ಧರ್ಮಸ್ಥಳದಲ್ಲಿ ಸರಣಿ ಅಪಘಾತ ಹಲವು ವಾಹನಗಳು ಜಖಂ
ಬೆಳ್ತಂಗಡಿ; ಧರ್ಮಸ್ಥಳ ದಲ್ಲಿ ಸರಣಿ ಅಪಘಾತ ಸಂಭವಿಸಿದ್ದು ಹಕವು ವಾಹನಗಳು ಜಖಂಗೊಂಡಿದೆ. ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ.ರಿಕ್ಷವೊಂದು ಮಗುಚಿ ಬಿದ್ದಾಗ ಅದರ ಹಿಂದೆ ಬರುತ್ತಿದ್ದ ರಿಕ್ಷಾ ಹಾಗೂ ಕಾರುಗಳು ಒಂದಕ್ಕೊಂದು ಡಿಕ್ಕಿ ಹೊಡೆದಿದೆ. ಎರಡು ರಿಕ್ಷಾಗಳು ಹಾಗೂ ಮೂರು ಕಾರುಗಳು ಜಖಂಗೊಂಡಿದೆ. ರಿಕ್ಷಾ ಚಾಲಕ ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ. ಉಳಿದಂತೆ ಯಾರಿಗೂ ಯಾವಯದೇ ಗಾಯಗಳಾಗಿಲ್ಲ. ಸೋಮವಾರ ನಾಲ್ಕು ಗಂಟೆಯ ಸುಮಾರಿಗೆನೇತ್ರಾವತಿಯಿಂದ ಧರ್ಮಸ್ಥಳ ಕ್ಕೆ ಬರುವ ರಸ್ತೆಯಲ್ಲಿ ರಿಕ್ಷಾವೊಂದು ಚಾಲಕನ ನಿಯಂತ್ರಣ ತಪ್ಪಿ ಮಗುಚಿಬಿದ್ದಿದೆ. ಅದರ ಹಿಂದೆ ಇದ್ದ ರಿಕ್ಷಾವೊಂದು ಅಪಘಾತ ಸಂಭವಿಸಿದ ರಿಕ್ಷಾಕ್ಕೆ ತಾಗಿ ಜಖಂಗೊಂಡಿದೆ...
ಬಂಟ್ವಾಳ ಇಬ್ಬರು ಮಕ್ಕಳು ನೇತ್ರಾವತಿ ನದಿಯಲ್ಲಿ ಮುಳುಗಿ ಸಾವು
ಬಂಟ್ವಾಳ: ನೇತ್ರಾವತಿ ನದಿಯಲ್ಲಿ ಮುಳುಗಿ ಇಬ್ಬರು ಬಾಲಕಿಯರು ಮೃತಪಟ್ಟ ಘಟನೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ನಾವೂರು ಎಂಬಲ್ಲಿ ಭಾನುವಾರ ಸಂಜೆ ನಡೆದಿದೆ. ಉಳ್ಳಾಲ ನಿವಾಸಿಗಳಾದ ಅನ್ಸಾರ್ ಅವರ ಪುತ್ರಿ ಅಶ್ರಾ (11) ಹಾಗೂ ಇಲಿಯಾಸ್ ಅವರ ಪುತ್ರಿ ಮರಿಯಮ್ ನಾಶೀಯಾ(14 ) ಮೃತ ದುರ್ದೈವಿ ಬಾಲಕಿಯರು. ಮೂಲತಃ ನಾವೂರ ನಿವಾಸಿಯಾದ ಇಲಿಯಾಸ್ ಅವರು ಇತ್ತೀಚಿಗೆ ಉಳ್ಳಾಲದಲ್ಲಿ ಮನೆ ಕಟ್ಟಿದ್ದರು. ಇವತ್ತು ನಾವೂರ ಮೈಂದಾಳದಲ್ಲಿರುವ ಸಂಬಂಧಿಕರ ಮನೆಗೆ ಬಂದಿದ್ದರು. ಸಂಜೆ ವೇಳೆ ಮನೆಯವರ ಜೊತೆಗೆ ನಾವೂರದ ನೀರಕಟ್ಟೆ ಎಂಬಲ್ಲಿ ನೇತ್ರಾವತಿ ನದಿಗೆ ತೆರಳಿದ್ದರು. ಈ...
