ಚಾರ್ಮಾಡಿ ಘಾಟಿಯಲ್ಲಿ ಗ್ಯಾಸ್ ಸಿಲಿಂಡರ್ ಲಾರಿ ಪಲ್ಟಿ

0

ಬೆಳ್ತಂಗಡಿ: ಚಾರ್ಮಾಡಿ ಘಾಟಿಯ ಅಣ್ಣಪ್ಪ ಸ್ವಾಮಿ ದೇವಾಲಯದ ಸಮೀಪದ ತಿರುವಿನಲ್ಲಿ ಗ್ಯಾಸ್ ಸಿಲಿಂಡರ್‌ ಗಳಿಂದ ತುಂಬಿದ್ದ ಲಾರಿಯೊಂದು ಪಲ್ಟಿಯಾದ ಘಟನೆ ಶುಕ್ರವಾರ ನಡೆದಿದೆ. ಕಡೂರಿನಿಂದ ಮಂಗಳೂರಿಗೆ ತೆರಳುತ್ತಿದ್ದ ಲಾರಿ, ಚಾಲಕನ ನಿಯಂತ್ರಣ ತಪ್ಪಿದ ಪರಿಣಾಮ ತಿರುವಿನಲ್ಲಿ ಉರುಳಿದೆ.ಅಪಘಾತದಲ್ಲಿ ಲಾರಿ ಚಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಬಣಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಪಘಾತದ ಕಾರಣ ಕೆಲಕಾಲ ಸಂಚಾರದಲ್ಲಿ ಅಡಚಣೆ ಉಂಟಾಯಿತು.

ಮರೋಡಿಯಲ್ಲಿ ಬೈಕ್ ಕಳ್ಳತನಕ್ಕೆ ಯತ್ನ ಆರೋಪ: ಇಬ್ಬರು ಆರೋಪಿಗಳಿಗೆ ಥಳಿಸಿ ಮರಕ್ಕೆ ಕಟ್ಟಿದ ಹಾಕಿದ ಸಾರ್ವಜನಿಕರು ಎರಡೂ ಕಡೆಯವರ ವಿರುದ್ದ ಪ್ರಕರಣ‌ದಾಖಲು

0

ಬೆಳ್ತಂಗಡಿ : ಬೈಕ್ ಕಳ್ಳತನ ಮಾಡಿ ಪರಾರಿಯಾಗುತ್ತಿರುವ ಆರೋಪದ ಮೇರೆಗೆ ಸಾರ್ವಜನಿಕರು ಸೇರಿ ಇಬ್ಬರು ಆರೋಪಿಗಳನ್ನು ಓಡಿ ಹಿಡಿದುಕೊಂಡು ಬಂದು ಹಿಗ್ಗಮುಗ್ಗ ಥಳಿಸಿ ಬಳಿಕ ಮರಕ್ಕೆ ಕಟ್ಟಿ ಹಾಕಿ ವೇಣೂರು ಪೊಲೀಸರಿಗೆ ಒಪ್ಪಿಸಿದ ಘಟನೆ ನಡೆದಿದೆ. ಈ ಬಗ್ಗೆ ಇಬ್ಬರು ಬೈಕ್ ಕಳ್ಳತನಕ್ಕೆ ಯತ್ನಿಸಿದ ಬಗ್ಗೆ ಪ್ರಕರಣ ದಾಖಲಿಸಲಾಗಿದೆ.ಇದೆ ಘಟನೆಗೆ ಸಂಬಂಧಿಸಿದಂತೆ ಹಲ್ಲೆಗೆ ಒಳಗಾದವರು ನೀಡಿದ ದೂರಿನಂತೆ ಸ್ಥಳೀಯರಾದ 8 ಮಂದಿ ಆರೋಪಿಗಳ ವಿರುದ್ದ ಪ್ರಕರಣ ದಾಖಲಿಸಲಾಗಿದೆ ಎರಡೂ ಪ್ರಕರಣಗಳಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಘಟನೆ ವರದಿ: ಬೆಳ್ತಂಗಡಿ ತಾಲೂಕಿನ ಮರೋಡಿ ಗ್ರಾಮದ ಪಳಾರಗೋಳಿ...

