ಉಜಿರೆ; ಮಹಿಳೆಯ ಕುತ್ತಿಗೆಯಿಂದ ಚಿನ್ನದ ಸರ ಅಪಹರಣ
ಬೆಳ್ತಂಗಡಿ; ಉಜಿರೆ ಓಡಲದಲ್ಲಿ ರಸ್ತೆಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವೇಳೆ ಬೈಕಿನಲ್ಲಿ ಬಂದ ಇಬ್ಬರು ಯುವಕರು ಮಹಿಳೆಯ ಕುತ್ತಿಗೆಯಿಂದ ಚಿನ್ನದ ಸರ ಕಳ್ಳತನ ಮಾಡಿದ ಘಟನೆ ನಡೆದಿದೆ.ಸ್ಥಳೀಯ ನಿವಾಸಿ ರತ್ನ (55) ಎಂಬವರು ಎ.10 ರಂದು 6.30 ಗಂಟೆಯ ಸುಮಾರಿಗೆ ಉಜಿರೆ ಓಡಲ ವ್ಯಾಘ್ರ ಚಾಮುಂಡಿ ದ್ವಾರದ ಬಳಿ ಕೆಲಸ ಮುಗಿಸಿ ನಡೆದುಕೊಂಡು ಹೋಗುತ್ತಿದ್ದ ವೇಳೆ ಬೈಕಿನಲ್ಲಿ ಬಂದ ಇಬ್ಬರು ಅಪರಿಚಿತರು ಮಹಿಳೆಯ ಸಮೀಪ ಬಂದು ಬೈಕ್ ಅನ್ನು ಚಾಲೂ ಸ್ತಿತಿಯಲ್ಲಿ ನಿಲ್ಲಿಸಿ ಒಬ್ಬ ಬೈಕ್ ನಿಂದ ಇಳಿದು ಮಹಿಳೆಯ ಕುತಗತಿಗೆಯಿಂದ ಚಿನ್ನದ ಸರವನ್ನು...
ಬೆಳ್ತಂಗಡಿ; ಯುವ ಕಾಂಗ್ರೆಸ್ ನಿಂದ “ಸರಕಾರದ ನಡೆ ಕಾರ್ಯಕರ್ತರ ಕಡೆ” ಸಮಾವೇಶದ ಬಗ್ಗೆ ಸಮಾಲೋಚನಾ ಸಭೆ
ಬೆಳ್ತಂಗಡಿ; ಯುವ ಕಾಂಗ್ರೆಸ್ ಸಮಿತಿ ಬೆಳ್ತಂಗಡಿ ವತಿಯಿಂದ ಇಂದು ದಿನಾಂಕ 20-04-2025 ರಂದು ಡಿ.ಕೆ ಶಿವಕುಮಾರ್ ಉಪಸ್ಥಿತಿಯಲ್ಲಿ ನಡೆಯುವ "ಸರ್ಕಾರದ ನಡೆ ಕಾರ್ಯಕರ್ತರ ಕಡೆ" ಕಾರ್ಯಕರ್ತರ ಸಮಾವೇಶದ ಪೂರ್ವಭಾವಿ ಸಭೆಯು ಬ್ಲಾಕ್ ಕಾಂಗ್ರೆಸ್ ಕಛೇರಿಯಲ್ಲಿ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಉಪಾಧ್ಯಕ್ಷರಾದ ಅರುಣ್ ರೋಯಲ್ ರವರ ಅಧ್ಯಕ್ಷತೆಯಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಡಿಜಿಟಲ್ ಯೂತ್ ಫಾರ್ ಬೂತ್ ಅಜೆಂಡಾದ ಬಗ್ಗೆ ಯುವ ಕಾಂಗ್ರೆಸ್ ಗ್ರಾಮೀಣ ಘಟಕದ ಅಧ್ಯಕ್ಷರಾದ ಅಜಾರುದ್ದೀನ್ ಬಗ್ಗೆ ಮಾಹಿತಿ ನೀಡಿದರು.ಸಭೆಯ ಅಧ್ಯಕ್ಷರಾದ ಅರುಣ್ ಲೋಬೋ ಸಂಘಟನೆಯ ಬಗ್ಗೆ ಪ್ರಸ್ತಾವಿಕವಾಗಿ ಮಾತನಾಡಿದರು. ವಿಧಾನಸಭಾ...
