ಲೋಕಾಯುಕ್ತ ಅಧಿಕಾರಿಗಳಿಂದ ವಿದ್ಯಾರ್ಥಿ ನಿಲಯ ಪರಿಶೀಲನೆ: ವ್ಯವಸ್ಥೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಅಧಿಕಾರಿಗಳು

0

ಬೆಳ್ತಂಗಡಿ: ನಗರದ ಪದವಿಪೂರ್ವ ಕಾಲೇಜು ಬಳಿ ಇರುವ ಮೆಟ್ರಿಕ್ ನಂತರದ ಬಾಲಕರ ವಸತಿನಿಲಯಕ್ಕೆ ಲೋಕಾಯುಕ್ತ ಅದಿಕಾರಿಗಳು ಬುಧವಾರ ಬೇಟಿ ನೀಡಿ ವಸತಿ ನಿಲಯದ ಮೂಲ ಸೌಕರ್ಯಗಳ ಬಗ್ಗೆ ಪರಿಶೀಲನೆ ನಡೆಸಿ ಇಲ್ಲಿನ ವ್ಯವಸ್ಥೆಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.ವಸತಿ ನಿಲಯದಲ್ಲಿನ ಕುಡಿಯುವ ನೀರು, ಅಡುಗೆಕೋಣೆ, ವಿಶ್ರಾಂತಿ ಕೊಠಡಿ, ಶೌಚಾಲಯ ವ್ಯವಸ್ಥೆಗಳ ಪರಿಶಿಲನೆ ಮಾಡಿದ ಅದಿಕಾರಿಗಳು ವಸತಿನಿಲಯದ ಮೆಲ್ವಿಚಾರಕರಿಂದ ಮಾಹಿತಿ ಪಡೆದರು. ಅಡುಗೆ ಕೋಣೆ ಪರಿಶೀಲಿಸಿದ ಅದಿಕಾರಿಗಳು ಅಹಾರ ದಾಸ್ತಾನು ಡಬ್ವಗಳ ಪರಿಶೀಲನೆ ಮಾಡಿದರು. ವಿದ್ಯಾರ್ಥಿಗಳಲ್ಲಿ ಮಾಹಿತಿ ಸಂಗ್ರಹಿಸಿದ ಅದಿಕಾರಿಗಳು ಅಹಾರ ವ್ಯವಸ್ಥೆ, ಇನ್ನಿತರ ಸೌಲಭ್ಯಗಳ...

ಹಿರಿಯ ಪತ್ರಕರ್ತ ವಿನಯ ಕುಮಾರ್ ಸೇಮಿತ ನಿಧನ

0

ಬೆಳ್ತಂಗಡಿ: ಹಿರಿಯ ಪತ್ರಕರ್ತ ತಾಲೂಕು ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷ ವೇಣೂರು ಕರಿಮಣೇಲು ಗುತ್ತು ವಿನಯಕುಮಾರ್ ಸೇಮಿತ ಬುಧವಾರ ಹೃದಯಾಘಾತದಿಂದ ನಿಧನರಾಗಿದ್ದಾರೆ.ಬೆಳ್ತಂಗಡಿ ತಾಲೂಕಿನಲ್ಲಿ ವಿವಿಧ ಪತ್ರಿಕೆಗಳಲ್ಲಿ ವರದಿಗಾರರಾಗಿ ಸೇವೆ ಸಲ್ಲಿಸಿದ್ದ ವಿನಯಕುಮಾರ್ ಸೇಮಿತ ಅವರು ಈ ವರ್ಷ ವೇಣೂರಿನಲ್ಲಿ ನಡೆದ ಭಗವಾನ್ ಬಾಹುಬಲಿ ಸ್ವಾಮಿಯ ಮಹಾ ಮಸ್ತಕಾಭಿಷೇಕದ ಸಂದರ್ಭದಲ್ಲಿ ಮಾದ್ಯಮ ಸಮಿತಿ ಸಂಚಾಲಕರಾಗಿ ಮಹತ್ವದ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿರ್ವಹಿಸಿದ್ದರು.

