ಮಲೆಯಡ್ಕ ಮುಗೆರೋಡಿ ಕನ್ ಸ್ಟ್ರಕ್ಷನ್ ನ ಮಿಕ್ಸಿಂಗ್ ಪ್ಲಾಂಟ್ ರಾಷ್ಟ್ರೀಯ ಪರಿಶಿಷ್ಟ ಪಂಗಡಗಳ ಆಯೋಗದಿಂದ ನೋಟೀಸ್
ಬೆಳ್ತಂಗಡಿ; ನಡ ಗ್ರಾಮಪಂಚಾಯತು ವ್ಯಾಪ್ತಿಯ ಕನ್ಯಾಡಿ ಗ್ರಾಮದ ಮಲೆಯಡ್ಕ ಎಂಬಲ್ಲಿ ಅಕ್ರಮವಾಗಿ ನಿಯಮಗಳನ್ನು ಪಾಲಿಸದೆ ಮುಗ್ರೋಡಿ ಕನ್ ಸ್ಟ್ರಕ್ಷನ್ ನಡೆಸಿದ ಎನ್ನಲಾದ ದೌರ್ಜನ್ಯಗಳ ಕುರಿತಾಗಿ ಇದೀಗ ರಾಷ್ಟ್ರೀಯ ಪರಿಶಿಷ್ಟ ಪಂಗಡಗಳ ಆಯೋಗ ಸಂಬಂಧಿಸಿದವರಿಗೆ ನೋಟೀಸ್ ಜಾರಿ ಮಾಡಿದೆ. ಇದೀಗ ಪರಿಶಿಷ್ಟ ಪಂಗಡಗಳ ರಾಷ್ಟ್ರೀಯ ಆಯೋಗ ಪ್ರಕರಣದಲ್ಲಿ ಮದ್ಯಪ್ರವೇಶಿಸಿ ಜಿಲ್ಲಾಧಿಕಾರಿ ಮತ್ತು ಅರಣ್ಯ ಆಯುಕ್ತರಿಗೆ ನೋಟೀಸ್ ಜಾರಿಗೊಳಿಸಿದ್ದು ಪ್ರಕರಣದ ಕುರಿತಾದ ವಿಸ್ಕೃತ ವರದಿ ಕೇಳಿದೆ. ಆಯೋಗವು ಭಾರತೀಯ ಸಂವಿಧಾನದ ಕಲಂ 338A ಅಡಿಯಲ್ಲಿ ನೀಡಿರುವ ಅಧಿಕಾರದಂತೆ ಈ ವಿಷಯವನ್ನು ವಿಚಾರಿಸಲು ನಿರ್ಧರಿಸಿದ್ದು ಈ ಸಂಬಂಧ ಸಾರ್ವಜನಿಕರು, ಪರಿಶಿಷ್ಟ...
ಕಲ್ಮಂಜ; ಆಸಿಡ್ ಸೇವಿಸಿ ಮಹಿಳೆ ಆತ್ಮಹತ್ಯೆ
ಬೆಳ್ತಂಗಡಿ; ಕಲ್ಮಂಜ ಗ್ರಾಮದ ಆರ್ಲದಲ್ಲಿ ಮಹಿಳೆಯೊಬ್ಬರು ಆಸಿಡ್ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಸಂಭವಿಸಿದೆ.ಮೃತ ಮಹಿಳೆ ಆರ್ಲ ನಿವಾಸಿ ಗುಲಾಬಿ ಎಂಬವರಾಗಿದ್ದಾರೆ.ಗುಲಾಬಿ ಅವರ ಗಂಡ ಕೆಲವು ವರ್ಷಗಳ ಹಿಂದೆ ಮೃತಪಟ್ಟಿದ್ದು ಆಕೆ ಒಬ್ಬಳೇ ಮನೆಯಲ್ಲಿ ವಾಸಿಸುತ್ತಿದ್ದರು.ಫೆ.15ರಂದು ಮಧ್ಯಾಹ್ನದ ವೇಳೆ ಈಕೆ ಮನೆಯಲ್ಲಿ ಆಸಿಡ್ ಸೇವಿಸಿದ್ದು ಅಸ್ವಸ್ತರಾದ ಅವರನ್ನು ಕೂಡಲೇ ಉಜಿರೆ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಮಂಗಳೂರಿನ ಆಸ್ಪತ್ರೆಗೆ ಕರೆದೊಯ್ಯವ ವೇಳೆ ಈಕೆ ಮೃತಪಟ್ಟಿದ್ದಾಳೆ ಮೃತ ಗುಲಾಬಿ ಅವರ ಮಗಳು ನೀಡಿದ ದೂರಿನಂತೆ ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣದಾಖಲಿಸಲಾಗಿದೆ.