ಬೆಳ್ತಂಗಡಿ :ಮನೆಯಿಂದ ಹೋದ ವೃದ್ಧ  ನಾಪತ್ತೆ

0

ಬೆಳ್ತಂಗಡಿ : ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ವೃದ್ಧರೊಬ್ಬರು ಮನೆಯಿಂದ ಹೋದವರು ವಾಪಸ್ ಬಾರದೆ ನಾಪತ್ತೆಯಾದ ಬಗ್ಗೆ ವೇಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬೆಳ್ತಂಗಡಿ ತಾಲೂಕಿನ ಕೊಕ್ರಾಡಿ ಗ್ರಾಮದ ಕೊಕ್ರಾಡಿ ಎಂಬಲ್ಲಿ ಒಬ್ಬರೇ ವಾಸವಾಗಿದ್ದ ರಾಘು ಶೆಟ್ಟಿ @ ಅನ್ನೋಜಿ(70) ಎಂಬವರು ಹಲವು ವರ್ಷಗಳಿಂದ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದರು. ಮಂಗಳೂರು ಆಸ್ಪತ್ರೆಯಿಂದ ಔಷದಿ ಇದ್ದು. ಕಳೆದ ಒಂದೂವರೆ ವರ್ಷಗಳಿಂದ ಕೊಕ್ರಾಡಿ ಚಿಕ್ಕಪ್ಪನೊಂದಿಗೆ ವಾಸವಾಗಿದ್ದರು. ಜ.18 ರಂದು ಸಂಜೆ 3 ಗಂಟೆಗೆ ಯಾರು ಇಲ್ಲದ ವೇಳೆಗೆ ಮನೆಯಿಂದ ಹೊರಹೋದವರು ವಾಪಸ್ ಮನೆಗೆ ಬಾರದೆ ನಾಪತ್ತೆಯಾಗಿದ್ದಾರೆ. ಈ...

29 ವರ್ಷಗಳಿಂದ ತಲೆಮರೆಸಿಕೊಂಡಿದ್ದ  ದುಂಡುಪಾಳ್ಯ ಗ್ಯಾಂಗ್ ನ ಆರೋಪಿಯ ಬಂಧನ

0

ಮಂಗಳೂರು, ದಂಡುಪಾಳ್ಯ ಗ್ಯಾಂಗ್ ನ ಆರೋಪಿ 29 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಚಿಕ್ಕ ಹನುಮ @ ಚಿಕ್ಕ ಹನುಮಂತಪ್ಪ(55) ನನ್ನು ಮಂಗಳೂರಿನ ಉರ್ವ ಠಾಣೆಯ ಪೊಲೀಸರು ಆಂಧ್ರಪ್ರದೇಶದಲ್ಲಿ ಬಂಧಿಸಿದ್ದಾರೆ. ಆರೋಪಿ ಉರ್ವಾ ಪೊಲೀಸ್ ಠಾಣಾ ಅ.ಕ್ರ ನಂಬ್ರ 113/1997, ರ ಪ್ರಕರಣದಲ್ಲಿ 29 ವರ್ಷಗಳಿಂದ ತಲೆಮರೆಸಿಕೊಂಡಿದ್ದ. "ದಂಡುಪಾಳ್ಯ ಗ್ಯಾಂಗ್‌" ಎಂದೇ ಕುಖ್ಯಾತಿ ಪಡೆದಿರುವ ಗ್ಯಾಂಗ್ ನ ಸಹಚರ (ಎ-6) ಚಿಕ್ಕ ಹನುಮ @ ಚಿಕ್ಕ ಹನುಮಂತಪ್ಪ @ ಕೆ. ಕೃಷ್ಣಪ್ಪ @ ಕೃಷ್ಣ ನನ್ನು ಆಂದ್ರಪ್ರದೇಶ ರಾಜ್ಯದ ಅನ್ನಮಯ್ಯ ಜಿಲ್ಲೆಯ, ಮದನಪಳ್ಳಿ ಎಂಬಲ್ಲಿ ಉರ್ವ ಠಾಣಾ...