ಬೆಳ್ತಂಗಡಿ; ಸರಕಾರಿ ನೌಕರರ ಸಂಘದ ಪದಾಧಿಕಾರಿಗಳ ಪದಗ್ರಹಣ ಹಾಗೂ ಸಾಧಕರಿಗೆ ಸನ್ಮಾನ
ಬೆಳ್ತಂಗಡಿ: ಬೆಳ್ತಂಗಡಿ ತಾಲೂಕು ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ವಾರ್ಷಿಕ ಮಹಾಸಭೆ ಮತ್ತು ನೂತನ ಪದಾಧಿಕಾರಿಗಳ, ನಿರ್ದೇಶಕರ ಪದಗ್ರಹಣ ಮತ್ತು 2025 ರ ಸಾಧಕರ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವು ಎ.11 ರಂದು ಬೆಳ್ತಂಗಡಿ ಎಸ್.ಡಿ.ಎಂ. ಆಂಗ್ಲಮಾಧ್ಯಮ ಶಾಲೆಯಲ್ಲಿ ನಡೆಯಿತು.ಕಾರ್ಯಕ್ರಮದ ಉದ್ಘಾಟನೆಯನ್ನು ಬೆಳ್ತಂಗಡಿ ತಹಶೀಲ್ದಾರ್ ಪೃಥ್ವಿಸಾನಿಕಂ ಅವರು ನೆರವೇರಿಸಿ ಶುಭ ಹಾರೈಸಿದರು. ಸಂಘದ ಅಧ್ಯಕ್ಷ ಜಯರಾಜ್ ಜೈನ್ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ ಸಂಘ ಕಳೆದ ವರ್ಷದಲ್ಲಿ ಮಾಡಿದ ಸಾಧನಡಗಳನ್ನು ವಿವರಿಸಿದರು ಮುಂದಿನ ದಿನಗಳಲ್ಲಿಯೂ ಸಂಘವನ್ನು ಮುನ್ನಡೆಸಲು ಎಲ್ಲರ ಸಹಕಾರ ಕೋರಿದರು. ಮುಖ್ಯ...
ಯೂಟ್ಯೂಬರ್ ಸಮೀರ್ ವಿರುದ್ದ ಹತ್ತು ಕೋಟಿ ರೂ ಮಾನನಷ್ಟ ಮೂಕದ್ದಮೆದಾಖಲಿಸಿದ ಡಿ.ಹರ್ಷೇಂದ್ರ ಕುಮಾರ್
ಬೆಳ್ತಂಗಡಿ; ಸೌಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಸಮೀರ್ ಎಂ.ಡಿ. ದೂತ " ಎಂಬ ಯೂಟ್ಯೂಬರ್ ಹಾಕಿದ್ದ ವೀಡಿಯೋದ ವಿರುದ್ದ ಇದೀಗ ಡಿ. ಹರ್ಷೇಂದ್ರಕುಮಾರ್ ಹಾಗೂ ನಿಶ್ಚಲ್ ಕುಮಾರ್ ಬೆಂಗಳೂರಿನ ನ್ಯಾಯಾಲಯದಲ್ಲಿ ಹತ್ತು ಕೋಟಿ ಮಾನನಷ್ಟ ಮೂಕದ್ದಮೆ ಹೂಡಿದ್ದಾರೆ.ಆರಂಭದಲ್ಲಿ ಸಮೀರ್ ಹಾಕಿದ್ದ ವಿಡಿಯೋದ ವಿರುದ್ಧ ನ್ಯಾಯಾಲಯವು ವಿಡಿಯೋ ತೆಗೆದುಹಾಕುವಂತೆ ಮತ್ತು ಈ ಕುರಿತು ವಿಡಿಯೋ ಮಾಡದಂತೆ ತಡೆಯಾಜ್ಞೆ ನೀಡಿತ್ತು. ಘನ ನ್ಯಾಯಾಲಯದ ತಡೆಯಾಜ್ಞೆ ನೀಡಿತ್ತು ಈ ಅದೇಶವನ್ನು ಉಲ್ಲಂಘಿಸಿ, ಎರಡನೇ ವಿಡಿಯೋವನ್ನು ಬಿಡಲಾಗಿತ್ತು " ಸಮೀರ್ ಎಂ.ಡಿ. ದೂತ " ಎಂಬ ವ್ಯಕ್ತಿ ಹಾಗೂ ಯೂಟ್ಯೂಬ್...
