ಗಿರೀಶ್ ಮಟ್ಟಣ್ಣನವರ್ ವಿರುದ್ದ ಮತ್ತೊಂದು ಪ್ರಕರಣ ದಾಖಲು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹಕಿದ ಆರೋಪ
ಬೆಳ್ತಂಗಡಿ; ಸಾಮಾಜಿಕ ಜಾಲತಾಣದಲ್ಲಿ ಸಾರ್ವಜನಿಕರಿಗೆ ಕಿರಿಕಿರಿಯಾಗುವಂತೆ ಅಶ್ಲೀಲವಾಗಿ ಮಾತನಾಡಿ ವಿಡಿಯೋವನ್ನು ಹರಿಬಿಟ್ಟ ಬಗ್ಗೆ ಹೋರಾಟಗಾರ ಗಿರೀಶ್ ಮಟ್ಟಣ್ಣನವರ್ ವಿರುದ್ದ ಬೆಳ್ತಂಗಡಿ ಠಾಣೆಯಲ್ಲಿ ಮತ್ತೊಂದು ಪ್ರಕರಣ ದಾಖಲಿಸಾಲಗಿದೆ.ಧರ್ಮಸ್ಥಳ ನಿವಾಸಿ ರಾಹೇಂದ್ರ ದಾಸ್ ಡಿ ಅವರು ಈ ಬಗ್ಗೆ ಬೆಳ್ತಂಗಡಿ ಪೊಲೀಸರಿಗೆ ದೂರು ನೀಡಿದ್ದು ಸಾರ್ವಜನಿಕರಿಗೆ ಕಿರಿಕಿರಿಯುಂಟುಮಾಡುವಂತೆವ ಅಶ್ಲೀಲವಾಗಿ ಮಾತನಾಡುವ ವಿಡಿಯೋವನ್ನು ಜನತಾ ನ್ಯೂಸ್ ನಲ್ಲಿ ಹರಿಬಿಟ್ಟಿದ್ದು ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಲಾಗಿದೆ. ಅದರಂತೆ ಗಿರೀಶ್ ಮಟ್ಟಣ್ಣನವರ್ ವಿರುದ್ದ ಬೆಳ್ತಂಗಡಿ ಠಾಣೆಯಲ್ಲಿ 296ಬಿ.ಎನ್.ಎಸ್. ನಂತೆ ಪ್ರಕರಣ ದಾಖಲಿಸಿದ್ದಾರೆ.
ಗಿರೀಶ್ ಮಟ್ಟಣ್ಣನವರ್ ಹಾಗೂ ಮಹೇಶ್ ಶೆಟ್ಟಿ ತಿಮರೋಡಿ ವಿರುದ್ದ ಮತ್ತುಂದು ಪ್ರಕರಣ ದಾಖಲು
ಬೆಳ್ತಂಗಡಿ: ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳುಸುದ್ದಿ ಹಬ್ಬಿಸಿದ ಆರೋಪದ ಮೇಲೆ ಸೌಜನ್ಯಾ ಪರ ಹೋರಾಟಗಾರರಾದ ಗಿರೀಶ್ ಮಟ್ಟಣ್ಣವರ್ ಮತ್ತು ಮಹೇಶ್ ಶೆಟ್ಟಿ ತಿಮರೋಡಿ ವಿರುದ್ಧ ಬೆಳ್ತಂಗಡಿ ಪೊಲೀಸರು ಭಾನುವಾರ ಮತ್ತೊಂದು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮಟ್ಟಣ್ಣವರ್ ಮತ್ತು ತಿಮರೋಡಿ ಸಮಾಜದ ಸೌಹಾರ್ದಮಯ ವಾತಾವರಣ ಕದಡಲು ಮತ್ತು ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರಲು ಪ್ರಯತ್ನಿಸಿದ್ದಾರೆ ಎಂದು ಧರ್ಮಸ್ಥಳ ಗ್ರಾಮದ ಪ್ರವೀಣ್ ಕೆ.ಆರ್ ದೂರು ನೀಡಿದ್ದಾರೆ. ಆ.30ರಂದು ಯುಟ್ಯೂಬ್‌ನಲ್ಲಿ ಕಂಡ ವಿಡಿಯೊವೊಂದರಲ್ಲಿ ಮದನ್ ಬುಗುಡಿ ಎಂಬ ವ್ಯಕ್ತಿಯ ಜತೆಗೂಡಿ ಮಾಧ್ಯಮಗಳಿಗೆ ನೀಡಿರುವ ಹೇಳಿಕೆಯಲ್ಲಿ ಗಿರೀಶ್ ಮಟ್ಟಣ್ಣವರ್ ಸಮಾಜದ ಸ್ವಾಸ್ಥ್ಯ ಕದಡುವ...