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಣಿಯೂರು ವಲಯದ ಒಕ್ಕೂಟ ಪದಾಧಿಕಾರಿಗಳ ತರಬೇತಿ ಕಾರ್ಯಗಾರ

0

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ. ಸಿ ಟ್ರಸ್ಟ್(ರಿ) ಕಣಿಯೂರು ವಲಯದ ಒಕ್ಕೂಟ ಪದಾಧಿಕಾರಿಗಳ ತರಬೇತಿ ಕಾರ್ಯಗಾರವನ್ನು ಕೊರಿಂಜ ಸಮುದಾಯ ಭವನದಲ್ಲಿ ನಡೆಸಲಾಯಿತು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಣಿಯೂರು ವಲಯದ ವಲಯಾಧ್ಯಕ್ಷರಾದ ರಮಾನಂದ ಪೂಜಾರಿ ರವರು ವಹಿಸಿದರು.ನಿಕಟ ಪೂರ್ವ ವಲಯಾಧ್ಯಕ್ಷರಾದ ಕೃಷ್ಣಯ್ಯ ಆಚಾರ್ಯ ರವರು ದೀಪ ಬೆಳಗಿಸು ದರೊಂದಿಗೆ ಉದ್ಘಾಟಿಸಿದರು.ತರಬೇತಿ ಕಾರ್ಯಗಾರದಲ್ಲಿ ಯೋಜನಾಧಿಕಾರಿಯವರಾದ ಅಶೋಕ್ ರವರು ಒಕ್ಕೂಟದ ಮಹತ್ವ,ಪದಾಧಿಕಾರಿಗಳ ಜವಾಬ್ದಾರಿ,ಒಕ್ಕೂಟದಲ್ಲಿ ಯೋಜನೆಯ ಕಾರ್ಯಕ್ರಮಗಳ ಅನುಷ್ಠಾನ,ಯೋಜನೆಯಿಂದ ಸಿಗುವ ಸೌಲಭ್ಯಗಳನ್ನು ಸದಸ್ಯರಿಗೆ ಒದಗಿಸಿಕೊಡುವ ಬಗ್ಗೆ ಮಾಹಿತಿ ಮಾರ್ಗದರ್ಶನ ನೀಡಿದರು.ರಿಕವರಿ ಯೋಜನಾಧಿಕಾರಿಯವರಾದ ಆನಂದ್ ರವರು ಬಡ್ಡಿದರದ ಲೆಕ್ಕಾಚಾರದ ಬಗ್ಗೆ...

ರಾಜ್ಯಪಾಲರು ಕೇಂದ್ರ ಸರ್ಕಾರದ ತಾಳಕ್ಕೆ ತಕ್ಕಂತೆ ಕುಣಿಯುವುದನ್ನು ನಿಲ್ಲಿಸಬೇಕು : ರಕ್ಷಿತ್ ಶಿವರಾಂ.

0

ಬೆಳ್ತಂಗಡಿ. ವಿಧಾನಮಂಡಲವನ್ನು ಉದ್ದೇಶಿಸಿ ರಾಜ್ಯಪಾಲರು ಮಾಡುವ ಭಾಷಣವನ್ನು 'ರಾಜ್ಯ ಸಚಿವ ಸಂಪುಟ' ಒದಗಿಸುತ್ತದೆ. ಆ ಭಾ಼ಷಣದಲ್ಲಿ ಕೇಂದ್ರ ಸರ್ಕಾರದ ವಿರುದ್ದದ ವಿಷಯಗಳಿವೆ ಎಂಬ ಕಾರಣಕ್ಕಾಗಿ ರಾಜ್ಯಪಾಲರು ಭಾಷಣವನ್ನು ನಿರಾಕರಿಸುವಂತಿಲ್ಲ. ರಾಜ್ಯಪಾಲರು ಯಾವುದೇ ಪಕ್ಷದ ಸದಸ್ಯರಲ್ಲಇಂದು ಕರೆದಿದ್ದ ವಿಶೇಷ ಜಂಟಿ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಬೇಕಿದ್ದ ರಾಜ್ಯಪಾಲರು ಸಂವಿಧಾನದ ಆಶಯಕ್ಕೆ ಧಕ್ಕೆ ತಂದಿದ್ದಾರೆ. ಕ್ಯಾಬಿನೆಟ್ ನಲ್ಲಿ ಅನುಮೋದನೆ ಪಡೆದು ಸರ್ಕಾರ ತಯಾರು ಮಾಡಿರುವಂತ ಭಾಷಣವನ್ನು ಗಾಳಿಗೆ ತೂರಿ ತಮ್ಮದೇ ಭಾಷಣವನ್ನ ಓದುವ ಮುಖಾಂತರ ಸಂವಿಧಾನದ ವಿಧಿ 176(1) & 163 ರಿಗೆ ದಕ್ಕೆ ತರುವಂತ ಕೆಲಸವನ್ನು...