ಉಜಿರೆ ಎಸ್ ಡಿಎಂ ಕಾಲೇಜುನಿವೃತ್ತ ನೌಕರ ಸದಾನಂದ ಬಿ.ಗೆ ಬೀಳ್ಕೊಡುಗೆ ಕಾರ್ಯಕ್ರಮ
ಬೆಳ್ತಂಗಡಿ; ಕಳೆದ 36 ವರ್ಷಗಳಿಂದ ಉಜಿರೆಯ ಎಸ್ ಡಿಎಂ ಕಾಲೇಜಿನಲ್ಲಿ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿ ಎಸ್ ಡಿಎಯಾಗಿ ವಯೋನಿವೃತ್ತಿ ಹೊಂದಿದ ಸದಾನಂದ ಬಿ.ಮುಂಡಾಜೆ ಅವರಿಗೆ ಕಾಲೇಜಿನಲ್ಲಿ 'ಸದಾನಂದಾಭಿನಂದನೆ' ಬೀಳ್ಕೊಡುಗೆ ಕಾರ್ಯಕ್ರಮ ಜರಗಿತು.ಎಸ್ ಡಿಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ. ಸತೀಶ್ಚಂದ್ರ ಎಸ್., ಮಾತನಾಡಿ "ತನ್ನ ವೃತ್ತಿಯ ಜತೆ ಸದಾನಂದ ಬಿ.ಯವರು ಕಲೆ,ಸಾಹಿತ್ಯ,ಸಂಸ್ಕೃತಿಯನ್ನು ಬೆಳೆಸಲು ಶ್ರಮ ಪಟ್ಟವರು.ಉತ್ತಮ ಬರವಣಿಗೆಯ ಮೂಲಕ ಗುರುತಿಸಲ್ಪಟ್ಟಿದ್ದ ಅವರು, ವಹಿಸಿದ ಕೆಲಸವನ್ನು ಪ್ರಾಮಾಣಿಕವಾಗಿ ನಿರ್ವಹಿಸುವ ಛಾತಿ ಹೊಂದಿದ್ದರು" ಎಂದು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದಪ್ರಿನ್ಸಿಪಾಲ್ ಡಾ.ಬಿ.ಎ. ಕುಮಾರ್ ಹೆಗ್ಡೆ ಮಾತನಾಡಿ...
ದಾಂಡೇಲಿ; ಮಗುವನ್ನು ಮೊಸಳೆಗಳಿರುವ ನಾಲೆಗೆ ಎಸೆದ ತಾಯಿ, ಮೃತದೇಹ ಪತ್ತೆ
ದಾಂಡೇಲಿ: ಇಲ್ಲಿನ ಹಾಲಮಡ್ಡಿ ಸಮೀಪಮೊಸಳೆಗಳಿರುವ, ಕಾಳಿನದಿ ಸೇರುವ ನಾಲೆಗೆ ತನ್ನ ಆರು ವರ್ಷದ ಮಗುವನ್ನು ಮಹಿಳೆಯೊಬ್ಬರು ಎಸೆದ ಘಟನೆ ಶನಿವಾರ ರಾತ್ರಿ ನಡೆದಿದ್ದು, ಮಗುವಿನ ಮೃತದೇಹ ಭಾನುವಾರ ಬೆಳಿಗ್ಗೆ ಪತ್ತೆಯಾಗಿದೆ.ವಿನೋದ (6) ಎಂಬ ಮಗುವನ್ನು ಆತನ ತಾಯಿ ಸಾವಿತ್ರಿ ಸಿಳಿನಿ ನಾಲೆಗೆ ಎಸೆದಿದ್ದರು. 'ಪತಿ ರವಿಕುಮಾರ ಮತ್ತು ಸಾವಿತ್ರಿ ನಡುವೆ ಆಗಾಗ ಕಲಹ ನಡೆಯುತ್ತಿತ್ತು. ಪತಿಯ ಮೇಲಿನ ಕೋಪದಿಂದ ಮಗುವನ್ನು ಆಕೆ ನಾಲೆಗೆ ಎಸೆದಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ. ಗಲಾಟೆಯ ನಡುವೆ ಈಕೆ ನಾಲೆಗೆ ಮಗುವನ್ನು ಎಸೆದಿದ್ದು ಈಬಗ್ಗೆ ಹೇಳಿದ್ದಾಳೆ ಸ್ಥಳೀಯರು ಕೂಡಲೇ ಪೊಲೀಸರಿಗೆ...