ಧರ್ಮಸ್ಥಳದಲ್ಲಿ ಶಿವರಾತ್ರಿ ಪ್ರಯುಕ್ತ ಸೋಮವಾರ ಬೆಳಗ್ಗಿನ ಜಾವ ರಥೋತ್ಸವ ನಡೆಯಿತು.
ಬೆಳ್ತಂಗಡಿ: ಧರ್ಮಸ್ಥಳದಲ್ಲಿ ಶಿವರಾತ್ರಿ ಪ್ರಯುಕ್ತ ಸೋಮವಾರ ಬೆಳಗ್ಗಿನ ಜಾವ ರಥೋತ್ಸವ ನಡೆಯಿತು.ನಾಡಿನೆಲ್ಲೆಡೆಯಿಂದ ಬಂದ ಸಾವಿರಾರು ಭಕ್ತರು ರಥೋತ್ಸವ ವೀಕ್ಷಿಸಿ ಧನ್ಯತೆಯನ್ನು ಹೊಂದಿದರು.
ಬೆಳ್ತಂಗಡಿ ಕಾಂಗ್ರೆಸ್ ಪಕ್ಷದ ಪ್ರಚಾರ ಸಮಿತಿ ತಾಲೂಕು ಅಧ್ಯಕ್ಷರಾಗಿ ಅಶ್ರಫ್ ನೆರಿಯ
ಬೆಳ್ತಂಗಡಿ: ಕಾಂಗ್ರೆಸ್ ಪಕ್ಷದ ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರದ ಪ್ರಚಾರ ಸಮಿತಿಯ ಅಧ್ಯಕ್ಷ ರಾಗಿಆಯ್ಕೆಯಾದ ಬಿ ಅಶ್ರಫ್ ನೆರಿಯ ಇವರಿಗೆ ಪುತ್ತೂರಿ ನಲ್ಲಿ ನಡೆದ ಪಧಾಧಿಕಾರಿಗಳ ಗ್ರಹಣ ಕಾರ್ಯಕ್ರಮದಲ್ಲಿ ಪ್ರಚಾರ ಸಮಿತಿ ರಾಜ್ಯ ಅಧ್ಯಕ್ಷರು ಮಾಜಿ ಸಚಿವರಾದ ವಿನಯ ಕುಮಾರ್ ಸೊರಕೆ ಯವರು ಆದೇಶ ಪತ್ರ ನೀಡಿದರು ಈ ಕಾರ್ಯಕ್ರಮದಲ್ಲಿ ಮಾಜಿ ಸಚಿವರಾದ ರಾಮನಾಥ ರೈ ಕೆ ಪಿ ಸಿ ಸಿ ಯ ಸುದೀರ್ ಕುಮಾರ್ ಮರೋಳಿಮುನೀರ್ ಜನ್ಸಾಲೆಶಾಹುಲ್ ಹಮೀದ್ ಕೆ ಕೆ.ಮತ್ತು ಜಿಲ್ಲಾ ಪ್ರಚಾರ ಸಮಿತಿಯ ಅಧ್ಯಕ್ಷ ರಾದ ಮಹಮ್ಮದ್ ಅಲಿಉಪಸ್ಥಿತರಿದ್ದರು.
