ಕೊಲ್ಪೆದ ಬೈಲಿನಲ್ಲಿ ವ್ಯಕ್ತಿ ನೇಣು ಬಿಗಿದು ಆತ್ಮಹತ್ಯೆ
ಬೆಳ್ತಂಗಡಿ; ಮಾಲಾಡಿ ಗ್ರಾಮದ ಕೊಲ್ಪೆದ ಬೈಲು ನಿವಾಸಿಯೊಬ್ಬ ಮನೆಯಲ್ಕಿಯೇ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಸಂಭವಿಸಿದೆ.ಮೃತ ವ್ಯಕ್ತಿ ಸ್ಥಳೀಯ ನಿವಾಸಿ ವಕೇತಿಯನಗ ಡಿಸೋಜ(77) ಎಂಬವರಾಗಿದ್ದಾರೆ.ಈ ಬಗ್ಗೆ ಮೃತರ ಪತ್ನಿ ಪೂಂಜಾಲಕಟ್ಟೆ ಪೊಲೀಸರಿಗೆ ದೂರು ನೀಡಿದ್ದು ಕಳೆದ ಕೆಲದಿನಗಳಿಂದ ವಲೇರಿಯನ್ ಡಿಸೋಜ ಅವರು ಅನಾರೋಗ್ಯದಿಂದ ಬಳಲುತ್ತಿದ್ದು ಮೇ 15ರಂದು ಮನೆಯಲ್ಕಿ ಯಾರೂ ಇಲ್ಲದ ವೇಳೆ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಿಳಿಸಿದ್ದಾರೆ. ಪೂಂಜಾಲಕಟ್ಟೆ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಬೆಳ್ತಂಗಡಿಯಲ್ಲಿ ಬೀಡಿ ಕಾರ್ಮಿಕರ ಪ್ರತಿಭಟನೆ ರಾತ್ರಿಯೂ ಮುಂದುವರಿದ ಧರಣಿ
ಬೆಳ್ತಂಗಡಿ; ಭಾರತ್ ಬೀಡಿ ಬೆಳ್ತಂಗಡಿ ಬ್ರಾಂಚ್ ಅನ್ನು ಮುಚ್ಚುಲು ಮುಂದಾಗಿರುವ ಮಾಲಕರ ನೀತಿಯನ್ನು ವಿರೋಧಿಸಿ ಬೆಳ್ತಂಗಡಿ ಭಾರತ್ ಬೀಡಿ ಕಂಪೆನಿಯ ಎದುರು ಸಿಐಡಿಯು ನೇತೃತ್ವದಲ್ಲಿ ಅನಿರ್ಧಿಷ್ಟ ಧರಣಿ ಸತ್ಯಾಗ್ರಹ ಗುರುವಾರ ಆರಂಭಗೊಂಡಿದೆ.ಬೆಳ್ತಂಗಡಿ ತಾಲೂಕು ಬೀಡಿ ಕಾರ್ಮಿಕರ ಸಂಘ (ಸಿಐಟಿಯು)ಭಾರತ್ ಬೀಡಿಗುತ್ತಿಗೆದಾರರ ಸಂಘ, ಬೆಳ್ತಂಗಡಿ ತಾಲೂಕು ಬೀಡಿ ಗುತ್ತಿಗೆಕೆಲಸ ಮಾಡುವವರ ಸಂಘದ ಸಹಕಾರದೊಂದಿಗೆ ಅನಿರ್ಧಿಷ್ಟ ಮುಷ್ಕರ ಆರಂಭಗೊಂಡಿದ್ದುನೂರಾರು ಸಂಖ್ಯೆಯಲ್ಲಿ ಬೀಡಿ ಕಾರ್ಮಿಕರು ಧರಣಿಯಲ್ಲಿ ಭಾಗಿಗಳಾಗುತ್ತಿದ್ದಾರೆ.ಅನಿರ್ಧಿಷ್ಟ ಮುಷ್ಕರದ ಉದ್ಘಾಟನೆಯನ್ನು ಬೀಡಿ ಫೆಡರೇಶನ್ ನ ರಾಜ್ಯ ಅಧ್ಯಕ್ಷರಾದ ಜೆ. ಬಾಲಕೃಷ್ಣ ಶೆಟ್ಟಿ ನೆರವೇರಿಸಿ ಮಾತನಾಡುತ್ತಾ ಯಾವುದೇ ಕಾರಣಕ್ಕೂ...