“ಕನಸುಗಳನ್ನು ಕಂಡರೆ ಮಾತ್ರ ಉದ್ಯಮಿಗಳಾಗಿ ಬೆಳೆಯಲು ಸಾದ್ಯ” ಮೋಹನ್ ಕುಮಾರ್
ಉಜಿರೆ: ಉದ್ಯಮಿಗಳು ಕನಸುಗಳನ್ನು ಕಾಣಬೇಕು, ಆ ಕನಸುಗಳನ್ನು ನನಸಾಗಿಸುವ ಪ್ರಯತ್ನ ಮಾಡಬೇಕು. ಈ ಕನಸುಗಳು ನನಸಾಗಿಸಲು ಸಮಯ ಬೇಕು, ಅವಸರ ಮಾಡಬಾರದು, ತಾಳ್ಮೆ ಇರಬೇಕು, ನೀವು ಕಂಡ ಕನಸುಗಳು ನಿಮ್ಮನ್ನು ಬೆಳಸಲು ಸಹಕಾರಿಯಾಗುತ್ತದೆ.ಎಂದು “ಬದುಕು ಕಟ್ಟೋಣ ಬನ್ನಿ” ಇದರ ಸಂಚಾಲಕರು ಮತ್ತು ಉದ್ಯಮಿಗಳು ಆದ ಮೋಹನ್ ಕುಮಾರ್ ಹೇಳಿದರು ಅವರು ರುಡ್‌ಸೆಟ್ ಸಂಸ್ಥೆಯಲ್ಲಿ ನಡೆದ ಮೊಬೈಲ್ ರಿಪೇರಿ ತರಬೇತಿ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಭಾಗವಹಿಸಿ ಶಿಭಿರಾರ್ಥೀಗಳಿಗೆ ಪ್ರಮಾಣ ಪತ್ರ ವಿತರಿಸಿ ಮಾತನಾಡಿದರು. ನಿಮ್ಮ ಬದುಕಿನಲ್ಲಿ ಕಷ್ಟಗಳು ಬಂದಾಗ ಅದನ್ನು ಸಾವಾಲಾಗಿ...
ಶಾಸಕ ರೇವಣ್ಣರನ್ನು ಬಂಧಿಸಿದ ಎಸ್.ಐ.ಟಿ
ಬೆಂಗಳೂರು: ನಿರೀಕ್ಷಣಾ ಜಾಮೀನು ನೀಡಲು ನ್ಯಾಯಾಲಯ ನಿರಾಕರಿಸಿದ ಬೆನ್ನಲ್ಲೇ ಜೆಡಿಎಸ್ ಶಾಸಕ ಎಚ್.ಡಿ.ರೇವಣ್ಣ ಅವರನ್ನು ಎಸ್‌ಐಟಿ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.ಜೆಡಿಎಸ್ ರಾಷ್ಟ್ರೀಯ ಘಟಕದ ಅಧ್ಯಕ್ಷ ಎಚ್.ಡಿ.ದೇವೇಗೌಡ ಅವರ ಪದ್ಮನಾಭನಗರದಲ್ಲಿರುವ ಮನೆಯಲ್ಲಿ ಎಚ್.ಡಿ.ರೇವಣ್ಣ ವಾಸ್ತವ್ಯ ಹೂಡಿದ್ದರು. ಜಾಮೀನು ನಿರಾಕರಣೆ ಬೆನ್ನಲ್ಲೇ ಎಸ್‌ಐಟಿ ಅಧಿಕಾರಿಗಳ ತಂಡ, ದೇವೇಗೌಡ ಅವರ ಮನಗೆ ಹೋಗಿತ್ತು. ಮನೆ ಹೊರಗೆ ಹಾಗೂ ಒಳಗೆ ಹಲವು ನಿಮಿಷ ಶೋಧ ನಡೆಸಿತ್ತು. ಅಂತಿಮವಾಗಿ ಎಚ್.ಡಿ.ರೇವಣ್ಣ ಮನೆಯಲ್ಲಿರುವುದು ಖಾತ್ರಿಯಾಯಿತು. ನಂತರ, ಅವರನ್ನು ಎಸ್‌ಐಟಿ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಅವರನ್ನು ಸಿಐಡಿ ಕಚೇರಿಗೆ ಕರೆತರುತ್ತಿದ್ದಾರೆ. ರೇವಣ್ಣ ಆಪ್ತನ ಮನೆಯಲ್ಲಿ...