ಬುರುಡೆ ಪ್ರಕರಣ; ಉಜಿರೆಯ ಖಾಸಗಿ ಲಾಡ್ಜ್ ನಲ್ಲಿ ಸ್ಥಳ ಮಹಜರು
ಬೆಳ್ತಂಗಡಿ : ಬುರುಡೆ ಚಿನ್ನಯ್ಯನ ಪ್ರಕರಣಕ್ಕೆ ಸಂಬಂಧಿಸಿದಂತೆ ಸೆ.1 ರಂದು ಸಂಜೆ 7 ಗಂಟೆಗೆ ಉಜಿರೆ - ಚಾರ್ಮಾಡಿ ರಸ್ತೆಯಲ್ಲಿರುವ ಖಾಸಗಿ ಲಾಡ್ಜ್ ಹಾಗೂ ಹೊಟೇಲ್ ಗೆ ಕರೆದುಕೊಂಡು ಬಂದು ಎಸ್.ಐ.ಟಿ ಅಧಿಕಾರಿಗಳು ಮಹಜರು ನಡೆಸುತ್ತಿದ್ದಾರೆ. ಚಿನ್ನಯ್ಯ ಈ ಲಾಡ್ಜ್ ನಲ್ಲಿ ಒಂದು ದಿನ ವಾಸ್ತವ್ಯ ಮಾಡಿದ್ದರಿಂದ ಈ ಲಾಡ್ಜ್ ಗೆ ಚಿನ್ನಯ್ಯನನ್ನು ಕರೆದುಕೊಂಡು ಎಫ್ಎಸ್ಎಲ್ ವಿಭಾಗದ ಸೋಕೊ ಸಿಬ್ಬಂದಿಗಳ ಜೊತೆ ಮಹಜರು ಕಾರ್ಯ ನಡೆಸುತ್ತಿದ್ದಾರೆ.
ಬುರುಡೆ ಪ್ರಕರಣವನ್ನು ಕೇಂದ್ರ ತನಿಖಾ ತಂಡಕ್ಕೆ ವಹಿಸಬೇಕು: ನಿಖಿಲ್ ಕುಮಾರಸ್ವಾಮಿ
ಬೆಳ್ತಂಗಡಿ: ನಾಡಿನ ಪವಿತ್ರಕ್ಷೇತ್ರ ಧರ್ಮಸ್ಥಳದ ಬಗ್ಯೆ ಮಾಧ್ಯಮಗಳಲ್ಲಿ ನಿರಂತರ ಪ್ರಕಟವಾಗುತ್ತಿರುವ ಅಪಪ್ರಚಾರ ಹಾಗೂ ಸುಳ್ಳು ವದಂತಿಗಳಿಂದ ದೇಶ-ವಿದೇಶಗಳಲ್ಲಿರುವ ಕೋಟ್ಯಾಂತರ ಭಕ್ತಾದಿಗಳಿಗೆ ತೀವ್ರ ನೋವಾಗಿದೆ. ಭಯ ಮತ್ತು ಗೊಂದಲದ ವಾತಾವರಣ ಉಂಟಾಗಿದೆ. ಆದುದರಿಂದ ಪಾರದರ್ಶಕವಾಗಿ ತನಿಖೆ ನಡೆಸಿ ನ್ಯಾಯ ಒದಗಿಸಲು ಬುರುಡೆ ಪ್ರಕರಣವನ್ನು ಕೇಂದ್ರ ತನಿಖಾ ತಂಡಕ್ಕೆ ವಹಿಸಬೇಕು ಎಂದು ನಿಖಿಲ್ ಕುಮಾರಸ್ವಾಮಿ ಒತ್ತಾಯಿಸಿದರು.ಅವರು ಭಾನುವಾರ ತಮ್ಮ ಸಾವಿರಾರು ಅಭಿಮಾನಿಗಳೊಂದಿಗೆ ಧರ್ಮಸ್ಥಳಕ್ಕೆ ಬಂದು ದೇವರ ದರ್ಶನ ಮಾಡಿ, ಅಮೃತವರ್ಷಿಣಿ ಸಭಾಭವನದಲ್ಲಿ ಮಾತನಾಡಿದರು.ಅನಾಮಧೇಯ ವ್ಯಕ್ತಿ ನೀಡಿದ ದೂರನ್ನು ಗಂಭೀರವಾಗಿ ಪರಿಗಣಿಸಿ ನ್ಯಾಯ ದೊರಕಿಸುವ ಬದಲು ಸರ್ಕಾರ...