ಬೆಳಾಲು : ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ
ಬೆಳ್ತಂಗಡಿ : ಬೆಳಾಲು ಗ್ರಾಮದ ಮಾಯ ನೆಕ್ಕಿಲಾಡಿ ನಿವಾಸಿ ಕೊರಗಪ್ಪ (48) ಮನೆಯ ಬಾತ್ ರೂಂ ನಲ್ಲಿ ಏ.10 ರಂದು ರಾತ್ರಿ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮನೆಯಲ್ಲಿ ಪತ್ನಿ ಮಕ್ಕಳು ಕಾರ್ಯಕ್ರಮ ಹೋಗಿದ್ದ ವೇಳೆ ಘಟನೆ ನಡೆದಿದೆ. ಏ.11 ರಂದು ಬೆಳಗ್ಗೆ ಮನೆಗೆ ಮಕ್ಕಳು ನೋಡಿದಾಗ ಆತ್ಮಹತ್ಯೆ ಮಾಡಿಕೊಂಡಿರುವುದು ಕಂಡು ಬಂದಿದೆ. ಮೃತ ಕೊರಗಪ್ಪರಿಗೆ ಪತ್ನಿ ಹಾಗೂ ಇಬ್ಬರು ಗಂಡು ಮಕ್ಕಳು, ಒಂದು ಹೆಣ್ಣು ಮಗಳಿದ್ದಾರೆ. ಧರ್ಮಸ್ಥಳ ಪೊಲೀಸರು ಘಟನಾ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದು. ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಳ್ತಂಗಡಿ : ನಕ್ಸಲ್ ಬಿ.ಜಿ.ಕೃಷ್ಣಮೂರ್ತಿ ಮತ್ತು ಸಾವಿತ್ರಿ ಮರಳಿ ಕೇರಳ ಜೈಲಿಗೆ
ಬೆಳ್ತಂಗಡಿ : ಮೂರು ನಕ್ಸಲ್ ಚಟುವಟಿಕೆ ಪ್ರಕರಣ ದಾಖಲಾದ ಸಂಬಂಧ ಇಬ್ಬರು ನಕ್ಸಲ್ ನಾಯಕರನ್ನು ಬೆಳ್ತಂಗಡಿ ಪೊಲೀಸರು ಕೇರಳ ಜೈಲಿನಿಂದ ಬಾಡಿ ವಾರೆಂಟ್ ಮೂಲಕ ಬೆಳ್ತಂಗಡಿ ನ್ಯಾಯಾಲಯಕ್ಕೆ ಏ.7 ರಂದು ಹಾಜರುಪಡಿಸಿ ಏ.11 ರವರೆಗೆ ಕಸ್ಟಡಿಗೆ ಪಡೆಯಲಾಗಿತ್ತು. ಕಸ್ಟಡಿ ಅಂತ್ಯವಾದ ಹಿನ್ನೆಲೆಯಲ್ಲಿ ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರುಪಡಿಸಿ ಮತ್ತೆ ಕೇರಳ ಜೈಲಿಗೆ ಕಳುಹಿಸಿದ ನ್ಯಾಯಾಲಯ. 8-11-2021 ರಂದು ಕೇರಳ ರಾಜ್ಯದ ಪೊಲೀಸರು ಮೋಸ್ಟ್ ವಾಟೆಂಡ್ ನಕ್ಸಲ್ ನಾಯಕರಾದ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ನಿವಾಸಿ ನಕ್ಸಲ್ ಪಶ್ಚಿಮ ಘಟ್ಟದ ವಿಶೇಷ ಸಮಿತಿಯ ಕಾರ್ಯದರ್ಶಿಯಾಗಿದ್ದ ಬಿ.ಜಿ.ಕೃಷ್ಣಮೂರ್ತಿ(50) ಮತ್ತು ಚಿಕ್ಕಮಗಳೂರು...