ಬೆಳ್ತಂಗಡಿಯ ಸಿಮ್ರಾ ಪರ್ವಿನ್ ಗೆ ಬ್ಯಾರೀಸ್ ವೆಲ್‌ಫೇರ್ ಅಸೋಸಿಯೇಷನ್ ನಿಂದ ಸನ್ಮಾನ

0

ಬೆಳ್ತಂಗಡಿ: ಬ್ಯಾರೀಸ್‌ ವೆಲ್‌ಫೇ‌ರ್ ಅಸೋಸಿಯೇಷನ್ ಬೆಂಗಳೂರುನಲ್ಲಿ ಹಮ್ಮಿಕೊಂಡಿದ್ದ 'ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪುರಸ್ಕಾರ' ಕಾರ್ಯಕ್ರಮದಲ್ಲಿ 2024 ನೇ ಸಾಲಿನ ಎಸ್.ಎಸ್.ಎಲ್.ಸಿ ಫಲಿತಾಂಶದಲ್ಲಿ 617 ಅಂಕಗಳನ್ನು ಪಡೆದ ಬೆಳ್ತಂಗಡಿ ಸಂಜಯನಗರಸಿಮ್ರಾ ಪರ್ವಿನ್ ಅವರನ್ನು ಕರ್ನಾಟಕ ರಾಜ್ಯ ಶಿಕ್ಷಣ ಸಚಿವ ಮಧು ಬಂಗಾರಪ್ಪ ಸನ್ಮಾನಿಸಿದರು. ನ್ಯಾಯಾಲಯದಲ್ಲಿಸರಕಾರಿ ಅಭಿಯೋಜಕ ( ಪಬ್ಲಿಕ್ ಪ್ರಾಸಿಕೂಟರ್) ಆಗಿರುವ ಮಹಮ್ಮದ್ ಶೌಕತ್ ಅಲಿ ಹಾಗೂ ಶಿಕ್ಷಕಿ ಸಫಿಯಾ ದಂಪತಿಯ ಪುತ್ರಿ ಯಾಗಿರುವ ಸಿಮ್ರಾ ಫರ್ವಿನ್ ಕಲಿಕೆ ಮತ್ತು ಕಲಿಕೇತರ ವಿಷಯದಲ್ಲೂ ಪ್ರತಿಭಾನ್ವಿತೆಯಾಗಿದ್ದಾರೆ. ಬೆಂಗಳೂರಿನಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಶಾಸಕರುಗಳಾದ ಎನ್.ಎ ಹಾರೀಸ್, ಬ್ಯಾರೀಸ್ ವೆಲ್ಫೇರ್ ಅಸೋಸಿಯೇಷನ್...

ಮೋದಿ 3 ಸಂಪುಟದಲ್ಲಿ ರಾಜ್ಯದ ಸಚಿವರುಗಳಿಗೆ ಮಹತ್ವದ ಖಾತೆಗಳು

0

ಬೆಂಗಳೂರು; ಮೋದಿ 3ಸಚಿವ ಸಂಪುಟದಲ್ಲಿ ಇದೀಗ ಖಾತೆಗಳ ಹಂಚಿಕೆ ನಡೆದಿದೆ. ಕರ್ನಾಟಕವನ್ನು ಪ್ರತಿನಿಧಿಸುತ್ತಿರುವ ಐವರು ಸಚಿವರುಗಳಿಗೂ ಮಹತ್ವದ ಖಾತೆಗಳೇ ಲಭಿಸಿರುವುದು ವಿಶೇಷ.ಕಳೆದ ಬಾರಿಯಂತೆ ನಿರ್ಮಲಾ ಸೀತಾರಾಮನ್‌ ಅವರಿಗೆ ಈ ಬಾರಿಯೂ ಹಣಕಾಸು ಖಾತೆಯನ್ನೇ ನೀಡಲಾಗಿದೆ.ಆಪತ್ಕಾಲದಲ್ಲಿ ಬಿಜೆಪಿ ಬೆಂಬಲಕ್ಕೆ ನಿಂತ ಜೆಡಿಎಸ್‌ನ ಎಚ್‌ಡಿ ಕುಮಾರಸ್ವಾಮಿ ಅವರಿಗೆ ಬೃಹತ್‌ ಕೈಗಾರಿಕೆ ಖಾತೆ ನೀಡಲಾಗಿದೆ, ಪ್ರಲ್ಹಾದ್‌ ಜೋಶಿ ಅವರಿಗೆ ಆಹಾರ ಮತ್ತು ನಾಗರಿಕ ಸರಬರಾಜು ಖಾತೆ ಸಿಕ್ಕಿದೆ. ಇನ್ನುಳಿದಂತೆ ಶೋಭಾ ಕರಂದ್ಲಾಜೆ ಅವರಿಗೆ ಅತಿ ಸಣ್ಣ, ಸಣ್ಣ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಉದ್ಯೋಗ ಮತ್ತು ಕಾರ್ಮಿಕ...