ಧರ್ಮಸ್ಥಳದಲ್ಲಿ ಧರ್ಮಸಂರಕ್ಷಣಾ ಸಮಾವೇಶ; ಎಸ್.ಐ.ಟಿ. ತನಿಖೆಯಿಂದ ಸತ್ಯದ ಸಾಕ್ಷಾತ್ಕಾರವಾಗುತ್ತಿರುವುದು ಸಂತಸ ದಾಯಕವಾಗಿದೆ.
ಉಜಿರೆ: ಸತ್ಯದ ಸತ್ವ ಪರೀಕ್ಷೆಯ ಕಾಲ ಇದಾಗಿದ್ದು ಎಸ್.ಐ.ಟಿ. ತನಿಖೆಯಿಂದ ಅನೇಕ ಸತ್ಯಾಂಶಗಳು ನಮಗೆ ನ್ಯಾಯಯುತವಾಗಿ ಪೂರಕವಾಗಿ ಪ್ರಕಟವಾಗುತ್ತಿದ್ದು, ಸತ್ಯದ ಸಾಕ್ಷಾತ್ಕಾರವಾಗುತ್ತಿರುವುದು ಸಂತಸದಾಯಕವಾಗಿದೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಹೇಳಿದರು.ಅವರು ಭಾನುವಾರ ಧರ್ಮಸ್ಥಳದಲ್ಲಿ ಅಮೃತವರ್ಷಿಣಿ ಸಭಾಭವನದಲ್ಲಿ ಅವಿಭಜಿತ ಉಡುಪಿ ಮತ್ತು ದಕ್ಷಿಣಕನ್ನಡ ಜಿಲ್ಲೆಯಿಂದ ಬೆಳ್ತಂಗಡಿ ತಾಲ್ಲೂಕು ಜೈನಸಮಾಜ ಬಾಂಧವರ ಆಶ್ರಯದಲ್ಲಿ ಬೆಳ್ತಂಗಡಿ ಜೈನಪೇಟೆಯಲ್ಲಿರುವ ಬಸದಿಯಿಂದ ಧರ್ಮಸ್ಥಳಕ್ಕೆ ಬೃಹತ್ ವಾಹನಜಾಥಾದಲ್ಲಿ ಬಂದ ಸಮಾಜಬಾಂಧವರಿಗೆ ಶುಭ ಹಾರೈಸಿ ಮಾತನಾಡಿದರು.ಧರ್ಮಸ್ಥಳದಲ್ಲಿ ಹುಟ್ಟಿದ ತಾವು ಮತ್ತು ಕುಟುಂಬಸ್ಥರೆಲ್ಲರೂ ಅದೃಷ್ಟಶಾಲಿಗಳು ಹಾಗೂ ಭಾಗ್ಯವಂತರು. ಭಗವಾನ್ ಚಂದ್ರನಾಥ ಸ್ವಾಮಿ,...