ಕಲ್ಲೇರಿ ಎ.ಟಿ.ಎಂ ನಲ್ಲಿ ಕಳವಿಗೆ ಯತ್ನ ಆರೋಪಿ ಬಂಧನ
ಬೆಳ್ತಂಗಡಿ; ಕರಾಯ ಗ್ರಾಮದ ಕಲ್ಲೇರಿ ಎಂಬಲ್ಲಿ ಖಾಸಗಿ ಕಂಪೆನಿಯ ಎಟಿಎಂ ಕೆಂದ್ರವೊಂದಕ್ಕೆ ನುಗ್ಗಿ ಕಳ್ಳತನಕ್ಕೆ ಯತ್ನಿಸಿದ ಪ್ರಕರಣದಲ್ಲಿ ಆರೋಪಿ ಮಹಮ್ಮದ್ ರಫೀಕ್ (35) ಎಂಬಾತನನ್ನು ಉಪ್ಪಿನಂಗಡಿ ಪೊಲೀಸರು ಬಂದಿಸಿದ್ದಾರೆ. ಕಲ್ಲೇರಿಯಲ್ಲಿನ ತಣ್ಣೀರುಪಂತ ಕೃಷಿ ಪತ್ತಿನ ಸಹಕಾರಿ ಸಂಘದ ಕಟ್ಟಡದಲ್ಲಿ ಇಂಡಿಯಾ ವನ್ ಎಂಬ ಹೆಸರಿನ ಖಾಸಗಿ ಸಂಸ್ಥೆಯ ಏ ಟಿ ಎಂ ಕೇಂದ್ರಕ್ಕೆ ನುಗ್ಗಿದ ಕಳ್ಳ ಅಲ್ಲಿನ ಸಿ ಸಿ ಕ್ಯಾಮರಾ ವನ್ನು ಕಿತ್ತೆಗೆಯಲು ಯತ್ನಿಸಿ, ಏ ಟಿ.ಎಂ ಮಿಷಿನ್ ನನ್ನು ತೆರೆಯಲು ಯತ್ನಿಸಿ ಏ ಟಿ ಎಂ ಮಿಷಿನ್ ಗೆ ಹಾನಿಯನ್ನುಂಟು ಮಾಡಿದ್ದ. ಈ...
ಬೆಳ್ತಂಗಡಿ ವಕೀಲರ ಸಂಘದಿಂದ ಜೆ.ಕೆ.ಪೌಲ್ ಅವರಿಗೆ ಶ್ರದ್ದಾಂಜಲಿ ಸಭೆ
ಬೆಳ್ತಂಗಡಿ ವಕೀಲರ ಸಂಘದ ಹಿರಿಯ ನ್ಯಾಯವಾದಿಯಾಗಿ ಸೇವೆಯನ್ನು ಸಲ್ಲಿಸುತ್ತಿದ್ದ ಜೆ ಕೆ ಪೌಲ್ ಇವರು ನಿನ್ನೆ ನಿಧನ ಹೊಂದಿದ್ದು ಇವರಿಗೆ ಬೆಳ್ತಂಗಡಿ ವಕೀಲರ ಸಂಘದಿಂದ ಇಂದು ವಕೀಲರ ಭವನದಲ್ಲಿ ಶ್ರದ್ಧಾಂಜಲಿ ಸಭೆಯನ್ನು ಹಮ್ಮಿಕೊಳ್ಳಲಾಗಿತ್ತು.ಈ ಶ್ರದ್ಧಾಂಜಲಿ ಸಭೆಯಲ್ಲಿ ಅವರ ಸಹಪಾಠಿಯಾಗಿದ್ದ ಸುಬ್ರಹ್ಮಣ್ಯ ಕುಮಾರ್ ಅಗರ್ತ ಜೆಕೆ ಪೌಲ್ ಇವರ ಕಾಲೇಜಿನ ದಿನಗಳು ಹಾಗೂ ವಕೀಲ ವೃತ್ತಿಯಲ್ಲಿ ಅವರು ತನ್ನನ್ನು ತಾನು ತೊಡಗಿಸಿದ್ದನ್ನು ಸ್ಮರಿಸಿದರು. ವಕೀಲರಾದ ಬಿ.ಕೆ ಧನಂಜಯ್ ರಾವ್ ಇವರು ಜೆಕೆ ಪೌಲ್ ಇವರ ವ್ಯಕ್ತಿತ್ವ ಹಾಗೂ ವೃತ್ತಿಯಲ್ಲಿ ತನ್ನನ್ನು ತಾನು ತೊಡಗಿಸಿಕೊಂಡ ರೀತಿಯನ್ನು ವಿವರಿಸಿದರು.ವಕೀಲರಾದ...