ಗುರುದೇವ ಕಾಲೇಜಿನಲ್ಲಿ ವಸಂತ ಬಂಗೇರ ಅವರಿಗೆ ನುಡಿನಮನ

0

ಬೆಳ್ತಂಗಡಿ : ‘ ರಾಜಕಾರಣದಲ್ಲಿ ಲಾಲ್ ಬಹುದ್ದೂರು ಶಾಸ್ತ್ರಿಯಂತಹ ವ್ಯಕ್ತಿ ನಮ್ಮ ನಡುವೆ ಇದ್ದಿದ್ದರೆ ಅದು ಕೆ. ವಸಂತ ಬಂಗೇರರು. ಅವರು ರಾಜಕೀಯ ಕ್ಷೇತ್ರದ ಬೆಳ್ಳಿರೇಖೆಯಂತಿದ್ದರು. ಬಂಗೇರರಂತಹ ರಾಜಕಾರಣಿಯನ್ನು ಇನ್ನು ಪಡೆಯುವುದು ಅಸಾಧ್ಯ. ಪೀಳಿಗೆಯಿಂದ ಪೀಳಿಗೆಗೆ ಅವರ ಹೆಸರು, ವ್ಯಕ್ತಿತ್ವ ರವಾನೆಯಾಗಬೇಕು. ಅವರ ಬದುಕಿನ ಬಗ್ಗೆ ಕಾಲೇಜಿನಲ್ಲಿ ವರ್ಷ ವರ್ಷ ಗೋಷ್ಠಿಗಳನ್ನು ನಡೆಸಿ ವಿದ್ಯಾರ್ಥಿಗಳಿಗೆ ಪರಿಚಯಿಸಬೇಕು’ ಎಂದು ಬಂಟ್ವಾಳದ ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರದ ಸಂಸ್ಥಾಪಕ ತುಕರಾಂ ಪೂಜಾರಿ ಹೇಳಿದರು. ಅವರು ಸೋಮವಾರ ಬೆಳ್ತಂಗಡಿ ಶ್ರೀ ಗುರುದೇವ ಕಾಲೇಜಿನಲ್ಲಿ ಶ್ರೀ ಗುರುದೇವ ಎಜುಕೇಶನಲ್...

ಮುಳಿಕಾರಿನಲ್ಲಿ ಭಾರೀ ಗಾಳಿ ವ್ಯಾಪಕ ಹಾನಿ

0

ಬೆಳ್ತಂಗಡಿ; ತಾಲೂಕಿನಲ್ಲಿ ಸೋಮವಾರ ಸಂಜೆಯ ವೇಳೆ ಭಾರೀ ಮಳೆ ಸುರಿದಿದ್ದು ಮಳೆಯೊಂದಿಗೆ ಬೀಸಿದ ಭಾರ ಗಾಳಿಗೆ ಧರ್ಮಸ್ಥಳ ಗ್ರಾಮದ ಮುಳಿಕಾರಿನಲ್ಲಿ ವ್ಯಾಪಕ ಹಾನಿ ಸಂಭವಿಸಿದೆ‌ಇಲ್ಲಿನ ನಿವಾಸಿ ಪೆರ್ನ ಮಲೆಕುಡಿಯ ಎಂಬವರ ತೋಟದಲ್ಲಿ ಸುಮಾರು‌ 50 ಕ್ಕೂ ಅಧಿಕ ಅಡಿಕೆ ಮರಗಳು ಮುರಿದು ಬಿದ್ದಿದೆ. ಮನೆಯ ಸಮೀಪದಲ್ಲಿದ್ದ ದೊಡ್ಡ ಗಾತ್ರದ ಮರಗಳು ಮುರಿದು ಬಿದ್ದಿದೆ. ಮನೆಯ ಹಂಚು ಗಾಳಿಗೆ ಹಾರಿಹೋಗಿದೆ ವ್ಯಾಪಕವಾದ ಹಾನಿ ಸಂಭವಿಸಿದೆ. ಸ್ಥಳೀಯರ ಸಹಕಾರದೊಂದಿಗೆ ತಾತ್ಕಾಲಿಕವಾಗಿ ಮನೆಯನ್ನು ದುರಸ್ತಿ ಮಾಡಲಾಗಿದೆ. ಭಾರೀಗತ್ರದ ಮರಗಳು ವಿದ್ಯುತ್ ಲೈನಿನ ಮೇಲೆ ಮುರಿದು ಬಿದ್ದಿದ್ದು ವಿದ್ಯುತ್ ಕಂಬಗಳು...

