ಕೊಕ್ಕಡ ಕಾರಿನಡಿಗೆ ಸಿಲುಕಿ ನಾಲ್ಕನೇ ತರಗತಿ ವಿದ್ಯಾರ್ಥಿ ಮೃತ್ಯು
ಬೆಳ್ತಂಗಡಿ. ಕಾರಿನಡಿಗೆ ಸಿಲುಕಿ ನಾಲ್ಕನೇ ತರಗತಿಯ ವಿದ್ಯಾರ್ಥಿಯೊಬ್ಬ ಸಾವನ್ನಪ್ಪಿದ ಘಟನೆ ಕೊಕ್ಕಡದ ಮಲ್ಲಿಗೆ ಮಜಲ್ ಎಂಬಲ್ಲಿ ಇಂದು ಸಂಜೆ ನಡೆದಿದೆ. ಕೊಕ್ಕಡ ಸನೀಪದ ಮಲ್ಲಿಗೆ ಮಜಲ್ ನಿವಾಸಿ ಅಬ್ದುಲ್ ಹಮೀದ್ ಎಂಬವರ ಮಗ ನಾಲ್ಕನೇ ತರಗತಿಯ ನವಾಫ್ ಇಸ್ಮಾಯಿಲ್ ಸಾವನ್ನಪ್ಪಿದ ಬಾಲಕನಾಗಿದ್ದಾನೆ.ಮಾಹಿತಿ ಪ್ರಕಾರ ಕಾರು ಹಿಂದಕ್ಕೆ ತೆಗೆಯುವ ವೇಳೆ ಈ ಅವಘಡ ಸಂಭವಿಸಿದೆ ಎಂಬ ಮಾಹಿತಿ ಲಭ್ಯವಾಗಿದೆ.ಘಟನೆಯ ಬಗ್ಗೆ ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದು ಬರಬೇಕಾಗಿದೆ.
ವಿಧಾನ ಪರಿಷತ್ ಚುನಾವಣೆ ಬಿಜೆಪಿ ಅಭ್ಯರ್ಥಿಯಾಗಿ ಕಿಶೋರ್ ಕುಮಾರ್ ಬೊಟ್ಯಾಡಿ ಆಯ್ಕೆ
ಬೆಳ್ತಂಗಡಿ; ಕುತೂಹಲ ಕೆರಳಿಸಿದ್ದ ದ.ಕ ಸ್ಥಳೀಯ ಸಂಸ್ಥೆಗಳ ವಿಧಾನ ಪರಿಷತ್ ಕ್ಷೇತ್ರದ ಅಭ್ಯರ್ಥಿಯನ್ನು ಬಿಜೆಪಿ ಕೊನೆಗೂ ಪ್ರಕಟಿಸಿದೆ.ದಕ್ಷಿಣ ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿಯಾದ ಕಿಶೋರ್ ಕುಮಾರ್ ಬೊಟ್ಯಾಡಿ ಪುತ್ತೂರು ಅವರನ್ನು ದಕ್ಷಿಣ ಕನ್ನಡ ಸ್ಥಳೀಯ ಸಂಸ್ಥೆಗಳ ವಿಧಾನ ಪರಿಷತ್ತಿನ ಉಪಚುನಾವಣೆಯ ಅಭ್ಯರ್ಥಿಯಾಗಿ ಬಿಜೆಪಿ ಕೇಂದ್ರೀಯ ಚುನಾವಣಾ ಸಮಿತಿ ಘೋಷಿಸಿದೆ.
