ಕ್ಯಾನ್ಸರ್ ರೋಗಿಗಳಿಗೆ ಕೇಶದಾನದ ಮೂಲಕ ಮಾದರಿಯಾದ ಭುವನೇಶ್ ಗೇರುಕಟ್ಟೆ

0

ಬೆಳ್ತಂಗಡಿ: ಕ್ಯಾನ್ಸರ್ ಪೀಡಿತರಿಗೆ ಕೇಶದಾನ ಮಾಡುವ ಮೂಲಕ ಬೆಳ್ತಂಗಡಿ ತಾಲೂಕು ಪತ್ರಕರ್ತರ ಸಂಘದ ಸದಸ್ಯ, ಜಿಲ್ಲಾ ಸಂಘದ ಕಾರ್ಯದರ್ಶಿ ಭುವನೇಶ್ ಗೇರುಕಟ್ಟೆ ಅವರು ಇತರರಿಗೂ ಮಾದರಿಯಾಗಿದ್ದಾರೆ. ಭುವನೇಶ್‌ ಗೇರುಕಟ್ಟೆ ಅವರು ಕಳೆದ ಕೆಲವು ವರ್ಷಗಳಿಂದ ಉದ್ದ ಕೂದಲು ಅನ್ನು ಬೆಳೆಸಿಕೊಂಡಿದ್ದ ಕ್ಯಾನ್ಸರ್ ಪೀಡಿತರಿಗೆ ನೆರವಾಗುವ ಉದ್ದೇಶದಿಂದ ತಮ್ಮ ಕೇಶದಾನ ಮಾಡಿದ್ದಾರೆ. ಅಷ್ಟೇ ಅಲ್ಲದೆ ಈಗಾಗಲೇ ನೇತ್ರದಾನಕ್ಕೂ ಮುಂದಾಗಿ ನೋಂದಣಿ ಮಾಡಿಕೊಂಡಿದ್ದಾರೆ.

ಗುರುವಾಯನಕೆರೆಯಲ್ಲಿ ಬೈಕ್ ಅಪಘಾತ ಸವಾರನಿಗೆ ಗಂಭೀರ ಗಾಯ

0

ಗುರುವಾಯನಕೆರೆ: ಗುರುವಾಯನಕೆರೆಯ ಜೈನ್ ಪೇಟೆಯ ತಿರುವು ರಸ್ತೆಯಲ್ಲಿ ರಾತ್ರಿ ಬಸ್ಸು ಮತ್ತು ಬೈಕ್ ನಡುವೆ ಭೀಕರ ರಸ್ತೆ ಅಪಘಾತ ಸಂಭವಿಸಿ ಬೈಕ್ ಸವಾರ ಗಂಭೀರ ಗಾಯಗೊಂಡ ಘಟನೆ ಮೇ.2ರಂದು ರಾತ್ರಿ ನಡೆದಿದೆ. ಬೈಕ್‌ ಸವಾರ ಗೇರುಕಟ್ಟೆ ನಿವಾಸಿ ಶಿವಶಂಕರ್ ಎಂದು ತಿಳಿದು ಬಂದಿದ್ದು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೆಳ್ತಂಗಡಿ ಸಂತ ಲಾರೆನ್ಸ್ ಕ್ಯಾಥೆಡ್ರಲ್ ಚರ್ಚ್ ನಲ್ಲಿ ಮೇ 4ರಂದು 22ಮಕ್ಕಳಿಗೆ ಪವಿತ್ರ ಪರಮ ಪ್ರಸಾದ