ವಕೀಲರ ಸಂಘದಿಂದ ನ್ಯಾಯಾಧೀಶರಿಗೆ ಬೀಳ್ಕೊಡುಗೆ
ಬೆಳ್ತಂಗಡಿ; ವಕೀಲರ ಸಂಘ ರಿ ಬೆಳ್ತಂಗಡಿ ಇದರ ವತಿಯಿಂದ ವಕೀಲರ ಭವನದಲ್ಲಿ ಮಾನ್ಯ ಪ್ರಧಾನ ಹಿರಿಯ ನ್ಯಾಯಾಧಿಶರಾದ ದೇವರಾಜು ಹೆಚ್ ಎಂ ರವರಿಗೆ ಬೀಳ್ಕೊಡುಗೆ ಸಮಾರಂಭ ಗುರುವಾರ ನಡೆಯಿತು.ಕಾರ್ಯಕ್ರಮದಅಧ್ಯಕ್ಷತೆಯನ್ನು ಬೆಳ್ತಂಗಡಿ ತಾಲೂಕು ವಕೀಲರ ಸಂಘದ ಅಧ್ಯಕ್ಷರಾದ ವಸಂತ ಮರಕಡ ಅವರು ವಹಿಸಿ ಶುಭ ಹಾರೈಸಿದರುಮುಖ್ಯ ಅಥಿತಿಗಳಾಗಿ ಪ್ರಧಾನ ಸಿವಿಲ್ ನ್ಯಾಯಾಧೀಶರು ಮತ್ತು ಜೆ ಎಂ ಎಫ್ ಸಿ ಬೆಳ್ತಂಗಡಿ ಸಂದೇಶ್ ಕೆ ಜೆ ಅವರು ಭಾಗವಹಿಸಿ ಶುಭ ಹಾರೈಸಿದರು. ಹಿರಿಯ ನ್ಯಾಯವಾದಿ ಬಿ.ಕೆ ಧನಂಜಯ ರಾವ್ ಸನ್ಮಾನಿತರ ಬಗ್ಗೆ ಮಾತನಾಡಿದರು. ಹಿರಿಯ ವಕೀಲರ ಸಮಿತಿ...
ಭಾರತ್ ಬೀಡಿ ಕಂಪೆನಿ ಎದುರು ಕಾರ್ಮಿಕರ ಅನಿರ್ಧಿಷ್ಟ ಧರಣಿ ಆರಂಭ
ಬೆಳ್ತಂಗಡಿ; ಭಾರತ್ ಬೀಡಿ ಬೆಳ್ತಂಗಡಿ ಬ್ರಾಂಚ್ ಅನ್ನು ಮುಚ್ಚುಲು ಮುಂದಾಗಿರುವ ಮಾಲಕರ ನೀತಿಯನ್ನು ವಿರೋಧಿಸಿ ಬೆಳ್ತಂಗಡಿ ಭಾರತ್ ಬೀಡಿ ಕಂಪೆನಿಯ ಎದುರು ಸಿಐಡಿಯು ನೇತೃತ್ವದಲ್ಲಿ ಅನಿರ್ಧಿಷ್ಟ ಧರಣಿ ಸತ್ಯಾಗ್ರಹ ಗುರುವಾರ ಆರಂಭಗೊಂಡಿದೆ.ಬೆಳ್ತಂಗಡಿ ತಾಲೂಕು ಬೀಡಿ ಕಾರ್ಮಿಕರ ಸಂಘ (ಸಿಐಟಿಯು)ಭಾರತ್ ಬೀಡಿಗುತ್ತಿಗೆದಾರರ ಸಂಘ, ಬೆಳ್ತಂಗಡಿ ತಾಲೂಕು ಬೀಡಿ ಗುತ್ತಿಗೆಕೆಲಸ ಮಾಡುವವರ ಸಂಘದ ಸಹಕಾರದೊಂದಿಗೆ ಅನಿರ್ಧಿಷ್ಟ ಮುಷ್ಕರ ಆರಂಭಗೊಂಡಿದ್ದುನೂರಾರು ಸಂಖ್ಯೆಯಲ್ಲಿ ಬೀಡಿ ಕಾರ್ಮಿಕರು ಧರಣಿಯಲ್ಲಿ ಭಾಗಿಗಳಾಗುತ್ತಿದ್ದಾರೆ. ಅನಿರ್ಧಿಷ್ಟ ಮುಷ್ಕರದ ಉದ್ಘಾಟನೆಯನ್ನು ದಕ್ಷಿಣ ಕನ್ನಡ ಜಿಲ್ಲಾ ಬೀಡಿ ಕಾರ್ಮಿಕರ ಸಂಘ (ಸಿಐಟಿಯು) ಜಿಲ್ಲಾ ಅಧ್ಯಕ್ಷರಾದ ಬಾಲಕೃಷ್ಣ ಶೆಟ್ಟಿ ನೆರವೇರಿಸಿ...