ಬೆಳ್ತಂಗಡಿ ರಾಜಕೇಸರಿ ಸೇವಾ ಟ್ರಸ್ಟ್ ನಿಂದ ಎಂಡೋ ಪೀಡಿತ ಮಗುವಿನ ನೆರವಿಗೆ ಪೆನ್ನು ಮಾರಾಟ
ಬೆಳ್ತಂಗಡಿ: ರಾಜ ಕೇಸರಿ ಸೇವಾ ಟ್ರಸ್ಟ್ ಬೆಳ್ತಂಗಡಿ ತಾಲೂಕು ಇದರ 584ನೇ ಸೇವಾ ಯೋಜನೆಗೆ ಬೆಳ್ತಂಗಡಿ ಬಸ್ ನಿಲ್ದಾಣದಲ್ಲಿ ಚಾಲನೆ ನೀಡಲಾಯಿತು.ಬೆಳ್ತಂಗಡಿ ತಾಲೂಕು ಗರ್ಡಾಡಿ ನಿವಾಸಿಯಾದ ಉಮಾವತಿಯವರ 4ವರ್ಷದ ಮಗಳಾದ ಪ್ರಜ್ಞಾ ಕೆ. ಎಂಡೋಸಲ್ಫಾನಿಂದ ಬಳಲುತ್ತಿರುವ ಮಗುವಾಗಿದ್ದು ಈ ಮಗುವಿನ ಪ್ರತಿ ತಿಂಗಳ ಆರೋಗ್ಯದ ಚಿಕಿತ್ಸೆಯ ಸಹಾಯಕ್ಕಾಗಿ ಬಸ್ ಸ್ಟ್ಯಾಂಡ್ ನಲ್ಲಿ ಪೆನ್ನು ಮಾರಾಟ ಮಾಡುವ ಅಭಿಯಾನಕ್ಕೆ ಸೇವ್ ಲೈಫ್ ಚಾರಿಟೇಬಲ್ ಟ್ರಸ್ಟ್ ನ ಅರ್ಜುನ್ ಭಂಡಾರ್ಕರ್ ರವರು ಚಾಲನೆ ನೀಡಿದರು. ಸಂಘಟನೆಯ ಸ್ಥಾಪಕಾಧ್ಯಕ್ಷ ದೀಪಕ್ ಜಿ ಬೆಳ್ತಂಗಡಿ ಹಾಗೂ ಇತರರು ಇದ್ದರು.
ನಾವೂರು ಯುವಕ ನೇಣು ಬಿಗಿದು ಆತ್ಮಹತ್ಯೆ
ಬೆಳ್ತಂಗಡಿ ತಾಲೂಕು ನಾವೂರು ಗ್ರಾಮದಲ್ಲಿ ಯುವಕನೊರ್ವ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಫೆ.15 ರಾತ್ರಿ ನಡೆದಿದೆ. ನಾವೂರು ಬೋಲೋಟ್ಟು ಮನೆಯ ರಕ್ಷಿತ್ (28ವ) ಆತ್ಮಹತ್ಯೆ ಮಾಡಿಕೊಂಡ ಯುವಕ. ಯಾವ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ಇನ್ನಷ್ಟೆ ತಿಳಿದು ಬರಬೇಕಾಗಿದೆ. ಪೋಲೀಸರು ಸ್ಥಳಕ್ಕೆ ಆಗಮಿಸಿ ತನಿಖೆ ನಡೆಸುತಿದ್ದಾರೆ
ನೆಲ್ಯಾಡಿ ಕೆ.ಸಿ ವರ್ಗೀಸ್ ಕೊಲೆ ಪ್ರಕರಣ ಮಗ ಸೇರಿದಂತೆ ಮೂವರ ಬಂಧನ