0

ಬೆಳ್ತಂಗಡಿ : ಬೆಳ್ತಂಗಡಿ ಸಂತ ಲಾರೆನ್ಸ್ ಕ್ಯಾಥೆಡ್ರಲ್ ಚರ್ಚ್ ನಲ್ಲಿ ಮೇ 4ರಂದು 22ಮಕ್ಕಳಿಗೆ ಪವಿತ್ರ ಪರಮ ಪ್ರಸಾದ ನಡೆಯಲಿದೆ ಎಂದು ಧರ್ಮಗುರುಗಳು ಹಾಗೂ ಚರ್ಚ್ ಆಡಳಿತ ಮಂಡಳಿ ತಿಳಿಸಿದೆ. ಅತ್ಯಂತ ಸಂಭ್ರಮದಿಂದ ನಡೆಯುವ ಪರಮಪ್ರಸಾದ ಸ್ವೀಕಾರ ಕಾರ್ಯಕ್ರಮದಲ್ಲಿ ಆಗ್ನೆಸ್ ಮರಿಯ,ಅನ್ನಾ ಮರಿಯಾ,ಲಿಯಾನಾ ರೋಸ್ಲಿನ್, ಕ್ರಿಸ್ ಗ್ರೇಸ್, ಎಲಿಜಬೇತ್, ಜ್ವೆಲ್ ಕ್ರಿಸ್ಟೀನಾ ಆ್ಯಂಜಲ್, ರೋಸಾ, ಅನ್ನಮ್ಮಾ, ಲಜ್ಮಿ, ಫೆಬಾ ಮರಿಯಾ, ಜೋನಾಥ್, ಶೋನ್, ಡೆಲ್ವಿನ್, ಎಲೈಟ್ ಅಬ್ರಹಾಂ, ಅಲ್ಫೋನ್ಸ್ ಸೆಬಾಸ್ಟಿಯನ್, ಜೀವನ್ ರಾಯ್ ಅವರು ಪರಮಪ್ರಸಾದ ಸ್ವೀಕರಿಸಲಿದ್ದಾರೆ.

ರಾಹುಲ್ ಗಾಂಧಿ ರಾಯ್ ಬರೇಲಿಯಿಂದ ಚುನಾವಣಾ ಕಣಕ್ಕೆ

0

ಬೆಳ್ತಂಗಡಿ; ರಾಹುಲ್ ಗಾಂಧಿ ಅವರು ರಾಯ್ ಬರೇಲಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕೆ ಇಳಿಯುವ ಮೂಲಕ ಉತ್ತರಪ್ರದೇಶ ಚುನಾವಣೆಯಲ್ಲಿ ಹೊಸ ಉತ್ಸಾಹ ಮೂಡಿಸಿದ್ದಾರೆ.ಗಾಂಧೀ ಕುಟುಂಬದ ಕ್ಷೇತ್ರವಾಗಿದ್ದ ರಾಯ್ ಬರೇಲಿಯನ್ನು ‌ಈ ಹಿಂದೆ ಸೋನಿಯಾ ಗಾಂಧಿಯವರು ಪ್ರತಿನಿಧಿಸಿದ್ದರು. ಕಳೆದ ಚುನಾವಣೆಯಲ್ಲಿ ಕ್ಷೇತ್ರವನ್ನು ಬಿಜೆಪಿ ಗೆದ್ದುಕೊಂಡಿತ್ತು. ಕಳೆದ ಚುನಾವಣೆಯಲ್ಲಿ ರಾಹುಲ್ ಗಾಂಧಿ ಅವರು ಕೇರಳದ ವಯನಾಡ್ ಕ್ಷೇತ್ರದಿಂದ ಸಂಸದರಾಗಿದ್ದರು. ಈ ಬಾರಿಯ ಚುನಾವಣೆಯಲ್ಲಿ ರಾಹುಲ್ ಗಾಂಧಿ ಅವರು ವಯನಾಡ್ ಕ್ಷೇತ್ರದಲ್ಲಿ ಕಣಕ್ಕೆ ಇಳಿದಿದ್ದರು. ಇದೀಗ ರಾಹುಲ್ ಅವರು ಎರಡನೆಯ ಕ್ಷೇತ್ರವಾಗಿ ರಾಯ್ ಬರೇಲಿಯಲ್ಲಿಯೂ ಕಣಕ್ಕೆ ಇಳಿಯಲಿದ್ದಾರೆ ಎಂದು ಕಾಂಗ್ರೆಸ್...