ಹೇಡ್ಯ ನಿವಾಸಿ ಎಸ್..ಪಿ ಮ್ಯಾಥ್ಯೂ ನಿಧನ
ಬೆಳ್ತಂಗಡಿ: ಕಡಿರುದ್ಯಾವರ ಗ್ರಾಮದ ಹೇಡ್ಯ ವಿಲಿಯಾತ್ ಪರಂಬಿಲ್ ನಿವಾಸಿ ಎಸ್. ಪಿ. ಮ್ಯಾಥ್ಯೂ ( 77) ಅಲ್ಪ ಕಾಲದ ಅಸೌಖ್ಯದಿಂದಮೇ 16ರಂದು ಸ್ವಗೃಹದಲ್ಲಿ ನಿಧನ ಹೊಂದಿದರು.ಕೃಷಿಕರಾಗಿದ್ದ ಅವರು ಸಾಮಾಜಿಕ ಕಳಕಳಿಯುಳ್ಳವರಾಗಿದ್ದರು. ಅತ್ಯುತ್ತಮ ಕಲಾವಿದರೂ ಆಗಿದ್ದು ಮುಂಡಾಜೆ ಸೈಂಟ್ ಮೇರಿ ಚರ್ಚ್ ಸಹಿತ ಹಲವೆಡೆ ನಾಟಕಗಳಲ್ಲಿ ಪಾತ್ರವಹಿಸುತ್ತಿದ್ದರು.ಮೃತರು ಪತ್ನಿ ಆನಿಸ್, ಪುತ್ರ ವಿಲ್ಸನ್,ಪುತ್ರಿ ಮಾಲಿನಿ ಹಾಗೂ ಬಂಧುವರ್ಗದವರನ್ನು ಅಗಲಿದ್ದಾರೆ
ಉಜಿರೆಯಲ್ಲಿ ಸೈಕಲ್ ಸವಾರನಿಗೆ ಕಾರು ಡಿಕ್ಕಿ ಗಂಭೀರ ಗಾಯ
ಬೆಳ್ತಂಗಡಿ; ಉಜಿರೆಯಲ್ಲಿ ಸೈಕಲ್ ಸವಾರನಿಗೆ ಕಾರು ಡಿಕ್ಕಿಹೊಡೆದು ಸವಾರ ಗಂಭೀರವಾಗಿ ಗಾಯಗೊಂಡ ಘಟನೆ ಸಂಭವಿಸಿದೆ.ಉಜಿರೆ ನಿವಾಸಿ ರಘುರಾಮ ಶೆಟ್ಟಿ ಎಂಬವರೇ ಗಾಯಗೊಂಡವರಾಗಿದ್ದಾರೆ.ಉಜಿರೆ ಎಸ್.ಡಿ.ಎಂ ಕಾಲೇಜಿನ ಬಳಿ ಕೆ.ಎ 14p 8594 ಕಾರನ್ನು ಅದರ ಚಾಲಕ ರಾಮ ಮೂರ್ತಿ ಎಂಬಾತ ದುಡುಕುತನದಿಂದ ಚಲಾಯಿಸಿ ಮುಂದಿನಿಂದ ಹೋಗುತ್ತಿದ್ದ ರಘುರಾಮ ಶೆಟ್ಟಿ ಅವರು ಚಲಾಯಿಸುತ್ತಿದ್ದ ಸೈಕಲ್ ಗೆ ಡಿಕ್ಕಿ ಹೊಡೆದಿದೆ. ಹೊಡೆತದ ರಭಸಕ್ಕೆ ರಸ್ತೆಗೆ ಎಸೆಯಲ್ಪಟ್ಟ ರಘುರಾಮ ಶೆಟ್ಟಿ ಅವರು ಗಂಭೀರವಾಗಿ ಗಾಯಗೊಂಡಿದ್ದು ಕೂಡಲೇ ಅವರನ್ನು ಉಜಿರೆಯ ಖಾಸಗಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ...