ಗೇರುಕಟ್ಟೆ : ಪರಪ್ಪು ಹಿದಾಯತುಸ್ಸಿಬಿಯಾನ್ ಮದರಸದಲ್ಲಿ ಫತ್ಹೇ ಮುಂಬಾರಕ್
ಮದರಸ ಪ್ರಾರಂಭೋತ್ಸವ.ಬೆಳ್ತಂಗಡಿ; ಪರಪ್ಪು ಮುಹಿಯುದ್ದೀನ್ ಜುಮ್ಮಾ ಮಸೀದಿಯ ಅಧೀನದಲ್ಲಿರುವ ಇಸ್ಲಾಮಿಕ್ ಎಜ್ಯುಕೇಶನಲ್ ಬೋರ್ಡ್ ನ ಸೂಚನೆಯಂತೆ ಹಿದಾಯತುಸ್ಸಿಬಿಯಾನ್ ಮದರಸದಲ್ಲಿಂದು ಫತ್ಹೇ ಮುಬಾರಕ್ ಮದರಸ ಪ್ರಾರಂಬೋತ್ಸವ ಕಾರ್ಯಕ್ರಮ ನಡೆಯಿತು.ಖತೀಬರಾದ ಮಹಮ್ಮದ್ ಮಿಸ್ಬಾಹಿ ದುವಾ ನೆರವೇರಿಸಿ ಒಂದನೇ ತರಗತಿಗೆ ಖುರ್ ಆನ್ ಅಕ್ಷರ ಬರೆಯಿಸುವ ಮೂಲಕ ವಿದ್ಯಾರ್ಥಿಗಳ ದಾಖಲಾತಿ ಮಾಡಿದರು. ಅಧ್ಯಕ್ಷರಾದ ಅಬೂಬಕ್ಕರ್ ಹಾಜಿ ಅಧ್ಯಕ್ಷತೆ ವಹಿಸಿದ್ದರು. ಸದರ್ ಮುಅಲ್ಲಿಮ್ ಅಬೂಬಕ್ಕರ್ ಸಿದ್ದೀಕ್ಮುಈನಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಧಾನ ಕಾರ್ಯದರ್ಶಿ ಅಬ್ದುಲ್ ಕರೀಮ್ ಮುಅಲ್ಲಿಮರಾದ ಹಸೈನಾರ್ ಸಅದಿ, ಝಿಯಾದ್ಮುಈನಿ, ಇಲ್ಯಾಸ್ ಮದನಿ, ಅಧೀನ ಸಮಿತಿಗಳ ಪದಾಧಿಕಾರಿಗಳು ಪೋಷಕರು...
ಖ್ಯಾತ ನ್ಯಾಯವಾದಿ ಜೆ.ಕೆ ಪೌಲ್ ನಿಧನ
ಬೆಳ್ತಂಗಡಿ: ಖ್ಯಾತ ವಕೀಲರಾದ ಜೆ.ಕೆ. ಪೌಲ್ (55) ಅವರು ಎ.8ರಂದು ರಾತ್ರಿ ಮಂಗಳೂರಿನ ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದಾರೆ. ಕಳೆದ 2 ವರ್ಷಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಕೆಲವು ದಿನಗಳ ಹಿಂದೆ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಅಲ್ಲಿ ಚಿಕಿತ್ಸೆಗೆ ಸ್ಪಂದಿಸದೇ ನಿಧನ ಹೊಂದಿದ್ದಾರೆ. ಬೆಳ್ತಂಗಡಿ ತಾಲೂಕಿನ ಶಿರ್ಲಾಲು ಗ್ರಾಮದ ಕರಂಬಾರು ನಿವಾಸಿಯಾಗಿದ್ದ ಅವರು ಕಾರ್ಕಳದಲ್ಲಿ ವಾಸವಾಗಿದ್ದರು.ಮೃತ ದೇಹ ಶಿರ್ಲಾಲು ಮನೆಗೆ ತರಲಾಗಿದ್ದು ಇಂದು ಅಂತ್ಯ ಕ್ರಿಯೆ ಸ್ಥಳೀಯ ಚರ್ಚ್ ನಲ್ಲಿ ನಡೆಯಲಿದೆ. ಸರಳ ವ್ಯಕ್ತಿತ್ವ ಹಾಗೂ ಎಲ್ಲರಲ್ಲೂ ಸ್ನೇಹದಿಂದಿರುತ್ತಿದ್ದ ಅವರು ಪತ್ನಿ ಇಬ್ಬರು ಮಕ್ಕಳು...