ಅಂಗನವಾಡಿ ನೌಕರರ ಸಂಬಳ ಬಾಕಿ ತಕ್ಷಣ ಪಾವತಿಸಲು ಸಿಐಟಿಯು ಆಗ್ರಹ
ಬೆಳ್ತಂಗಡಿ; ಅಂಗನವಾಡಿ ನೌಕರರಿಗೆ ಕಳೆದ ಜುಲೈ ತಿಂಗಳಿಂದ ಸಂಬಳ ನೀಡದೇ ಸತಾಯಿಸುವ ಕೇಂದ್ರ ಹಾಗೂ ರಾಜ್ಯ ಸರಕಾರಗಳ ನಡೆ ಖಂಡನೀಯ, ಮಹಿಳೆಯರನ್ನು ಜೀತದಾಳುಗಳಂತೆ ದುಡಿಸುವ ಪ್ರಯತ್ನ ಇದಾಗಿದೆ. ಎರಡೂ ಸರಕಾರಗಳು ಜಂಟೀ ಜವಬ್ದಾರಿಯಿಂದ ನಡೆಸುವ ಈ ಐಸಿಡಿಎಸ್ ಯೋಜನೆಯ ಅವ್ಯವಸ್ಥೆ ಬಗ್ಗೆ ಸರಕಾರಗಳು ಉತ್ತರಿಸಬೇಕಿದೆ ಎಂದು ಸಿಐಟಿಯು ಮುಖಂಡ ಬಿ.ಎಂ.ಭಟ್ ಹೇಳಿದರು.ಅಂಗನವಾಡಿ ನೌಕರರ 3 ತಿಂಗಳ ಸಂಬಳ ಬಾಕಿಯನ್ನು ತಕ್ಷಣ ಪಾವತಿಗೆ ಆಗ್ರಹಿಸಿ, ಸರಕಾರ ತನ್ನ ಆದೇಶದಂತೆ ನಿವೃತ್ತರಿಗೆ ನೀಡಬೇಕಾದ ಗ್ರಾಚ್ಯುವಿಟಿಯನ್ನು ತಕ್ಷಣ ಪಾವತಿಸಲು ಆಗ್ರಹಿಸಿ, ಕೆಲವು ಸ್ವತಂತ್ರ ಸಂಘಗಳು ಈ ಗ್ರಾಚ್ಯುವಿಟಿ...
ಅಂಗನವಾಡಿ ನೌಕರರ ಸಂಬಳ ಬಾಕಿ ತಕ್ಷಣ ಪಾವತಿಸಲು ಸಿಐಟಿಯು ಆಗ್ರಹ
ಬೆಳ್ತಂಗಡಿ; ಅಂಗನವಾಡಿ ನೌಕರರಿಗೆ ಕಳೆದ ಜುಲೈ ತಿಂಗಳಿಂದ ಸಂಬಳ ನೀಡದೇ ಸತಾಯಿಸುವ ಕೇಂದ್ರ ಹಾಗೂ ರಾಜ್ಯ ಸರಕಾರಗಳ ನಡೆ ಖಂಡನೀಯ, ಮಹಿಳೆಯರನ್ನು ಜೀತದಾಳುಗಳಂತೆ ದುಡಿಸುವ ಪ್ರಯತ್ನ ಇದಾಗಿದೆ. ಎರಡೂ ಸರಕಾರಗಳು ಜಂಟೀ ಜವಬ್ದಾರಿಯಿಂದ ನಡೆಸುವ ಈ ಐಸಿಡಿಎಸ್ ಯೋಜನೆಯ ಅವ್ಯವಸ್ಥೆ ಬಗ್ಗೆ ಸರಕಾರಗಳು ಉತ್ತರಿಸಬೇಕಿದೆ ಎಂದು ಸಿಐಟಿಯು ಮುಖಂಡ ಬಿ.ಎಂ.ಭಟ್ ಹೇಳಿದರು.ಅಂಗನವಾಡಿ ನೌಕರರ 3 ತಿಂಗಳ ಸಂಬಳ ಬಾಕಿಯನ್ನು ತಕ್ಷಣ ಪಾವತಿಗೆ ಆಗ್ರಹಿಸಿ, ಸರಕಾರ ತನ್ನ ಆದೇಶದಂತೆ ನಿವೃತ್ತರಿಗೆ ನೀಡಬೇಕಾದ ಗ್ರಾಚ್ಯುವಿಟಿಯನ್ನು ತಕ್ಷಣ ಪಾವತಿಸಲು ಆಗ್ರಹಿಸಿ, ಕೆಲವು ಸ್ವತಂತ್ರ ಸಂಘಗಳು ಈ ಗ್ರಾಚ್ಯುವಿಟಿ...