ಬೆಳ್ತಂಗಡಿ : ಬೆಂಗಳೂರು ಜಯಂತ್.ಟಿ ಮನೆಯಲ್ಲಿ ಎಸ್.ಐ.ಟಿ ಶೋಧ ಕಾರ್ಯ ಅಂತ್ಯ
ಬೆಳ್ತಂಗಡಿ : ಬುರುಡೆ ಪ್ರಕರಣದಲ್ಲಿ ಚಿನ್ನಯ್ಯನ ಜೊತೆ ಎಸ್.ಐ.ಟಿ ಅಧಿಕಾರಿಗಳು ಬೆಂಗಳೂರಿನ ಬಗಳಗುಂಟೆಯ ಪೀಣ್ಯ ದಲ್ಲಿರುವ ಜಯಂತ್ ಟಿ ಬಾಡಿಗೆ ಮನೆ ಮೇಲೆ ಆ.30 ರಂದು ಮಾದ್ಯಾಹ್ನ ಕೋರ್ಟ್ ನಿಂದ ಸರ್ಚ್ ವಾರಂಟ್ ಪಡೆದು ದಾಳಿ ಮಾಡಿ ಪರಿಶೀಲನೆ ನಡೆಸಿ ಸಂಜೆ 6:45 ಕ್ಕೆ ಶೋಧ ಮತ್ತು ಮಹಜರು ಕಾರ್ಯ ಮುಕ್ತಾಯವಾಗಿದೆ. ದಾಳಿ ಮಾಡುವ ವೇಳೆ ಜಯಂತ್.ಟಿ ಮಗ ಎಸ್.ಐ.ಟಿ ಅಧಿಕಾರಿಗಳಿಗೆ ಮನೆಯನ್ನು ಕೀ ನೀಡಿ ಓಪನ್ ಮಾಡಿಸಿ ಮನೆಯೊಳಗೆ ಶೋಧ ನಡೆಸುತ್ತಿದ್ದಾರೆ. ಎಸ್.ಐ.ಟಿ ಶೋಧ ವೇಳೆ ಜಯಂತ್.ಟಿ ಪತ್ನಿಯ ಹಳೆ ಆಂಡ್ರೈಡ್ ಮೊಬೈಲ್ ಫೋನ್...
ನೂತನ ಬಿಷಪ್ ಅವರಿಗೆ ಅಭಿನಂದನೆ ಸಲ್ಲಿಸಿದ ರಕ್ಷಿತ್ ಶಿವರಾಂ
ಬೆಳ್ತಂಗಡಿ ಧರ್ಮಪ್ರಾಂತ್ಯದ ನೂತನ ಧರ್ಮಾಧ್ಯಕ್ಷರಾಗಿ ಆಯ್ಕೆಯಾದ ಅ.ವಂ ಫಾ. ಜೇಮ್ಸ್ ಪಟ್ಟೇರಿಲ್ ರವರನ್ನು ಇಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ಭೇಟಿ ಮಾಡಿಅಭಿನಂದನೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಬಿಷಪ್ ಲಾರೆನ್ಸ್ ಮುಕ್ಕುಯಿ ರವರಿಗೂ ಶುಭಾಶಯ ಕೋರಿದರು.ಈ ಸಂದರ್ಭದಲ್ಲಿ ಪ್ರವೀಣ್ ಫೆರ್ನಾಂಡಿಸ್ ಉಜಿರೆ, ಹಾಗೂ ಪ್ರಮುಖರು ಉಪಸ್ಥಿತರಿದ್ದರು.
ಬೆಳ್ತಂಗಡಿ : ಬುರುಡೆ ಪ್ರಕರಣದಲ್ಲಿ ಜಯಂತ್ ಟಿ ಬಾಡಿಗೆ ಮನೆ ಮೇಲೆ ಎಸ್.ಐ.ಟಿ ದಾಳಿ
ಬೆಳ್ತಂಗಡಿ : ಬುರುಡೆ ಪ್ರಕರಣದಲ್ಲಿ ಚಿನ್ನಯ್ಯನ ಜೊತೆ ಎಸ್.ಐ.ಟಿ ಅಧಿಕಾರಿಗಳು ಬೆಂಗಳೂರಿನ ಬಗಳಗುಂಟೆಯ ಪೀಣ್ಯ ದಲ್ಲಿರುವ ಜಯಂತ್ ಟಿ ಬಾಡಿಗೆ ಮನೆ ಮೇಲೆ ಆ.30 ರಂದು ಮಾದ್ಯಾಹ್ನ ಕೋರ್ಟ್ ನಿಂದ ಸರ್ಚ್ ವಾರಂಟ್ ಪಡೆದು ದಾಳಿ ಮಾಡಿದ್ದಾರೆ. ದಾಳಿ ಮಾಡುವ ವೇಳೆ ಜಯಂತ್.ಟಿ ಮಗ ಎಸ್.ಐ.ಟಿ ಅಧಿಕಾರಿಗಳಿಗೆ ಮನೆಯನ್ನು ಕೀ ನೀಡಿ ಓಪನ್ ಮಾಡಿಸಿ ಮನೆಯೊಳಗೆ ಶೋಧ ನಡೆಸುತ್ತಿದ್ದಾರೆ. ಎಸ್.ಐ.ಟಿ ಶೋಧ ವೇಳೆ ಜಯಂತ್.ಟಿ ಪತ್ನಿಯ ಹಳೆ ಆಂಡ್ರೈಡ್ ಮೊಬೈಲ್ ಫೋನ್ ವಶಕ್ಕೆ ಪಡೆದು ಮಹಜರು ನಡೆಸುತ್ತಿದ್ದಾರೆ ಎನ್ನಲಾಗಿದೆ.