ಅಲೆರಿ ಶ್ರೀ ಸತ್ಯ ಸಾರಮಾನಿ ಕಾನದ- ಕಟ್ಟದ ಮೂಲ ಕ್ಷೇತ್ರ ಶಿಲಾನ್ಯಾಸ ಕಾರ್ಯಕ್ರಮ; ಕುಕ್ಕೇಡಿಯಲ್ಲಿ ಪೂರ್ವ ಸಿದ್ದತಾ ಸಭೆ

0

ಬೆಳ್ತಂಗಡಿ;  ಅಲೆರಿ ಶ್ರೀ ಸತ್ಯ ಸಾರಾಮಾನಿ ಕಾನದ - ಕಟದ ಮೂಲ ಕ್ಷೇತ್ರ ಆಲೇರಿ,ಮಿಜಾರು ಮೂಡಬಿದ್ರೆ ತಾಲೂಕು , ದಿನಾಂಕ 8.2.2026 ನೆ ಆದಿತ್ಯವಾರ ನಡೆಯುವಂತಹ ಶಿಲಾನ್ಯಾಸ ಕಾರ್ಯಕ್ರಮದ ಪೂರ್ವ ಸಿದ್ಧತೆ ಸಭೆಯನ್ನು ಕುಕ್ಕೇಡಿ - ನಿಟ್ಟಡೆ, ಗ್ರಾಮದ ಡಾ . ಬಿ.ಆರ್. ಅಂಬೇಡ್ಕರ ಭವನದಲ್ಲಿ ಸಡೆಸಲಾಯಿತು. ಈ ಕಾರ್ಯಕ್ರಮದಲ್ಲಿ ತಾಲೂಕು ಸಮಿತಿಯ ಅಧ್ಯಕ್ಷರಾದ ಚಂದ್ರಪ್ಪ ಮಾಸ್ಟರ್, ಮತ್ತು ತಾಲೂಕು ಸಮಿತಿ ಉಪಾಧ್ಯಕ್ಷರಾದ ಶೇಖರ್.ವಿ.ಧರ್ಮಸ್ಥಳ , ಮತ್ತು ಕೇಂದ್ರ ಸಮಿತಿಯ ಕೋಶಾಧಿಕಾರಿ ಯಾದ ಶೇಖರ್ ಕುಕ್ಕೇಡಿ ಭಾಗವಹಿಸಿದರು, ಕ.ದ.ಸಂ.ಸ ಹೋಬಳಿ ಸಂಚಾಲಕರಾದ ಚರಣ್...

ಉಜಿರೆ ಎಸ್.ಡಿ.ಎಂ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ತಜ್ಞ ವೈದ್ಯರ ವಿಶೇಷ ಸಂಜೆ ಕ್ಲಿನಿಕ್ ಪ್ರಾರಂಭ

0

ಬೆಳ್ತಂಗಡಿ; ಉದ್ಯೋಗಿಗಳು, ವಿದ್ಯಾರ್ಥಿಗಳು ಹಾಗೂ ಮತ್ತಿತರರ ಅನೂಕೂಲತೆಗಾಗಿ ಉಜಿರೆ ಎಸ್.ಡಿ.ಎಂ ಆಸ್ಪತ್ರೆಯಲ್ಲಿ ತಜ್ಞ ವೈದ್ಯರ ಸಂಜೆ ಕ್ಲಿನಿಕ್ ತೆರೆಯಲಾಗಿದ್ದು ಜ.19ರಂದು ಶುಭಾರಂಭಗೊಂಡಿತು.ಬೆಳ್ತಂಗಡಿ ತಾಲೂಕು ಆಸ್ಪತ್ರೆಯ ವೈದ್ಯಾಧಿಕಾರಿ ಡಾ| ಸಂಜತ್ ವಿಶೇಷ ಸಂಜೆ ಕ್ಲಿನಿಕ್ ಉದ್ಘಾಟಿಸಿ ಮಾತನಾಡುತ್ತಾ, ಬೆಳ್ತಂಗಡಿ ತಾಲೂಕಿನ ಜನತೆಗೆ ತಜ್ಞ ವೈದ್ಯರು ಇರುವ ಇಂತಹ ಸಂಜೆ ಕ್ಲಿನಿಕ್ ಅವಶ್ಯಕತೆ ಇತ್ತು. ಕೆಲಸಕ್ಕೆ ಹೋಗುವವರಿಗೆ ಈ ಸಂಜೆ ಕ್ಲಿನಿಕ್‌ನಿಂದ ಬಹಳ ಪ್ರಯೋಜನವಾಗಲಿದೆ. ಉಜಿರೆ ಎಸ್.ಡಿ.ಎಂ ಆಸ್ಪತ್ರೆಯು ಪೂಜ್ಯ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ಉತ್ತಮ ವೈದ್ಯಕೀಯ ಸೇವೆ ನೀಡುತ್ತಿದೆ. ರೋಗಿಗಳ ಅನುಕೂಲತೆಗಾಗಿ...