ರಾಷ್ಟ್ರೀಯ ಕ್ರೀಡಾಕೂಟಕ್ಕೆ ತೆರಳುವ ಕ್ರೀಡಾಪಟುವಿಗೆ ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘದಿಂದ ಅಭಿನಂದನೆ
ಬೆಳ್ತಂಗಡಿ; ರಾಷ್ಟ್ರೀಯ ಮಟ್ಟದ ಭಾರ ಎತ್ತುವಿಕೆ (81 K G ವಿಭಾಗದ) ಸ್ಪರ್ಧೆಯಲ್ಲಿ ಭಾಗವಹಿಸಲು ಹಿಮಾಚಲ ಪ್ರದೇಶಕ್ಕೆ ತೆರಳುವ ಉಜಿರೆ ಎಸ್ ಡಿ ಎಮ್ ಪ್ರಥಮ ವರ್ಷದ ವಿದ್ಯಾರ್ಥಿನಿ ಬಂದಾರು ಗ್ರಾಮದ ಕೆ ತೇಜಸ್ವಿನಿ ಪೂಜಾರಿ ಯವರಿಗೆ ಬೆಳ್ತಂಗಡಿ ಶ್ರೀ ನಾರಾಯಣಗುರು ಸ್ವಾಮಿ ಸೇವಾ ಸಂಘದ ವತಿಯಿಂದ ಇಂದು ಆರ್ಥಿಕ ನೆರವನ್ನು ನೀಡಿ ಶುಭ ಹಾರೈಸಲಾಯಿತು.ಈ ಸಂದರ್ಭದಲ್ಲಿ ಅಧ್ಯಕ್ಷರಾದ ಜಯವೀಕ್ರಮ್ ಕಲ್ಲಾಪು,ಉಪಾಧ್ಯಕ್ಷರಾದ ಸುಂದರ ಪೂಜಾರಿ ,ಪ್ರಧಾನ ಕಾರ್ಯದರ್ಶಿ ನಿತೀಶ್ ಎಚ್,ಕೋಶಾದಿಕಾರಿ ಪ್ರಶಾಂತ್ ಮಚ್ಚಿನ ಜತೆ ಕಾರ್ಯದರ್ಶಿ ಸಂತೋಷ್ ಉಪ್ಪಾರು,ವಿದ್ಯಾರ್ಥಿನಿ ತಂದೆ ಕೆ...
ಯಮತೋ ಶೋಟೋಕಾನ್ ಕರಾಟೆ ಎಸೋಸಿಯೇಷನ್ ಬೆಳ್ತಂಗಡಿ ಇದರ 9 ವಿದ್ಯಾರ್ಥಿಗಳು ರಾಜ್ಯಮಟ್ಟಕ್ಕೆ ಆಯ್ಕೆ
ಬೆಳ್ತಂಗಡಿ; ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ಆಯೋಜಿಸಿದ ಜಿಲ್ಲಾಮಟ್ಟದ ಕರಾಟೆ ಸ್ಪರ್ಧೆಯು ಎಸ್ ಡಿ ಎಂ ಸಮಗ್ರ ಶಾಲೆ ವಾಮಂಜೂರು ಇಲ್ಲಿ ನಡೆದಿದ್ದು ವಿವಿಧ ವಿಭಾಗಗಳಲ್ಲಿ 44 ವಿದ್ಯಾರ್ಥಿಗಳು ಜಿಲ್ಲೆಯಿಂದ ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಲು ಅರ್ಹತೆ ಪಡೆದಿದ್ದಾರೆ. ಅದರಲ್ಲಿ ಯಮತೋ ಶೋಟೋಕಾನ್ ಕರಾಟೆ ಎಸೋಸಿಯೇಷನ್ ಬೆಳ್ತಂಗಡಿ ಇದರ 9 ವಿದ್ಯಾರ್ಥಿಗಳು ರಾಜ್ಯಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ ಇವರು ಕರಾಟೆ ಶಿಕ್ಷಕ ಅಶೋಕ ಆಚಾರ್ಯ ಹಾಗೂ ಕೋಚ್ ಮಿಥುನ್ ರಾಜ್ ಇವರಿಂದ ತರಬೇತಿ ನೀಡಿದರು