ಆರು ವಿಧಾನಪರಿಷತ್ ಸ್ಥಾನಗಳಿಗೆ ಜೂನ್ 3ರಂದು ಚುನಾವಣೆ

0

ಬೆಂಗಳೂರು : ರಾಜ್ಯ ವಿಧಾನಪರಿಷತ್‌ನ 6 ಸ್ಥಾನಗಳಿಗೆ ಆಯೋಗವು ಚುನಾವಣೆಯನ್ನು ಘೋಷಣೆ ಮಾಡಿದ್ದು, 3 ಶಿಕ್ಷಕರ ಕ್ಷೇತ್ರ ಮತ್ತು 3 ಪದವೀಧರ ಕ್ಷೇತ್ರಗಳಿಗೆ ಚುನಾವಣೆಗೆ ದಿನಾಂಕ ನಿಗದಿಯಾಗಿದೆ. ಜೂನ್ 3ರಂದು ಬೆಳಗ್ಗೆ 8 ಗಂಟೆಯಿಂದ ಸಂಜೆ 4 ಗಂಟೆವರೆಗೆ ಮತದಾನ ನಡೆಯಲಿದೆ. ಜೂನ್ 6ರಂದು ಫಲಿತಾಂಶ ಪ್ರಕಟವಾಗಲಿದೆ ಎಂದು ಪ್ರಕಟನೆ ತಿಳಿಸಿದೆ. ನಾಮಪತ್ರ ಸಲ್ಲಿಕೆಗೆ ಮೇ.16 ಕೊನೆಯ ದಿನವಾಗಿದ್ದು, ನಾಮಪತ್ರ ಹಿಂಪಡೆಯಲು ಮೇ.20 ಕೊನೆಯ ದಿನವಾಗಿದೆ. ಈಶಾನ್ಯ ಪದವೀಧರ, ನೈಋತ್ಯ ಪದವೀಧರ, ಬೆಂಗಳೂರು ಪದವೀಧರ, ಆಗ್ನಿಯ ಶಿಕ್ಷಕರ, ನೈಋತ್ಯ ಶಿಕ್ಷಕರ, ದಕ್ಷಿಣ ಶಿಕ್ಷಕರ ಕ್ಷೇತ್ರಕ್ಕೆ ಚುನಾವಣೆ ನಡೆಯಲಿದೆ.

ಮಲೆಬೆಟ್ಟು ಹಾಲು ಉತ್ಪಾದಕರ ಸಹಕಾರ ಸಂಘದ ಆಡಳಿತ ಮಂಡಳಿ ವಜಾ, ಆಡಳಿತಾಧಿಕಾರಿ ನೇಮಿಸಿ ಆದೇಶ

0

ಬೆಳ್ತಂಗಡಿ: ಕಳೆದ ಏಳು ತಿಂಗಳುಗಳಿಂದ ಮಲೆಬೆಟ್ಟು ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ನಡೆಯುತ್ತಿದ್ದ ಜಟಾಪಟಿಗೆ ಕೊನೆಗೂ ಮುಕ್ತಿ ಸಿಕ್ಕಿದ್ದು, ಸಹಕಾರ ಸಂಘಗಳ ಸಹಾಯಕ ನಿಬಂಧಕರು ಪುತ್ತೂರು ವಿಭಾಗ ಇವರು ಮಲೆಬೆಟ್ಟು ಹಾಲು ಉತ್ಪಾದಕರ ಸಹಕಾರ ಸಂಘ ಬೆಳ್ತಂಗಡಿ ತಾಲೂಕು ಇದರ ಆಡಳಿತ ಮಂಡಳಿಯನ್ನು ರದ್ದುಪಡಿಸಿ, ವಿಶೇಷಾಧಿಕಾರಿಯನ್ನು ನೇಮಿಸಿ ಆದೇಶವನ್ನು ಹೊರಡಿಸಿದ್ದಾರೆ. ಸಂಘದಲ್ಲಿ ಅವ್ಯವಹಾರ ನಡೆಯುತ್ತಿರುವ ಬಗ್ಗೆ ಸದಸ್ಯರು ಮತ್ತು ಆಡಳಿತ ಮಂಡಳಿಯ ಕೆಲ ನಿರ್ದೇಶಕರುಗಳಿಂದ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ 70ಕ್ಕೂ ಹೆಚ್ಚು ಸದಸ್ಯರು 2023ರ ನವೆಂಬರ್ 29ರಂದು ಸಂಘದ ಎದುರು ಪ್ರತಿಭಟನೆಯನ್ನು ನಡೆಸಿದ್ದು,...