ವಿಚಾರಣೆ ಮುಗಿಸಿ ಹಿಂತಿರುಗಿದ ಯುಟ್ಯೂಬರ್ ಸಮೀರ್ ಎಂ.ಡಿ
ಬೆಳ್ತಂಗಡಿ; ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗಾಗಿ ಯುಟ್ಯೂಬರ್ ಸಮೀರ್ ಎಂ.ಡಿ ಅವರು ಬೆಳ್ತಂಗಡಿ ಠಾಣೆಗೆ ಆಗಮಿಸಿ ವಿಚಾರಣೆ ಎದುರಿಸಿ ಹಿಂತಿರುಗಿದ್ದಾರೆ. ತನ್ನ ವಕೀಲರೊಂದಿಗೆ ಆಗಮಿಸಿದ ಸಮೀರ್ ಅವರು ಬೆಳ್ತಂಗಡಿ ಠಾಣೆಗೆ ತರೆಳಿ ಅಗತ್ಯ ಮಾಹಿತಿಗಳನ್ನು ನೀಡಿ ಹಿಂತಿರುಗಿದ್ದಾರೆ. ಅವರ ವಿರುದ್ದ ಸಾಮಾಜಿಕ ಜಾಲತಾಣಗಳಲ್ಲಿ ಅಪಪ್ರಚಾರ ಮಾಡಿರುವ ಬಗ್ಗೆ ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.
ಬೆಳ್ತಂಗಡಿ : ಬುರುಡೆ ಪ್ರಕರಣ ಚಿನ್ನಯ್ಯನನ್ನು ಮಹಜರು ನಡೆಸಲು ಕರೆದುಕೊಂಡು ಹೋದ ಎಸ್.ಐ.ಟಿ
ಬೆಳ್ತಂಗಡಿ : ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೆ ಒಳಗಾಗಿರುವ ಸಾಕ್ಷಿದೂರುದಾರ ಚಿನ್ನಯ್ಯನನ್ನು ಎಸ್.ಐ.ಟಿ ತಂಡಮಹಜರಿಗಾಗಿ ಕರೆದೊಯ್ದಿದ್ದಾರೆ.ಆತನಿಗೆ ಸಂಬಂಧಿಸಿದ ಸ್ಥಳಗಳಿಗೆ ಮಹಜರು ನಡೆಸಲು ಹಾಗೂ ದಾಖಲೆಗಳನ್ನು ವಶಪಡಿಸಿಕೊಳ್ಳಬೇಕಾದ ಅಗತ್ಯವಿದ್ದು ಆ.30 ರಂದು ಬೆಳಗ್ಗೆ 6 ಗಂಟೆಗೆ ಎಸ್.ಐ.ಟಿ ಅಧಿಕಾರಿಗಳು ಬಿಗಿ ಭದ್ರತೆಯಲ್ಲಿ ಕರೆದುಕೊಂಡು ಹೋಗಿದ್ದಾರೆ.ಆತನನ್ನು ಕರೆದುಕೊಂಡು ಹೋಗಿರುವುದು ಎಲ್ಲಿಗೆ ಎಂಬ ಬಗ್ಗೆ ಯಾವುದೆ ಮಾಹಿತಿಗಳು ಲಭ್ಯವಾಗಿಲ್ಲ