ಧರ್ಮಸ್ಥಳ ರಸ್ತೆ ಬದಿಯಲ್ಲಿ ನಿಂತಿದ್ದ ವ್ಯಕ್ತಿ ಕುಸಿದು ಬಿದ್ದು ಸಾವು!
ಧರ್ಮಸ್ಥಳ: ಕುಳಿತ್ತಿದ್ದ ವ್ಯಕ್ತಿ ಇದ್ದಕ್ಕಿದ್ದಂತೆ ಕುಸಿದು ಬಿದ್ದು ಸಾವನ್ನಪ್ಪಿದ ಘಟನೆ ಮೇ.04ರಂದು ಧರ್ಮಸ್ಥಳದ ನೇತ್ರಾವತಿ ಸ್ನಾನಘಟ್ಟದ ಸಮೀಪ ಸಂಭವಿಸಿದೆ.ಸುಮಾರು 42 ವರ್ಷದ ವ್ಯಕ್ತಿ ಮಧ್ಯಾಹ್ನ ಧರ್ಮಸ್ಥಳ ನೇತ್ರಾವತಿ ಸ್ನಾನಘಟ್ಟದ ಸಮೀಪ, ನೀರಿನ ಬಾಟಲ್ ಹಿಡಿದು ಕುಳಿತ್ತಿದ್ದು, ಇದ್ದಕ್ಕಿದ್ದಂತೆ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ. ಮೃತ ವ್ಯಕ್ತಿ ದಾವಣಗೆರೆ ಜಿಲ್ಲೆಯ ಚೆನ್ನಗಿರಿ ನಿವಾಸಿ ಮಹಾರುದ್ರ ಸ್ವಾಮಿ ಎಂದು ಗುರುತಿಸಲಾಗಿದೆ.ಈತಹೃದಯಾಘಾತದಿಂದಮೃತಪಟ್ಟಿರಬಹುದು ಎಂದು ಅನುಮಾನಿಸಲಾಗಿದೆ. ಮದ್ಯಾಹ್ನದ ವೇಳೆ ಅತಿಯಾದ ಬಿಸಲಿನ ತಾಪವಿದ್ದು ಇದರಿಂದಾಗಿ ಬಸವಳಿದು ಬಿದ್ದು ಸಾವನ್ನು ಅಪ್ಪಿರವಹುದೇ ಎಂಬ ಅನುಮಾನವೂ ಇದೆ.ಸ್ಥಳಕ್ಕೆ ಧರ್ಮಸ್ಥಳ ಪೊಲೀಸರು ಆಗಮಿಸಿ ಪರಿಶೀಲಿಸಿದ್ದಾರೆ. ಬಳಿಕ...
ನಿವೃತ್ತ ಸೈನಿಕ ಗಣೇಶ್ ಬಿ.ಎಲ್ ಅವರಿಗೆ ಬೆಳ್ತಂಗಡಿಯಲ್ಲಿ ಭವ್ಯ ಸ್ವಾಗತ
ಬೆಳ್ತಂಗಡಿ: ಭಾರತೀಯ ಸೇನೆಯಲ್ಲಿ 21ವರ್ಷಗಳ ಕಾಲ ಸೇವೆ ಸಲ್ಲಿಸಿ ಸೇವಾ ನಿವೃತ್ತಿ ಗೊಂಡು ಬೆಳ್ತಂಗಡಿ ಗೆ ಆಗಮಿಸಿದ ಲಾಯಿಲದ ಗಣೇಶ್ ಬಿ.ಎಲ್ ಅವರಿಗೆ ಶನಿವಾರ ತಾಲೂಕು ಮರಾಠಿ ಸಮಾಜ ಸೇವಾ ಸಂಘದ ನೇತೃತ್ವದಲ್ಲಿ ಭವ್ಯ ಸ್ವಾಗತ ಕೋರಲಾಯಿತು.ಬೆಳಿಗ್ಗೆ ಕುತ್ಯಾರು ದೇವಸ್ಥಾನದಿಂದ ತೆರೆದ ವಾಹನದಲ್ಲಿ ಗಣೇಶ್ ಬಿಎಲ್. ಅವರನ್ನು ಕರೆತರಲಾಯಿತು.ಬೆಳ್ತಂಗಡಿ ಬಸ್ ನಿಲ್ದಾಣದ ಸಮೀಪ ಅಭಿನಂದಬಾ ಸಭೆ ನಡೆಯಿತು.ಸಭೆಯನ್ನು ಉದ್ದೇಶಿಸಿ ಮಾತನಾಡಿದ ಮರಾಠಿ ಸಂಘದ ಮುಖಂಡ ಉಮೇಶ್ ಕೇಳ್ತಡ್ಕದೇಶಸೇವೆ ಎನ್ನುವುದು ಸುಲಭವಾದ ಕೆಲಸವಲ್ಲ. ಅಲ್ಲಿ ತುಂಬಾ ತ್ಯಾಗ ಇರುತ್ತದೆ. ಅವರ ತ್ಯಾಗವನ್ನು ನಾವು ಗುರುತಿಸಿ...