ತಾಲೂಕಿನಲ್ಲಿ ಭಾರೀ ಮಳೆ ಸಿಡಿಲು ಬಡಿದು ಹಾನಿ
ಬೆಳ್ತಂಗಡಿ; ತಾಲೂಕಿನಲ್ಲಿ ಸೋಮವಾರ ಸಂಜೆಯ ವೇಳೆ ಭಾರೀ ಮಳೆ ಸುರಿದಿದೆ.ತಾಲೂಕಿನ ತೋಟತ್ತಾಡಿ ಗ್ರಾಮದ ಸರಕಾರಿ ಶಾಲೆಯ ಕಾಂಪೌಂಡ್ ಭಾರೀ ಮಳೆಗೆ ಕುಸಿದು ಬಿದ್ದಿದೆ, ಅದೇ ರೀತಿ ಉರುವಾಲು ಗ್ರಾಮದ ತಾರಿದಡಿ ಎಂಬಲ್ಲಿ ಮನೆಗೆ ಸಿಡಿಲು ಬಡಿದು ಮನೆಗೆ ಹಾನಿ ಸಂಭವಿಸಿದೆ. ಮನೆಯಲ್ಲಿ ಯಾರೂ ಇಲ್ಲದವೇಳೆ ಸಿಡಿಲು ಬಡಿದಿದ್ದು ಮನೆಯವರಿಗೆ ಯಾವುದೇ ಸಮಸ್ಯೆಯಾಗಿಲ್ಲ. ಮನೆಯ ವಿದ್ಯುತ್ ಉಪಕರಣಗಳಿಗೆ ಹಾಗೂ ಮನೆಯ ವಯರಿಂಗ್ ಗೆ ಹಾನಿ ಸಂಭವಿಸಿದೆ.
ಹೊಸ್ಮಾರು ಸಮೀಪ ಭೀಕರ ಅಪಘಾತ ವೇಣೂರು ನಿವಾಸಿಗಳಾದ ಒಂದೇ ಕುಟುಂಬದ ನಾಲ್ವರು ಸಾವು
ಬೆಳ್ತಂಗಡಿ: ನಾರಾವಿ ಸಮೀಪ ಹೊಸ್ಮಾರ್ ನಲ್ಲಿ ಬೈಕ್ ಹಾಗೂ ಮಿನಿ ಲಾರಿ ನಡುವೆ ಸಂಭವಿಸಿದ ಅಪಘಾತದಲ್ಲಿ ಒಂದೇ ಕುಟುಂಬದ ನಾಲ್ವರು ಸ್ಥಳದಲ್ಲಿಯೇ ಸಾವನ್ನಪ್ಪಿದ ಘಟನೆ ಸೋಮವಾರ ಸಂಭವಿಸಿದೆ.ಹೊಸ್ಮಾರು ಗ್ರಾಮದ ಪಾಜಿ ಗುಡ್ಡೆ ಬಳಿ ಮಿನಿ ಲಾರಿ ಮತ್ತು ಬೈಕ್‌ನಡುವೆ ಅಪಘಾತ ಸಂಭವಿಸಿದೆ.ಅಪಘಾತದ ತೀವ್ರತೆಗೆ ಬೈಕಿನಲ್ಲಿ ಪ್ರಯಾಣಿಸುತ್ತಿದ್ದ ಪತಿ ಪತ್ನಿ ಹಾಗೂ ಇಬ್ಬರು ಮಕ್ಕಳು ಸ್ಥಳದಲ್ಲಿಯೇ ಮೃತಪಟ್ಟಿರುವುದಾಗಿ ತಿಳಿದು ಬಂದಿದೆ. ಮೃತರು ಬೆಳ್ತಂಗಡಿ ತಾಲೂಕಿನ ವೇಣೂರು ಸಮೀಪದನಿವಾಸಿಗಳಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗುತ್ತಿದೆ. ಅಪಘಾತದ ಬಗ್ಗೆ ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದು ಬರಬೇಕಾಗಿದೆ.
