಯಿಂದಾಗಿ ಬೆಳ್ತಂಗಡಿ ನಗರದಲ್ಲಿ ವಿಕಲಚೇತನ ವ್ಯಕ್ತಿಯನ್ನು ಮನೆಯವರು ಎತ್ತಿಕೊಂಡು ಮತಗಟ್ಟೆಗೆ ಹೋಗಿ ಮತ ಚಲಾಯಿಸಬೇಕಾಗಿ ಬಂತು.ಬೆಳ್ತಂಗಡಿ ನಗರದ ನಿವಾಸಿ ಬಿ.ಎ ಮೊಹಮ್ಮದ್ ಅವರು ಎಂಡೋ ಸಲ್ಫಾನ್ ಸಂತ್ರಸ್ತರು, ಎದ್ದು ನಡೆಯಲು ಶಕ್ತಿಯಿಲ್ಲದ 30ವರ್ಷ ಪ್ರಾಯದ ಇವರು ಚಾಪೆಹಿಡಿದು ಮಲಗಿದ್ದಲ್ಲಿಯೇ ಇದ್ದಾರೆ. ಹಿಂದೆಲ್ಲ ಇವರನ್ನು ಅವರ ತಂದೆಯೇವರೇ ಎತ್ತಿಕೊಂಡು ಹೋಗಿ ಮತಚಲಾಯಿಸುತ್ತಿದ್ದರು. ಅವರಿಗೆ ಒಂದೂವರೆ ವರ್ಷದ ಹಿಂದೆ ನಡೆದ ಅಪಘಾತದ ಬಳಿಕ ಅವರಿಗೇ ನಡೆಯಲು ಕಷ್ಟವಾಗಿದೆ. ಎಂಡೋ...

ನಗರದಲ್ಲಿ ರಕ್ಷಿತ್ ಶಿವರಾಂ ಅವರಿಂದ ಮತದಾನ

0

ಬೆಳ್ತಂಗಡಿ; ಲೊಕಸಭಾ ಚುನಾವಣೆಯಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ರವರು ಬೂತ್ ಸಂಖ್ಯೆ 106 ಮಾದರಿ ಹಿರಿಯ ಪ್ರಾಥಮಿಕ ಶಾಲೆ ಬೆಳ್ತಂಗಡಿ ಯಲ್ಲಿ ಮತದಾನ ಮಾಡಿದರು.

ತಾಲೂಕಿನಲ್ಲಿ ಶೇ 51.29 ಮತದಾನ

0

ಬೆಳ್ತಂಗಡಿ; ಲೋಕಸಭಾ ಚುನಾವಣೆಯಲ್ಲಿ ಬೆಳ್ತಂಗಡಿ ತಾಲೂಕಿನಲ್ಲಿ ಬಿರುಸಿನ ಮತದಾನವಾಗುತ್ತಿದೆ.ಮಧ್ಯಾಹ್ನ 1 ಗಂಟೆಯ ವರೆಗೆ ತಾಲೂಕಿನಲ್ಲಿ ಶೇ 51.29 ಮತದಾನವಾಗಿರುವುದಾಗಿ ಪ್ರಾಥಮಿಕ ಮಾಹಿತಿಗಳು ಲಭ್ಯವಾಗಿದೆ.ಬೆಳಗ್ಗೆ 7ಗಂಟೆಗೆ ಮತದಾನದ ಪ್ರಕ್ರಿಯ ಆರಂಭಗೊಂಡಿತ್ತು. ಆರಂಭದಿಂದಲೇ ಮತಗಟ್ಟೆಗಳ‌ ಎದುರು ಮತದಾರರು ಸರತಿಯ ಸಾಲಿನಲ್ಲಿ ನಿಂತು ಮತ ಚಲಾಯಿಸುತ್ತಿದ್ದರು. ಮೊದಲ ಎರಡು ಗಂಟೆಯಲ್ಲಿ ತಾಳುಕಿನಲ್ಲಿ 15.28 ಶೇ ಮತದಾನವಾಗಿತ್ತು. 11ಗಂಟೆಯ ವೇಳೆಗೆ ಶೇ 32.39 ಮತದಾನವಾಗಿತ್ತು.ಮದ್ಯಾಹ್ನ 1 ಗಂಟೆಯ ವೇಳೆಗೆ ಶೇ 51.29 ಮತದಾನವಾಗಿದೆ.

ತಾಲೂಕಿನ ವಿವಿಧ ಮತಗಟ್ಟೆಗಳಿಗೆ ರಕ್ಷಿತ್ ಶಿವರಾಂ ಭೇಟಿ

0

ಬೆಳ್ತಂಗಡಿ; ಲೊಕಸಭಾ ಚುನಾವಣೆಯಲ್ಲಿ ಬೆಳ್ತಂಗಡಿ ತಾಲೂಕಿನಲ್ಲಿ ಅತ್ಯಂತ ಬಿರುಸಿನ ಮತದಾನ ನಡೆಯುತ್ತಿದ್ದು ಎರಡೂ ಪ್ರಮುಖ ಪಕ್ಷಗಳ ನಡುವೆ ಸಮಬಲದ ಸ್ಪರ್ಧೆ ನಡೆಯುತ್ತಿದೆ. ಕೆ.ಪಿಸಿಸಿ ಕಾರ್ಯದರ್ಶಿ ರಕ್ಷಿತ್ಬಶಿವರಾಂ ಅವರು ತಾಲೂಕಿನ ವಿವಿಧ ಮತಗಟ್ಟೆಗಳಿಗೆ ತೆರಳಿ ಕಾಂಗ್ರೆಸ್ ಕಾರ್ಯ ಕರ್ತರನ್ನು ಭೇಟಿಯಾಗಿ ಅವರೊಂದಿಗೆ ಮಾತುಕತೆ ನಡೆಸಿದರು. ರಕ್ಷಿತ್ ಶಿವರಾಂ ಅವರು ತಾಲೂಕಿನಾಧ್ಯಂತ ಸಂಚರಿಸಿ ಕಾರ್ಯಕರ್ತರಲ್ಲಿ ಉತ್ಸಾಹ ಮೂಡಿಸುವ ಕಾರ್ಯ ಮಾಡುತ್ತಿದ್ದಾರೆ