ಸವಣಾಲು ದೇವಸ್ಥಾನದ ಅರ್ಚಕ ನೇಣು ಬಿಗಿದು ಆತ್ಮಹತ್ಯೆ
ಬೆಳ್ತಂಗಡಿ : ಬೆಳ್ತಂಗಡಿ ತಾಲೂಕಿನ ಸವಣಾಲುಗ್ರಾಮದ ಶ್ರೀ ದುರ್ಗಾ ಕಾಳಿಕಾಂಬ ದೇವಸ್ಥಾನದ ಅರ್ಚಕ ಶಿರ್ಸಿ ಮೂಲದ ವಿಜಯ್ ಭಟ್ (29ವ) ಎಂಬವರು ದೇವಸ್ಥಾನದ ಹಿಂಬಾಗದಲ್ಲಿ ತಾನು ವಾಸವಾಗಿದ್ದ ಮನೆಯ ಪಕ್ಕಸಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಮೇ 4 ರಂದು ನಡೆದಿದೆ. ಕಳೆದ ಒಂದು ವರ್ಷದ ಹಿಂದೆ ಮದುವೆಯಾಗಿದ್ದ ಇವರಿಗೆ ಮೂರು ತಿಂಗಳ ಮಗು ಕೂಡ ಇದೆ. ಅವರು ವಾಸವಿದ್ದ ಕೊಠಡಿಯಲ್ಲಿ ಒಬ್ಬರೇ ಇದ್ದು, ದೇವಸ್ಥಾನಕ್ಕೆ ಎಂದಿನಂತೆ ಭಕ್ತರು ಪೂಜೆಗಾಗಿ ಬಂದಾಗ ಮೇ 4ರಂದು ಅರ್ಚಕರು ಬಂದಿರಲಿಲ್ಲ. ಕ್ಷೇತ್ರಕ್ಕೆ ಬಂದ ಭಕ್ತರು ಅರ್ಚಕರನ್ನು...
ಕಾಜೂರು ಉರೂಸ್ ಗೆ ಸಂಭ್ರಮದ ಚಾಲನೆ
ಬೆಳ್ತಂಗಡಿ: ನಮ್ಮ ವಸ್ರ್ತಧಾರಣೆ ಮತ್ತು ನಮ್ಮ ಬಾಹ್ಯ ಸೌಂದರ್ಯ ದ ಮೇಲೆ ಅಲ್ಲಾಹನ ನೋಟ ಇರುವುದಲ್ಲ. ಅವನ ನೋಟ ನಮ್ಮ ಪರಿಶುದ್ಧ ಅಂತರ್ ಮನಸಿನ ಮೇಲೆ. ಆದ್ದರಿಂದ ಪರಸ್ಪರ ಅಸೂಯೆ ಇಲ್ಲದ, ದ್ವೇಷ ಹಗೆತನವಿಲ್ಲದ, ಅಹಂಕಾರವಿಲ್ಲದ, ಶುದ್ಧ ಹೃದಯಿಗಳಾಗೋಣ. ಆ ಮೂಲಕ ಅವನ ಇಷ್ಟದಾಸರಾದ ಔಲಿಯಾಗಳ ಕೃಪೆ ಪಡೆಯೋಣ. ಎಂದು ದ.ಕ ಜಿಲ್ಲಾ ಸುನ್ನೀ ಸಂಯುಕ್ತ ಜಮಾಅತ್ ಖಾಝಿ ಸಯ್ಯಿದ್ ಕೂರತ್ ತಂಙಳ್ ಹೇಳಿದರು.ಕಾಜೂರು ದರ್ಗಾ ಶರೀಫ್‌ನಲ್ಲಿ ಮೇ.3 ರಂದು ನಡೆದ ಉರೂಸ್ ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಆಶೀರ್ವಚನ ನೀಡಿದರು.ಉದ್ಘಾಟನೆಯನ್ನು...