ರಾಜಕೇಸರಿ ಟ್ರಸ್ಟ್ ವತಿಯಿಂದ ಉಚಿತ ನೇತ್ರ ತಪಾಸಣಾ ಶಿಬಿರ
ಬೆಳ್ತಂಗಡಿ; ಅಖಿಲ ಕರ್ನಾಟಕ ರಾಜ ಕೇಸರಿ ಟ್ರಸ್ಟ್ (ರಿ) ಬೆಳ್ತಂಗಡಿ ತಾಲೂಕು ಮತ್ತು ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆ ಮಂಗಳೂರು . ಮತ್ತು ಶ್ರೀದೇವಿ ಅಪ್ಪಿಕಲ್ಸ್ ಬೆಳ್ತಂಗಡಿ ಇದರ ಸಂಯುಕ್ತ ಆಶ್ರಯದಲ್ಲಿ ರಾಜ ಕೇಸರಿ ಸಂಘಟನೆಯ ಸಂಸ್ಥಾಪಕರದ ದೀಪಕ್ ಜಿ ಬೆಳ್ತಂಗಡಿ ಇವರ ನೇತೃತ್ವದಲ್ಲಿ ಬೃಹತ್ ಉಚಿತ ನೇತ್ರ ತಪಾಸಣೆ ಶಿಬಿರ ದ.ಕ.ಜಿ .ಹಿ ಪ್ರಾಥಮಿಕ ಮುಗುಳಿ ಶಾಲೆಯಲ್ಲಿ. ನಡೆಯಿತು.ಕಾರ್ಯಕ್ರಮದ ಅಧ್ಯಕ್ಷ ತೆಯನ್ನು ರಾಜ ಕೇಸರಿ ಬೆಳ್ತಂಗಡಿ ತಾಲೂಕು ಅಧ್ಯಕ್ಷರಾದ ಸಂದೀಪ್ ಬೆಳ್ತಂಗಡಿಯ ವಹಿಸಿಕೊಂಡಿದ್ದರು.ರಾಜ ಕೇಸರಿ ಜಿಲ್ಲಾಧ್ಯಕ್ಷರಾದ ಸಂತೋಷ್ ಕೊಲ್ಯ....
ಖ್ಯಾತ ನೋಟರಿ ನ್ಯಾಯವಾದಿ ಸೇವಿಯರ್ ಪಾಲೇಲಿ ಕಾಂಗ್ರೇಸ್ ಸೇರ್ಪಡೆ
ಬೆಳ್ತಂಗಡಿ ವಕೀಲರ ಸಂಘದ ಮಾಜಿ ಅಧ್ಯಕ್ಷ, ಆಲ್ ಇಂಡಿಯಾ ಕ್ಯಾಥೋಲಿಕ್ ಅಸೋಸಿಯೇಷನ್ ನ ಕರ್ನಾಟಕ ರಾಜ್ಯ ಸಮಿತಿ ನಿಕಟಪೂರ್ವಧ್ಯಕ್ಷ ಮತ್ತು ಬೆಳ್ತಂಗಡಿ ಸಿರೋ ಮಲಬಾರ್ ಅಸೋಸಿಯೇಷನ್ ಸ್ಥಾಪಕಾಧ್ಯಕ್ಷ ನ್ಯಾಯವಾದಿ ಸೇವಿಯರ್ ಪಾಲೇಲಿ ಯವರು ಇಂದು ಕಾಂಗ್ರೇಸ್ ಪಕ್ಷವನ್ನು ಸೇರಿದರು. ಬೆಳ್ತಂಗಡಿ ಬ್ಲಾಕ್ ಕಾಂಗ್ರೇಸ್ ಕಚೇರಿಯಲ್ಲಿ ನಡೆದ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಕೆ ಪಿ ಸಿ ಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಮ್ ಪಕ್ಷದ ದ್ವಜ ಮತ್ತು ಶಾಲು ಹಾಕಿ ಪಕ್ಷಕ್ಕೆ ಸೇರ್ಪಡೆಗೊಳಿಸಿದರು. ಇದೇ ಸಂಧರ್ಭದಲ್ಲಿ ಸೇವಿಯರ್ ಪಾಲೇಲಿ ಯವರ ಮಗ ಕಾನೂನು ವಿದ್ಯಾರ್ಥಿ ಅವಿಶ್...