ಮಾಚಾರಿನಲ್ಲಿ ಸಿಡಿಲು ಬಡಿದು ಮನೆಗೆ ಹಾನಿ
ಬೆಳ್ತಂಗಡಿ; ಬುಧವಾರ ಸಂಜೆ ಬೆಳ್ತಂಗಡಿ ತಾಲೂಕಿನ ಬಹುತೇಕ ಕಡೆಗಳಲ್ಲಿ ಗುಡುಗು ಸಿಡಿಲಿನ ಅಬ್ಬರದೊಂದಿಗೆ ಮಳೆ ಸುರಿದಿದೆ.ಮಾಚಾರಿನಲ್ಲಿ ಸಿಡಿಲು ಬಡಿದು ಮನೆಯೊಂದಕ್ಕೆ ಹಾನಿ ಸಂಭವಿಸಿದೆ.ಮಾಚಾರು ನಿವಾಸಿ ಬಾಬು ಮುಗೇರ ಎಂಬವರ ಮನೆಗೆ ಸಿಡಿಲು ಬಡಿದಿದ್ದು ಮನೆಯ ಮೀಟರ್ ಬೀರ್ಡ್, ವಿದ್ಯುತ್ ಉಪಕರಣಗಳು, ಹಾಗೂ ಮನೆಯ ಗೋಡೆ ಹಾಗೂ ಶೀಟ್ ಗಳಿಗೂ ಹಾನಿ ಸಂಭವಿಸಿದೆ. ಸ್ಥಳಕ್ಕೆ ಗ್ರಾಮ ಲೆಕ್ಕಾಧಿಕಾರಿ ಪ್ರದೀಪ್, ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ಪ್ರಕಾಶ್ ಶೆಟ್ಟಿ ಹಾಗೂ ಇತರರು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಡಿ.ಕೆ.ಆರ್.ಡಿ.ಎಸ್ (ರಿ) ಬೆಳ್ತಂಗಡಿ ಹಾಗೂ ಕ್ರಾಸ್ ಸಂಸ್ಥೆ ಬೆಂಗಳೂರು ನೇತೃತ್ವದಲ್ಲಿ ಹವಾಮಾನ ಬದಲಾವಣೆ ಬಗ್ಗೆ ತರಬೇತಿ ಕಾರ್ಯಾಗಾರ
ಬೆಳ್ತಂಗಡಿ; ಮಿಸೇರಿಯೋರ್ ಪ್ರಾಯೋಜಕತ್ವದಲ್ಲಿ ಕ್ರಾಸ್ ಸಂಸ್ಥೆ ಬೆಂಗಳೂರು ಹಾಗೂ ಡಿ.ಕೆ.ಆರ್.ಡಿ.ಎಸ್ (ರಿ)ಬೆಳ್ತಂಗಡಿ ಇದರ ನೇತೃತ್ವದಲ್ಲಿ , ಸಿ.ಒ.ಡಿ.ಪಿ ಮಂಗಳೂರು, ಕಿಡ್ಸ್ ಪುತ್ತೂರು ಹಾಗೂ ಸಂಪದ ಉಡುಪಿ ಸಹಕಾರದಿಂದ ಕ್ಲಸ್ಟರ್ ಮಟ್ಟದ ಹವಾಮಾನ ಬದಲಾವಣೆ ಕುರಿತು ತರಬೇತಿ ಕಾರ್ಯಕ್ರಮವನ್ನು ದಿನಾಂಕ 15.05.2024 ರಂದು ಆಯೋಜಿಸಿಲಾಗಿತ್ತು. ಹವಾಮಾನ ಬದಲಾವಣೆಯು ಇತ್ತೀಚೆಗೆ ನಮ್ಮನ್ನು ಕಾಡುತ್ತಿರುವ ಅತೀ ದೊಡ್ಡ ಸಮಸ್ಯೆ, ಇದರ ಬಗ್ಗೆ ಅರಿವು ಪಡೆಯುವುದು ಅತ್ಯಗತ್ಯ ಎಂದು ಉದ್ಘಾಟನೆಯನ್ನು ನೆರವೇರಿಸಿದ ಕ್ರಾಸ್ ಸಂಸ್ಥೆ ಬೆಂಗಳೂರು ಇದರ ರಾಜ್ಯ ಸಂಯೋಜಕಿ ಲೈನಾ ಲಸ್ರಾದೊ ರವರು ತಿಳಿಸಿದರು. ಡಿ.ಕೆ.ಆರ್.ಡಿ.ಎಸ್ ಸಂಸ್ಥೆಯ...