ಮಾಚಾರಿನಲ್ಲಿ ಭೀಕರ ಅಪಘಾತ ಬೈಕ್ ಸವಾರ ಪವಾಡ ಸದೃಶ ಪಾರು

0

ಬೆಳ್ತಂಗಡಿ; ಬೆಳಾಲು ಉಜಿರೆ ರಸ್ತೆಯಲ್ಲಿ ಮಾಚಾರು ಸಮೀಪ ಬೈಕ್ ಹಾಗೂ ಕಾರಿನ ನಡುವೆ ಇಂದು ಅಪಘಾತ ಸಂಭವಿಸಿದೆ.ಅಪಘಾತದಲ್ಲಿ ಬೈಕ್ ಎರಡು ತುಂಡಾಗಿ ಬಿದ್ದಿದೆ. ಆದರೆ ಬೈಕಿನಲ್ಲಿದ್ದವರು ಪವಾಡಸದೃಶ್ಯವಾಗಿ ಅಪಾಯದಿಂದ ಪಾರಾಗಿರುವುದಾಗಿ ತಿಳಿದು ಬಂದಿದೆ‌. ಅಪಘಾತದ ವೇಳೆ ಬೈಕ್ ಸವಾರ ಬೈಕಿನಿಂದ ಎಸೆಯಲ್ಪಟ್ಟಿದ್ದು ರಸ್ತೆಬದಿಗೆ ಬಿದ್ದಿದ್ದಾರೆ. ಆದರೆ ಯಾವುದೇ ಹೆಚ್ಚಿನ ಗಾಯಗಳಾಗಿಲ್ಲ. ಕಾರಿಗೂ ಹಾನಿಯಾಗಿದ್ದು ಕಾರಿನಲ್ಲಿದ್ದವರೂ ಅಪಾಯದಿಂದ ಪಾರಾಗಿದ್ದಾರೆ.

ನೂರುಲ್ ಹುದಾ ದರ್ಸ್ ಉಳ್ತೂರು ಪ್ರಾರಂಭೋತ್ಸವ

0

ಬೆಳ್ತಂಗಡಿ; ವೇಣೂರುಸಮೀಪದ ಉಳ್ತೂರಿನ ಮುಹಿಯುದ್ದೀನ್ ಜುಮಾ ಮಸೀದಿಯಲ್ಲಿ ಹಲವು ವರ್ಷಗಳಿಂದ ನಿರಂತರವಾಗಿ ನಡೆದು ಬರುತ್ತಿರುವ ನೂರುಲ್ ಹುದಾ ದರ್ಸ್ ಇದರ 2024-25ನೇ ಸಾಲಿನ ಪ್ರಾರಂಭೋತ್ಸವ ದಿನಾಂಕ 29/04/2024 ರಂದು ಬಹು ಸಾದಾತ್ ತಂಙಳ್ ನೇತೃತ್ವದಲ್ಲಿ ನಡೆಯಿತುದರ್ಸ್ ವಿದ್ಯಾರ್ಥಿಗಳಿಗೆ ಉಪದೇಶ ನೀಡಿ ಬಹು ಸಾದಾತ್ ತಂಙಳ್ ಪ್ರಾರ್ಥನೆಯೊಂದಿಗೆ ದರ್ಸ್ ಪ್ರಾರಂಭಿಸಿದರು ಕಾರ್ಯಕ್ರಮದಲ್ಲಿ ಉಳ್ತೂರು ಮುದರಿಸ್ ಮುಹಮ್ಮದ್ ಫಾಳಿಲಿ ಕಾಮಿಲ್ ಸಖಾಫಿ ಮಸೀದಿ ಅಧ್ಯಕ್ಷರಾದ ಅಬ್ಬಾಸ್ ಹಾಜಿ ಉಳ್ತೂರು ಸೇರಿದಂತೆ ಹಲವರು ಉಪಸ್ಥಿತರಿದ್ದರು

ಗ್ಯಾರಂಟಿ ಯೋಜನೆಯಿಂದ ಹೆಣ್ಣು ಮಕ್ಕಳು ದಾರಿ ತಪ್ಪಿಲ್ಲ ಕುಮಾರಸ್ವಾಮಿಯವರ ಕುಟುಂಬದಕುಡಿಯೇ ದಾರಿ ತಪ್ಪಿದ್ದಾನೆ; ರಕ್ಷಿತ್ ಶಿವರಾಂ ಆರೋಪ