ಬೆಳ್ತಂಗಡಿ; ನೆಲ್ಯಾಡಿಯಲ್ಲಿ ವೃದ್ದ ಕೆ.ಸಿ ವರ್ಗೀಸ್ (73) ಅವರ ಅಸಹಜ ಸಾವು ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದ್ದು ಇದೊಂದು ಕೊಲೆ ಪ್ರಕರಣ ಎಂದು ಖಚಿತ ಪಡಿಸಿದ ಪೊಲೀಸರು. ಪ್ರಕರಣಕ್ಕೆ ಸಂಬಂಧಪಟ್ಟಂತೆ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.ಮೃತರ ಮಗ ಹಾಗೂ ಸಂಬಧಿಕರಾದಕೆ.ವಿ. ತೋಮಸ್ (39), ಸಿ.ಟಿ ರಾಜು (59), ಚಾಕೊಚ್ಚ (51) ಬಂಧಿತರು. ಫೆ.9 ರಂದು ಉಪ್ಪಿನಂಗಡಿ ಠಾಣೆಯಲ್ಲಿ ಕೆ.ಸಿ.ವರ್ಗೀಸ್ ಅವರ ಸಾವಿಗೆ ಸಂಬಂಧಪಟ್ಟಂತೆ ಅಸಹಜ ಸಾವು ಪ್ರಕರಣ ದಾಖಲಾಗಿತ್ತು. ಅದರಂತೆ ಪೊಲೀಸರು ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡಿದ್ದರು. ಇದೀಗ ಕೆ.ಸಿ ವರ್ಗೀಸ್ ಅವರು ತಲೆಗೆ ಉಂಟಾದ ಗಂಭೀರ...
ಶಾಸಕ ಹರೀಶ್ ಪೂಂಜ ಅವರಿಂದ ಮಲವಂತಿಗೆಯಲ್ಲಿ 4ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡ ರಸ್ತೆ ಸೇತುವೆ ಉದ್ಘಾಟನೆ
ಬೆಳ್ತಂಗಡಿ; ರೂ.4 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡ ಮಲವಂತಿಗೆ ಗ್ರಾಮದ ಕೊಲ್ಲಿ-ಕಲ್ಬೆಟ್ಟು-ಬಾಳೆಹಿತ್ತಿಲು ರಸ್ತೆ ಕಾಂಕ್ರಿಟೀಕರಣ ಹಾಗೂ ಕಲ್ಬೆಟ್ಟು ಎಂಬಲ್ಲಿ ಸೇತುವೆ ನಿರ್ಮಾಣ ಕಾಮಗಾರಿಯನ್ನು ಬೆಳ್ತಂಗಡಿ ಶಾಸಕರಾದ ಹರೀಶ್ ಪೂಂಜರವರು ಲೋಕಾರ್ಪಣೆಗೊಳಿಸಿದರು. ಈ ಸಂದರ್ಭದಲ್ಲಿ ಮಲವಂತಿಗೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಪ್ರಕಾಶ್ ಜೈನ್, ಮಿತ್ತಬಾಗಿಲು ಗ್ರಾಮ ಪಂಚಾಯತ್ ಅಧ್ಯಕ್ಷರಾದ ವಿನಯಚಂದ್ರ, ಗ್ರಾಮ ಪಂಚಾಯತ್ ಸದಸ್ಯರುಗಳು, ಬಿಜೆಪಿ ಶಕ್ತಿ ಕೇಂದ್ರ ಅಧ್ಯಕ್ಷರುಗಳು, ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು
ಲಾಯಿಲ ಅಗಳಿ ಪರಿಸರದಲ್ಲಿ ಚಿರತೆ ಓಡಾಟ
ಬೆಳ್ತಂಗಡಿ: ನಡ ಮತ್ತು ಲಾಯಿಲ ಗ್ರಾಮದ ಗಡಿ ಭಾಗವಾದ ಅಗಳಿಯ ಹೇನಡ್ಕ ಪರಿಸರದಲ್ಲಿ ಶನಿವಾರ ರಾತ್ರಿ ಚಿರತೆ ತಿರುಗಾಟ ನಡೆಸಿದೆ.ಒಂದು ದೊಡ್ಡ ಚಿರತೆ ಹಾಗೂ ಮರಿಚಿರತೆ ಸಂಚರಿಸಿರುವ ಹೆಜ್ಜೆಗಳು ರಸ್ತೆಯಲ್ಲಿ ಕಂಡು ಬಂದಿವೆ.ಕುದುರೆಮುಖ ರಾಷ್ಟ್ರೀಯ ಉದ್ಯಾನವನದಿಂದ ಸುಮಾರು 150ಮೀ. ದೂರದಲ್ಲಿ ಹಾಗೂ ಸ್ಥಳೀಯ ಮನೆಗಳಿಂದ 50 ಮೀ.ಪ್ರದೇಶದಲ್ಲಿ ಚಿರತೆ ಸಂಚಾರ ನಡೆಸಿದೆ. ಅರಣ್ಯ ಇಲಾಖೆಯ ಸಿಬ್ಬಂದಿ ಸ್ಥಳ ಪರಿಶೀಲನೆ ನಡೆಸಿದ್ದಾರೆ.ಈ ಪರಿಸರದಲ್ಲಿ ಆಗಾಗ ಚಿರತೆಗಳು ತಿರುಗಾಟ ನಡೆಸುವುದು ಮಾಮೂಲಾಗಿದೆ. ಸ್ಥಳೀಯರು ಭಯದಿಂದ ಜೀವನ ನಡೆಸುವಂತಾಗಿದೆ
ಬೆಳ್ತಂಗಡಿ : ತಿಥಿ ಕಾರ್ಯಕ್ರಮಕ್ಕೆ ಬಡಿಸಲು ಆಮೆಗಳ ಬೇಟೆ ಆಮೆಗಳು ಸಮೇತ ನಾಲ್ಕು ಮಂದಿಯ ಬಂಧನ
ಬೆಳ್ತಂಗಡಿ; ಅಜ್ಜಿಯ ತಿಥಿ ಕಾರ್ಯಕ್ರಮಕ್ಕೆ ಪದಾರ್ಥ ಮಾಡಿ ಬಡಿಸಲು ಅಜ್ಜಿಗೆ ಇಷ್ಟವಾದ ಆಮೆಯನ್ನು ನದಿಯಲ್ಲಿ ಅಕ್ರಮವಾಗಿ ಬೇಟೆಯಾಡಿ ಮಾಂಸ ಮಾಡಲು ಪ್ರಯತ್ನಿಸುತ್ತಿದ್ದಾಗ ಬೆಳ್ತಂಗಡಿ ಪೊಲೀಸರು ದಾಳಿ ಮಾಡಿ ನಾಲ್ಕು ಆಮೆ ಸಮೇತ ನಾಲ್ಕು ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ. ಬೆಳ್ತಂಗಡಿ ನಗರದ ಸೋಮವತಿ ನದಿಯಲ್ಲಿ ಅಕ್ರಮವಾಗಿ ನಾಲ್ಕು ಆಮೆಯನ್ನು ಬೇಟೆಯಾಡಿ ನದಿ ಬದಿಯಲ್ಲಿ ಮಾಂಸ ಮಾಡಲು ಪ್ರಯತ್ನಿಸುತ್ತಿರುವಾಗ ಫೆ.14 ರಂದು ಸಂಜೆ 3:30 ರ ಸುಮಾರಿಗೆ ಖಚಿತ ಮಾಹಿತಿ ಮೇರೆಗೆ ಬೆಳ್ತಂಗಡಿ ಸಬ್ ಇನ್ಸ್‌ಪೆಕ್ಟರ್ ಆನಂದ್.ಎಮ್ ನೇತೃತ್ವದ ತಂಡ ದಾಳಿ ಮಾಡಿ ನಾಲ್ಕು ಮಂದಿಯನ್ನು ವಶಕ್ಕೆ...