ನಗರದಲ್ಲಿ ಬಿಷಪ್ ಲಾರೆನ್ಸ್ ಮುಕ್ಕುಯಿ ಅವರಿಂದ ಮತದಾನ

0

ಬೆಳ್ತಂಗಡಿ; ಬೆಳ್ತಂಗಡಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಅ.ವಂ ಲಾರೆನ್ಸ್ ಮುಕ್ಕುಯಿ ಅವರು ಲೋಕಸಭಾ ಚುನಾವಣೆಯಲ್ಲಿ ಬೆಳ್ತಂಗಡಿ ನಗರದ ಬೂತ್ ಸಂಖ್ಯೆ‌ 106ರಲ್ಲಿ ತಮ್ಮ ಮತದಾನ ದ ಹಕ್ಕನ್ನು ಚಲಾಯಿಸಿದರು.ಪ್ರತಿಯೊಬ್ಬರೂ ಮತದಾನ ಮಾಡುವ ಮೂಲಕ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಎತ್ತಿ ಹಿಡಿಯುವಂತೆ ಬಿಷಪ್ ಅವರು ಕರೆ ನೀಡಿದ್ದಾರೆ.

ವಿಧಾನ ಪರಿಷತ್ ಸದಸ್ಯ ಪ್ರತಾಪ ಸಿಂಹ ನಾಯಕ್ ಅವರಿಂದ ಮತದಾನ

0

ಉಜಿರೆ; ವಿಧಾನಪರಿಷತ್ ಸದಸ್ಯ ಪ್ರತಾಪ ಸಿಂಹ ನಾಯಕ್ ಅವರು ಉಜಿರೆ ಶ್ರೀ ರತ್ನವರ್ಮ ಹೆಗ್ಗಡೆ ಕ್ರೀಡಾಂಗಣದಲ್ಲಿರುವ ಬೂತ್ ಸಂಖ್ಯೆ 95 ರಲ್ಲಿ ಕುಟುಂಬಸ್ಥರೊಂದಿಗೆ ಆಗಮಿಸಿ ಲೋಕಸಭಾ ಚುನಾವಣೆಯ ಮತದಾನ ಮಾಡಿದರು

ತಾಲೂಕಿನಲ್ಲಿ ಶೇ 32.39 ಮತದಾನ

0

ಬೆಳ್ತಂಗಡಿ; ಲೋಕಸಭಾ ಚುನಾವಣೆಯಲ್ಲಿ ಬೆಳ್ತಂಗಡಿ ತಾಲೂಕಿನಲ್ಲಿ ಬಿರುಸಿನ ಮತದಾನವಾಗುತ್ತಿದೆ.ಬೆಳಿಗ್ಗೆ 11ಗಂಟೆಯ ವರೆಗೆ ತಾಲೂಕಿನಲ್ಲಿ ಶೇ 32.39 ಮತದಾನವಾಗಿದೆ.ಬೆಳಗ್ಗೆ 7ಗಂಟೆಗೆ ಮತದಾನದ ಪ್ರಕ್ರಿಯ ಆರಂಭಗೊಂಡಿತ್ತು. ಆರಂಭದಿಂದಲೇ ಮತಗಟ್ಟೆಗಳ‌ ಎದುರು ಮತದಾರರು ಸರತಿಯ ಸಾಲಿನಲ್ಲಿ ನಿಂತು ಮತ ಚಲಾಯಿಸುತ್ತಿದ್ದರು. ಮೊದಲ ಎರಡು ಗಂಟೆಯಲ್ಲಿ ತಾಲೂಕಿನಲ್ಲಿ 15.28 ಶೇ ಮತದಾನವಾಗಿತ್ತು. ಇದೀಗ 11ಗಂಟೆಯ ವೇಳೆಗೆ ಶೇ 32.39 ಮತದಾನವಾಗಿದೆ

ಮತ ಚಲಾಯಿಸಿದ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್. ಪೂಜಾರಿ

0

ಮಂಗಳೂರು: ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್. ಪೂಜಾರಿ ಅವರು ಶುಕ್ರವಾರ ಮಂಗಳೂರಿನ ಕಪಿತಾನಿಯೋ ಶಾಲೆಯ ಮಂಗಟ್ಟೆಯಲ್ಲಿ ಮತ ಚಲಾಯಿಸಿದರು.ಪತ್ನಿ ಸಾಯಿರಶ್ಮಿರಾಜ್ ಪೂಜಾರಿ ಹಾಗೂ ಪುತ್ರಿ ರಿತುರಾಜ್ ಹಾಗೂ ಹಿತೈಷಿಗಳೊಂದಿಗೆ ಆಗಮಿಸಿದ ಅವರು, ಮತ ಚಲಾಯಿಸಿದರು.