ಗರ್ಡಾಡಿಯಲ್ಲಿ ಮನೆಗೆ ಮರ ಬಿದ್ದು ಹಾನಿ

0

ಬೆಳ್ತಂಗಡಿ: ತಾಲೂಕಿನಲ್ಲಿ ಭಾರೀ ಮಳೆಗೆ ಗರ್ಡಾಡಿ ಗ್ರಾಮದ ಬೊಳ್ಳಾಜೆ ಎಂಬಲ್ಲಿ ಮನೆಯ ಮೇಲೆ ಮರ ಬಿದ್ದು ವ್ಯಾಪಕ ಹಾನಿ ಸಂಭವಿಸಿದೆ. ಗರ್ಡಾಡಿ ಬೊಳ್ಳಾಜೆ ನಿವಾಸಿ ಸುರೇಶ್ ಶೆಟ್ಟಿ ಎಂಬವರ ಮನೆಯ ಮೇಲೆ ಮರವೊಂದು ಮುರಿದು ಬಿದ್ದಿದೆ ಮನೆಯ ಮೇಲ್ಚಾವಣಿಗೆ ಹಾನಿಯಾಗಿದೆ.

ಶ್ರೀ ಕ್ಷೇತ್ರ ಚಂದ್ರಪುರ ಶಿಶಿಲದ ಜಿನಮಂದಿರದಲ್ಲಿ ಕಲ್ಯಾಣ ಮಂದಿರ ಆರಾಧನೆ

0

ಶಿಶಿಲ; ಶ್ರೀ ಕ್ಷೇತ್ರ ಚಂದ್ರಪುರ ಶಿಶಿಲದ ಭಗವಾನ್ ೧00೮ ಶ್ರೀ ಚಂದ್ರನಾಥ ಸ್ವಾಮಿ ಜಿನ ಮಂದಿರದಲ್ಲಿ ಲೋಕದ ಸಕಲ ಜೀವಿಗಳ ಕಲ್ಯಾಣಾರ್ಥವಾಗಿ ಹಾಗೂ ಕ್ಷೇತ್ರದ ಅಭಿವೃದ್ಧಿಗಾಗಿ ಪ್ರತಿಷ್ಠಾಚಾರ್ಯ ಶ್ರೀ ಜಯರಾಜ ಇಂದ್ರ ಹಾಗೂ ಇತರ ಪುರೋಹಿತ ವರ್ಗದಿಂದ ಶ್ರೀ ಕ್ಷೇತ್ರ ಚಂದ್ರಪುರ ಆಡಳಿತ ಮಂಡಳಿ ಹಾಗೂ ಶಿಶುಗಲಿ ರಾಣಿ ಕಾಳಲಾದೇವಿ ಮಹಿಳಾ ಸಮಾಜ ಶ್ರೀ ಕ್ಷೇತ್ರ ಚಂದ್ರಪುರ ಇವರ ನೇತೃತ್ವದಲ್ಲಿ ಕಲ್ಯಾಣ ಮಂದಿರ ಆರಾಧನೆಯು ನೆರವೇರಿತು.ಭಗವಾನ್ ೧೦೦೮ ಶ್ರೀ ಪಾರ್ಶ್ವನಾಥ ಸ್ವಾಮಿ ಪ್ರಭುದೇವರ ಜಿನಬಿಂಬವನ್ನು ಅದ್ದೂರಿಯಾಗಿ ಮೆರವಣಿಗೆಯಲ್ಲಿ ತರಲಾಯಿತು ನಂತರ ಸಾಮೂಹಿಕ ಕಲ್ಯಾಣ...