0

ಬೆಳ್ತಂಗಡಿ; ಹಾಸನದ ಹಾಲಿ ಸಂಸದ , ಬಿಜೆಪಿ , ಜೆಡಿಎಸ್ ಮೈತ್ರಿ ಕೂಟದ ಲೋಕಸಭಾ ಅಭ್ಯರ್ಥಿಯಾದ ಪ್ರಜ್ವಲ್ ರೇವಣ್ಣ ನಡೆಸಿದ ಜಗತ್ತಿನ ಅತ್ಯಂತ ದೊಡ್ಡ ಲೈಂಗಿಕ ಹಗರಣದ ಬಗ್ಗೆ ತನಿಖೆಗಾಗಿ ರಾಜ್ಯ ಸರ್ಕಾರ ಎಸ್.ಐ.ಟಿ ನೇಮಕ ಮಾಡಿರುವುದು ಸ್ವಾಗತರ್ಹ. ಭೇಟಿ ಬಚಾವೋ , ಭೇಟಿ ಪಡಾವೋ ಖ್ಯಾತಿಯ ಪ್ರಧಾನಿ ನರೇಂದ್ರ ಮೋದಿ ಈ ಬಗ್ಗೆ ಮೌನವಹಿಸುವ ಮೂಲಕ ನಕಲಿತನ ಪ್ರದರ್ಶಿಸುತ್ತಿದ್ದಾರೆ. ಎಂದು ಕೆ.ಪಿ.ಸಿ.ಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ಆರೋಪಿಸಿದ್ದಾರೆ. ಮಹಿಳೆಯರನ್ನು ಮಾತೆ , ದೇವತೆ ಎಂದೇಳುವ ಬಿಜೆಪಿಗರು ಈ ಲೈಂಗಿಕ ದೌರ್ಜನ್ಯ, ಹಿಂಸೆಯ...

ಕಡಿರುದ್ಯಾವರ ಅವೈಜ್ಞಾನಿಕ ರೀತಿಯಲ್ಲಿ ರಸ್ತೆ ನಿರ್ಮಾಣದ ಆರೋಪ, ಕಾಮಗಾರಿ ತಡೆದ ಗ್ರಾಮಸ್ಥರು

0

ಬೆಳ್ತಂಗಡಿ; ಕಡಿರುದ್ಯಾವರ ಗ್ರಾಮದ ಉದ್ದದ ಪಲ್ಕೆ-ಕೋಡಿರಸ್ತೆಗೆ ನಿರ್ಮಾಣವಾಗುತ್ತಿದ್ದ ಕಾಮಗಾರಿ ಅವೈಜ್ಞಾನಿಕವಾಗಿ ನಿರ್ಮಿಸಲಾಗುತ್ತಿದೆ ಎಂದು ಆರೋಪಿಸಿ ಗ್ರಾಮಸ್ಥರು ರಸ್ತೆ ಕಾಮಗಾರಿಗೆ ತಡೆಯೊಡ್ಡಿದ ಘಟನೆ ಬುಧವಾರ ನಡೆದಿದೆ.ಕಡಿರುದ್ಯಾವರ ಗ್ರಾಮದ ಉದ್ದದ ಪಲ್ಕೆ-ಕೋಡಿರಸ್ತೆ ನಡಿವೆ ಸುಮಾರು 200 ಮೀ.ಕಾಂಕ್ರೀಟ್ ರಸ್ತೆಗೆ ಜಿ.ಪಂ. ನಿಧಿಯಿಂದ ಸುಮಾರು 10 ಲಕ್ಷ ರೂ. ಅನುದಾನದಡಿ ಕಾಮಗಾರಿ ಕೈಗೆತ್ತಿಕೊಳ್ಳಲಾಗಿತ್ತು. ಕಾಂಕ್ರೀಟ್ ರಸ್ತೆ ನಿರ್ಮಾಣದ ವೇಳೆ ಸ್ಕಿಡ್ಡರ್ ಅಳವಡಿಸದೆ ನಿರ್ಮಿಸಿದ್ದಾರೆ. ಇದರಿಂದ ರಸ್ತೆ ಒಂದು ವರ್ಷವೂ ಬಾಳಿಕೆ ಬರುವುದಿಲ್ಲ. ಸಮರ್ಪಕವಾಗಿ ಕಾಂಕ್ರೀಟ್ ಒಳಗಡೆ ಸೇರಿಕೊಳ್ಳಲು ಇದರ ಅವಶ್ಯಕತೆಯಿದೆ. ಈ ವಿಧಾನ ಅಳವಡಿಸದಿರುವ ಕುರಿತು ಗ್ರಾಮಸ್ಥರು...