ಹುಬ್ಬಳ್ಳಿ, ಮನೆಯಲ್ಲಿ ಮಲಗಿದ್ದ ಯುವತಿಯನ್ನು ಇರಿದು ಕೊಂದ ರಿಕ್ಷಾ ಚಾಲಕ
ಹುಬ್ಬಳ್ಳಿ: ಮನೆಯಲ್ಲಿ ಮಲಗಿದ್ದ ಯುವತಿಗೆ ಯುವಕನೊಬ್ಬ ಚಾಕು ಇರಿದು ಕೊಲೆ ಮಾಡಿ ಪರಾರಿಯಾದ ಪ್ರಕರಣ ಹುಬ್ಬಳ್ಳಿ ವೀರಾಪುರ ಓಣಿಯಲ್ಲಿ ಬುಧವಾರ ನಡೆದಿದೆ.ಅಂಜಲಿ ಅಂಬಿಗೇರ(19) ಮೃತಪಟ್ಟ ಯುವತಿ. ವೀರಾಪುರ ಓಣಿಯ ಮೂರನೇ ಕ್ರಾಸ್ ನಿವಾಸಿ, ಆಟೊ ಚಾಲಕ ಗಿರೀಶ ಸಾವಂತ ಕೊಲೆ ಮಾಡಿದ ಆರೋಪಿ. ಬೆಂಡಿಗೇರಿ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣ ದಾಖಲಾಗಿದೆ. 'ಪರಸ್ಪರ ಪ್ರೀತಿಸುತ್ತಿದ್ದ ಅಂಜಲಿ ಮತ್ತು ಗಿರೀಶ ನಡುವೆ ವೈಮನಸ್ಸು ಮೂಡಿತ್ತು ಎನ್ನಲಾಗಿದೆ. ಇದರಿಂದ ಕೋಪಗೊಂಡ ಗಿರೀಶ್, ಬುಧವಾರ ಬೆಳಗಿನ ಜಾವ 5ಗಂಟೆಗೆ ಅಂಜಲಿ ಮನೆಗೆ ಹೋಗಿ...
ಕೊಕ್ಕಡದಲ್ಲಿ ಪಶು ವೈದ್ಯರಿಂದ ಹಲ್ಲೆ ವ್ಯಕ್ತಿ ಸಾವು
ಬೆಳ್ತಂಗಡಿ: ಕುಡಿದ ಮತ್ತಿನಲ್ಲಿ ಪಶು ವೈದ್ಯರೋರ್ವರ ಹಲ್ಲೆಯಿಂದ ಸ್ಥಳೀಯ ನಿವಾಸಿ ಸಾವನ್ನಪ್ಪಿದ್ದಾರೆ ಎಂಬ ದೂರಿನ ಹಿನ್ನೆಲೆಯಲ್ಲಿ ಧರ್ಮಸ್ಥಳ ಪೊಲೀಸರು ಪ್ರಕರಣದ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಪಟ್ರಮೆ ಗ್ರಾಮದ ಮೈಕೆ ನಿವಾಸಿ ಕೃಷ್ಣ ಯಾನೆ ಕಿಟ್ಟ(55ವ.)ಮೃತಪಟ್ಟ ವ್ಯಕ್ತಿಯಾಗಿದ್ದಾರೆ. ಅನಾರೋಗ್ಯದಿಂದ ಪುತ್ತೂರಿನ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡು ಮೇ 13ರಂದು ಕೊಕ್ಕಡಕ್ಕೆ ಬಂದ ಕೃಷ್ಣ ಅವರಿಗೆ ಅಲ್ಲೇ ಕುಡಿದ ಮತ್ತಿನಲ್ಲಿದ್ದ ಕೊಕ್ಕಡದ ಪಶುವೈದ್ಯ ಕುಮಾರ್ ಎಂಬವರು ಹಲ್ಲೆ ನಡೆಸಿದರೆಂದು ಆರೋಪಿಸಲಾಗಿದೆ. ಅನಾರೋಗ್ಯದಿಂದ ಬಳಲುತ್ತಿದ್ದ ಕೃಷ್ಣ ಅವರು ಅಸ್ವಸ್ಥಗೊಂಡು ಬಿದ್ದು ಸ್ಥಳದಲ್ಲೇ ಸಾವನ್ನಪ್ಪಿದ ದೆಂದು ವರದಿಯಾಗಿದೆ.ಧರ್ಮಸ್ಥಳ ಠಾಣೆ ಪೊಲೀಸರು...