ಮೋದಿ 3 ಸಂಪುಟದಲ್ಲಿ ಯಾರಿಗೆಲ್ಲಸಿಕ್ಕಿದೆ ಅವಕಾಶ ಇಲ್ಲಿದೆ ಪೂರ್ಣ ವಿವರ

0

ನವದೆಹಲಿ: ರಾಷ್ಟ್ರಪತಿ ಭವನದ ಎದುರು ನೆರೆದಿದ್ದ ಸಾವಿರಾರು ಜನರು ಹಾಗೂ ವಿದೇಶಿ ಗಣ್ಯರ ಸಮ್ಮುಖದಲ್ಲಿ ನರೇಂದ್ರ ಮೋದಿ ಅವರು ಸತತ ಮೂರನೇ ಅವಧಿಗೆ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿದರು. ಪ್ರಧಾನಿ ನರೇಂದ್ರ ಮೋದಿಯವರು ಸೇರಿದಂತೆ ಏಳು ಮಂದಿ ಮಾಜಿಬಮುಖ್ಯಮಂತ್ರಿಗಳು ಸಂಪುಟದಲ್ಲಿ ಇರುವುದು ವಿಶೇಷವಾಗಿದೆಶಿವರಾಜ್ ಸಿಂಗ್ ಚೌಹಾಣ್ (ಮಧ್ಯಪ್ರದೇಶ), ರಾಜನಾ ಸಿಂಗ್ (ಉತ್ತರ ಪ್ರದೇಶ), ಮನೋಹರ್ ಲಾಲ್ ಖಟ್ಟರ (ಹರಿಯಾಣ), ಸರ್ಬಾನಂದ ಸೋನವಾಲ್ (ಅಸ್ಸಾಂ), ಎಚ್‌.ಡಿ.ಕುಮಾರಸ್ವಾಮಿ (ಕರ್ನಾಟಕ), ಜೀತನ್ ರಾಮಾ ಮಾಂಝಿ (ಬಿಹಾರ) ಅವರು ಮಾಜಿ ಮುಖ್ಯಮಂತ್ರಿಗಳ ಪಟ್ಟಿಯಲ್ಲಿದ್ದಾರೆ. ಮೋದಿ ಸಂಪುಟ ಸೇರಿದವರು ಅಮಿತ್ ಶಾ ನಿತಿನ್ ಗಡ್ಕರಿ ಮನಸುಖ್ ಮಾಂಡವೀಯ ಶಿವರಾಜ್ ಸಿಂಗ್...

ಮೂರನೇ ಬಾರಿಗೆ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿದ ನರೇಂದ್ರ ಮೋದಿ

0

ವದೆಹಲಿ: ನರೇಂದ್ರ ಮೋದಿ ಅವರು ಪ್ರಧಾನ ಮಂತ್ರಿಯಾಗಿ ಇಂದು (ಜೂನ್ 9) ಮೂರನೇ ಬಾರಿಗೆ ಪ್ರಮಾಣ ಸ್ವೀಕರಿಸಿದರು. ರಾಷ್ಟ್ರಪತಿ ಭವನದಲ್ಲಿ ನಡೆದ ಅಧಿಕೃತ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಪ್ರಮಾಣ ವಚನ ಬೋಧಿಸಿದರು.ರಾಷ್ಟ್ರಪತಿ ಭವನದ ಆವರಣದಲ್ಲಿ ರಾತ್ರಿ 7.15ಕ್ಕೆ ನಡೆದ ಅದ್ದೂರಿ ಪ್ರಮಾಣವಚನ ಸಮಾರಂಭವನ್ನು ಸ್ಥಳದಲ್ಲಿದ್ದ ವಿದೇಶಿ ಗಣ್ಯರು, ಆಹ್ವಾನಿತರು ಸೇರಿ 8000ದಷ್ಟು ಅತಿಥಿಗಳೊಂದಿಗೆ ಜಗತ್ತು ಕಣ್ತುಂಬಿಕೊಂಡಿತು. ಪ್ರಧಾನಿ ಮೋದಿ ಅವರು ಪ್ರಮಾಣ ಸ್ವೀಕರಿಸಿದ ಬಳಿಕ ರಾಜನಾಥ್ ಸಿಂಗ್, ಅಮಿತ್ ಷಾ, ನಿತಿನ್ ಗಡ್ಕರಿ, ಜೆಪಿ ನಡ್ಡಾ, ಶಿವರಾಜ್ ಸಿಂಗ್ ಚೌಹಾಣ್, ನಿರ್ಮಲಾ...