ಚಿರತೆಹಾವಳಿ ಪ್ರದೇಶಗಳಿಗೆ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ಭೇಟಿ

0

ಬೆಳ್ತಂಗಡಿ; ಚಿರತೆಗಳ ಹಾವಳಿಯಿಂದ ಕಂಗೆಟ್ಟ ಗುರಿಪಳ್ಳ, ಎಣ್ಣೀರುಪಲ್ಕೆ, ಬನತ್ತೋಡಿ ಪ್ರದೇಶಕ್ಕೆ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ಭೇಟಿ ನೀಡಿ ಅಲ್ಲಿಯ ಜನರಿಗೆ ಧೈರ್ಯ ತುಂಬುವ ಕೆಲಸವನ್ನು ಮಾಡಿದರು. ಅರಣ್ಯ ಇಲಾಖೆಯ ತಾಲೂಕು ಅಧಿಕಾರಿಗಳು ಮತ್ತು ಜಿಲ್ಲಾಮಟ್ಟದ ಉನ್ನತ ಅಧಿಕಾರಿಗಳೊಂದಿಗೆ ಮಾತುಕತೆ ಮಾಡಿ ಸೂಕ್ತ ಪರಿಹಾರ ಒದಗಿಸುವ ಭರವಸೆ ನೀಡಿದರು. ಈ ಸಂದರ್ಭದಲ್ಲಿ ಸ್ಥಳೀಯ ನಾಯಕರದ ವಿಟ್ಟಲ್ ಶೆಟ್ಟಿ, ಹಿರಿಯ ನಾಯಕರಾದ ಲಕ್ಷ್ಮಣಗೌಡ, ನೀಲಯ್ಯರು, ಗುರುರಾಜ್ ಗುರಿಪಳ್ಳ, ಯಶೋಧರ ಗೌಡ ಮುಂತಾದ ನಾಯಕರು ಈ ಸಂದರ್ಭದಲ್ಲಿ ಜೊತೆ ನೀಡಿದರು.

ಬೆಳ್ತಂಗಡಿ : 10 ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ

0

ಬೆಳ್ತಂಗಡಿ : ವಂಚನೆ ಪ್ರಕರಣದಲ್ಲಿ ವೇಣೂರು ಪೊಲೀಸ್ ಠಾಣೆಯಲ್ಲಿ ದಾಖಲಾದ ಅಪರಾಧ ಸಂಖ್ಯೆ 60/2009 ರಲ್ಲಿ CC 813/2009 ಮತ್ತುCrl Misc No .715/2015 ಕಲಂ, 420 ಐಪಿಸಿ ಪ್ರಕರಣದಲ್ಲಿ ಕಳೆದ ಸುಮಾರು 10 ವರ್ಷಗಳಿಂದ ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ವಾರಂಟ್ ಆರೋಪಿ ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ತೋಟ ಗ್ರಾಮದ ನಿವಾಸಿ ನರಸಿಂಹ ಗೌಡ ಮಗ S N ಚಂದ್ರೆಗೌಡ(57) ಎಂಬಾತನನ್ನು ವೇಣೂರು ಪೊಲೀಸರು ಜ.20 ರಂದು ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಬೆಳಗಿಹಳ್ಳಿ ಎಂಬಲ್ಲಿ ಬಂಧಿಸಿ ಬಂಟ್ವಾಳ ನ್ಯಾಯಾಲಯಕ್ಕೆ...